ETV Bharat / bharat

ರಾಂಚಿಯಲ್ಲಿ ಹಳಿ ತಪ್ಪಿದ ಗೂಡ್ಸ್​ ರೈಲು; 15 ಟ್ರೈನ್​ ಸಂಚಾರದಲ್ಲಿ ವ್ಯತ್ಯಯ - GOODS TRAIN DERAIL

ಬುಧವಾರ ರಾತ್ರಿ ಸುಮಾರು 9 ಗಂಟೆಗೆ ಬೊಕರೊ ಜಿಲ್ಲೆಯಲ್ಲಿನ ತುಪಕದಿಹ್​ ಸ್ಟೇಷನ್​ ಬಳಿಕ ಗೂಡ್ಸ್​ ರೈಲಿನ ಎರಡು ಬೋಗಿಗಳು ಹಳಿ ತಪ್ಪಿವೆ.

GOODS TRAIN DERAIL
ಹಳಿ ತಪ್ಪಿದ ಗೂಡ್ಸ್​ ರೈಲು (ETV Bharat)
author img

By PTI

Published : Sep 26, 2024, 12:40 PM IST

Updated : Sep 26, 2024, 1:33 PM IST

ರಾಂಚಿ (ಜಾಖಂಡ್​): ಕಳೆದೆರಡು ದಿನಗಳ ಹಿಂದೆಯಷ್ಟೇ ಗೂಡ್ಸ್​ ರೈಲು ಹಳೆ ತಪ್ಪಿದ ಬೆನ್ನಲ್ಲೇ ಇದೀಗ ಅದೇ ರೀತಿಯಾದ ಘಟನೆ ಜಾರ್ಖಂಡ್​​ನಲ್ಲಿ ವರದಿಯಾಗಿದೆ. ರಾಜ್ಯದ ಬೊಕರೊದಲ್ಲಿ ಗೂಡ್ಸ್​ ರೈಲಿನ ಎರಡು ಬೋಗಿಗಳು ಹಳಿ ತಪ್ಪಿವೆ. ಇದರಿಂದ ಇತರೆ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, 15 ರೈಲುಗಳ ಮಾರ್ಗಗಳನ್ನು ಬದಲಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ ರಾತ್ರಿ ಸುಮಾರು 9 ಗಂಟೆಗೆ ಬೊಕರೊ ಜಿಲ್ಲೆಯಲ್ಲಿನ ತುಪಕದಿಹ್​ ಸ್ಟೇಷನ್​ ಬಳಿಕ ಗೂಡ್ಸ್​ ರೈಲಿನ ಎರಡು ಬೋಗಿಗಳು ಹಳಿ ತಪ್ಪಿವೆ. ಇದರಿಂದಾಗಿ 14 ಎಕ್ಸ್​ಪ್ರೆಸ್​ ರೈಲು ಸೇರಿದಂತೆ ಒಟ್ಟು 15 ರೈಲು ಸಂಚಾರ ಮಾರ್ಗವನ್ನು ಬದಲಾಯಿಸಲಾಗಿದೆ ಎಂದು ನೈರುತ್ಯ ರೈಲ್ವೆಯ ಅದ್ರಾ ವಿಭಾಗದ ವಿಭಾಗೀಯ ರೈಲ್ವೆ ಮ್ಯಾನೇಜರ್​ ಸುಮಿತ್​ ನರುಲಾ ತಿಳಿಸಿದ್ದಾರೆ.

ಹಳಿ ತಪ್ಪಿದ ರೈಲಿನಲ್ಲಿ ಬೊಕರೊ ಉಕ್ಕಿನ ಸ್ಥಾವರದಿಂದ ಉಕ್ಕಿನ ವಸ್ತುಗಳ ಸಾಗಣೆ ಮಾಡಲಾಗುತ್ತಿತ್ತು. ಅಪಘಾತದಿಂದ ಹಾನಿಗೊಂಡ ರೈಲು ಹಳಿಯನ್ನು ದುರಸ್ತಿಕರಣ ಕಾರ್ಯ ನಡೆಸಲಾಗುತ್ತಿದ್ದು, ಮತ್ತೊಂದು ಮಾರ್ಗದಲ್ಲಿ ಸರಾಗ ಸಂಚಾರಕ್ಕೆ ಅನುವು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ರೈಲು ಹಳಿ ತಪ್ಪಿದ ಹಿನ್ನೆಲೆ ವಾರಣಾಸಿ- ರಾಂಚಿ ವಂದೇ ಭಾರತ್​ ಎಕ್ಸ್​ಪ್ರೆಸ್​, ರಾಂಚಿ- ಭಗಲ್ಪುರ್​ ವನಂಚಲ್​ ಎಕ್ಸ್​ಪ್ರೆಸ್​, ಹತಿಯಾ- ಪಾಟ್ನಾ-ರಾಂಚಿ- ಕಾಮಕ್ಯಾ, ರಾಂಚಿ- ಲೋಕಮಾನ್ಯ ತಿಲಕ್​ ಎಕ್ಸ್​​ಪ್ರೆಸ್​ ಹಾಗೂ ರಾಂಚಿ- ಧನ್​ಬಾದ್​ ಇಂಟರ್​ಸಿಟಿ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಇನ್ನು, ರೈಲು ಹಳಿ ತಪ್ಪಲು ಕಾರಣ ಏನು ಎಂಬ ಕುರಿತು ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಹಳಿ ತಪ್ಪಿದ ಮತ್ತೊಂದು ಗೂಡ್ಸ್​ ರೈಲು: ನಾಲ್ಕು ತಿಂಗಳಲ್ಲಿ ಮೂರನೇ ಅವಘಡ

Last Updated : Sep 26, 2024, 1:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.