ETV Bharat / bharat

ಟ್ರಾಫಿಕ್ ನಿಯಮ​ ಉಲ್ಲಂಘನೆ ಕಣ್ಗಾವಲಿಗೆ ಎಐ ತಂತ್ರಜ್ಞಾನ ಬಳಕೆ; ನಿತಿನ್​ ಗಡ್ಕರಿ

ಸುಧಾರಿತ ಇಂಜಿನಿಯರಿಂಗ್​ ಪರಿಹಾರ, ನಿಯಮಗಳ ಜಾರಿ ಮತ್ತು ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನ ಬಳಕೆ ಮಾಡದೆ ರಸ್ತೆ ಸುರಕ್ಷತೆ ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ನಿತಿನ್​ ಗಡ್ಕರಿ ಹೇಳಿದರು.

GOVT PROPOSES USE OF AI
ಟ್ರಾಫಿಕ್ ನಿಯಮ​ ಉಲ್ಲಂಘನೆ ಕಣ್ಗಾವಲಿಗೆ ಎಐ ತಂತ್ರಜ್ಞಾನ (IANS)
author img

By PTI

Published : 3 hours ago

Updated : 3 hours ago

ನವದೆಹಲಿ: ಟ್ರಾಫಿಕ್​ ನಿಯಮ ಉಲ್ಲಂಘನೆ ಪರಿಶೀಲನೆ ಮತ್ತು ದಂಡವನ್ನು ನಿಖರವಾಗಿ ವಿಧಿಸುವ ಸಲುವಾಗಿ ಕೃತಕ ಬುದ್ಧಿಮತ್ತೆ (ಎಐ) ಹಾಗೂ ಇತರೆ ಅವಿಷ್ಕಾರಕ ಮಾದರಿಗಳನ್ನು ಬಳಕೆ ಮಾಡುವ ಕುರಿತು ಸರ್ಕಾರ ಪ್ರಸ್ತಾಪ ಹೊಂದಿದೆ ಎಂದು ಕೇಂದ್ರ ಸಚಿವ ನಿತಿನ್​ ಗಡ್ಕರಿ ತಿಳಿಸಿದರು.

ಟ್ರಾಫಿಕ್​ ಇನ್ಫ್ರಾಟೆಕ್​ ಎಕ್ಸ್​ಪೊನ 12ನೇ ಆವೃತ್ತಿಯಲ್ಲಿ ಮಾತನಾಡಿದ ಅವರು, ಸುಧಾರಿತ ಇಂಜಿನಿಯರಿಂಗ್​ ಪರಿಹಾರ, ನಿಯಮಗಳ ಜಾರಿ ಮತ್ತು ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನಗ ಬಳಕೆ ಮಾಡದೆ ರಸ್ತೆ ಸುರಕ್ಷತೆ ಜಾರಿ ಸಾಧನೆ ಮಾಡಲು ಸಾಧ್ಯವಿಲ್ಲ. ಸ್ಯಾಟಲೈಟ್​ ಟೋಲ್​ ಸಿಸ್ಟಂ ಅವಿಷ್ಕಾರ ಸೇರಿದಂತೆ ಟೋಲ್​ ಸಂಗ್ರಹ ಮಾದರಿಯನ್ನು ಉನ್ನತೀಕರಿಸಲು ಯೋಜನೆ ಹೊಂದಿದೆ. ಇದರಿಂದ ಟೋಲ್​ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಮತ್ತು ಸಾಮರ್ಥ್ಯ ಸುಧಾರಣೆ ಮಾಡಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ರಸ್ತೆ ಸುರಕ್ಷತೆಗಾಗಿ ಸರ್ಕಾರವು ತಂತ್ರಜ್ಞಾನ ಸುಧಾರಣೆ ಅಭಿವೃದ್ಧಿಗಾಗಿ ಖಾಸಗಿ ವಲಯಗಳೊಂದಿಗೆ ಸಹಯೋಗ ಹೊಂದಲಿದೆ. ಇದಕ್ಕೆಂದೇ ಇರುವ ತಜ್ಞರ ಸಮಿತಿ ಸ್ಟಾರ್ಟ್​ಅಪ್​ ಮತ್ತು ಉದ್ಯಮ ನಾಯಕರೊಂದಿಗೆ ಈ ಪ್ರಸ್ತಾಪ ಮುಂದಿಡಲಿದ್ದು, ಅದು ಮೌಲ್ಯಮಾಪನ ನಡೆಸಲಿದೆ. ಈ ಸಮಿತಿಯು ವೇಗದ ಸುಧಾರಣೆ ಗುರಿಯೊಂದಿಗೆ ಇನ್ನು ಮೂರು ತಿಂಗಳೊಳಗೆ ಈ ಕುರಿತು ತೀರ್ಮಾನ ಮಾಡಲಿದೆ ಎಂದು ಹೇಳಿದರು.

