ETV Bharat / bharat

ಆಹಾ.. ಗರಿ ಗರಿ ರವಾ ದೋಸೆ - ತಯಾರಿ ತುಂಬಾ ಸುಲಭ - ಶೇಂಗಾ ಚಟ್ನಿ ಜೊತೆ ಸವಿದ್ರೆ ರುಚಿಯೇ ಬೇರೆ! - CRISPY RAVA DOSA RECIPE - CRISPY RAVA DOSA RECIPE

ಬೆಳಗಿನ ಉಪಹಾರಕ್ಕೆ ಹೋಟೆಲ್​ಗಳಲ್ಲಿ ತರಹೇವಾರಿ ತಿಂಡಿಗಳಿರುತ್ತವೆ. ಅದರಲ್ಲೂ ಬಹುತೇಕರಿಗೆ ದೋಸೆ ಅಂದ್ರೆ ಇಷ್ಟ. ದೋಸೆ ವಿಷಯಕ್ಕೆ ಬಂದ್ರೆ ರುಚಿಯೂ ಮುಖ್ಯ. ಅದಕ್ಕಾಗಿ ರವಾ ದೋಸೆಯ ಬಗ್ಗೆ ಮತ್ತು ನಾವೇ ಹೋಟೆಲ್​ ಸ್ಟೈಲ್​ನಲ್ಲಿ ಗರಿ ಗರಿ ದೋಸೆ ತಯಾರಿಸುವು ಹೇಗೆ ಎಂಬುದನ್ನು ತಿಳಿಯೋಣ.

Rava Dosa
ರವಾ ದೋಸೆ (ETV Bharat)
author img

By ETV Bharat Karnataka Team

Published : Jun 30, 2024, 10:46 PM IST

How To Make Hotel Style Crispy Rava Dosa : ಬೆಳಗಿನ ತಿಂಡಿ (Breakfast) ಅಂದಾಕ್ಷಣ ನಮಗೆ ಮೊದಲು ನೆನಪಾಗುವುದೇ ದೋಸೆ. ಇದು ಅನೇಕ ಜನರಿಗೆ ನೆಚ್ಚಿನ ಉಪಹಾರವಾಗಿದೆ. ಹೆಸರು ಕೇಳಿದ ತಕ್ಷಣ ಬಾಯಲ್ಲಿ ನೀರೂರಿಸುವ ದಕ್ಷಿಣ ಭಾರತೀಯ ವಿಶೇಷ ಉಪಹಾರಕ್ಕೆ ರಸ್ತೆ ಬದಿಯ ಟಿಫಿನ್ ಸೆಂಟರ್ ಗಳಲ್ಲಿ, ಹೋಟೆಲ್ ಗಳಲ್ಲಿ ಬಹುಬೇಡಿಕೆ ಇದೆ. ಮೇಲಾಗಿ.. ಹೋಟೆಲ್‌ಗಳಲ್ಲಿ ನಾನಾ ವಿಧದ ದೋಸೆಗಳು ಸಿಗುತ್ತವೆ. ಅದರಲ್ಲಿ ನೀರ್​ ದೋಸೆ, ಅಕ್ಕಿ ದೋಸೆ, ಮಸಾಲ ದೋಸೆ, ರಾಗಿ ದೋಸೆ, ಬೆಣ್ಣೆ ದೋಸೆ, ಈರುಳ್ಳಿ​ ದೋಸೆ, ಹೆಸರುಬೇಳೆ ಹಿಟ್ಟಿನ ದೋಸೆ ಸೇರಿದಂತೆ ಹಲವು ವಿಧದ ದೋಸೆಗಳ ಬಗ್ಗೆ ಕೇಳಿದ್ದೇವೆ ಮತ್ತು ಸವಿದಿದ್ದೇವೆ. ಇಲ್ಲಿ ನಾವು ಹೇಳ್ತಾ ಇರೋದು ರವಾ ದೋಸೆ ಬಗ್ಗೆ.

ಹೌದು, ಹೋಟೆಲ್ ಗಳಲ್ಲಿ ರವಾ ದೋಸೆಯ ರುಚಿ ಸೂಪರ್. ಆದ್ರೆ ನೀವು ಪ್ರತಿದಿನ ಹೊರಗೆ ಹೋಗಿ ತಿನ್ನಲು ಸಾಧ್ಯವಿಲ್ಲ. ಅದಕ್ಕೇ.. ನೀವು ಮನೆಯಲ್ಲಿಯೇ ಸುಲಭವಾಗಿ ತಯಾರಿಸಿಕೊಳ್ಳಲು ಹೋಟೆಲ್ ಶೈಲಿಯ ರವಾ ದೋಸೆ ರೆಸಿಪಿ ಬಗ್ಗೆ ನಾವ್​ ನಿಮಗೆ ತಿಳಿಸುತ್ತೇವೆ. ಏಕೆ ತಡ, ನೀವೂ ಒಮ್ಮೆ ಪ್ರಯತ್ನಿಸಿ..

