ETV Bharat / bharat

ನಕಲಿ VPN ಬಳಸಿ ವಿಮಾನಗಳಿಗೆ ಹುಸಿ ಬಾಂಬ್​ ಬೆದರಿಕೆ: ತನಿಖೆ ವೇಳೆ IP ಅಡ್ರೆಸ್​ ಬದಲು

ಕಂಪ್ಯೂಟರ್​​ ಸುರಕ್ಷತಾ ನೆಟ್​ವರ್ಕ್​ ಆದ 'ವಿಪಿಎನ್​' ಬಳಸಿ ದುಷ್ಕರ್ಮಿಗಳು ವಿಮಾನಗಳಿಗೆ ಹುಸಿ ಬೆದರಿಕೆ ಹಾಕಿದ್ದಾರೆ. ಆದರೆ, ಇದನ್ನು ಬೆನ್ನತ್ತುವ ವೇಳೆಗೆ ಐಪಿ ಅಡ್ರೆಸ್​​ ಬದಲಿಸಲಾಗಿದೆ. ಇದು ಆರೋಪಿಗಳ ಪತ್ತೆಗೆ ಸವಾಲಾಗಿದೆ.

ನಕಲಿ VPN ಬಳಸಿ ವಿಮಾನಗಳಿಗೆ ಹುಸಿ ಬಾಂಬ್​ ಬೆದರಿಕೆ
ಸಂಗ್ರಹ ಚಿತ್ರ (ANI)
author img

By ANI

Published : Oct 29, 2024, 5:21 PM IST

ನವದೆಹಲಿ: ಕಳೆದ 16 ದಿನಗಳಿಂದ ಭಾರತೀಯ ವಿಮಾನಗಳಿಗೆ ಸತತವಾಗಿ ಬರುತ್ತಿರುವ ಹುಸಿ ಬಾಂಬ್​ ಬೆದರಿಕೆ ಪ್ರಕರಣದಲ್ಲಿ ಓರ್ವ ಶಂಕಿತ ಆರೋಪಿಯನ್ನು ಮಹಾರಾಷ್ಟ್ರದಲ್ಲಿ ಬಂಧಿಸಲಾಗಿದೆ. ಯುರೋಪ್​ ದೇಶಗಳಿಂದ ಬೆದರಿಕೆ ಬಂದಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಬಳಿಕ, ಐಪಿ(ಇಂಟರ್ನೆಟ್‌ ಪ್ರೋಟೋಕಾಲ್) ಅಡ್ರೆಸ್​​ ಬದಲಾಗಿರುವುದು ಆರೋಪಿಗಳ ಪತ್ತೆಗೆ ಸವಾಲಾಗಿದೆ.

ಬಂಧಿತ ವ್ಯಕ್ತಿ ಇಮೇಲ್​ ಮೂಲಕ ಬೆದರಿಕೆ ಸಂದೇಶ ರವಾನಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಉಳಿದ ಸಾಮಾಜಿಕ ಮಾಧ್ಯಮಗಳ ಮೂಲಕ ಒಡ್ಡಲಾದ ಬೆದರಿಕೆಗಳ ಮೂಲ ಪತ್ತೆಯಾಗುತ್ತಿಲ್ಲ. ಇದಕ್ಕೆ ದುಷ್ಕರ್ಮಿಗಳು ಬಳಸುತ್ತಿರುವ ನಕಲಿ ವರ್ಚುವಲ್ ಪ್ರೈವೆಟ್ ನೆಟ್‌ವರ್ಕ್‌ (ವಿಪಿಎನ್)​ ಕಾರಣವಾಗಿದೆ.

ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, ಯುರೋಪ್​​ ದೇಶಗಳಿಂದ ವಿಮಾನಗಳಿಗೆ ಬೆದರಿಕೆ ಹಾಕುತ್ತಿರುವ ಬಗ್ಗೆ ತನಿಖೆಯಲ್ಲಿ ಗೊತ್ತಾಗಿದೆ. ಆರೋಪಿಗಳು ನೆಟ್​ವರ್ಕ್​ ಸುರಕ್ಷತಾ ವಿಧಾನವಾದ 'ವಿಪಿಎನ್'​ ಬಳಸಿರುವುದು ಸ್ಪಷ್ಟ. ಆದರೆ, ಅದನ್ನು ಬೆನ್ನತ್ತುವ ವೇಳೆಗೆ ಐಪಿ ಅಡ್ರೆಸ್​​ ಬದಲಿಸಲಾಗಿದೆ. ಹೀಗಾಗಿ ಪ್ರಕರಣ ಪ್ರಗತಿ ಕಾಣುತ್ತಿಲ್ಲ ಎಂದು ತಿಳಿಸಿದ್ದಾರೆ.

