ETV Bharat / bharat

ಮುತ್ತಿನನಗರಿಯಲ್ಲಿ ಮುಂಗಾರು ಅಬ್ಬರ: ಧರೆಗುರುಳಿದ 200 ವರ್ಷದ ಮರ, ವ್ಯಕ್ತಿಯ ತಲೆಗೆ ಪೆಟ್ಟು, ವಾಹನಗಳು ಜಖಂ - Heavy Rain in Hyderabad

Rain in Hyderabad Today : ಭಾಗ್ಯನಗರದಲ್ಲಿ ಧಾರಾಕಾರ ಮಳೆ ಸುರಿದಿದೆ. ನಗರದಲ್ಲಿ ಸಂಜೆ ವರುಣ ದೇವನು ಗುಡುಗು ಮಿಂಚಿನೊಂದಿಗೆ ಅಬ್ಬರಿಸಿದ್ದಾನೆ. ಬಿರುಸಿನ ಗಾಳಿಯೊಂದಿಗೆ ಆರ್ಭಟಿಸಿದ ಮಳೆಗೆ ವಿವಿಧ ಕೆಲಸಕ್ಕೆಂದು ಹೊರ ಬಂದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು. ಜೋರಾದ ಗಾಳಿಗೆ ಕೆಲವೆಡೆ ಮರಗಳು ಧರೆಗುರುಳಿದ್ದು, ರಸ್ತೆಗಳು ಜಲಾವೃತಗೊಂಡಿವೆ.

MINISTER PONNAM ON HYDERABAD RAINS  HEAVY MONSOON RAINFALL IN HYDERABAD  HYDERABAD RAIN NEWS  WEATHER REPORT
ಧರೆಗುರುಳಿದ 200 ವರ್ಷದ ವೃಕ್ಷ, ವ್ಯಕ್ತಿಯ ತಲೆಗೆ ಪೆಟ್ಟು (ETV Bharat)
author img

By ETV Bharat Karnataka Team

Published : Jun 17, 2024, 6:37 PM IST

ಹೈದರಾಬಾದ್ (ತೆಲಂಗಾಣ): ಬಿಸಿಲಿನ ಝಳಕ್ಕೆ ತತ್ತರಿಸಿರುವ ನಗರದ ನಿವಾಸಿಗಳಿಗೆ ಕೊಂಚ ನೆಮ್ಮದಿ ಸಿಕ್ಕಿದೆ. ಭಾರೀ ಮಳೆಯಿಂದಾಗಿ ಹೈದರಾಬಾದ್‌ನಲ್ಲಿ ವಾತಾವರಣ ತಂಪಾಗಿದೆ. ಖೈರತಾಬಾದ್, ಕುಕಟ್​ಪಲ್ಲಿ, ರಾಜೇಂದ್ರ ನಗರ, ಅತ್ತಾಪುರ, ಬಂಜಾರಾ ಹಿಲ್ಸ್ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ. ಮಳೆಯಿಂದ ಕೆರೆಯಂತಾದ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಪರದಾಡಿದ ಪ್ರಸಂಗ ಕಂಡ ಬಂತು. ಮಳೆಯಿಂದ ಜನರಿಗೆ ತೊಂದರೆಯಾಗದಂತೆ ಜಿಹೆಚ್‌ಎಂಸಿ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದಾರೆ. ಎಲ್ಲೆಂದರಲ್ಲಿ ನೀರು ನಿಲ್ಲದಂತೆ ಹಾಗೂ ಚರಂಡಿ ತುಂಬಿ ಹರಿದ ಕಡೆ ಜನರಿಗೆ ತೊಂದರೆಯಾಗದಂತೆ ಸಿಬ್ಬಂದಿ ಕ್ರಮ ಕೈಗೊಂಡಿದ್ದಾರೆ.

ಟೋಲಿಚೌಕಿಯಲ್ಲಿ ಬಿದ್ದ ಬೃಹತ್ ಮರ: ಹೈದರಾಬಾದ್ ನಗರದಲ್ಲಿ ಸುರಿದ ಭಾರಿ ಮಳೆಗೆ ನಗರವಾಸಿಗಳು ನಲುಗಿ ಹೋಗಿದ್ದಾರೆ. ಬಿರುಗಾಳಿ, ಗುಡುಗು ಸಹಿತ ಮಳೆಯಿಂದಾಗಿ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು. ಜೋರಾದ ಗಾಳಿಗೆ ಕೆಲವೆಡೆ ಮರಗಳು ಮುರಿದು ಬಿದ್ದಿವೆ. ಟೋಲಿಚೌಕ್ ಗೋಲ್ಕೊಂಡ ಎಂಡಿ ಲೈನ್ಸ್‌ನಲ್ಲಿ 200 ವರ್ಷಗಳಷ್ಟು ಹಳೆಯದಾದ ಮರವೊಂದು ಬಲವಾದ ಗಾಳಿಗೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಒಬ್ಬರ ತಲೆಗೆ ಗಾಯವಾಗಿದ್ದು, 4 ಬೈಕ್​ಗಳು ಜಖಂಗೊಂಡಿವೆ.

