ಗುವಾಹಟಿ (ಅಸ್ಸಾಂ) : ಕುಖ್ಯಾತ ಭಯೋತ್ಪಾದಕ ಮತ್ತು ಐಸಿಸ್ ಮುಖ್ಯಸ್ಥ ಹ್ಯಾರಿಸ್ ಫಾರೂಕಿ ಅಲಿಯಾಸ್ ಹರೀಶ್ ಅಜ್ಮಲ್ ಫಾರೂಕಿ ಅಸ್ಸೋಂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಧುಬ್ರಿಯಿಂದ ಸಂಘಟನೆ ನಾಯಕನನ್ನು ಯಶಸ್ವಿಯಾಗಿ ಬಂಧಿಸಿದ ಒಂದು ದಿನದ ನಂತರ ಗುರುವಾರ ಅಸ್ಸೋಂ ಪೊಲೀಸರು ಮಾಧ್ಯಮ ಸಂವಾದ ನಡೆಸಿದರು. ಆತ ಯುವಕರನ್ನು ಐಸಿಸ್‌ಗೆ ಸೇರಿಸಿಕೊಳ್ಳಲು ಅಸ್ಸೋಂಗೆ ಬಂದಿದ್ದನೇ? ಎಂಬಂತಹ ಪ್ರಶ್ನೆ ಇದೀಗ ಉದ್ಭವಿಸಿದೆ.
ಅಸ್ಸೋಂ ಪೊಲೀಸ್ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಐಜಿಪಿ ಪಾರ್ಥಸಾರಥಿ ಮಹಂತ ಗುರುವಾರ ಗುವಾಹಟಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಫಾರೂಕಿ ಐಸಿಸ್‌ಗೆ ಯುವಕರು ಮತ್ತು ಹುಡುಗಿಯರನ್ನು ನೇಮಿಸಿಕೊಳ್ಳುವಲ್ಲಿ ಪರಿಣತರಾಗಿದ್ದರು ಎಂದು ಹೇಳಿದ್ದಾರೆ. ಯುವಕರ "ಬ್ರೈನ್ ವಾಶ್ ಮಾಡುವುದು " ಮತ್ತು ಕುಖ್ಯಾತ ಭಯೋತ್ಪಾದಕ ಗುಂಪಿಗೆ ಸೇರುವಂತೆ ಅವರನ್ನು ಆಮಿಷವೊಡ್ಡುವುದರಲ್ಲಿ ಫಾರೂಕಿ ಪರಿಣಿತನಾಗಿದ್ದ ಎಂದು ಮಹಂತ ತಿಳಿಸಿದ್ದಾರೆ.
ಫಾರೂಕಿ ಅವರು ಬಾಂಬ್ ತಯಾರಿಕೆಯಲ್ಲಿ ಪರಿಣತಿ ಹೊಂದಿದ್ದಾನೆ ಮತ್ತು ಭಯೋತ್ಪಾದಕ ನಿಧಿ ಸಂಗ್ರಹಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಎಂದು ಮಹಂತ ಬಹಿರಂಗಪಡಿಸಿದ್ದಾರೆ. ಇವರಿಬ್ಬರು ಬಾಂಗ್ಲಾದೇಶದಿಂದ ಅಸ್ಸಾಂಗೆ ಏಕೆ ಪ್ರವೇಶಿಸಿದ್ದಾರೆ? ಎಂಬ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ ಎಂದು ಅವರು ಇದೇ ವೇಳೆ ಹೇಳಿದರು. ಐಜಿಪಿ ಪಾರ್ಥಸಾರಥಿ ಮಹಂತ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಲ್ಯಾಣ್ ಕುಮಾರ್ ಪಾಠಕ್ ನೇತೃತ್ವದ ಎಸ್‌ಟಿಎಫ್ ತಂಡ ಬುಧವಾರ ಬೆಳಗ್ಗೆ ಧುಬ್ರಿಯಿಂದ ಫಾರೂಕಿ ಮತ್ತು ಆತನ ಸಹಚರ ಅನುರಾಗ್ ಸಿಂಗ್ ಅಲಿಯಾಸ್ ರೆಹಾನ್‌ನನ್ನು ಬಂಧಿಸಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಐಜಿಪಿ ಪಾರ್ಥಸಾರಥಿ ಮಹಂತ, ಅವರು ಧುಬ್ರಿಯ ಕೆಲವು ಪ್ರದೇಶಗಳಲ್ಲಿ ತಿರುಗಾಡುವ ಸಾಧ್ಯತೆಯಿದೆ ಎಂದು 15 ದಿನಗಳ ಹಿಂದೆ ಕೇಂದ್ರ ಗುಪ್ತಚರ ಸಂಸ್ಥೆಯಿಂದ ನಮಗೆ ಸುದ್ದಿ ಬಂದಿತ್ತು. ಅದರಂತೆ ಪೊಲೀಸ್ ತಂಡವನ್ನು ನಿಯೋಜಿಸಲಾಗಿತ್ತು. ಅವರು ಬಾಂಗ್ಲಾದೇಶದ ಮೂಲಕ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಿಂದ ಧುಬ್ರಿ ಮೂಲಕ ಅಸ್ಸಾಂಗೆ ಪ್ರವೇಶಿಸುತ್ತಿದ್ದಾರೆ ಎಂದು ವರದಿಯಾಗಿತ್ತು ಎಂದರು.
