How Do Ants Breathe : ನಮ್ಮ ಸುತ್ತಲಿನ ಪ್ರಪಂಚ, ನಾವು ಪ್ರತಿದಿನ ನೋಡುತ್ತಿರುವ ಜೀವಿಗಳು, ನಾವು ಯಾವಾಗಲೂ ಮಾಡುವ ಕೆಲಸಗಳಲ್ಲಿ ಎಷ್ಟೋ ಅದ್ಭುತಗಳಿವೆ. ಕೆಲ ವಿಷಯಗಳು ನಮಗೆ ಅಚ್ಚರಿ ಮೂಡಿಸುತ್ತವೆ. ಇಷ್ಟು ಸಣ್ಣ ಜೀವಿಯಲ್ಲಿ ಇಷ್ಟೊಂದು ಅದ್ಭುತಗಳಿವೆಯಾ ಎಂದು ಅಚ್ಚರಿಗೊಳ್ಳುತ್ತೇವೆ. ಕೆಲ ವಿಷಯಗಳು ನಂಬಲು ಅಸಾಧ್ಯವನ್ನುಂಟು ಮಾಡುತ್ತವೆ. ಆದರೆ ಇಂತಹ ಪ್ರಾಮಾಣಿಕ ಸತ್ಯಗಳನ್ನು ನಾವು ನಂಬಲೇಬೇಕು.
ಇರುವೆಗಳಿಗೆ ಶ್ವಾಸಕೋಶವಿಲ್ಲ: ಭೂಮಿಯ ಮೇಲೆ ಇರುವೆಗೆ ಇರುವ ಅದ್ಭುತಗಳು ಯಾವುದೇ ಜೀವಿಯಲ್ಲಿ ಕಂಡುಬರುವುದಿಲ್ಲ ಎಂದರೆ ಎಲ್ಲರಿಗೂ ಅಚ್ಚರಿಯುಂಟು ಮಾಡುತ್ತದೆ. ಇರುವೆಗೆ ಹಾರ್ಡ್ ವರ್ಕರ್ ಎಂದೂ ಹೆಸರಿದೆ. ಏಕೆಂದರೆ ಇರುವೆಗಳು ತನಗಿಂತ ಎರಡು ಪಟ್ಟು ಭಾರವಿರುವ ಆಹಾರವನ್ನು ಸುಲಭವಾಗಿ ಒಯ್ಯಬಲ್ಲವು. ಕ್ರಮ ಶಿಕ್ಷಣವೂ ಸಹ ಇರುವೆಗಳು ಕೊಟ್ಟ ಹೆಸರಾಗಿದೆ. ಅಲ್ಲದೆ, ಕಟ್ ಇರುವೆ ಕಚ್ಚಿದ್ರೆ ಅದರ ಉರಿ ಸಾಮಾನ್ಯವಾಗಿರುವುದಿಲ್ಲ.
ಇನ್ನು ಇರುವೆಯಲ್ಲಿ ಮತ್ತೊಂದು ಅದ್ಭುತ ತಿಳಿದರೆ ನೀವು ಅಚ್ಚರಿ ಪಡುತ್ತೀರಾ. ಮಾನವರು ಸಾಮಾನ್ಯವಾಗಿ ಉಸಿರಾಡಲು ಶ್ವಾಸಕೋಶವನ್ನು ಹೊಂದಿರುತ್ತಾರೆ. ಇದರ ಮೂಲಕ ಸಂಪೂರ್ಣ ಉಸಿರಾಟ ಪ್ರಕ್ರಿಯೆ ನಡೆಯುತ್ತದೆ. ಆದ್ರೆ ಇರುವೆಗಳು ಹೇಗೆ ಉಸಿರಾಡುತ್ತವೆ?.. ಇದು ಕುತೂಹಲಕಾರಿ ಸಂಗತಿಯಾಗಿದೆ. ಇರುವೆಗಳಿಗೆ ಶ್ವಾಸಕೋಶ ಅಥವಾ ಸಾಮಾನ್ಯ ಉಸಿರಾಟದ ವ್ಯವಸ್ಥೆ ಇಲ್ಲ ಎಂಬುದು ಗಮನಾರ್ಹ.
