ಮೋರ್ಬಿ: ಗುಜರಾತ್ನಲ್ಲಿ ಭಾರಿ ಮಳೆಯಿಂದಾಗಿ ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಟ್ರ್ಯಾಕ್ಟರ್ವೊಂದು ಕೊಚ್ಚಿ ಹೋಗಿದ್ದು, 10 ಜನರನ್ನು ರಕ್ಷಿಸಲಾಗಿದ್ದು, 7 ಮಂದಿ ಕಣ್ಮರೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ರಾತ್ರಿ 9ಗಂಟೆಗೆ ಹಲ್ವಾದ್ನ ಧವನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮೂಲಗಳ ಪ್ರಕಾರ, ಟ್ರ್ಯಾಕ್ಟರ್ಗಳಲ್ಲಿ 17 ಮಂದಿ ಪ್ರಯಾಣಿಸುತ್ತಿದ್ದರು. ಈ ಘಟನೆ ತಿಳಿಯುತ್ತಿದ್ದಂತೆ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯ ಅರಂಭಿಸಿದವು. ಸೋಮವಾರ ಬೆಳಗ್ಗೆ 10 ಮಂದಿಯನ್ನು ರಕ್ಷಣೆ ಮಾಡಿದ್ದು, 7 ಮಂದಿಗೆ ಹುಡುಕಾಟ ನಡೆಸಲಾಗಿದೆ.
ಗುಜರಾತ್ನ ಅನೇಕ ಭಾಗದಲ್ಲಿ ಭಾರೀ ಮಳೆ ಆಗುತ್ತಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅಲ್ಲದೆ, ಮುಂದಿನ ಎರಡು ಮತ್ತು ಮೂರು ದಿನ ಕೂಡ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಮಾಣದ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ತಿಳಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಗುಜಾರತ್ನ ನವಸಾರಿ ಮತ್ತು ವಲ್ಸದ್ ಜಿಲ್ಲೆಗಳಲ್ಲಿ ತಗ್ಗು ಪ್ರದೇಶದಲ್ಲಿ ಜನರನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಲಾಗುತ್ತದೆ.
ನವಸಾರಿ ಜಿಲ್ಲೆಯ ಖೇರ್ಗಾಮ್ನಲ್ಲಿ ಕಳೆದ 24ಗಂಟೆಗಳಲ್ಲಿ ದಾಖಲೆಯ 356ಮಿ.ಮೀ ಮಳೆಯಾಗಿದೆ. ಇನ್ನು ಧಂಗ್ ಅಹ್ವಾ ತಾಲೂಕಿನಲ್ಲಿ 268ಎಂಎಂ ಮತ್ತು ಕಪ್ರಡಾದಲ್ಲಿ 263 ಎಂಎಂ ಮಳೆಯಾಗಿದೆ. ನರ್ಮದಾಮ ಸಿರೆಂದ್ರನಗರ್, ತಪಿ, ಮಹಿಸಗರ್ನಂಡ್ ಮೊರ್ಬಿ, ದಹೊದ್ ಮತ್ತು ವಡೋದರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ 100 ಎಂಎಂ ಮಳೆ ದಾಖಲಾಗಿದೆ.
ಮಳೆ ಪರಿಸ್ಥಿತಿ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಭುಪೇಂದ್ರ ಪಟೇಲ್, ಸೌರಾಷ್ಟ್ರ ಪ್ರದೇಶಗಳಲ್ಲಿ ಮೊರ್ಬಿ, ಕಚ್, ರಾಜ್ಕೋಟ್ ಮತ್ತು ಸುರೇಂದ್ರನಗರ್, ಭಾವ್ನಗರ್ ಹಾಗೂ ದಕ್ಷಿಣ ಗುಜರಾತ್ನ ಭರುಚಾ ಮತ್ತು ದಂಗ್ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಜೊತೆ ಪರಿಸ್ಥಿತಿ ಕುರಿತು ಮಾಹಿತಿ ಪಡೆಯಲಾಗಿದೆ. ಜನ- ಜಾನುವಾರಗಳಲ್ಲಿ ಜನರ ರಕ್ಷಣೆ ಅಗತ್ಯ ಕ್ರಮ ವಹಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಭಾರೀ ಮಳೆ ಹಿನ್ನೆಲೆ ಮುಖ್ಯ ಕಾರ್ಯದರ್ಶಿ ರಾಜ್ ಕುಮಾರ್ ಭಾನುವಾರ ಉನ್ನತ ಮಟ್ಟದ ಸಭೆ ನಡೆಸಿದೆ. ಮುಂದಿನ ಮೂರ್ನಾಲ್ಕು ದಿನ ಕೂಡ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದ್ದು, ಜಿಲ್ಲಾಡಳಿತಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಮಳೆ ನಿರ್ವಹಣೆ ಸಂಬಂಧಿತ ಕರ್ತವ್ಯದಲ್ಲಿ ಜಿಲ್ಲಾ ಮತ್ತು ತಾಲೂಕು ಆಡಳಿತ ವ್ಯವಸ್ಥೆ ಅಧಿಕಾರಿಗಳು ಇರಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರವಾಹ ಸ್ಥಳಗಳಲ್ಲಿ ರಸ್ತೆಗಳ ಸುರಕ್ಷತೆ, ದುರಸ್ತಿ ಮತ್ತು ವಿದ್ಯುತ್ ಪೂರೈಕೆ ಕುರಿತು ಸ್ಥಳೀಯ ಆಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು. ದಕ್ಷಿಣ ಗುಜರಾತ್ನ 8 ಜಿಲ್ಲೆ ಮತ್ತು ಸೌರಾಷ್ಟ್ರ ವಾಡಿಕೆಗಿಂತ ಶೇ 100ರಷ್ಟು ಅಧಿಕ ಮಳೆ ಪಡೆದಿದೆ. ಎಲ್ಲಾ ಜಿಲ್ಲೆಗಳಲ್ಲಿ ಈ ಬಾರಿ ವಾಡಿಕೆಗಿಂತ ಶೇ 50ರಷ್ಟು ಮಳೆ ಹೆಚ್ಚಾಗಿದೆ.
ಇದನ್ನೂ ಓದಿ: ಆಂಧ್ರ ಫಾರ್ಮಾ ಘಟಕ ಸ್ಫೋಟದ ಬಗ್ಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಎನ್ಜಿಟಿ