“ಮಾರ್ಚ್ 18 ರಂದು ಅವರ ಪ್ರವಾಸದ ಬಗ್ಗೆ ನಮಗೆ ಕೆಲವು ಸುದ್ದಿಗಳು ಬಂದವು. ನಂತರ ಮಾರ್ಚ್ 19 ರಂದು ಧರ್ಮಶಾಲಾ ಪ್ರದೇಶದಲ್ಲಿ ಅವರ ಇರುವಿಕೆಯ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಬಂತು. ನಾನು ಮಾರ್ಚ್ 19 ರ ಮಧ್ಯಾಹ್ನ ಅಲ್ಲಿಗೆ ಹೋಗಿದ್ದೆ. ಮಾರ್ಚ್ 20 ರಂದು ಮುಂಜಾನೆ 4 ಗಂಟೆಯ ಸುಮಾರಿಗೆ ರಸ್ತೆಯಲ್ಲಿ ವಾಹನಗಳಿಗಾಗಿ ಕಾಯುತ್ತಿರುವಾಗ ಅವರಿಬ್ಬರನ್ನು ಬಂಧಿಸಲಾಯಿತು. ನಂತರ ಗುವಾಹಟಿಗೆ ಕರೆತರಲಾಯಿತು. ತರುವಾಯ ಅವರನ್ನು ಮಾರ್ಚ್ 20 ರ ರಾತ್ರಿ ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ಹಸ್ತಾಂತರಿಸಲಾಯಿತು. ಏಜೆನ್ಸಿ ಈಗಾಗಲೇ ಅವರನ್ನು ಎನ್‌ಐಎ ನ್ಯಾಯಾಲಯದ ಮುಂದೆ ಹಾಜರುಪಡಿಸಿದೆ'' ಎಂದು ತಿಳಿಸಿದರು.
ಉಳಿದ ಕ್ರಮಗಳನ್ನು ಎನ್‌ಐಎ ಕೈಗೊಳ್ಳಲಿದೆ. ತನಿಖೆ ನಡೆಯುತ್ತಿದೆ. ಅಸ್ಸೋಂಗೆ ಸಂಬಂಧಿಸಿದ ವಿಚಾರವನ್ನು ಅಸ್ಸೋಂ ಪೊಲೀಸರು ಪ್ರಶ್ನಿಸುತ್ತಾರೆ ಮತ್ತು ತನಿಖೆ ಮಾಡುತ್ತಾರೆ. ಪ್ರಾಥಮಿಕ ಹಂತದಲ್ಲಿ ತನಿಖೆ ನಡೆಯುತ್ತಿದೆ. ಅವರಿಂದ ಮೊಬೈಲ್ ಫೋನ್ಗಳನ್ನು ಮಾತ್ರ ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.
ಪೊಲೀಸರ ಪ್ರಕಾರ, ಫಾರೂಕಿ ಅವರ ಮನೆ ಡೆಹ್ರಾಡೂನ್‌ನಲ್ಲಿದೆ. ಆತನ ಸಹಚರನ ಹೆಸರು ಅನುರಾಗ್ ಸಿಂಗ್ ಅಲಿಯಾಸ್ ರೆಹಾನ್. ಇವರು ಹರಿಯಾಣದ ಪಾಣಿಪತ್ ಮೂಲದವರು. ಬಂಧಿತ ಸಿಂಗ್ ಇಸ್ಲಾಂಗೆ ಮತಾಂತರಗೊಂಡಿದ್ದು, ಆತನ ಪತ್ನಿ ಬಾಂಗ್ಲಾದೇಶಿ ಪ್ರಜೆ. ಫಾರೂಕಿ ಮತ್ತು ಸಿಂಗ್ ವಿರುದ್ಧ ದೆಹಲಿ, ಎಟಿಎಸ್ ಲಕ್ನೋ ಇತ್ಯಾದಿಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ. ಕಳೆದ ಆರು ತಿಂಗಳಿನಿಂದ ಅವರಿಬ್ಬರನ್ನೂ ಎನ್‌ಐಎ ಬೆನ್ನಟ್ಟಿತ್ತು.
ಏತನ್ಮಧ್ಯೆ, ಅಸ್ಸೋಂ ಪೊಲೀಸರು ಬುಧವಾರ ಬೆಳಿಗ್ಗೆ ಧುಬ್ರಿಯಿಂದ ಇವರನ್ನು ಬಂಧಿಸುವ ಮೂಲಕ ಭಾರಿ ಯಶಸ್ಸು ಸಾಧಿಸಿದ ನಂತರ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಗುರುವಾರ ಎಕ್ಸ್ ಮೂಲಕ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಇದನ್ನೂ ಓದಿ : ಜಾರ್ಖಂಡ್: ಇಬ್ಬರು ಐಸಿಸ್ ಉಗ್ರರ ಬಂಧನ