ಕ್ಯಾಮರಾದಂತೆ ಮೇಲ್ವಿಚಾರಣ ತಂತ್ರಜ್ಞಾನವನ್ನು ಬಳಸುವ ಮೂಲಕ ಸರ್ಕಾರ ಕೂಡ ಉನ್ನತ ಗುಣಮಟ್ಟದ ಮಾನದಂಡದ ನಿರ್ವಹಣೆ ಬದ್ಧತೆಯನ್ನು ಹೊಂದಿದೆ. ಖಾಸಗಿ ಕಂಪನಿಗಳ ಸಹಯೋಗದಲ್ಲಿ ಸಣ್ಣ ಕಂಪನಿ ಇರಲಿ ಅಥವಾ ದೊಡ್ಡ ಸಂಸ್ಥೆಯಿರಲಿ ಗುಣಮಟ್ಟ ಮತ್ತು ಮಾನದಂಡದಲ್ಲಿ ಯಾವುದೇ ರಾಜಿಯನ್ನು ನಾವು ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಉತ್ತಮ ತಂತ್ರಜ್ಞಾನದೊಂದಿಗೆ ಭಾರತವು ಪಾರದರ್ಶಕತೆ, ವೆಚ್ಚ ಕಡಿತ ಮತ್ತು ರಸ್ತೆ ಸುರಕ್ಷತೆಯನ್ನು ಗಮನಾರ್ಹವಾಗಿ ಸಾಧಿಸಬಹುದು. ಭಾರತದಲ್ಲಿನ ರಸ್ತೆ ಅಪಾಯಗಳ ಅಂಕಿ ಅಂಶಗಳು ಹೆಚ್ಚಿದ್ದು, ಪ್ರತಿ ವರ್ಷ 5 ಲಕ್ಷ ಮಂದಿ ಇದರಿಂದ ಮಾರಣಾಂತಿಕ ಪರಿಣಾಮಕ್ಕೆ ಒಳಗಾಗುತ್ತಿದ್ದಾರೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚಿನ ಮಂದಿ 18 ರಿಂದ 36 ವರ್ಷದೊಳಗಿನವರು. ರಸ್ತೆ ಅನಾಹುತದಿಂದ ದೇಶದ ಆರ್ಥಿಕತೆಯ ಮೇಲೆ ಅಡ್ಡ ಪರಿಣಾಮ ಬೀರಲಿದೆ. ಇದು ಶೇ 3ರಷ್ಟು ಜಿಡಿಪಿ ನಷ್ಟಕ್ಕೆ ಕಾರಣವಾಗುತ್ತದೆ. ರಸ್ತೆ ಸುರಕ್ಷತೆ ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ಇದರ ನಿರ್ವಹಣೆಗೆ ಅಗತ್ಯ ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದನ್ನೂ ಓದಿ: ಸವಾಲು, ಅಪಹಾಸ್ಯ ಮೆಟ್ಟಿ ನಿಂತು ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗೇರಿದ ತೃತೀಯಲಿಂಗಿ

Last Updated : 3 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.