ETV Bharat / bharat

ಹೈದರಾಬಾದ್​ನಲ್ಲಿ ಗೂಗಲ್​ ಸೆಫ್ಟಿ ಇಂಜಿನಿಯರಿಂಗ್​ ಕೇಂದ್ರ: ಇದು ಭಾರತದಲ್ಲೇ ಮೊದಲು, ಏನಿದರ ಕೆಲಸ? - GOOGLE SAFETY ENGINEERING CENTER

ಅಕ್ಟೋಬರ್​ 3 ರಂದು ನಡೆದ 'ಗೂಗಲ್​ ಫಾರ್​ ಇಂಡಿಯಾ 2024' ಸಮಾವೇಶದಲ್ಲಿ ಕಂಪನಿ ಮೊದಲ ಬಾರಿಗೆ ತನ್ನ ಈ ಯೋಜನೆಯನ್ನು ಘೋಷಿಸಿತು. ಅಂದಿನಿಂದ ಅನೇಕ ರಾಜ್ಯಗಳು ಕಂಪನಿಗೆ ಆಹ್ವಾನ ನೀಡಲು ಮುಂದಾಗಿದ್ದವು.

google-safety-engineering-center-to-launch-in-hyderabad-a-first-for-india
ಚಿವ ಶ್ರೀಧರ್​ ಬಾಬು, ಗೂಗಲ್​ ಅಧಿಕಾರಿ ರಾಯಲ್​ ಹನ್ಸೆನ್​, ಸಿಎಂ ರೇವಂತ್​ ರೆಡ್ಡಿ (ಈಟಿವಿ ಭಾರತ್​)
author img

By ETV Bharat Karnataka Team

Published : Dec 5, 2024, 12:56 PM IST

ಹೈದರಾಬಾದ್​: ಭಾರತದಲ್ಲಿಯೇ ಮೊದಲ ಬಾರಿಗೆ ಗೂಗಲ್​ ಸೆಫ್ಟಿ ಇಂಜಿನಿಯರಿಂಗ್​ ಸೆಂಟರ್​ (ಜಿಎಸ್​ಇಸಿ) ಸ್ಥಾಪನೆಗೆ ಮುಂದಾಗಿದೆ. ಇದಕ್ಕಾಗಿ ಹೈದರಾಬಾದ್​ ನಗರವನ್ನು ಆಯ್ಕೆ ಮಾಡಿದೆ. ಏಷ್ಯಾ ಫೆಸಿಫಿಕ್​ ಪ್ರದೇಶದಲ್ಲಿ ಟೋಕಿಯೋ ಬಳಿಕ ಸ್ಥಾಪನೆ ಆಗುತ್ತಿರುವ ಮತ್ತು ಜಾಗತಿಕವಾಗಿ ಐದನೇ ಕೇಂದ್ರ ಇದಾಗಿದೆ. ಇದು ವೇಗವಾಗಿ ಬೆಳೆಯುತ್ತಿರುವ ಟೆಕ್​ ಉದ್ಯಮದಲ್ಲಿ ಪ್ರಮುಖವಾದ ಬೆಳವಣಿಗೆಯಾಗಿದೆ.

ಗೂಗಲ್​ನ ಮುಖ್ಯ ಮಾಹಿತಿ ಅಧಿಕಾರಿ ರಾಯಲ್​ ಹನ್ಸೆನ್​ ನೇತೃತ್ವದ ನಿಯೋಗ ಈ ಘೋಷಣೆ ಮಾಡಿದೆ. ಬುಧವಾರ ಜೂಬ್ಲಿಹಿಲ್ಸ್​​ನ ಸಿಎಂ ನಿವಾಸದಲ್ಲಿ ಮುಖ್ಯಮಂತ್ರಿ ರೇವಂತ್​ ರೆಡ್ಡಿ ಮತ್ತು ಐಟಿ ಮತ್ತು ಕೈಗಾರಿಕಾ ಸಚಿವ ಶ್ರೀಧರ್​ ಬಾಬು ಭೇಟಿಯಾದ ನಿಯೋಗ, ಈ ಉಪಕ್ರಮ ಸ್ಥಾಪನೆ ಸಂಬಂಧದ ಪ್ರಮುಖ ಒಪ್ಪಂದಕ್ಕೆ ತೆಲಂಗಾಣ ರಾಜ್ಯ ಸರ್ಕಾರದೊಂದಿಗೆ ಸಹಿ ಹಾಕಿದೆ.

