ಅಂಬಾಲಾ, ಹರಿಯಾಣ: ಅಂಬಾಲಾ ನಗರದ ಪಾರ್ಕಿಂಗ್ ಸ್ಥಳದಲ್ಲಿ ಗುರುವಾರ ಭಾರಿ ಬೆಂಕಿ ಕಾಣಿಸಿಕೊಂಡ ನಂತರ ನಾಲ್ಕು ಕಾರುಗಳು ಮತ್ತು ಆಟೋರಿಕ್ಷಾ ಬೆಂಕಿಗೆ ಆಹುತಿಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಂಬಾಲಾ ನಗರದ ರಾಮ್‌ಬಾಗ್ ಪ್ರದೇಶದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದರಿಂದ 4 ಕಾರುಗಳು ಮತ್ತು 1 ಆಟೋರಿಕ್ಷಾ ಹಾನಿಯಾಗಿದೆ. ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ ನಾವು 2 ಅಗ್ನಿಶಾಮಕ ದಳದ ವಾಹನಗಳನ್ನು ಸ್ಥಳಕ್ಕೆ ರವಾನಿಸಿದೆವು ಎಂದು ಅಗ್ನಿಶಾಮಕ ಅಧಿಕಾರಿ ತಾರ್ಸೆಮ್ ರಾಣಾ ಮಾಹಿತಿ ನೀಡಿದ್ದಾರೆ.
ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂಬುದಕ್ಕೆ ಕಾರಣ ತಿಳಿದುಬಂದಿಲ್ಲ. ಅಂಬಾಲಾದಲ್ಲಿ ಗುರುವಾರದವರೆಗೆ 5-6 ಬೆಂಕಿ ಅವಘಡಗಳು ಸಂಭವಿಸಿವೆ" ಎಂದು ಅಗ್ನಿಶಾಮಕ ಅಧಿಕಾರಿ ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಲಾಗುತ್ತಿದೆ
ತಮಿಳುನಾಡಿನಲ್ಲೂ ಭಾರಿ ಅಗ್ನಿ ದುರಂತ: ಚೆನ್ನೈ, ತಮಿಳುನಾಡು: ಇನ್ನು ಮತ್ತೊಂದು ಕಡೆ ಉತ್ತರ ಚೆನ್ನೈನ ಎನ್ನೂರಿನ ಕಾಮರಾಜ್ ನಗರ ಪ್ರದೇಶದಲ್ಲಿ ಗುರುವಾರ ಪಟಾಕಿಯಿಂದಾಗಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಎನ್ನೂರು ಅಗ್ನಿಶಾಮಕ ಠಾಣೆಯಿಂದ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದರು
ಈ ಸಂಬಂಧ ಎನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಘಟನೆ ಬಗ್ಗೆ ತನಿಖೆಯೂ ನಡೆಯುತ್ತಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ಇದಕ್ಕೂ ಮೊದಲು, ಇದೇ ರೀತಿಯ ಘಟನೆಯಲ್ಲಿ, ಜಾರ್ಖಂಡ್‌ನ ಬೊಕಾರೊ ಜಿಲ್ಲೆಯಲ್ಲಿ ಅನೇಕ ಪಟಾಕಿ ಅಂಗಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಇದನ್ನು ಓದಿ: IRCTCಯಿಂದ 'ಮಧ್ಯ ಪ್ರದೇಶ ಮಹಾದರ್ಶನ್ ಟೂರ್': ಜ್ಯೋತಿರ್ಲಿಂಗಗಳ ದರ್ಶನಕ್ಕೆ ಅಪೂರ್ವ ಅವಕಾಶ; ಪ್ಯಾಕೇಜ್‌ನ ಕಂಪ್ಲೀಟ್ ಮಾಹಿತಿ