ETV Bharat / bharat

ಫೆಬ್ರವರಿಯಲ್ಲಿ ₹1.68 ಲಕ್ಷ ಕೋಟಿ ಜಿಎಸ್​ಟಿ ಸಂಗ್ರಹ: ನಾಲ್ಕನೇ ಅತ್ಯಧಿಕ ಸಂಗ್ರಹದ ದಾಖಲೆ - ಜಿಎಸ್​ಟಿ

2024ರ ಫೆಬ್ರವರಿ ತಿಂಗಳಲ್ಲಿ 1.68 ಲಕ್ಷ ಕೋಟಿ ರೂಪಾಯಿ ಜಿಎಸ್​ಟಿ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

GST revenues grow 12.5 pc to Rs 1.68 lakh cr in Feb, 4th highest since rollout
ಫೆಬ್ರವರಿಯಲ್ಲಿ ₹ 1.68 ಲಕ್ಷ ಕೋಟಿ ಜಿಎಸ್​ಟಿ ಸಂಗ್ರಹ
author img

By PTI

Published : Mar 1, 2024, 10:53 PM IST

ನವದೆಹಲಿ: ಫೆಬ್ರವರಿ ತಿಂಗಳಲ್ಲಿ 1.68 ಲಕ್ಷ ಕೋಟಿ ರೂಪಾಯಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಸಂಗ್ರಹವಾಗಿದೆ. ಇದು ಇಲ್ಲಿಯವರೆಗೆ ದಾಖಲಾದ ನಾಲ್ಕನೇ ಅತಿ ಹೆಚ್ಚಿನ ಮಾಸಿಗ ಜಿಎಸ್​ಟಿ ಆಗಿದೆ. ಕಳೆದ ವರ್ಷ ಇದೇ ತಿಂಗಳಿಗೆ ಹೋಲಿಸಿದರೆ, ಈ ಬಾರಿ ಶೇ.12.5ರಷ್ಟು ತೆರಿಗೆ ಸಂಗ್ರಹ ಹೆಚ್ಚಳವಾಗಿದೆ. ಅದಲ್ಲದೇ, ಪ್ರಸ್ತುತ ಆರ್ಥಿಕ ವರ್ಷದ ಏಪ್ರಿಲ್​ ತಿಂಗಳಿಂದ ಫೆಬ್ರವರಿಯವರೆಗೆ ಒಟ್ಟಾರೆ 18.40 ಲಕ್ಷ ಕೋಟಿ ಜಿಎಸ್​ಟಿ ಆದಾಯ ಬಂದಿದೆ. ಇದರೊಂದಿಗೆ ವಾರ್ಷಿಕವಾಗಿಯೂ ಶೇ.11.7ರಷ್ಟು ಅಧಿಕವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಶುಕ್ರವಾರ ತಿಳಿಸಿದೆ.

''2024ರ ಫೆಬ್ರವರಿಯಲ್ಲಿ ಒಟ್ಟು ಜಿಎಸ್​ಟಿ ಆದಾಯವು 1,68,337 ಕೋಟಿ ರೂ.ಗಳಾಗಿದ್ದು, 2023ರ ಅದೇ ತಿಂಗಳಿಗೆ ಹೋಲಿಕೆ ಮಾಡಿದರೆ, ಶೇ.12.5ರಷ್ಟು ಹೆಚ್ಚಾಗಿದೆ. ದೇಶೀಯ ವಹಿವಾಟಿನ ಜಿಎಸ್‌ಟಿಯಲ್ಲಿ ಶೇ.13.9ರಷ್ಟು ಮತ್ತು ಸರಕುಗಳ ಆಮದುಗಳ ಜಿಎಸ್‌ಟಿಯಲ್ಲಿ ಶೇ.8.5ರಷ್ಟು ಹೆಚ್ಚಿನ ಸಂಗ್ರಹದಿಂದ ಈ ಬೆಳವಣಿಗೆ ಸಾಧಿಸಲಾಗಿದೆ'' ಎಂದು ವಿತ್ತ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಸರಾಸರಿ ಮಾಸಿಕ ಜಿಎಸ್​ಟಿ ಸಂಗ್ರಹವು 1.67 ಲಕ್ಷ ಕೋಟಿ ರೂ.ಗಳಷ್ಟಿದ್ದು, ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ 1.5 ಲಕ್ಷ ಕೋಟಿಗಿಂತ ಅಧಿಕವಾಗಿದೆ. ಈ ವರ್ಷದ ಫೆಬ್ರವರಿ ತಿಂಗಳ ಮರುಪಾವತಿಯ ನಿವ್ವಳ ಜಿಎಸ್​ಟಿ ಆದಾಯವು 1.51 ಲಕ್ಷ ಕೋಟಿ ರೂ.ಗಳಾಗಿದ್ದು, ಇದರಲ್ಲೂ ಸಹ ಶೇ.13.6ರಷ್ಟು ಬೆಳವಣಿಗೆಯಾಗಿದೆ.

