ETV Bharat / bharat

ಮದುವೆ ಮೆರವಣಿಗೆಯಲ್ಲಿ ವರನ ಮೇಲೆ ಆ್ಯಸಿಡ್​ ಎರಚಿದ ಯುವತಿ! - Acid Attack - ACID ATTACK

ವಂಚಿಸಿ ಬೇರೆ ಯುವತಿಯನ್ನು ಮದುವೆಯಾಗುತ್ತಿದ್ದ ಪ್ರಿಯಕರನ​ ಮೇಲೆ ಯುವತಿ ಆ್ಯಸಿಡ್​ ದಾಳಿ ನಡೆಸಿರುವ ಘಟನೆ ಉತ್ತರಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ನಡೆದಿದೆ.

GIRL THROWS ACID ON GROOM  CHEATING IN LOVE  LOVE STORY
ಮದುವೆಯಾಗುತ್ತಿದ್ದ ವರನ ಮೇಲೆ ಆ್ಯಸಿಡ್​ ಎರಚಿದ ಯುವತಿ!
author img

By ETV Bharat Karnataka Team

Published : Apr 24, 2024, 1:45 PM IST

ಬಲಿಯಾ (ಉತ್ತರಪ್ರದೇಶ): ಗೆಳತಿ ಮದುವೆಗೆ ಒಪ್ಪಲಿಲ್ಲ ಅಥವಾ ಅವಳ ಮದುವೆ ಬೇರೆಯವರೊಂದಿಗೆ ನಿಶ್ಚಯವಾಗಿದ್ದ ಸಂದರ್ಭಗಳಲ್ಲಿ ಸಿಟ್ಟಿಗೆದ್ದ ಪ್ರೇಮಿಗಳು ಗೆಳತಿಯರ ಮೇಲೆ ಆ್ಯಸಿಡ್ ದಾಳಿ ನಡೆಸಿದ ಘಟನೆಗಳು ನಡೆದಿವೆ. ಆದರೆ, ಜಿಲ್ಲೆಯಲ್ಲಿ ವ್ಯತಿರಿಕ್ತ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ವರನಾಗಿರುವ ತನ್ನ ಪ್ರಿಯಕರನ ಮುಖದ ಮೇಲೆ ಗೆಳತಿ ಆ್ಯಸಿಡ್ ಎರಚಿದ್ದಾಳೆ.

ನಡೆದಿದ್ದೇನು?: ಈ ಪ್ರಕರಣ ಜಿಲ್ಲೆಯ ಬನ್ಸ್ದಿಹ್ ಪೊಲೀಸ್ ಠಾಣೆ ವ್ಯಾಪ್ತಿಯ ದುಮ್ರಿಯಲ್ಲಿ ನಡೆದಿದೆ. ಇಲ್ಲಿ ಮಂಗಳವಾರ ಸಂಜೆ ಮದುವೆ ಮೆರವಣಿಗೆಯೊಂದಿಗೆ ತೆರಳುತ್ತಿದ್ದ ವರನ ಮೇಲೆ ಆತನ ಗೆಳತಿ ಆ್ಯಸಿಡ್ ಎರಚಿದ್ದಾಳೆ. ಈ ಘಟನೆಯ ನಂತರ ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ಉಂಟಾಯಿತು. ಕುಟುಂಬಸ್ಥರು ವರನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆ್ಯಸಿಡ್ ಎರಚಿದ ಯುವತಿಗೆ ವರನ ಮನೆಯ ಮಹಿಳೆಯರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಯುವಕ ಹಾಗೂ ಯುವತಿ ಇಬ್ಬರೂ ಕೆಲ ದಿನಗಳಿಂದ ಪ್ರೀತಿಸುತ್ತಿದ್ದರು. ಇದಕ್ಕೆ ಇಬ್ಬರ ಕುಟುಂಬದಿಂದಲೂ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದರ ಹೊರತಾಗಿಯೂ, ಪ್ರೀತಿಸುತ್ತಿದ್ದ ಜೋಡಿ ಪರಸ್ಪರ ಒಟ್ಟಿಗೆ ಬದುಕಲು ಹಠ ಹಿಡಿದಿದ್ದರು. ಈ ಬಗ್ಗೆ ಉಭಯ ಕುಟುಂಬಗಳ ನಡುವೆ ಪಂಚಾಯ್ತಿ ಕೂಡ ನಡೆದಿದ್ದು, ನಂತರ ಪರಸ್ಪರ ಒಪ್ಪಿಗೆ ಮೇರೆಗೆ ವಿಷಯವನ್ನು ಬಗೆಹರಿಸಲಾಗಿತ್ತು. ಕೆಲ ತಿಂಗಳಗಳ ಬಳಿಕ ಯುವಕನ ಕುಟುಂಬಸ್ಥರು ಆತನ ಮದುವೆಯನ್ನು ನಿಶ್ಚಯಿಸಿದ್ದರು.

