ETV Bharat / bharat

ಸರ್ಕಾರ 'ವಿಷಕನ್ಯೆ' ಇದ್ದಂತೆ, ಜೊತೆಗೆ ಬಂದವರನ್ನೂ ಮುಳುಗಿಸುತ್ತದೆ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅಚ್ಚರಿಯ ಹೇಳಿಕೆ - Nitin Gadkari

ಸರ್ಕಾರ ವಿಷಕನ್ಯೆ ಇದ್ದಂತೆ, ಹೀಗಾಗಿ ಕೈಗಾರಿಕೋದ್ಯಮಿಗಳು ಎಲ್ಲದಕ್ಕೂ ಸರ್ಕಾರದ ಮೇಲೆ ಅವಲಂಬಿತರಾಗಬಾರದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ
ಕೇಂದ್ರ ಸಚಿವ ನಿತಿನ್ ಗಡ್ಕರಿ (ETV Bharat)
author img

By ETV Bharat Karnataka Team

Published : Sep 30, 2024, 6:06 PM IST

ನಾಗ್ಪುರ (ಮಹಾರಾಷ್ಟ್ರ): ಯಾವ ಪಕ್ಷ ಅಧಿಕಾರದಲ್ಲಿದ್ದರೂ ಅದರಿಂದ ದೂರವಿರಿ. ಸರ್ಕಾರ ವಿಷಕನ್ಯೆ ಇದ್ದಂತೆ, ಹೀಗಾಗಿ ಕೈಗಾರಿಕೋದ್ಯಮಿಗಳು ಎಲ್ಲದಕ್ಕೂ ಸರ್ಕಾರದ ಮೇಲೆ ಅವಲಂಬಿತರಾಗಬಾರದು. ಯಾರೇ ಜೊತೆಗೆ ಹೋದರೂ ಇದು ಮುಳುಗಿಸುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅಚ್ಚರಿ ಹೇಳಿಕೆ ನೀಡಿದ್ದಾರೆ. ನಾಗ್ಪುರದಲ್ಲಿ ವಿದರ್ಭ ಆರ್ಥಿಕ ಅಭಿವೃದ್ಧಿ ಮಂಡಳಿ ಆಯೋಜಿಸಿದ್ದ 'ಅಮೇಜಿಂಗ್ ವಿದರ್ಭ, ಸೆಂಟ್ರಲ್ ಇಂಡಿಯಾ ಟೂರಿಸಂ' ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಸರ್ಕಾರವು 'ಲಾಡ್ಲಿ ಬೆಹ್ನಾ ಯೋಜನೆ'ಗೆ ವ್ಯವಸ್ಥೆ ಮಾಡಬೇಕಾಗಿರುವುದರಿಂದ ಯಾವಾಗ ಸಬ್ಸಿಡಿಗಳನ್ನು ಪಡೆಯುತ್ತೇವೆ ಎಂಬುದರ ಬಗ್ಗೆ ಉದ್ಯಮಿಗಳಿಗೆ ಸ್ಪಷ್ಟತೆ ಇಲ್ಲ. ಉದ್ಯಮಿಗಳು ಸಬ್ಸಿಡಿಗಾಗಿ ಕಾಯಬಾರದು. ಏಕೆಂದರೆ ಸಬ್ಸಿಡಿ ಯಾವಾಗ ಸಿಗುತ್ತದೆ ಎಂಬ ಬಗ್ಗೆ ಖಚಿತತೆ ಇಲ್ಲ ಎಂದರು.

ಅಮೇಜಿಂಗ್ ವಿದರ್ಭ, ಸೆಂಟ್ರಲ್ ಇಂಡಿಯಾ ಟೂರಿಸಂ' ಸಮ್ಮೇಳನ
ಅಮೇಜಿಂಗ್ ವಿದರ್ಭ, ಸೆಂಟ್ರಲ್ ಇಂಡಿಯಾ ಟೂರಿಸಂ' ಸಮ್ಮೇಳನ (ETV Bharat)

