ETV Bharat / bharat

ರಾಮ ನಾಮದ ಮುಂದೆ ಥರಗುಟ್ಟಿದ 'ಚಳಿ': 6 ದಿನದಲ್ಲಿ 19 ಲಕ್ಷ ಜನರಿಂದ ಬಾಲರಾಮನ ದರ್ಶನ - ayodhya

ಥರಗುಟ್ಟುವ ಚಳಿಯ ನಡುವೆಯೂ ಲಕ್ಷಾಂತರ ಭಕ್ತರು ಅಯೋಧ್ಯಾಧೀಶ ಬಾಲರಾಮನ ನಿತ್ಯ ದರ್ಶನ ಪಡೆಯುತ್ತಿದ್ದಾರೆ.

ಬಾಲರಾಮನ ದರ್ಶನ
ಬಾಲರಾಮನ ದರ್ಶನ
author img

By ETV Bharat Karnataka Team

Published : Jan 29, 2024, 7:52 PM IST

ಅಯೋಧ್ಯೆ (ಉತ್ತರಪ್ರದೇಶ) : ಉತ್ತರ ಭಾರತದಲ್ಲಿ ತೀವ್ರ ಚಳಿ ಮುಂದುವರಿದಿದೆ. ಮೈ ನಡುಕವಿದ್ದರೂ ಹೃದಯದಲ್ಲಿ ರಾಮಭಕ್ತಿಯೆಂಬ ಬೆಚ್ಚನೆಯ ಭಾವ ಅಯೋಧ್ಯೆಯಲ್ಲಿ ಭಕ್ತಸಾಗರವೇ ನೆರೆಯಲು ಕಾರಣವಾಗಿದೆ. ಜನವರಿ 22 ರಂದು ಭವ್ಯ ರಾಮಮಂದಿರ ಲೋಕಾರ್ಪಣೆ, ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಬಳಿಕ ಲಕ್ಷಾಂತರ ಜನರು ರಾಮಜನ್ಮಭೂಮಿಗೆ ಭೇಟಿ ನೀಡುತ್ತಿದ್ದಾರೆ.

ಕಳೆದ 6 ದಿನಗಳಲ್ಲಿ ರಾಮನಗರಿ ಅಯೋಧ್ಯೆಯಲ್ಲಿ ತೀವ್ರ ಚಳಿಯ ನಡುವೆಯೂ 19 ಲಕ್ಷ ಭಕ್ತರು ಪುರುಷೋತ್ತಮನ ದರ್ಶನ ಪಡೆದಿದ್ದಾರೆ. ಚಳಿ, ಭದ್ರತೆ ಸಮಸ್ಯೆ, ಏಕಕಾಲದಲ್ಲಿ ದೇವಸ್ಥಾನಕ್ಕೆ ಪ್ರವೇಶ ಸಿಗಲು ಸಾಧ್ಯವಿಲ್ಲದ ಕಾರಣ ಭಕ್ತರು ಬರದಂತೆ ಸರ್ಕಾರ, ಟ್ರಸ್ಟ್​ ಮನವಿ ಮಾಡಿದರೂ ರಾಮಭಕ್ತರ ಭಕ್ತಿ ಮಾತ್ರ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಶ್ರೀರಾಮನ ದರ್ಶನ ಪಡೆಯಲು ಪ್ರತಿದಿನ ಲಕ್ಷಾಂತರ ಭಕ್ತರು ರಾಮನೂರಿಗೆ ಬರುತ್ತಿದ್ದಾರೆ.

ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಬಳಿಕ ದರ್ಶನಕ್ಕೆ ಬರುತ್ತಿರುವ ಭಕ್ತ ಸಮೂಹವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರಾಣ ಪ್ರತಿಷ್ಠಾಪನೆ ದಿನದಿಂದ ಇಲ್ಲಿಯವರೆಗೆ 6 ದಿನಗಳಲ್ಲಿ 18.75 ಲಕ್ಷಕ್ಕೂ ಅಧಿಕ ರಾಮಭಕ್ತರು ದಿವ್ಯ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸೂಚನೆಯ ಮೇರೆಗೆ ರಚಿಸಲಾಗಿರುವ ಉನ್ನತ ಮಟ್ಟದ ಸಮಿತಿಯು, ಭಕ್ತರಿಗೆ ಯಾವುದೇ ತೊಂದರೆ ಉಂಟಾಗದಂತೆ ಸಕಲ ವ್ಯವಸ್ಥೆ ಮಾಡುತ್ತಿದೆ.

ದರ್ಶನ ಮತ್ತು ಪೂಜೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಜನವರಿ 23 ರಿಂದ ರಾಮಮಂದಿರ ಭಕ್ತರಿಗೆ ಮುಕ್ತವಾಗಿತ್ತು. ಟ್ರಸ್ಟ್​ ನೀಡಿದ ಮಾಹಿತಿಯ ಪ್ರಕಾರ, ಪ್ರತಿದಿನ 2 ಲಕ್ಷಕ್ಕೂ ಹೆಚ್ಚು ಭಕ್ತರು ರಾಮನೂರಿಗೆ ಬರುತ್ತಿದ್ದಾರೆ. ದರ್ಶನ ಮತ್ತು ಪೂಜೆಯನ್ನು ಮಾಡುತ್ತಿದ್ದಾರೆ. ಜೈ ಶ್ರೀರಾಮ್ ಘೋಷಣೆಗಳು ಅಯೋಧ್ಯೆ ನಗರ ಮತ್ತು ದೇವಾಲಯದ ಆವರಣದಲ್ಲಿ ಪ್ರತಿಧ್ವನಿಸುತ್ತಿವೆ. ದೇಶ ಮಾತ್ರವಲ್ಲ, ವಿದೇಶಗಳಿಂದಲೂ ಹೆಚ್ಚಿನ ಸಂಖ್ಯೆಯ ಭಕ್ತರು ಪ್ರತಿದಿನ ಬರುತ್ತಿದ್ದಾರೆ. ಭಾನುವಾರವಾದ ನಿನ್ನೆ ಸುಮಾರು 3.25 ಲಕ್ಷ ಭಕ್ತರು ರಾಮಲಲ್ಲಾನ ದರ್ಶನ ಪಡೆದಿದ್ದಾರೆ.

ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಬಳಿಕ ಪ್ರಥಮ ಪೂಜೆ ಸಲ್ಲಿಸಿದರು. ಇದು ವಿಶ್ವದಲ್ಲಿಯೇ ದೊಡ್ಡ ತೀರ್ಥಕ್ಷೇತ್ರವಾಗಿ ಬೆಳೆಯುವ ಸಾಧ್ಯತೆ ಇದೆ.

ಯಾವ ದಿನ ಎಷ್ಟು ಭಕ್ತರಿಂದ ರಾಮನ ಭೇಟಿ

23 ಜನವರಿ 5 ಲಕ್ಷ
24 ಜನವರಿ 2.5 ಲಕ್ಷ
25 ಜನವರಿ 2 ಲಕ್ಷ
26 ಜನವರಿ 3.5 ಲಕ್ಷ
27 ಜನವರಿ 2.5 ಲಕ್ಷ
28 ಜನವರಿ 3.25 ಲಕ್ಷ
ಒಟ್ಟು 18.75 ಲಕ್ಷ

ಇದನ್ನೂ ಓದಿ: ಅಯೋಧ್ಯಾಧೀಶ ರಾಮಚಂದ್ರನ ದರ್ಶನಕ್ಕೆ ಮುಗಿಬಿದ್ದ ಭಕ್ತರು: ದರ್ಶನ ಅವಧಿ ರಾತ್ರಿ 11 ರವರೆಗೆ ವಿಸ್ತರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.