ಮುಂಗಾರು ಅಬ್ಬರ: ಜೂನ್ ಮೊದಲ ವಾರದಲ್ಲಿ ನೈರುತ್ಯ ಮುಂಗಾರು ರಾಜ್ಯಕ್ಕೆ ಪ್ರವೇಶಿಸಿದ್ದರಿಂದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಭಾಗ್ಯನಗರದ ನಾಂಪಲ್ಲಿ, ಬಶೀರ್ ಬಾಗ್, ಲಿಬರ್ಟಿ, ಹಿಮಾಯತ್ ನಗರ, ಲಖ್ಡಿಕಾಪುಲ್, ಖೈರತಾಬಾದ್ ಮತ್ತು ಇತರ ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತವಾಗಿವೆ. ರಸ್ತೆಗಳಲ್ಲಿ ಮಳೆ ನೀರು ನಿಂತಿದ್ದರಿಂದ ವಾಹನ ಸವಾರರು, ದಾರಿಹೋಕರು ಪರದಾಡಿದರು.

ನಗರದ ಅಮೀರಪೇಟೆ, ರಾಜೇಂದ್ರನಗರ, ಅತ್ತಾಪುರ, ಕಿಸ್ಮತ್‌ಪುರ, ಎಸ್ಸಾರ್‌ನಗರ, ಎರ್ರಗಡ್ಡ, ಯೂಸಫ್‌ಗುಡ, ಲಾಂಗರ್‌ಹೌಸ್‌, ಗಂಡಿಪೇಟ್‌, ಶಿವರಾಂಪಳ್ಳಿ ಭಾಗದಲ್ಲಿ ಭಾರಿ ಮಳೆಯಾಗಿದೆ. ಇದರಿಂದ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಮಲಕ್ ಪೇಟ, ಚಾದರ್ ಘಾಟ್, ಸೈದಾಬಾದ್, ಸಂತೋಷನಗರ, ಚಂಪಾಪೇಟ್, ಸರೂರ್ ನಗರ, ಚೈತನ್ಯಪುರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗಿದೆ. ಇದರಿಂದ ಎಚ್ಚೆತ್ತ ಜಿಹೆಚ್‌ಎಂಸಿ ವಿಪತ್ತು ನಿರ್ವಹಣಾ ತಂಡಗಳು ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯ ಕೈಗೊಂಡಿವೆ.

ಹೈದರಾಬಾದ್ ಮಳೆ ಬಗ್ಗೆ ಸಚಿವ ಪೊನ್ನಂ ಪ್ರತಿಕ್ರಿಯೆ: ಹೈದರಾಬಾದ್​ನಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಜಾಗೃತರಾಗುವಂತೆ ಸಚಿವ ಪೊನ್ನಂ ಪ್ರಭಾಕರ್ ತಿಳಿಸಿದ್ದಾರೆ. ತಗ್ಗು ಪ್ರದೇಶದ ಜನರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಿಹೆಚ್‌ಎಂಸಿ ಮತ್ತು ಡಿಆರ್‌ಎಫ್ ಸಿಬ್ಬಂದಿ ಜಲಾವೃತ ಪ್ರದೇಶಗಳಲ್ಲಿ ಕಾಲಕಾಲಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮ್ಯಾನ್ ಹೋಲ್‌ಗಳಲ್ಲಿ ಅಪಘಾತಗಳು ಸಂಭವಿಸದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಜನರು ವಿದ್ಯುತ್ ಕಂಬಗಳು ಮತ್ತು ಮರಗಳ ಬಳಿ ಜಾಗರೂಕರಾಗಿರಿ. ಭಾರೀ ಮಳೆಯ ಕಾರಣ ಜನರು ಮನೆಯಿಂದ ಹೊರಗೆ ಬರಬಾರದು ಎಂದು ಮನವಿ ಮಾಡಿದ್ದಾರೆ.

ಓದಿ: ರಾಜ್ಯದಲ್ಲಿ ಮತ್ತೆ ಮುಂಗಾರು ಚುರುಕು; ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ - HEAVY RAIN ALERT

ETV Bharat Logo

Copyright © 2024 Ushodaya Enterprises Pvt. Ltd., All Rights Reserved.