ETV Bharat / bharat

ಹೆಚ್ಚುತ್ತಿದೆ ಫೋನ್ ಕಳ್ಳತನ: ಸುಲಭವಾಗಿ ಹಣ ಗಳಿಸುವ ಆಸೆಗೆ ಈ ದಂಧೆಗಿಳಿಯುತ್ತಿದ್ದಾರೆ ಅಪ್ರಾಪ್ತರು! - Cell Phone Theft Crisis - CELL PHONE THEFT CRISIS

ಹಣದ ಆಮಿಷವೊಡ್ಡಿ ಅಪ್ರಾಪ್ತರನ್ನು ಫೋನ್​ ಕಳ್ಳತನ ದಂಧೆಗೆ ಕ್ರಿಮಿನಲ್​ ಗ್ಯಾಂಗ್​ಗಳು ಇಳಿಸುತ್ತಿವೆ ಎಂದು ಹೈದರಾಬಾದ್​ ಪೊಲೀಸರು ತಿಳಿಸಿದ್ದಾರೆ.

ಫೋನ್ ಕಳ್ಳತನ
ಫೋನ್ ಕಳ್ಳತನ ((Photo: Getty))
author img

By ETV Bharat Karnataka Team

Published : May 24, 2024, 8:07 PM IST

ಹೈದರಾಬಾದ್: ನಗರದಲ್ಲಿ ಅಪ್ರಾಪ್ತರು ಸೆಲ್ ಫೋನ್ ಕಳ್ಳತನ ದಂಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗುತ್ತಿರುವುದು ಕಳವಳಕಾರಿಯಾಗಿದೆ. ಜೊತೆಗೆ ನಗರದಲ್ಲಿ ದಾಳಿ ಮತ್ತು ದರೋಡೆ ಅಪಾಯವನ್ನು ಹೆಚ್ಚಿಸಿದೆ. 20 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತರನ್ನು ಕೃತ್ಯ ಎಸಗಲು ಈ ದಂಧೆ ನಡೆಸುವ ಗ್ಯಾಂಗ್​ಗಳು ಬಳಸಿಕೊಳ್ಳುತ್ತಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪಾದಚಾರಿಗಳು ಹೆಚ್ಚಾಗಿ ಫೋನ್ ಕಳ್ಳತನಕ್ಕೆ ಗುರಿಗಳಾಗುತ್ತಿದ್ದಾರೆ. ನಿರ್ಜನ ಪ್ರದೇಶಗಳು ಇಂತಹ ಪ್ರಕರಣಗಳ ಅಪಾಯವನ್ನು ಹೆಚ್ಚಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಖ್ಯವಾಗಿ 20 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತರನ್ನು ಈ ಅಪರಾಧಗಳನ್ನು ಎಸಗಲು ಕ್ರಿಮಿನಲ್ ಗ್ಯಾಂಗ್​ಗಳು ಬಳಸಿಕೊಳ್ಳುತ್ತಿರುವ ಆತಂಕಕಾರಿ ಅಂಶವನ್ನು ಪೊಲೀಸ್​ ತನಿಖೆಗಳು ಬಹಿರಂಗಪಡಿಸಿವೆ.

ಜೇಬುಗಳ್ಳತನದ ಗ್ಯಾಂಗ್‌ಗಳು ಯಾವಾಗಲೂ ನಗದು ಕಳ್ಳತನಕ್ಕಾಗಿ ಕಿಕ್ಕಿರಿದ ರಸ್ತೆಗಳನ್ನು ಗುರಿಯಾಗಿಸಿಕೊಳ್ಳುತ್ತವೆ. ಆದರೆ, ಆನ್‌ಲೈನ್ ವಹಿವಾಟುಗಳ ಹೆಚ್ಚಳದೊಂದಿಗೆ, ಅವರು ಇಂಟರ್ನೆಟ್ ಸ್ಕ್ಯಾಮ್‌ಗಳತ್ತ ಗಮನ ಹರಿಸಿದ್ದಾರೆ. ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ಫೋನ್‌ಗಳನ್ನು ಮಾರಾಟ ಮಾಡುವುದಾಗಿ ಹೇಳಿ ಪೋಸ್ಟ್​ ಮಾಡುತ್ತಾರೆ. ನಂತರ ಆಸಕ್ತಿ ತೋರಿಸಿದವರನ್ನು ಫೋನ್​ ಮಾರಾಟ ನೆಪದಲ್ಲಿ ಭೇಟಿಯಾಗುವುದಕ್ಕೆ ಕರೆಸಿಕೊಂಡು ಅವರಿಂದ ಹಣ, ಮೊಬೈಲ್​ ಸುಲಿಗೆ ಮಾಡುತ್ತಾರೆ.

