ETV Bharat / bharat

ಅಕ್ರಮ ಸಂಬಂಧ ಆರೋಪ: ಪತ್ನಿಯ ತಲೆ ಕಡಿದು ಪೊಲೀಸ್​ ಠಾಣೆಯತ್ತ ತಂದ ಪತಿ! - husband beheading his wife - HUSBAND BEHEADING HIS WIFE

ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿದ ಪತಿ ಮಹಾಶಯನೊಬ್ಬ ತನ್ನ ಪತ್ನಿಯ ಶಿರಚ್ಚೇದ ಮಾಡಿ ರಸ್ತೆಯ ಮೇಲೆ ಹಿಡಿದು ಪೊಲೀಸ್​​ ಠಾಣೆಯತ್ತ ಬಂದಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಪತ್ನಿಯ ತಲೆ ಕಡಿದು ಪೊಲೀಸ್​ ಠಾಣೆಯತ್ತ ತಂದ ಪತಿ
ಪತ್ನಿಯ ತಲೆ ಕಡಿದು ಪೊಲೀಸ್​ ಠಾಣೆಯತ್ತ ತಂದ ಪತಿ (ETV Bharat)
author img

By ETV Bharat Karnataka Team

Published : Sep 16, 2024, 3:30 PM IST

ಮಾಧೇಪುರ: ಪತ್ನಿಯ ಅಕ್ರಮ ಸಂಬಂದಿಂದ ಬೇಸತ್ತ ಪತಿಯೊಬ್ಬ, ಆಕೆಯ ಕತ್ತನ್ನು ಸೀಳಿ ರುಂಡವನ್ನು ಪೊಲೀಸ್​ ಠಾಣೆಗೆ ತಂದ ಘಟನೆ ಬಿಹಾರದಲ್ಲಿ ನಡೆದಿದೆ. ದಾರಿ ಮಧ್ಯೆ ಇದನ್ನು ಕಂಡ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆತನನ್ನು ಬಂಧಿಸಲಾಗಿದೆ. ಕೊಲೆಗಡುಕ ಪತಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಈ ಬಗ್ಗೆ ಶ್ರೀನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರುಂಡ ಕೈಯಲ್ಲಿ ಹಿಡಿದು ಬಂದ ಪತಿ: ಕೌಟುಂಬಿಕ ಕಲಹದಿಂದ ಪತಿಯೇ ಪತ್ನಿಯ ತಲೆ ಕಡಿದು ಕೊಲೆ ಮಾಡಿದ್ದಾನೆ ಎಂದು ಆರೋಪ ಕೇಳಿ ಬಂದಿದೆ. ಈ ಬಗ್ಗೆ ಮಾಹಿತಿ ನೀಡಿರುವ ಶ್ರೀನಗರ ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ ನಾರಾಯಣ್, ಪತ್ನಿಯನ್ನು ಕೊಂದ ಬಗ್ಗೆ ಪತಿ ತಪ್ಪೊಪ್ಪಿಕೊಂಡಿದ್ದಾನೆ. ಪತ್ನಿಯ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಪತಿ ಆರೋಪಿಸಿದ್ದಾನೆ. ಈ ಬಗ್ಗೆ ಪದೆ ಪದೇ ತಿಳಿ ಹೇಳಿದರೂ, ಸರಿದಾರಿಗೆ ಬಾರದ ಕಾರಣ, ಕೋಪದ ಭರದಲ್ಲಿ ಪತ್ನಿಯನ್ನು ಹರಿತವಾದ ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿದ್ದಾಗಿ ಆರೋಪಿ ತಿಳಿಸಿದ್ದಾನೆ ಎಂದರು.

ಪೊಲೀಸರಿಗೆ ತಿಳಿಸಿದ ದಾರಿಹೋಕರು: ಪತ್ನಿಯ ರುಂಡವನ್ನು ತುಂಡರಿಸಿದ ಬಳಿಕ ಪತಿಯು ಅದನ್ನು ಠಾಣೆಗೆ ತರುತ್ತಿದ್ದ. ಮಾರ್ಗ ಮಧ್ಯೆ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಅಲ್ಲಿಗೆ ಬಂದ ಆರಕ್ಷಕರು ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರು ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗಾಗಿ ಮಾಧೇಪುರ ಸದರ್ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಘಟನೆ ಬಗ್ಗೆ ಡಿಎಸ್​ಪಿ ಹೇಳಿದ್ದಿಷ್ಟು: 'ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ, ಪತ್ನಿಯನ್ನು ಕೊಂದು, ರುಂಡವನ್ನು ಬೇರ್ಪಡಿಸಿದ್ದಾನೆ. ಮಾಹಿತಿ ಮೇರೆಗೆ ತಕ್ಷಣ ಕ್ರಮ ಕೈಗೊಂಡು ಪತಿಯನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಬಳಸಲಾದ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಡಿಎಸ್​​ಪಿ ಮನೋಜ್ ಮೋಹನ್ ತಿಳಿಸಿದ್ದಾರೆ.

ಈ ಹಿಂದೆಯೂ ನಡೆದಿತ್ತು ಇಂತಹುದೇ ಘಟನೆ: ಇದೇ ಗ್ರಾಮದಲ್ಲಿ ಒಂದೂವರೆ ವರ್ಷದ ಹಿಂದೆ ಇದೇ ರೀತಿಯ ಘಟನೆ ನಡೆದಿತ್ತು. ಪಕ್ಕದ ಮನೆಯಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಕೋಪಗೊಂಡ ಪತಿ, ಪತ್ನಿ ಹಾಗೂ ಮೂರು ವರ್ಷದ ಮಗಳ ಮತ್ತು ಸೀಳಿ ಕೊಲೆ ಮಾಡಿದ್ದ. ಬಳಿಕ ಪತ್ನಿಯ ತಲೆಯನ್ನು ಗ್ರಾಮದ ಸೇತುವೆಯ ಮೇಲೆ ಇಟ್ಟು ಪತ್ನಿಯ ಕುಟುಂಬಸ್ಥರಿಗೆ ಕರೆ ಮಾಡಿ ಮಾಹಿತಿ ನೀಡಿ ಪರಾರಿಯಾಗಿದ್ದ.

ಇದನ್ನೂ ಓದಿ: ದೊಣ್ಣೆಯಿಂದ ಹೊಡೆದು ಒಂದೇ ಕುಟುಂಬದ ಐವರ ಕೊಲೆ; ವಾಮಾಚಾರ ಶಂಕೆಯಿಂದ ಹತ್ಯೆಗೈದ ಆರೋಪಿಗಳು ಅಂದರ್​ - MURDER CASE

ETV Bharat Logo

Copyright © 2025 Ushodaya Enterprises Pvt. Ltd., All Rights Reserved.