ETV Bharat / bharat

ಕಳೆದೊಂದು ಶತಮಾನಗಳ ಮಾನವನ ಚಟುವಟಿಕೆಗಳೇ ಮಳೆ ಏರಿಳಿತಕ್ಕೆ ಕಾರಣ: ಅಧ್ಯಯನ - Global Rainfall Volatility

author img

By ETV Bharat Karnataka Team

Published : Jul 29, 2024, 1:25 PM IST

1900ರಿಂದ ಈ ರೀತಿಯ ಅಕಾಲಿಕ ಮಳೆಯ ಪ್ರಮಾಣ ಪ್ರತಿ ದಶಕದಲ್ಲಿ ಶೇ 1.2ರಷ್ಟು ಏರಿಕೆ ಕಾಣುತ್ತಿದೆ ಎಂದು ಅಧ್ಯಯನ ಎಚ್ಚರಿಸಿದೆ.

human activities have made global rainfall more volatile over the past century
ಸಾಂದರ್ಭಿಕ ಚಿತ್ರ (IANS)

ಬೀಜಿಂಗ್​: ಇತ್ತೀಚಿನ ದಿನಗಳಲ್ಲಿ ಜಗತ್ತಿನ ಬಹುತೇಕ ದೇಶಗಳು ಅತಿವೃಷ್ಟಿಯ ಪರಿಣಾಮಕ್ಕೆ ತುತ್ತಾಗುತ್ತಿವೆ. ಅಕಾಲಿಕ ಮಳೆ ಜನಜೀವನವನ್ನು ಹೈರಾಣಾಗಿಸುತ್ತಿದೆ. ಇಂಥ ಅಸ್ತಿರ ಮಳೆ ಪರಿಣಾಮಕ್ಕೆ ಕಾರಣ ಕಳೆದೊಂದು ಶತಮಾನದಿಂದ ಮಾನವ ನಡೆಸುತ್ತಿರುವ ಚಟುವಟಿಕೆಗಳು ಎಂದು ಹೊಸ ಅಧ್ಯಯನ ಸಾಕ್ಷ್ಯ ಒದಗಿಸಿದೆ. ಈ ಕುರಿತು ಜರ್ನಲ್​ ಸೈನ್ಸ್​ನಲ್ಲಿ ಅಧ್ಯಯನ ಪ್ರಕಟವಾಗಿದೆ.

ಚೈನೀಸ್​ ಆಕಾಡೆಮಿ ಆಫ್​ ಸೈನ್ಸ್​ನ ಇನ್ಸುಟಿಟ್ಯೂಟ್​ ಅಟ್ಮಸ್ಫಿಯರ್​​ ಫಿಸಿಕ್ಸ್​​ (ಐಎಪಿ), ಯುನಿವರ್ಸಿಟಿ ಚೈನೀಸ್​ ಅಕಾಡೆಮಿ ಆಫ್​ ಸೆನ್ಸ್​ ಮತ್ತು ಯುಕೆ ಹವಾಮಾನ ಇಲಾಖೆ ಅಧ್ಯಯನ ನಡೆಸಿದೆ.

1900ರಿಂದ ಇಂಥ ಅಕಾಲಿಕ ಮಳೆ ವ್ಯವಸ್ಥಿತವಾಗಿ ಹೆಚ್ಚುತ್ತಿದೆ. ಜಾಗತಿಕ ಮಟ್ಟದಿಂದ ಪ್ರಾದೇಶಿಕ ಮಟ್ಟದವರೆಗೂ ದೈನಂದಿನ ಋತುಮಾನದ ಅವಧಿಯಲ್ಲಿ ಅಕಾಲಿಕ ಮಳೆ ಸುರಿಯುವ ಪ್ರಕರಣಗಳು ಹೆಚ್ಚುತ್ತಿದೆ ಎಂಬ ಅಂಶ ಅಧ್ಯಯನದಿಂದ ತಿಳಿದುಬಂದಿದೆ.