ಇರುವೆಗಳು ಹೇಗೆ ಉಸಿರಾಡುತ್ತವೆ?, ಅದರ ದೇಹ ತುಂಬಾ ಚಿಕ್ಕದಲ್ಲವೇ?, ಅಂದರೆ ಇರುವೆಗಳು ತಮ್ಮ ದೇಹದ ಹೊರಗೆ ವಿಶೇಷ ವ್ಯವಸ್ಥೆಯನ್ನು ಹೊಂದಿವೆ. ಇರುವೆಗಳು ತಮ್ಮ ದೇಹದ ಹೊರಭಾಗದಲ್ಲಿ 10 ಜೋಡಿ ಸ್ಪಿರಾಕಲ್‌ಗಳ (Spiracles) ವ್ಯವಸ್ಥೆಯನ್ನು ಹೊಂದಿವೆ. ಈ ಸ್ಪಿರಾಕಲ್ ಎಂಬ ಕೊಳವೆಯಂತಹ ರಚನೆಯು ಇರುವೆಗಳಿಗೆ ಶ್ವಾಸಕೋಶವಾಗಿ ಕಾರ್ಯನಿರ್ವಹಿಸುತ್ತದೆ. ನಾವು ಬಾಯಿ ತೆರೆದಾಗ ಗಾಳಿಯು ಹೇಗೆ ನಮ್ಮ ದೇಹ ಸೇರುತ್ತದೆಯೋ ಅದೇ ರೀತಿ ಗಾಳಿಯು ಇರುವೆಗಳ ಸ್ಪಿರಾಕಲ್ಸ್ ಅನ್ನು ಪ್ರವೇಶಿಸುತ್ತದೆ.
ಶ್ವಾಸಗಳ ವ್ಯವಸ್ಥೆಯ ಮೂಲಕ ಚಲಿಸುತ್ತದೆ. ಆಮ್ಲಜನಕವನ್ನು ಕಾರ್ಬನ್ ಡೈಆಕ್ಸೈಡ್ ಆಗಿ ಪರಿವರ್ತಿಸುವ ಅಂಗಾಂಶವನ್ನು ತಲುಪುತ್ತದೆ. ನಂತರ ದೇಹದಲ್ಲಿ, ಕಾರ್ಬನ್ ಡೈಆಕ್ಸೈಡ್ ಅನ್ನು ಶ್ವಾಸನಾಳದ ವ್ಯವಸ್ಥೆಯ ಮೂಲಕ ಬಿಡುಗಡೆ ಮಾಡುತ್ತದೆ. ಆ ಕಾರ್ಬನ್ ಡೈಆಕ್ಸೈಡ್ ಸ್ಪಿರಾಕಲ್ಸ್ ಮೂಲಕ ಹಿಂತಿರುಗುತ್ತದೆ. ಈ ಸ್ಪಿರಾಕಲ್ನಿಂದಲೇ ಇರುವೆಗಳು ನೀರಿನ ಅಡಿಯಲ್ಲಿ ನಿಮಿಷದಿಂದ ಬಳಷ್ಟು ದಿನಗಳವರೆಗೆ ಬದುಕುತ್ತವೆ.
ಓದಿ: ನಿಂತು ನೀರು ಕುಡಿಯೋದರಿಂದ ಏನೆಲ್ಲಾ ಸಮಸ್ಯೆ; ಜೀವ ಜಲದ ಸೇವನೆ ಬಗ್ಗೆ ತಜ್ಞರ ಸಲಹೆ ಇಲ್ಲಿದೆ.. - HOW TO DRINK WATER