ETV Bharat / bharat

ಟ್ರಕ್​ಗಳ ಮಧ್ಯೆ ಸಿಲುಕಿ ಪ್ರಾಣ ಬಿಟ್ಟ ದಂಪತಿ; ಪವಾಡದಂತೆ ಬದುಕುಳಿದ ಮಕ್ಕಳು!

ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಎರಡು ಟ್ರಕ್​ಗಳ ಮಧ್ಯೆ ಸಿಲುಕಿ ದಂಪತಿ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಪವಾಡದಂತೆ​ ಪ್ರಾಣಾಪಾಯದಿಂದ ಪಾರಾದ ಘಟನೆ ತಮಿಳುನಾಡಿಲ್ಲಿ ನಡೆದಿದೆ.

Husband and wife killed  lorry crashed in Salem  Accident in TamilNadu  2 infants bereft of parents  ಟ್ರಕ್​ಗಳ ಮಧ್ಯೆ ಸಿಲುಕಿ ದಂಪತಿ ಸಾವು  ಪವಾಡದಂತೆ ಬದುಕುಳಿದ ಇಬ್ಬರು ಮಕ್ಕಳು
, ಟ್ರಕ್​ಗಳ ಮಧ್ಯೆ ಸಿಲುಕಿ ದಂಪತಿ ಸಾವು
author img

By ETV Bharat Karnataka Team

Published : Jan 30, 2024, 10:08 AM IST

ರಸ್ತೆ ಅಪಘಾತದ ಸಿಸಿಟಿವಿ ದೃಶ್ಯ

ಸೇಲಂ(ತಮಿಳುನಾಡು): ಬೈಕ್​ನಲ್ಲಿ ಸಂಚರಿಸುತ್ತಿದ್ದ ದಂಪತಿ ಟ್ರಕ್​ಗಳ ಮಧ್ಯೆ ಸಿಲುಕಿ ಸಾವನ್ನಪ್ಪಿರುವ ಘಟನೆ ಸೇಲಂನಲ್ಲಿ ಇತ್ತೀಚಿಗೆ ನಡೆಯಿತು. ಆಘಾತಕಾರಿ ಘಟನೆಯ ದೃಶ್ಯ ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೃತರನ್ನು ಬಿಲ್ಡರ್ ಆಗಿ ಕೆಲಸ ಮಾಡುತ್ತಿದ್ದ ಅಲಗರಸನ್ (30) ಮತ್ತು ಪತ್ನಿ ಇಳಮತಿ (25) ಎಂದು ಗುರುತಿಸಲಾಗಿದೆ. ಇಬ್ಬರು ಮಕ್ಕಳು ಅಚ್ಚರಿ ರೀತಿಯಲ್ಲಿ ಪಾರಾಗಿದ್ದಾರೆ.

ಸಂಪೂರ್ಣ ವಿವರ: ಸೇಲಂ ಜಿಲ್ಲೆಯ ಮೆಟ್ಟೂರು ಪಕ್ಕದ ಕುಂಜಂಡಿಯೂರು ಬೂದೂರಿನ ಬಿಲ್ಡರ್ ಅಲಗರಸನ್ ಮತ್ತು ಇಳಮತಿ ದಂಪತಿಗೆ 5 ವರ್ಷದ ಕಿಶೋರ್ ಮತ್ತು 2 ವರ್ಷದ ಕೃತಿಕ್ ಎಂಬಿಬ್ಬರು ಮಕ್ಕಳಿದ್ದಾರೆ. ಜನವರಿ 28ರಂದು ಭಾನುವಾರ ಅಲಗರಸನ್ ಬೈಕ್‌ನಲ್ಲಿ​ ಪನ್ನವಾಡಿ ಪ್ರದೇಶದಲ್ಲಿರುವ ತನ್ನ ಮಾವ ಮನೆಗೆ ಪತ್ನಿ, ಮಕ್ಕಳೊಂದಿಗೆ ತೆರಳುತ್ತಿದ್ದರು. ರಾಮನ್ ನಗರದ ಸಮೀಪ ಸಂಚಾರ ದಟ್ಟಣೆ ಇತ್ತು. ಲಾರಿಯೊಂದರ ಹಿಂಬದಿ ಅಲಗರಸನ್​ ಬೈಕ್​ ನಿಲ್ಲಿಸಿದ್ದಾರೆ. ಇವರ ಬೈಕ್‌ ಮುಂದೆಯೂ ಒಂದು ಟ್ರಕ್‌ ನಿಂತಿತ್ತು. ಈ ವೇಳೆ ಹಾರ್ನ್ ಕೂಡ ಹಾಕದೇ ಕರ್ನಾಟಕ ರಾಜ್ಯದ ನೋಂದಣಿಯ ಭತ್ತದ ಮೂಟೆ ತುಂಬಿದ್ದ ಲಾರಿ ಅಲಗರಸನ್​ ಬೈಕ್​ನ ಹಿಂಬದಿ ಜೋರಾಗಿ ಡಿಕ್ಕಿ ಹೊಡೆದಿದೆ. ಬೈಕ್​ ಎರಡೂ ಟ್ರಕ್​ ಮಧ್ಯೆ ಸಿಲುಕಿಕೊಂಡಿತು. ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದರು. ಆದರೆ ಅಚ್ಚರಿಯೆಂಬಂತೆ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳದಲ್ಲಿದ್ದವರು ತಕ್ಷಣ ಸ್ಥಳಕ್ಕೆ ಧಾವಿಸಿ ಮಕ್ಕಳನ್ನು ರಕ್ಷಿಸಿದ್ದಾರೆ. ಬದುಕುಳಿದ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೆಟ್ಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಸೇಲಂ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಈ ಬಗ್ಗೆ ಮಾಹಿತಿ ಪಡೆದ ಕರುಮಲೈ ಕೂಡಲ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪತಿ, ಪತ್ನಿಯ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಮೆಟ್ಟೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪುಟ್ಟ ಮಕ್ಕಳು ತಂದೆ, ತಾಯಿ ಕಳೆದುಕೊಂಡಿದ್ದಾರೆ.

ಆರೋಪಿ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಉಡುಪಿ: ನೀರಿನ ಟ್ಯಾಂಕ್‌ಗೆ ಬಿದ್ದ ಚಿರತೆ ರಕ್ಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.