ಮಳೆಯ ಅಸ್ತಿರತೆಯು ಒಂದು ಹಂತದಲ್ಲಿ ಅಕಾಲಿಕವಾಗಿ ಸುರಿಯುವಿಕೆ ಮತ್ತು ಅದರ ಪ್ರಮಾಣವನ್ನು ಹೊಂದಿದೆ. ಅಧಿಕ ಅಸ್ತಿರತೆ ಎಂದರೆ, ಒಂದು ಅವಧಿಯಲ್ಲಿ ಬೀಳುವ ಕಡಿಮೆ ಅಥವಾ ಭಾರೀ ಮಳೆಯಾಗಿದೆ. ಕೆಲವು ಬಾರಿ ಒಂದು ಪ್ರದೇಶದಲ್ಲಿ ಅಧಿಕ ಮಳೆಯಾದರೆ, ಮತ್ತೊಂದೆಡೆ ಮಳೆಯೇ ಇಲ್ಲದ ಪರಿಸ್ಥಿತಿಯೂ ಏರ್ಪಡಬಹುದು. ಇದರ ಪರಿಣಾಮ, ಪ್ರವಾಹ ಮತ್ತು ಶುಷ್ಕತೆಗೆ ಕಾರಣವಾಗುತ್ತದೆ.

ಅಧ್ಯಯನದಲ್ಲಿ, ವಿಶಾಲ ವ್ಯಾಪ್ತಿಯಲ್ಲಿ ದತ್ತಾಂಶವನ್ನು ಪಡೆದು ವಿಶ್ಲೇಷಿಸಲಾಗಿದೆ. ಈ ಮೂಲಕ 1900ರಿಂದಲೂ ಅಸ್ತಿರ ಮಳೆ ಹೆಚ್ಚುತ್ತಿರುವುದು ಗೊತ್ತಾಗಿದೆ. ಇದಕ್ಕಾಗಿ ಯುರೋಪ್​, ಆಸ್ಟ್ರೇಲಿಯಾ ಮತ್ತು ಪೂರ್ವ ಉತ್ತರ ಅಮೆರಿಕದ ಶೇ 75ರಷ್ಟು ಭೂ ಪ್ರದೇಶವನ್ನು ಅಧ್ಯಯನ ಮಾಡಲಾಗಿದೆ. ಸಂಶೋಧನೆಯಲ್ಲಿ ದೈನಂದಿನ ಜಾಗತಿಕ ಮಳೆ ಅಸ್ತಿರತೆ ಪ್ರತಿ ದಶಕದಲ್ಲಿ ಶೇ 1.2ರಷ್ಟು ಹೆಚ್ಚುತ್ತಿದೆ ಎಂಬುದು ಬೆಳಕಿಗೆ ಬಂದಿದೆ.

ಮಳೆ ಅಸ್ತಿರತೆಗೆ ಕಾರಣವನ್ನು ಅರ್ಥೈಸಿಕೊಳ್ಳುವ ಪ್ರಯತ್ನವಾಗಿ ಸಂಶೋಧಕರ ತಂಡ ಫಿಂಗರ್‌ಪ್ರಿಂಟಿಂಗ್ ಪತ್ತೆ ಮತ್ತು ಗುಣಲಕ್ಷಣ ವಿಧಾನದ ಆಧಾರದ ಮೇಲೆ ಮಾನವಜನ್ಯ ಹಸಿರುಮನೆ ಅನಿಲ ಹೊರಸೂಸುವಿಕೆಯ ಪಾತ್ರವನ್ನು ಗುರುತಿಸಿದೆ. ಬಹಳ ಪ್ರಮುಖವಾಗಿ, ಮಾನವಜನ್ಯ ಹಸಿರುಮನೆ ಅನಿಲ ಹೊರಸೂಸುವಿಕೆಯೇ ಇದಕ್ಕೆ ಕಾರಣ. ಇದು ಹವಾಮಾನವನ್ನು ಬೆಚ್ಚಗೆ ಮತ್ತು ಶುಷ್ಕವಾಗಿಸುತ್ತದೆ ಎಂದು ಅಧ್ಯಯನದ ಪ್ರಮುಖ ಲೇಖಕ ಜಾಂಗ್​ ವೆನ್ಕ್ಸಿಯಾ ತಿಳಿಸಿದ್ದಾರೆ. (ಐಎಎನ್ಎಸ್​)

ಇದನ್ನೂ ಓದಿ: ಬೆಳಗಾವಿ: ನೀರು ನುಗ್ಗಿದ್ದರಿಂದ ಮನೆ ಖಾಲಿ ಮಾಡಿದ ಜನ: ವಿಷಯ ಕೇಳಿ ಹೃದಯಾಘಾತದಿಂದ ವ್ಯಕ್ತಿ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.