ETV Bharat / bharat

ಅನಲಾಗ್ ಟಿವಿಯಿಂದ ಸ್ಮಾರ್ಟ್‌ಫೋನ್‌ವರೆಗೆ: ಭಾರತದ ಗಣರಾಜ್ಯೋತ್ಸವಕ್ಕೆ ಗೂಗಲ್ ವಿಶೇಷ ಡೂಡಲ್‌ - doodle

Google's special doodle: ಕ್ಯಾಥೋಡ್ ರೇ ಟ್ಯೂಬ್‌ಗಳನ್ನು ಹೊಂದಿರುವ ದೊಡ್ಡ ಟಿವಿ ಸೆಟ್‌ಗಳಿಂದ ಸಣ್ಣ ಟಿವಿಗಳು ಮತ್ತು ಅಂತಿಮವಾಗಿ ಸ್ಮಾರ್ಟ್‌ಫೋನ್‌ಗಳ ಮೂಲಕ ಗಣರಾಜ್ಯೋತ್ಸವ ಸಂಭ್ರಮವನ್ನು ವೀಕ್ಷಿಸುವ ವ್ಯವಸ್ಥೆಯವರೆಗೆ ಭಾರತದ ಅಭಿವೃದ್ಧಿಯಲ್ಲಾದ ಬದಲಾವಣೆಗಳನ್ನು ಗೂಗಲ್ ವಿಶೇಷವಾಗಿ ಡೂಡಲ್ ಮೂಲಕ ಚಿತ್ರಿಸಿದೆ.

Google special doodle  ಗೂಗಲ್‌ನ ವಿಶೇಷ ಡೂಡಲ್  ಅನಲಾಗ್ ಟಿವಿಯಿಂದ ಸ್ಮಾರ್ಟ್‌ಫೋನ್‌ವರೆಗೆ  ಸರ್ಚ್ ಇಂಜಿನ್ ಗೂಗಲ್  Google  doodle  75ನೇ ಗಣರಾಜ್ಯೋತ್ಸವ
ಗೂಗಲ್‌ನ ವಿಶೇಷ ಡೂಡಲ್: ಅನಲಾಗ್ ಟಿವಿಯಿಂದ ಸ್ಮಾರ್ಟ್‌ಫೋನ್‌ವರೆಗಿನ ಗಣರಾಜ್ಯೋತ್ಸವದ ಪರೇಡ್​ ವೀಕ್ಷಿಸುವ ಶೈಲಿ ಬದಲಾಗಿದ್ದು ಹೀಗೆ...
author img

By ETV Bharat Karnataka Team

Published : Jan 26, 2024, 11:50 AM IST

ನವದೆಹಲಿ: ಜಾಗತಿಕ ದೈತ್ಯ ಸರ್ಚ್ ಇಂಜಿನ್ ಗೂಗಲ್ ಭಾರತದ 75ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ವಿಶೇಷ ಡೂಡಲ್ ಬಿಡುಗಡೆಗೊಳಿಸಿದೆ. ಇದು ಅನಲಾಗ್ ಟಿವಿ ಯುಗದಿಂದ ಸ್ಮಾರ್ಟ್‌ಫೋನ್‌ಗಳ ಯುಗಕ್ಕೆ ದೇಶದ ಬದಲಾವಣೆಯನ್ನು ಬಿಂಬಿಸುತ್ತಿದೆ. ಸೃಜನಾತ್ಮಕ ಕಲಾಕೃತಿಯ ಮೂಲಕ ಗೂಗಲ್​ನ ಪರದೆಯ ಮೇಲೆ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಸಮಾರಂಭದ ಪರೇಡ್ ವೀಕ್ಷಿಸುವ ಈ ಶೈಲಿ ದಶಕಗಳಿಂದ ಹೇಗೆ ಬದಲಾಯಿತು ಎಂಬುದನ್ನು ತಿಳಿಸುತ್ತದೆ.

ಕ್ಯಾಥೋಡ್ ರೇ ಟ್ಯೂಬ್‌ಗಳನ್ನು ಹೊಂದಿರುವ ದೊಡ್ಡ ಟಿವಿ ಸೆಟ್‌ಗಳಿಂದ ಸಣ್ಣ ಟಿವಿಗಳು ಮತ್ತು ಅಂತಿಮವಾಗಿ ಸ್ಮಾರ್ಟ್‌ಫೋನ್‌ಗಳವರೆಗೆ, ಅಂದರೆ, ಹಲವು ವರ್ಷಗಳಲ್ಲಿ ಭಾರತದಲ್ಲಿ ಬಹಳಷ್ಟು ಅಭಿವೃದ್ಧಿಯಾಗಿದೆ. ಇದನ್ನು ತೋರಿಸಲು ಗೂಗಲ್‌ ತನ್ನ ಡೂಡಲ್‌ನಲ್ಲಿ ಎರಡು ಟಿವಿ ಸೆಟ್‌ಗಳು ಮತ್ತು ಮೊಬೈಲ್ ಫೋನ್ ಅನ್ನು ಚಿತ್ರಿಸಿದೆ. ಮೊದಲ ಅನಲಾಗ್ ಟೆಲಿವಿಷನ್ ಸೆಟ್‌ ಎಡಭಾಗದಲ್ಲಿ 'G' ಅಕ್ಷರವಿದೆ ಮತ್ತು ಸೆಟ್‌ಗಳ ಪರದೆಗಳು 'Google'ನ ಎರಡು 'O'ಗಳನ್ನು ರೂಪಿಸುತ್ತವೆ.

ಗೂಗಲ್ ಲೋಗೋದ ಉಳಿದ ಮೂರು ಅಕ್ಷರಗಳು 'G', 'L' ಮತ್ತು 'E' ಅನ್ನು ಆ ಕ್ರಮದಲ್ಲಿ ಇರಿಸಲಾದ ಮೊಬೈಲ್ ಹ್ಯಾಂಡ್‌ಸೆಟ್‌ನ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ. ಮೊದಲನೆಯದು ಟಿವಿ ಪರದೆಯ ಮೇಲೆ ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಮೆರವಣಿಗೆಯ ದೃಶ್ಯಗಳನ್ನು ತೋರಿಸುತ್ತದೆ. ಆದರೆ, ಎರಡನೆಯದು ಒಂಟೆಗಳ ತಂಡವನ್ನು ತೋರಿಸುತ್ತದೆ. ತಂತ್ರಜ್ಞಾನದಲ್ಲಿನ ಬದಲಾವಣೆಗಳನ್ನು ಇದು ಪ್ರತಿಬಿಂಬಿಸುತ್ತದೆ.

ಗೂಗಲ್‌ನ ಟಿಪ್ಪಣಿಯ ಪ್ರಕಾರ, "ಇಂದಿನ ಡೂಡಲ್‌ನ ನಿರ್ಮಾತೃ ಅತಿಥಿ ಕಲಾವಿದೆ ವೃಂದಾ ಜವೇರಿ. ಗಣರಾಜ್ಯೋತ್ಸವದ ಪರೇಡ್ ನೋಡುವ ಬದಲಾಗುತ್ತಿರುವ ವಿಧಾನ ಇದು ತೋರಿಸುತ್ತದೆ"

ಇದನ್ನೂ ಓದಿ: ದೆಹಲಿಯ ಕರ್ತವ್ಯ ಪಥದಲ್ಲಿ 75ನೇ ಗಣರಾಜ್ಯೋತ್ಸವ ಪರೇಡ್: ನೇರಪ್ರಸಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.