ETV Bharat / bharat

ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್‌: ಎಲ್​ಇಟಿ ಕಮಾಂಡರ್ ಸೇರಿ ಮೂವರು ಉಗ್ರರ ಹತ, ನಾಲ್ವರು ಭದ್ರತಾ ಸಿಬ್ಬಂದಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು ನಿರಂತರ ದಾಳಿ ನಡೆಸುತ್ತಿದ್ದಾರೆ. ಇಂದು​ ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಇಬ್ಬರು ಅಪರಿಚಿತ ಉಗ್ರರನ್ನು ಹೊಡೆದುರುಳಿಸಲಾಗಿದೆ. ಹಾಗೆಯೇ ಖನ್ಯಾರ್​ನಲ್ಲಿ ಎಲ್​ಇಟಿ ಕಮಾಂಡರ್​ನನ್ನು ಬೇಟೆಯಾಡಲಾಗಿದೆ.

ಕಣಿವೆ ನಾಡಿನಲ್ಲಿ ಉಗ್ರರ-ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ
ಕಣಿವೆ ನಾಡಿನಲ್ಲಿ ಉಗ್ರರ-ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ (ETV Bharat)
author img

By ETV Bharat Karnataka Team

Published : Nov 2, 2024, 11:26 AM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಅನಂತ್​ನಾಗ್​ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಇಬ್ಬರು ಉಗ್ರರನ್ನು ಭಾರತೀಯ ಭದ್ರತಾ ಪಡೆ ಹೊಡೆದುರುಳಿಸಿದ ಬೆನ್ನಲ್ಲೇ ಶ್ರೀನಗರದ ಖನ್ಯಾರ್ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರ ಸಂಘಟನೆ ಎಲ್​ಇಟಿ ಕಮಾಂಡರ್​ನನ್ನು ಭದ್ರತಾ ಪಡೆ ಬೇಟೆಯಾಡಿದೆ. ಈ ಕುರಿತು ಕಾಶ್ಮೀರ ವಲಯದ ಐಜಿಪಿ ವಿಧಿ ಕುಮಾರ್ ಮಾಹಿತಿ ಖಚಿತಪಡಿಸಿದ್ದಾರೆ.

ಉಸ್ಮಾನ್ ಹತ ಎಲ್​ಇಟಿ ಕಮಾಂಡರ್ ಎಂದು ಗುರುತಿಸಲಾಗಿದೆ. ಈತ ವಿದೇಶಿ ಉಗ್ರ. ಈತ 2023ರಲ್ಲಿ ಇನ್ಸ್​ಪೆಕ್ಟರ್ ಕೊಲೆ ಕೇಸ್​ನಲ್ಲಿ ಭಾಗಿಯಾಗಿದ್ದ. ಜೊತೆಗೆ ಇಂದು ಬೆಳಗ್ಗೆ ನಾಲ್ವರು ಭದ್ರತಾ ಸಿಬ್ಬಂದಿ ಗಾಯಗೊಂಡ ಗುಂಡಿನ ಚಕಮಕಿಯಲ್ಲೂ ಈತ ಭಾಗಿಯಾಗಿದ್ದ. ಸದ್ಯ ಈ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಐಜಿಪಿ ಮಾಹಿತಿ ನೀಡಿದ್ದಾರೆ.

ಇಬ್ಬರು ಉಗ್ರರ ಎನ್​ಕೌಂಟರ್: ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಶಾಂಗಸ್ ಲಾರ್ನೂ ಕಚ್ವಾನ್ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಮತ್ತೊಂದು ಎನ್‌ಕೌಂಟರ್‌ನಲ್ಲಿ ಇಬ್ಬರು ಅಪರಿಚಿತ ಉಗ್ರರು ಹತರಾಗಿದ್ದಾರೆ. ಈ ಬಗ್ಗೆ ಭದ್ರತಾ ಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು ಖಚಿತಪಡಿಸಿದ್ದು, ಕಾರ್ಯಾಚರಣೆ ಮುಂದುವರೆದಿದೆ.

ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಪನಾರ್ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ಭಯೋತ್ಪಾದಕರನ್ನು ಹೊಡೆದು ಹಾಕಲು ಭದ್ರತಾಪಡೆ ಶೋಧ ಕಾರ್ಯಾಚರಣೆ ನಡೆಸುತ್ತಿದೆ.