ಯುವಕನೊಬ್ಬ ತನ್ನ 450 ಕೋಟಿ ರೂ.ಗಳ ಯೋಜನೆಗೆ ಸಬ್ಸಿಡಿ ಬೇಕು ಮತ್ತು ಯಾವಾಗ ಸಬ್ಸಿಡಿ ಸಿಗುತ್ತದೆ ಎಂದು ನನ್ನನ್ನು ಕೇಳಿದ. ಸಬ್ಸಿಡಿ ಸಿಗುತ್ತದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಭರವಸೆ ಇಲ್ಲ ಎಂದು ನಾನು ಅವನಿಗೆ ತಿಳಿಸಿದೆ. ‘ಲಾಡ್ಲಿ ಬೆಹ್ನಾ ಯೋಜನೆ’ ಈಗಷ್ಟೇ ಆರಂಭವಾಗಿದ್ದು, ಅದಕ್ಕೆ ಸಬ್ಸಿಡಿ ಹಣ ನೀಡಬೇಕಾಗಿದೆ. ವಿದ್ಯುತ್ ಸಬ್ಸಿಡಿ ಸಿಗದ ಕಾರಣ ಜವಳಿ ಉದ್ಯಮ ಮುಚ್ಚಿದೆ. ಹೀಗಾಗಿ ಉದ್ಯಮಿಗಳೇ ಸ್ವತಃ ಯೋಜನೆಗಳನ್ನು ರೂಪಿಸುವುದು ಉತ್ತಮ ಕೆಲಸ ಎಂದು ಸಲಹೆ ನೀಡಿದರು.

ವಿದರ್ಭ ಪ್ರದೇಶದಲ್ಲಿ ಹೂಡಿಕೆ ಮಾಡುವಂತೆ ಉದ್ಯಮಿಗಳನ್ನು ಒತ್ತಾಯಿಸಿದ ಗಡ್ಕರಿ, ದೊಡ್ಡ ಮೊತ್ತದ ಹೂಡಿಕೆಗಳನ್ನು ಇಲ್ಲಿಗೆ ತರಲು ಶ್ರಮಿಸುತ್ತಿದ್ದರೂ ಉದ್ಯಮಿಗಳಿಂದ ಆಶಿಸಿದಷ್ಟು ಪ್ರತಿಕ್ರಿಯೆ ಬಂದಿಲ್ಲ ಎಂದು ವಿಷಾದಿಸಿದರು. ವಿದರ್ಭದಲ್ಲಿ 500 ಅಥವಾ 1000 ಕೋಟಿ ಹೂಡಿಕೆ ಮಾಡಲು ಯಾರೂ ಸಿದ್ಧರಿಲ್ಲ. ವಿದರ್ಭದಲ್ಲಿ ಮಿಹಾನ್‌ನಂತಹ ಯೋಜನೆ ಜಾರಿಗೆ ತರಲಾಯಿತು. ಉದ್ಯಮಿಗಳು ಭೂಮಿ ಖರೀದಿಸುತ್ತಾರೆ. ಆದರೆ ಅವರು ಘಟಕಗಳನ್ನು ಪ್ರಾರಂಭಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಾಗ್ಪುರವನ್ನು ಹುಲಿಗಳ ರಾಜಧಾನಿ ಎಂದು ಕರೆಯಲಾಗುತ್ತದೆ. ಇಲ್ಲಿ ಪೆಂಚ್, ಕರ್ಹಂಡ್ಲಾ, ತಡೋಬಾ ಮುಂತಾದ ಹುಲಿ ಸಂರಕ್ಷಿತ ಪ್ರದೇಶಗಳಿವೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಅವರನ್ನು ನಾಗ್ಪುರಕ್ಕೂ ಬರುವುಂತೆ ಮಾಡಲು ಪ್ರಯತ್ನ ಅಗತ್ಯವಿದೆ. ಇದಕ್ಕಾಗಿ ಉತ್ತಮ ಹೋಟೆಲ್‌ಗಳು, ಸಾರಿಗೆ ವ್ಯವಸ್ಥೆ ಬೇಕು. ಇದು ಹೂಡಿಕೆ ಮಾಡಿದರೆ ಮಾತ್ರ ಸಾಧ್ಯ ಎಂದು ಹೇಳಿದರು.

ಇದನ್ನೂ ಓದಿ: ಮರಾಠಾ ಮೀಸಲಾತಿ: ಅ.12ರಂದು ದಸರಾ ರ್‍ಯಾಲಿಯಲ್ಲಿ ಬಲಪ್ರದರ್ಶನಕ್ಕೆ ಜಾರಂಗೆ ಪಾಟೀಲ್ ಕರೆ - Maratha Quota

ETV Bharat Logo

Copyright © 2024 Ushodaya Enterprises Pvt. Ltd., All Rights Reserved.