ETV Bharat / bharat

ಪಂಜಾಬ್​​ ಗಡಿಯಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡು ವಶ: ಭಾರಿ ಬಿಗಿ ಭದ್ರತೆ.. - ಬಿಎಸ್‌ಎಫ್

ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಗಡಿ ಭಾಗದಲ್ಲಿ ಎಕೆ-47 ಅಸಾಲ್ಟ್ ರೈಫಲ್, ಎರಡು ಮ್ಯಾಗಜೀನ್‌ಗಳು ಮತ್ತು 40 ಕಾರ್ಟ್ರಿಡ್ಜ್‌ಗಳನ್ನು ಬಿಎಸ್‌ಎಫ್ ವಶಕ್ಕೆ ಪಡೆದುಕೊಂಡಿದೆ.

ಪಂಜಾಬ್​​ ಗಡಿಯಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡು ವಶ:  ಭಾರಿ ಬಿಗಿ ಭದ್ರತೆ..

author img

By ETV Bharat Karnataka Team

Published : Jan 20, 2024, 7:03 PM IST

Updated : Jan 20, 2024, 10:56 PM IST

ನವದೆಹಲಿ: ಪಾಕಿಸ್ತಾನ ಗಡಿಯಾಚೆಯಿಂದ ಸಾಗಿಸಲಾಗಿದ್ದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಪಂಜಾಬ್​​ ಗಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ, ಈ ಹಿನ್ನೆಲೆಯಲ್ಲಿ ಗಡಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಭಾರತ - ಪಾಕಿಸ್ತಾನ ಗಡಿಯ ಬಳಿ ಇರುವ ಮೈದಾನದಲ್ಲಿ ಎಕೆ-47 ಅಸಾಲ್ಟ್ ರೈಫಲ್, ಎರಡು ಮ್ಯಾಗಜೀನ್‌ಗಳು ಮತ್ತು 40 ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಿಎಸ್‌ಎಫ್ ಪಡೆಯ ವಕ್ತಾರರು ಶನಿವಾರ ಈ ವಿಷಯ ತಿಳಿಸಿದ್ದಾರೆ.

ಜನವರಿ 18 ಮತ್ತು 19 ರ ಮಧ್ಯರಾತ್ರಿಯಲ್ಲಿ ಡ್ರೋನ್ ಚಲನ ವಲನವನ್ನು ಗಮನಿಸಿದ ನಂತರ ಶುಕ್ರವಾರ ಗಡಿ ಭದ್ರತಾ ಪಡೆ ನಡೆಸಿದ ಶೋಧ ಕಾರ್ಯಾಚರಣೆ ಈ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಿಳಿ ಬಣ್ಣದ ಗೋಣಿಚೀಲದಲ್ಲಿ ಸುತ್ತಿದ ಪ್ಯಾಕೆಟ್​ವೊಂದನ್ನು ಇದೇ ವೇಳೆ ವಶಕ್ಕೆ ಪಡೆಯಲಾಗಿದೆ. ಅದರಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಜೊತೆಗೆ 40,000 ರೂಪಾಯಿ ನಗದು ಇದೆ ಎಂದು ವಕ್ತಾರರು ತಿಳಿಸಿದ್ದಾರೆ. ಬಿಎಸ್‌ಎಫ್ ಪಡೆಗಳು ಗಡಿಯಾಚೆಗಿನ ಭಯೋತ್ಪಾದಕರ ದುಷ್ಟ ಯತ್ನಗಳನ್ನು ಯಶಸ್ವಿಯಾಗಿ ವಿಫಲಗೊಳಿಸಿವೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

ರಾಮಮಂದಿರದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಮುನ್ನ ಭಯೋತ್ಪಾದನೆ ಮಾಡಲು ಮದ್ದುಗುಂಡುಗಳನ್ನು ಬಳಸುವ ಸಾಧ್ಯತೆ ಇತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ವಿಶೇಷವಾಗಿ ಅಯೋಧ್ಯೆ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ಈಗಾಗಲೇ ಭದ್ರತೆಯನ್ನು ಹೆಚ್ಚಿಸಲಾಗಿದೆ. ಉತ್ತರ ಪ್ರದೇಶ ಮತ್ತು ಕೇಂದ್ರ ಸರ್ಕಾರ ಈಗಾಗಲೇ ಭಾರಿ ಬಿಗಿ ಭದ್ರತೆಯನ್ನು ಏರ್ಪಾಡು ಮಾಡಿವೆ, ಗುಪ್ತಚರ ಇಲಾಖೆ ಇದಕ್ಕಾಗಿ ವಿಶೇಷ ವ್ಯವಸ್ಥೆಯನ್ನೂ ಕೂಡಾ ಮಾಡಿಕೊಂಡಿದೆ.

ಸೈಬರ್ ಭದ್ರತಾ ತಜ್ಞರು ಸಮಗ್ರ ನಿಯಂತ್ರಣ ಕೊಠಡಿಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ಸೈಬರ್‌ಸ್ಪೇಸ್‌ನ ದುರುಪಯೋಗದ ಕುರಿತು ನಿರಂತರ ಮಾಹಿತಿ ಮತ್ತು ಮೌಲ್ಯಮಾಪನ ಮಾಡಲಾಗುತ್ತಿದೆ. ಅದಕ್ಕೆ ಅನುಗುಣವಾಗಿ ಎಚ್ಚರಿಕೆಗಳನ್ನು ನೀಡಲಾಗುತ್ತಿದೆ. "ಸೈಬರ್ ತಜ್ಞರು ಸಾಮಾಜಿಕ ಮಾಧ್ಯಮದ ಎಲ್ಲಾ ಘಟಕಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ" ಎಂದು ಮೂಲಗಳು ತಿಳಿಸಿವೆ. ಉತ್ತರ ಪ್ರದೇಶ ಪೊಲೀಸರು ಈಗಾಗಲೇ ಅಯೋಧ್ಯೆ ಮತ್ತು ಸುತ್ತಮುತ್ತ ಸುಮಾರು 10,000 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ.

ವಿಶೇಷವಾಗಿ ರಾಷ್ಟ್ರೀಯ ತನಿಖೆ ಸಂಸ್ಥೆ NIA ಎಲ್ಲಾ ಶಂಕಿತ ಚಲನವಲನಗಳ ಮೇಲೆ ತೀವ್ರ ಕಟ್ಟೆಚ್ಚರ ವಹಿಸಿದೆ. ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ವೇಳೆ ತೊಂದರೆ ಕೊಡುವ ಖಲಿಸ್ತಾನಿ ಸಹಾನುಭೂತಿ ಹೊಂದಿರುವವರ ಚಟುವಟಿಕೆಗಳ ಮೇಲೂ NIA ನಿಗಾ ಇರಿಸಿದೆ. ಅಯೋಧ್ಯೆಯಲ್ಲಿ ಅನುಮಾನಾಸ್ಪದ ಚಟುವಟಿಕೆಗಳಲ್ಲಿ ತೊಡಗಿದ್ದ ಮೂವರು ಖಲಿಸ್ತಾನಿ ಪರ ಸಹಾನುಭೂತಿ ಹೊಂದಿರುವವರನ್ನು ಭದ್ರತಾ ಪಡೆಗಳು ಬಂಧಿಸಿವೆ.

Last Updated : Jan 20, 2024, 10:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.