ಈ ಬಗ್ಗೆ ಎಕ್ಸ್​​ ಪೋಸ್ಟ್​ನಲ್ಲಿ ಭಾರತೀಯ ಸೇನೆಯ ಚಿನಾರ್​ ಕಾರ್ಪಸ್ ಪೋಸ್ಟ್ ಮಾಡಿದೆ. '1 ನವೆಂಬರ್ 2024 ರಂದು ತಡರಾತ್ರಿ, ಬಂಡಿಪೋರಾದ ಜನ್ ಪ್ರದೇಶದಲ್ಲಿ ಪನಾರ್‌ನಲ್ಲಿ ಅನುಮಾನಾಸ್ಪದ ಚಲನೆಯನ್ನು ಗುರುತಿಸಲಾಗಿದೆ. ಭಯೋತ್ಪಾದಕರಿಗೆ ಸವಾಲೆಸೆದ ಕೂಡಲೇ ಮನಬಂದಂತೆ ಗುಂಡಿನ ದಾಳಿ ನಡೆಸಿ ಕಾಡಿಗೆ ಪರಾರಿಯಾಗಿದ್ದಾರೆ. ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಈ ಮಧ್ಯೆ ಹಲವಾರು ಪ್ರದೇಶಗಳನ್ನು ಸುತ್ತುವರೆಯಲಾಗಿದೆ. ಮತ್ತು ಅಡಗಿರುವ ಭಯೋತ್ಪಾದಕರ ಪತ್ತೆಗಾಗಿ ಶೋಧ ನಡೆಯುತ್ತಿದೆ" ಎಂದು ತಿಳಿಸಿದ್ದಾರೆ.

ಶ್ರೀನಗರದಲ್ಲಿ ಎನ್‌ಕೌಂಟರ್: ಶ್ರೀನಗರದ ಖನ್ಯಾರ್​​ ಪ್ರದೇಶದಲ್ಲಿ ಭದ್ರತಾ ಪಡೆಗಳ ಮತ್ತು ಭಯೋತ್ಪಾದಕರ ನಡುವೆ ಶನಿವಾರ ಗುಂಡಿನ ಚಕಮಕಿ ನಡೆದಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಸುತ್ತಮುತ್ತಲ ಪ್ರದೇಶದಲ್ಲಿ ಭಯೋತ್ಪಾದಕರ ಇರುವಿಕೆಯ ಬಗ್ಗೆ ಗುಪ್ತಚರ ವರದಿ ಬಳಿಕ ಭದ್ರತಾ ಸಿಬ್ಬಂದಿ ಶೋಧ ಕಾರ್ಯಾಚರಣೆ ಆರಂಭಿಸಿದೆ. ಈ ವೇಳೆ, ಎನ್‌ಕೌಂಟರ್​ ಆರಂಭವಾಗಿದೆ.

ಪೊಲೀಸ್ ವಕ್ತಾರರ ಪ್ರಕಾರ, ಶಂಕಿತ ಉಗ್ರರನ್ನು ಪತ್ತೆಹಚ್ಚಲು ಭದ್ರತಾ ಪಡೆಗಳು ಖನ್ಯಾರ್‌ನ ಕೆಲವು ಭಾಗಗಳನ್ನು ಸುತ್ತುವರಿದ ನಂತರ ಇಂದು ಬೆಳಗ್ಗೆ ಕಾರ್ಯಾಚರಣೆ ಪ್ರಾರಂಭವಾಯಿತು. ಸುತ್ತಮುತ್ತಲಿನ ಪ್ರದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ನಿಖರ ಮಾಹಿತಿ ಪಡೆದ ಬಳಿಕ ಪೊಲೀಸ್ ಮತ್ತು ಇತರ ಭದ್ರತಾ ಏಜೆನ್ಸಿಗಳ ಜಂಟಿ ತಂಡ ಶೋಧ ಕೈಗೊಂಡಿದೆ" ಎಂದು ವಕ್ತಾರರು ವಿವರಿಸಿದ್ದಾರೆ.

"ಇನ್ನೂ ಕೂಡ ದಾಳಿ ಪ್ರತಿದಾಳಿ ನಡೆಯುತ್ತಿದ್ದು, ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಾಗುವುದು" ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರಿಂದ ಗುಂಡಿನ ದಾಳಿ: ಇಬ್ಬರು ವಲಸೆ ಕಾರ್ಮಿಕರಿಗೆ ಗುಂಡೇಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.