ಜಾಗತಿಕ ಸೈಬರ್ ​ಸೆಕ್ಯೂರಿಟಿ ಹಬ್​: ಜಿಎಸ್​ಇಸಿ ಹೈದರಾಬಾದ್​ ವಿಶಿಷ್ಟ ರೀತಿಯಲ್ಲಿ ಅಂತಾರಾಷ್ಟ್ರೀಯ ಸೈಬರ್​ ಸೆಕ್ಯೂರಿಟಿ ಹಬ್​ ಆಗಿ ಕಾರ್ಯ ನಿರ್ವಹಿಸಲಿದೆ. ಇದು ಭದ್ರತಾ ಅಭಿವೃದ್ಧಿ ಮತ್ತು ಆನ್​ಲೈನ್​ ಸುರಕ್ಷತಾ ಉತ್ಪನ್ನಗಳ ಕುರಿತು ನೈಪುಣ್ಯತೆ ಹೊಂದಲಿದೆ. ಅಕ್ಟೋಬರ್​ 3 ರಂದು ನಡೆದ 'ಗೂಗಲ್​ ಫಾರ್​ ಇಂಡಿಯಾ 2024' ಸಮಾವೇಶದಲ್ಲಿ ಕಂಪನಿ ಮೊದಲ ಬಾರಿಗೆ ತನ್ನ ಈ ಯೋಜನೆ ಘೋಷಿಸಿತು. ಅಂದಿನಿಂದ ಅನೇಕ ರಾಜ್ಯಗಳು ಕಂಪನಿಗೆ ಆಹ್ವಾನ ನೀಡಲು ಮುಂದಾಗಿದ್ದವು.

ಅಂತಿಮವಾಗಿ ತೆಲಂಗಾಣ ಸರ್ಕಾರದ ನಿರಂತರ ಪ್ರಯತ್ನದ ಫಲಿತಾಂಶ ರಾಜ್ಯ ಯಶಸ್ವಿಯಾಗಿ, ಈ ಯೋಜನೆ ಸ್ಥಾಪನೆ ಅವಕಾಶ ಪಡೆದಿದೆ. ಈ ಯೋಜನೆಯನ್ನು ಹೈದರಾಬಾದ್​ಗೆ ಪಡೆಯುವಲ್ಲಿ ಸಿಎಂ ಕೂಡ ಪ್ರಮುಖ ಪಾತ್ರಹೊಂದಿದ್ದು, ತಮ್ಮ ಅಮೆರಿಕ ಪ್ರವಾಸದಲ್ಲಿ ಅವರು ಗೂಗಲ್​ ಪ್ರಮುಖ ಕಚೇರಿಗೆ ಭೇಟಿ ಮಾಡಿ, ಮಾತುಕತೆ ನಡೆಸಿದ್ದರು.

ಈ ಕುರಿತು ಮಾತನಾಡಿರುವ ಸಿಎಂ ರೇವಂತ್​ ರೆಡ್ಡಿ, ಇದು ತೆಲಂಗಾಣಕ್ಕೆ ಹೆಮ್ಮೆಯ ಸಮಯವಾಗಿದೆ. ಜಿಎಸ್​ಇಸಿ ಹೈದರಾಬಾದ್ ಅನ್ನು ಜಾಗತಿಕ ಐಟಿ ಕೇಂದ್ರವಾಗಿ ಇರಿಸುತ್ತದೆ. ತೆಲಂಗಾಣವನ್ನು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ನಮ್ಮ ಗುರಿಗೆ ಇದು ಗಣನೀಯ ಕೊಡುಗೆ ನೀಡುತ್ತದೆ ಎಂದರು.

ಉದ್ಯೋಗ ಮತ್ತು ಅವಿಷ್ಕಾರಕ್ಕೆ ಉತ್ತೇಜನ: ಜಾಗತಿಕ ಐಟಿ ಮತ್ತು ಇಂಜಿನಿಯರಿಂಗ್​ ಹಬ್​ ಮತ್ತು ಡಿಜಿಟಲ್ ಕೌಶಲ್ಯ ಅಭಿವೃದ್ಧಿಯಲ್ಲಿ ತೆಲಂಗಾಣದ ನಾಯಕತ್ವ ಕುರಿತು ರಾಯಲ್​ ಹನ್ಸೆನ್​ ಪ್ರಶಂಸೆ ವ್ಯಕ್ತಪಡಿಸಿದರು. ಅಂತಾರಾಷ್ಟ್ರೀಯ ಸೈಬರ್​ ಭದ್ರತಾ ಸವಾಲಿನ್ನು ಜಿಎಸ್​ಇಸಿ ಸಮರ್ಥವಾಗಿ ನಿರ್ವಹಿಸುತ್ತದೆ. ಇದು ನೇರ ಮತ್ತು ಪರೋಕ್ಷವಾಗಿ ಸಾವಿರಾರು ಜನರಿಗೆ ಉದ್ಯೋಗ ಸೃಷ್ಟಿಸುತ್ತದೆ.

ಜಿಎಸ್​ಇಸಿಯನ್ನು ಹೈದರಾಬಾದ್​ನಲ್ಲಿ ಸ್ಥಾಪಿಸುವುದು ಸೈಬರ್​ ಸೆಕ್ಯೂರಿಟಿ ಜಾಗತಿಕ ನಾಯಕತ್ವದ ಭಾರತದ ನಡೆಯಲು ಗಮನಾರ್ಹ ಮೈಲಿಗಲ್ಲಾಗಲಿದೆ.

ಇದನ್ನೂ ಓದಿ: ಗೂಗಲ್‌ ಕ್ಯಾಲೆಂಡರ್​ನಲ್ಲಿ ಹೊಸ ಫೀಚರ್: ವೆಬ್‌ ಮಾತ್ರವಲ್ಲ, ಆಂಡ್ರಾಯ್ಡ್ ಬಳಕೆದಾರರಿಗೂ ಲಭ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.