ಇದನ್ನೂ ಓದಿ: ಇವರೆಲ್ಲ ಎಷ್ಟು ಪುಣ್ಯ ಮಾಡಿದ್ದರೋ; ಪ್ರತಿ ವಾರ ತಿರುಮಲ ತಿಮ್ಮಪ್ಪನ ನೇರ ದರ್ಶನ! - Tirupati

ಬೇಕಾಗುವ ಪದಾರ್ಥಗಳು:

  • ಬಾಂಬೆ ರವಾ - ಒಂದು ಕಪ್
  • ಅಕ್ಕಿ ಹಿಟ್ಟು - ಒಂದು ಕಪ್
  • ಮೈದಾ - ಅರ್ಧ ಕಪ್
  • ಮೊಸರು - ಅರ್ಧ ಕಪ್
  • ಜೀರಿಗೆ - ಒಂದು ಟೀ ಸ್ಪೂನ್​
  • ಕಾಳುಮೆಣಸಿನ ಪುಡಿ - ಒಂದು ಟೀ ಸ್ಪೂನ್​
  • ಉಪ್ಪು - ರುಚಿಗೆ ತಕ್ಕಷ್ಟು
  • ಸಣ್ಣಗೆ ಕತ್ತರಿಸಿದ ಈರುಳ್ಳಿ - 2 ಟೀ ಸ್ಪೂನ್
  • ಹಸಿ ಮೆಣಸಿನಕಾಯಿ ಗ್ರೈಂಡ್ ಮಾಡಿದ್ದು - 2 ಟೀ ಸ್ಪೂನ್
  • ಶುಂಠಿ - ಟೀ ಸ್ಪೂನ್​
  • ಕೊತ್ತಂಬರಿ ಪುಡಿ - 2 ಟೀ ಸ್ಪೂನ್​
  • ಎಣ್ಣೆ - ಸ್ವಲ್ಪ
  • ನೀರು - ಅಗತ್ಯಕ್ಕೆ ತಕ್ಕಷ್ಟು

ರವಾ ದೋಸೆ ತಯಾರಿಸುವ ವಿಧಾನ:

  • ಮೊದಲು ಒಂದು ಪಾತ್ರೆಯಲ್ಲಿ ಬಾಂಬೆ ರವಾ, ಅಕ್ಕಿ ಹಿಟ್ಟು, ಸ್ವಲ್ಪ ಮೈದಾ, ಮೊಸರು, ಜೀರಿಗೆ, ಕಾಳುಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಶ್ರಣ ಮಾಡಿ.
  • ಅದರ ನಂತರ ಸ್ವಲ್ಪ ಸ್ವಲ್ಪ ನೀರು ಸೇರಿಸಿ ಮತ್ತು ಹಿಟ್ಟನ್ನು ಗಂಟುಗಳಿಲ್ಲದಂತೆ ಚೆನ್ನಾಗಿ ಕಲಸಿ.
  • ಅದೇ ಮಿಶ್ರಣದಲ್ಲಿ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ತುರಿದ ಕೊತ್ತಂಬರಿ, ಹಸಿ ಮೆಣಸಿನಕಾಯಿ ಮತ್ತು ಶುಂಠಿ ಸೇರಿಸಿ ಮತ್ತು ಮಿಶ್ರಣ ಮಾಡಿ.
  • ಹೀಗೆ ಎಲ್ಲವನ್ನೂ ಕಲಸಿದ ನಂತರ ಹಿಟ್ಟು ತೆಳುವಾಗಿರುವಂತೆ ನೋಡಿಕೊಳ್ಳಿ. ನಂತರ ಅದನ್ನು ಅರ್ಧ ಗಂಟೆಯವರೆಗೆ ಪಕ್ಕಕ್ಕೆ ಇರಿಸಿ.
  • ಆ ನಂತರ.. ದೋಸೆ ತವಾವನ್ನು ಒಲೆಯ ಮೇಲೆ ಇಟ್ಟು, ಅದು ಚೆನ್ನಾಗಿ ಬಿಸಿಯಾದಾಗ.. ಸ್ವಲ್ಪ ಎಣ್ಣೆಯನ್ನು ಹಾಕಿ ಅದರ ಮೇಲೆ ಹರಡಿ.
  • ನಂತರ ತಯಾರಾದ ದೋಸೆ ಹಿಟ್ಟಿನ ಮಿಶ್ರಣವನ್ನು ತವಾದ ಮೇಲೆ ಹಾಕಿ. ನಂತರ ಸ್ವಲ್ಪ ಎಣ್ಣೆಯನ್ನು ಸಿಂಪಡಿಸಿ ಮತ್ತು ಕಂದು ಬಣ್ಣ ಬರುವವರೆಗೆ ಒಂದು ಬದಿಯಲ್ಲಿ ಫ್ರೈ ಮಾಡಿ. ಹಾಗೆಯೇ ಎರಡನೇ ಭಾಗವನ್ನು ಬೇಯಿಸಬೇಕು.
  • ಹುರಿದ ನಂತರ, ಅದು ಮುರಿಯದಂತೆ ಎಚ್ಚರಿಕೆಯಿಂದ ಪ್ಲೇಟ್​ಗೆ ತೆಗೆದುಕೊಳ್ಳಿ. ಅಷ್ಟೇ.. ಗರಿಗರಿಯಾದ, ಬಾಯಲ್ಲಿ ನೀರೂರಿಸುವ ಹೋಟೆಲ್ ಸ್ಟೈಲ್ ದೋಸೆ ಸಿದ್ಧ! ನಂತರ ನೀವು ಅದನ್ನು ಶೇಂಗಾ ಚಟ್ನಿಯೊಂದಿಗೆ ಸವಿಯಬಹುದು. ಆಗ ಅದರ ರುಚಿ ನಿಮ್ಮನ್ನು ಮೋಡಿ ಮಾಡದೇ ಇರದು.

ಇದನ್ನೂ ಓದಿ: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಗುಡ್​ ನ್ಯೂಸ್​; ಹೀಗಿದೆ ಸಂಶೋಧಕರ ಸಲಹೆ - regenerate certain kidney cells

ETV Bharat Logo

Copyright © 2024 Ushodaya Enterprises Pvt. Ltd., All Rights Reserved.