ಹಣದ ಅವಶ್ಯಕತೆ ಇರುವ ಯುವಕರು ಈ ಕ್ರಿಮಿನಲ್ ಚಟುವಟಿಕೆಗಳ ಕಡೆಗೆ ಆಕರ್ಷಿಸಲ್ಪಡುತ್ತಿದ್ದಾರೆ. ಅವರು ಕೃತ್ಯ ನಡೆಸಲು ನಿರಾಕರಿಸಿದರೆ ಹೆಚ್ಚು ಹಣ ನೀಡುವ ಅಥವಾ ಬೆದರಿಕೆ ಹಾಕುವ ಮೂಲಕ ಅವರನ್ನು ಈ ದಂಧೆಗೆ ಇಳಿಸಲಾಗುತ್ತಿದೆ. ಸುಲಭದ ಹಣದ ಮೋಹವು ಇಂತಹ ಸಮಾಜಘಾತುಕ ಕೃತ್ಯಗಳನ್ನು ಎಸಗಲು ಅವರನ್ನು ಪ್ರೇರೇಪಿಸುತ್ತಿದೆ. ದರೋಡೆ ವೇಳೆ ಯಾರಾದರೂ ತೀವ್ರ ಪ್ರತಿರೋಧ ವ್ಯಕ್ತಪಡಿಸಿದರೇ ಅಂತಹವರ ಮೇಲೆ ದಾಳಿಯನ್ನೂ ಮಾಡಲು ಮುಂದಾಗುತ್ತಿದೆ.

ಗ್ಯಾಂಗ್​ಗಳು ಕದ್ದ ಅಥವಾ ಸುಲಿಗೆ ಮಾಡಿದ ಫೋನ್‌ಗಳ ಇಂಟರ್‌ನ್ಯಾಷನಲ್ ಮೊಬೈಲ್ ಎಕ್ವಿಪ್‌ಮೆಂಟ್ ಐಡೆಂಟಿಟಿ (IMEI) ಸಂಖ್ಯೆಗಳನ್ನು ಬದಲಾಯಿಸಿ, ವಿದೇಶಗಳಿಗೆ ರಫ್ತು ಮಾಡುತ್ತಿವೆ. ಹೈದರಾಬಾದ್ ಟಾಸ್ಕ್ ಫೋರ್ಸ್ ಪೊಲೀಸರ ಇತ್ತೀಚಿನ ಬಂಧನಗಳು ಈ ಜಾಲದ ವ್ಯಾಪ್ತಿಯನ್ನು ಬಹಿರಂಗಪಡಿಸಿವೆ. ಕದ್ದ ಫೋನ್‌ಗಳನ್ನು ಮರು ಮಾರಾಟಕ್ಕಾಗಿ ಸುಡಾನ್‌ಗೆ ಕಳ್ಳಸಾಗಣೆ ಮಾಡಲಾಗುತ್ತಿದೆ.