ಸಂಗ್ರಹವಾದ ಒಟ್ಟಾರೆ ಜಿಎಸ್‌ಟಿಯಿಂದ ಕೇಂದ್ರ ಸರ್ಕಾರವು ಕೇಂದ್ರ ಜಿಎಸ್‌ಟಿ (CGST)ಗೆ 41,856 ಕೋಟಿ ರೂ. ಮತ್ತು ರಾಜ್ಯ ಜಿಎಸ್‌ಟಿ (SGST)ಗೆ 35,953 ಕೋಟಿ ರೂ. ಹಂಚಿಕೆ ಮಾಡಿದೆ. ಇದರಿಂದ ಈ ಫೆಬ್ರವರಿ ತಿಂಗಳಲ್ಲಿ ಸಿಜಿಎಸ್​ಟಿಗೆ ಒಟ್ಟು 73,641 ಕೋಟಿ ರೂ. ಮತ್ತು ಎಸ್​ಜಿಎಸ್​ಟಿಗೆ 75,569 ಕೋಟಿ ರೂ. ಹಂಚಿಕೆ ಮಾಡಿದಂತಾಗಿದೆ ಎಂದು ಸರ್ಕಾರದ ಅಂಕಿ-ಅಂಶಗಳು ತಿಳಿಸಿವೆ.

ನಾಲ್ಕನೇ ಅತ್ಯಧಿಕ ಸಂಗ್ರಹದ ದಾಖಲೆ: ದೇಶದಲ್ಲಿ ಜಿಎಸ್​ಟಿ ಜಾರಿಗೆ ಬಂದ ನಂತರ ಮಾಸಿಕವಾಗಿ ಸಂಗ್ರಹವಾದ ನಾಲ್ಕನೇ ಅತ್ಯಧಿಕ ತೆರಿಗೆ ಇದಾಗಿದೆ. 2023ರ ಏಪ್ರಿಲ್‌ನಲ್ಲಿ 1.87 ಲಕ್ಷ ಕೋಟಿ ರೂ.ಗಳಷ್ಟು ದಾಖಲೆಯ ಜಿಎಸ್‌ಟಿ ಸಂಗ್ರಹವಾಗಿತ್ತು. ನಂತರದಲ್ಲಿ 2024ರ ಜನವರಿಯಲ್ಲಿ 1.74 ಲಕ್ಷ ಕೋಟಿ ರೂ., ಇದಕ್ಕೂ ಮುನ್ನ 2023ರ ಅಕ್ಟೋಬರ್​ನಲ್ಲಿ 1.72 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು. ಈಗ ಫೆಬ್ರವರಿಯಲ್ಲಿ 1.68 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ.

ಇದನ್ನೂ ಓದಿ: ರಾಜ್ಯಕ್ಕೆ ಐಜಿಎಸ್​​ಟಿ ಕಡಿತ ಆಘಾತ: ಸ್ಪಷ್ಟನೆ ಕೋರಿ ಕೇಂದ್ರ ಸಚಿವರಿಗೆ ಸಿಎಂ ಪತ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.