ಮಂಗಳವಾರ ಮದುವೆ ಮೆರವಣಿಗೆಯೊಂದಿಗೆ ವರ ತೆರಳಿದ್ದನು. ಈ ವಿಷಯ ತಿಳಿದ ಯುವತಿ ಕೋಪಗೊಂಡಿದ್ದಾಳೆ. ಬಳಿಕ ಆತನ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿ, ತಾನು ಸಹ ವಸ್ತ್ರಾಲಂಕಾರ ಮಾಡಿಕೊಂಡು ಮದುವೆ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾಳೆ. ಕೊನೆಯ ಕ್ಷಣದಲ್ಲಿ ಗೆಳತಿ ವರನ ಬಳಿ ಹೋಗಿ ಅವನ ಮುಖದ ಮೇಲೆ ಆ್ಯಸಿಡ್​ ಎರಚಿದ್ದಾಳೆ, ನಂತರ ಅವನು ನೆಲದ ಮೇಲೆ ಬಿದ್ದು ಒದ್ದಾಡತೊಡಗಿದನು. ಕೂಡಲೇ ವರನ ಮನೆಯವರು ಆತನನ್ನು ಆಸ್ಪತ್ರೆಗೆ ಕರೆದೊಯ್ದರು. ಬಳಿಕ ಅಲ್ಲಿದ್ದ ಮಹಿಳೆಯರು ಆ್ಯಸಿಡ್​ ದಾಳಿ ಮಾಡಿದ ಹುಡುಗಿಯನ್ನು ಹಿಡಿದು ಥಳಿಸಲು ಪ್ರಾರಂಭಿಸಿದರು.

ವರನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲ ಚಿಕಿತ್ಸೆ ಬಳಿಕ ವೈದ್ಯರು ಡಿಸ್ಚಾರ್ಜ್​ ಮಾಡಿದ್ದಾರೆ. ಇದಾದ ನಂತರ ವರ ಮದುವೆಯ ಮೆರವಣಿಗೆಯನ್ನು ಮತ್ತೆ ಹುಡುಗಿ ಮನೆ ಕಡೆ ಸಾಗಿದ್ದನು. ಮದುವೆ ಅದ್ಧೂರಿಯಾಗಿ ನಡೆಯಿತು. ಬಳಸಿದ ಆ್ಯಸಿಡ್ ಅಷ್ಟೊಂದು ಪರಿಣಾಮ ಬೀರದ ಕಾರಣ ವರನಿಗೆ ಯಾವುದೇ ಗಂಭೀರವಾದ ಗಾಯಗಳಾಗಲಿಲ್ಲ. ವರನ ಕಡೆಯಿಂದ ಇದೀಗ ದೂರು ಸ್ವೀಕರಿಸಲಾಗಿದೆ. ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮುಂದಿನ ಕ್ರಮ ಪ್ರಗತಿಯಲ್ಲಿದೆ ಎಂದು ಪೊಲೀಸ್ ಠಾಣೆಯ ಮುಖ್ಯಸ್ಥ ಅಖಿಲೇಶ್ ಚಂದ್ರ ಪಾಂಡೆ ತಿಳಿಸಿದ್ದಾರೆ.

ಓದಿ: ಕಾಲೇಜು ಗಲಾಟೆಯ ಜಿದ್ದಿಗೆ ಸಹಪಾಠಿಗಳ ಮೇಲೆ ರಾಡ್​ನಿಂದ ಹಲ್ಲೆ: ಏಳು ಜನ ಆರೋಪಿಗಳ ಬಂಧನ - BENGALURU CRIME NEWS

ETV Bharat Logo

Copyright © 2025 Ushodaya Enterprises Pvt. Ltd., All Rights Reserved.