ಹೈದರಾಬಾದ್‌ನಲ್ಲಿ ಕದ್ದ ಸ್ಮಾರ್ಟ್‌ಫೋನ್‌ಗಳನ್ನು ಜಗದೀಶ್ ಮಾರುಕಟ್ಟೆ ಮೂಲಕ ಸುಡಾನ್‌ನಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿತ್ತು ಎಂದು ಏಪ್ರಿಲ್‌ನಲ್ಲಿ ದಂಧೆ ಭೇದಿಸಿದ್ದ ನಗರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಹೈದರಾಬಾದ್​ನ ದಕ್ಷಿಣ ವಲಯ ಕಾರ್ಯಪಡೆ ತಂಡ ಮತ್ತು ಬಂಡ್ಲಗುಡ ಪೊಲೀಸರು ಈ ದಂಧೆಯನ್ನು ಪತ್ತೆಹಚ್ಚಿದ್ದು, ಐವರು ಸುಡಾನ್ ಪ್ರಜೆಗಳು ಸೇರಿದಂತೆ 17 ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ 703 ಹೈ ಎಂಡ್ ಸ್ಮಾರ್ಟ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಖಾಲಿದ್ ಅಬ್ದೆಲ್ಬಾಗಿ ಮೊಹಮ್ಮದ್ ಅಲ್ಬದ್ವಿ (36), ಅಬ್ದಲೇಲಾ ಅಹ್ಮದ್ ಒಸ್ಮಾನ್ ಬಾಬಿಕರ್ (36), ಐಮ್ನ್ ಮೊಹಮ್ಮದ್ ಸಾಲಿಹ್ ಅಬ್ದಲ್ಲಾ (34), ಅನಾಸ್ ಸಿದ್ದಿಗ್ ಅಬ್ದೆಲ್ಗದರ್ ಅಹ್ಮದ್ (24) ಮತ್ತು ಒಮರ್ ಅಬ್ದಲ್ಲಾ ಎಲ್ತಾಯೆಬ್ ಮೊಹಮ್ಮದ್ (27) ಬಂಧಿತ ಸುಡಾನ್ ಪ್ರಜೆಗಳು. ಏಪ್ರಿಲ್ 19, 2023 ರಂದು ಪ್ರಾಯೋಗಿಕವಾಗಿ ಸೆಂಟ್ರಲ್ ಇಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ (ಸಿಇಐಆರ್) ಪೋರ್ಟಲ್ ಅನ್ನು ಪ್ರಾರಂಭಿಸಿದಾಗಿನಿಂದ ತೆಲಂಗಾಣ ಪೊಲೀಸರು 30,049 ಮೊಬೈಲ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಮೊಬೈಲ್ ಕಳ್ಳತನ ಮತ್ತು ನಕಲಿ ಮೊಬೈಲ್ ಸಾಧನಗಳ ಅಪಾಯಗಳನ್ನು ನಿಗ್ರಹಿಸಲು CEIR ಪೋರ್ಟಲ್ ಅನ್ನು ದೂರಸಂಪರ್ಕ ಇಲಾಖೆ (DoT) ಅಭಿವೃದ್ಧಿಪಡಿಸಿದೆ.

ಕೆಲ ಸೆಲ್ ಫೋನ್ ಅಂಗಡಿಗಳು ಈ ಕಾನೂನುಬಾಹಿರ ವ್ಯಾಪಾರವನ್ನು ಮತ್ತಷ್ಟು ಸುಗಮಗೊಳಿಸುತ್ತಿವೆ, ಕದ್ದ ಮೊಬೈಲ್​ಗಳ ವಿವಿಧ ಭಾಗಗಳನ್ನು ಅಗ್ಗದ ದರಕ್ಕೆ ಅಥವಾ ನವೀಕರಿಸಿ ಮರು ಮಾರಾಟ ಮಾಡಲು ಖರೀದಿಸುತ್ತಿವೆ. ಮೊಬೈಲ್ ಡಿಸ್‌ಪ್ಲೇಗಳು, ಕ್ಯಾಮರಾಗಳು ಮತ್ತು ಸ್ಪೀಕರ್‌ಗಳು ಸೇರಿದಂತೆ ಇತರ ಭಾಗಗಳನ್ನು ಮೂಲ ಕಂಪನಿ ದರಗಳಿಗೆ ಹೋಲಿಸಿದರೆ ಕಡಿಮೆ ಬೆಲೆಗೆ ಹಾನಿಗೊಳಗಾದ ಮೊಬೈಲ್‌ಗಳ ಭಾಗಗಳಿಗೆ ಬದಲಾಯಿಸಿ ಕೊಡಲಾಗುತ್ತಿದೆ.

ಕದ್ದ ಫೋನ್‌ಗಳ ಭಾಗಗಳನ್ನು ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಡಿಸ್​ ಅಸೆಂಬಲ್ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕಠಿಣ ಕಾನೂನು ಜಾರಿ ಪ್ರಯತ್ನಗಳು ಮುಂದುವರೆದಿದೆ. ಮತ್ತೊಂದೆಡೆ ದಕ್ಷಿಣ ವಲಯ ಮತ್ತು ಉತ್ತರ ವಲಯ ಟಾಸ್ಕ್​ಫೋರ್ಸ್​ ಪೊಲೀಸರು ಇತ್ತೀಚೆಗೆ ಈ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಅಪ್ರಾಪ್ತರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಕೃತಕ ಬುದ್ಧಿಮತ್ತೆ ತಂತ್ರದಿಂದ 13 ವರ್ಷದ ಹಿಂದೆ ಕಾಣೆಯಾದ ಮಗುವಿಗೆ ಹುಡುಕಾಟ! - AI Generated Photo Of Missing Girl

ETV Bharat Logo

Copyright © 2025 Ushodaya Enterprises Pvt. Ltd., All Rights Reserved.