ಹೈದರಾಬಾದ್: 2024ರ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಇಂದು ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.
ವೋಟಿಂಗ್ ಸ್ಲಿಪ್ ಎಂದರೇನು?: ಚುನಾವಣಾ ಆಯೋಗದಿಂದ ಮತದಾನ ಮಾಡಲು, ಮತದಾನದ ಚೀಟಿ ನೀಡಲಾಗುತ್ತದೆ. ಈ ಚೀಟಿಯಲ್ಲಿ ಹೆಸರು, ವಯಸ್ಸು, ಲಿಂಗ, ವಿಧಾನಸಭಾ ಕ್ಷೇತ್ರ, ಮತಗಟ್ಟೆ ಸ್ಥಳ, ಕೊಠಡಿ ಸಂಖ್ಯೆ, ಮತದಾನದ ದಿನಾಂಕ ಮತ್ತು ಮತದಾನದ ಸಮಯದಂತಹ ಮಾಹಿತಿಯನ್ನು ನೀಡಲಾಗಿರುತ್ತದೆ. ಈ ಚೀಟಿ ಇದ್ದರೆ ಸುಲಭವಾಗಿ ನಿಮ್ಮ ಮತಗಟ್ಟೆ ಯಾವುದು ಎಂದು ಮೊದಲೇ ಗುರುತಿಸಿ, ಮತದಾನ ಮಾಡಲು ಸಹಾಯ ಮಾಡುತ್ತದೆ.
ನಿಮ್ಮ ಸ್ಮಾರ್ಟ್ಫೋನ್ ಬಳಸುವ ಮೂಲಕ ನೀವು ಆನ್ಲೈನ್ನಲ್ಲಿ ಮತದಾನದ ಸ್ಲಿಪ್ಗಳನ್ನು ಹೇಗೆ ಪಡೆಯಬಹುದು ಎಂಬುದರ ಮಾಹಿತಿ ಇಲ್ಲಿದೆ
- ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಸ್ಟೋರ್ಗೆ ಹೋಗಿ 'ವೋಟರ್ ಹೆಲ್ಪ್ಲೈನ್' ಅಪ್ಲಿಕೇಶನ್ ಡೌನ್ಲೋಡ್ ಮಾಡಿ
- 'E-EPIC' ಆಯ್ಕೆಯ ಮೇಲೆ ಕ್ಲಿಕ್ ಮಾಡಿ
- ನಂತರ ನಿಮ್ಮ ನೋಂದಾಯಿತ ಸೆಲ್ ಫೋನ್ ಸಂಖ್ಯೆ, ಪಾಸ್ವರ್ಡ್ ಮತ್ತು OTP ಬಳಸಿ ಲಾಗ್ ಇನ್ ಆಗಿ
- EPIC ಸಂಖ್ಯೆಯನ್ನು ಹಾಕಿ ಆಗ ನಿಮ್ಮ ಸಂಪೂರ್ಣ ಮಾಹಿತಿ ಅದರಲ್ಲಿ ಬರುತ್ತದೆ.
- ಡಾಕ್ಯುಮೆಂಟ್ ತೆರೆಯಲು ಮತ್ತೊಮ್ಮೆ OTP ಹಾಕಿ
ವೆಬ್ಸೈಟ್ ಬಳಸಿ ಮತದಾನದ ಸ್ಲಿಪ್ ಅನ್ನು ಈ ರೀತಿಯಲ್ಲಿ ಡೌನ್ಲೋಡ್ ಮಾಡುವುದು ಹೇಗೆ? ಹೀಗಿದೆ ಮಾಹಿತಿ
ವೆಬ್ಸೈಟ್ಗೆ ಭೇಟಿ ನೀಡಿ - "https:\voters.eci.gov.in\" ಟೈಪ್ ಮಾಡಿ ಕ್ಲಿಕ್ ಮಾಡಿ
- ನಂತರ ನಿಮ್ಮ ನೋಂದಾಯಿತ ಫೋನ್ ಸಂಖ್ಯೆ, ಪಾಸ್ವರ್ಡ್ ಮತ್ತು OTP ಬಳಸಿ ಲಾಗಿನ್ ಆಗಿ
- ನೀವು ಮೊದಲ ಬಾರಿಗೆ ಬಳಸುತ್ತಿದ್ದರೆ, ಮೊದಲು ವೆಬ್ಸೈಟ್ನಲ್ಲಿ ನೋಂದಾಯಿಸಿಕೊಳ್ಳಿ
- ನಂತರ 'ಡೌನ್ಲೋಡ್ E-EPIC' ಆಯ್ಕೆಯ ಮೇಲೆ ಕ್ಲಿಕ್ ಮಾಡಿ
- EPIC ಸಂಖ್ಯೆಯನ್ನು ನಮೂದಿಸಿ
- ಅದು ಪೂರ್ಣಗೊಂಡ ನಂತರ, VIS ಜೊತೆಗೆ E-EPIC ಅನ್ನು ಡೌನ್ಲೋಡ್ ಮಾಡಿಕೊಳ್ಳಿ
ಲೋಕಸಭೆ ಚುನಾವಣೆಗೆ ದೇಶಾದ್ಯಂತ ಏಳು ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಏಪ್ರಿಲ್ 19ಕ್ಕೆ ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. ಇಂದು 88 ಲೋಕಸಭಾ ಕ್ಷೇತ್ರಗಳ್ಲಲಿ ಎರಡನೇ ಹಂತದ ಮತದಾನ ಆರಂಭವಾಗಿದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.