ಸೋಷಿಯಲ್​ ಮೀಡಿಯಾ ಸಭೆ: ಸೈಬರ್​ ತಜ್ಞರ ನೆರವಿನೊಂದಿಗೆ ಭದ್ರತಾ ಏಜೆನ್ಸಿಗಳು ತೀವ್ರ ತನಿಖೆ ನಡೆಸುತ್ತಿದ್ದಾರೆ. ಬೆದರಿಕೆ ಬಂದ ಖಾತೆಯ ಹೆಚ್ಚಿನ ವಿವರಗಳನ್ನು ನೀಡಲು ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಹಬ್ಬದ ಸೀಸನ್​ ಕಾರಣ, ಪ್ರಯಾಣಿಕರ ಸಂಚಾರ ಹೆಚ್ಚಿರಲಿದೆ. ಹೀಗಾಗಿ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲು ಭದ್ರತೆಯನ್ನು ಹೆಚ್ಚಿಸಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್​ಐಎ) ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಬಾಂಬ್ ಬೆದರಿಕೆ ಪರಿಶೀಲನಾ ತಂಡವನ್ನು (BTAC) ನಿಯೋಜಿಸಿದೆ. ಪ್ರಕರಣದಲ್ಲಿ ನೆರವಿಗಾಗಿ ಸಾಮಾಜಿಕ ಮಾಧ್ಯಮ ವೇದಿಕೆಗಳ ಪ್ರತಿನಿಧಿಗಳ ಸಭೆಯನ್ನು ಕರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

400ಕ್ಕೂ ಅಧಿಕ ವಿಮಾನಗಳಿಗೆ ಬೆದರಿಕೆ: ಕಳೆದ ಎರಡು ವಾರಗಳಲ್ಲಿ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ 400ಕ್ಕೂ ಹೆಚ್ಚು ಹುಸಿ ಬಾಂಬ್ ಬೆದರಿಕೆಗಳು ಬಂದಿವೆ. ಇಲ್ಲಿಯವರೆಗೆ, ಕೇವಲ ಎಂಟು ವಿಮಾನಗಳ ಸಂಚಾರವನ್ನು ಬದಲಿಸಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಸಾಮಾಜಿಕ ಮಾಧ್ಯಮಗಳ ಸಂಸ್ಥೆಗಳಿಗೆ ಬಾಂಬ್​ ಬೆದರಿಕೆಯಂತಹ ಪೋಸ್ಟ್​ಗಳ ಮೇಲೆ ನಿಗಾ ಇಡಲು ಎಚ್ಚರಿಕೆ ನೀಡಿದೆ.

ವಿಮಾನಯಾನ ಕಾನೂನು ತಿದ್ದುಪಡಿ: ವಿಮಾನಗಳಿಗೆ ಬರುತ್ತಿರುವ ಸತತ ಬೆದರಿಕೆ ಕರೆಗಳಿಂದಾಗಿ ಪ್ರಯಾಣಿಕರಲ್ಲಿ ಭಾರಿ ಆತಂಕ ಉಂಟಾಗಿದ್ದು, ದುಷ್ಕರ್ಮಿಗಳ ವಿರುದ್ಧ ಕಠಿಣ ಶಿಕ್ಷೆ ವಿಧಿಸಲು ವಿಮಾನಯಾನ ಕಾನೂನುಗಳಿಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಯೋಜಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು, "ಹುಸಿ ಬಾಂಬ್​ ಬೆದರಿಕೆಗಳನ್ನು ತಡೆಯಲು ಅಂತಾರಾಷ್ಟ್ರೀಯ ಸಂಸ್ಥೆಗಳು, ಕಾನೂನು ಜಾರಿ ಏಜೆನ್ಸಿಗಳು ಮತ್ತು ಗುಪ್ತಚರ ಬ್ಯೂರೋದ ಬೆಂಬಲ ತೆಗೆದುಕೊಳ್ಳುವುದರ ಜೊತೆಗೆ, ಕೇಂದ್ರ ಸರ್ಕಾರವೂ ಎರಡು ನಾಗರಿಕ ವಿಮಾನಯಾನ ಕಾನೂನುಗಳಿಗೆ ತಿದ್ದುಪಡಿ ಮಾಡಲು ಚಿಂತನೆ ನಡೆಸುತ್ತಿದೆ" ಎಂದಿದ್ದಾರೆ.

ಇದನ್ನೂ ಓದಿ: ಪ್ಯಾಲೆಸ್ಟೈನ್​ಗೆ ಮತ್ತೊಮ್ಮೆ ಭಾರತದ ನೆರವು - 30 ಟನ್ ಅಗತ್ಯ ವೈದ್ಯಕೀಯ ಸಾಮಗ್ರಿಗಳ ರವಾನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.