ETV Bharat / bharat

ಪ್ರವಾಸಕ್ಕೆ ಬಂದ ಸ್ಪ್ಯಾನಿಷ್ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ - Gang Rape

ವಿದೇಶಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ.

gang-rape-of-spanish-woman-in-dumka-jharkhand
ದುಮ್ಕಾದಲ್ಲಿ ಸ್ಪೇನ್ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ
author img

By ETV Bharat Karnataka Team

Published : Mar 2, 2024, 11:21 AM IST

ದುಮ್ಕಾ: ಜಾರ್ಖಂಡ್​ನ ದುಮ್ಕಾದಲ್ಲಿ ವಿದೇಶಿ ಮಹಿಳೆಯೊಬ್ಬರ ಮೇಲೆ ಅಪರಿಚಿತ ಯುವಕರಿಂದ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ. ಹಂಸದಿಹಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರವಾಸಕ್ಕೆಂದು ಬಂದಿದ್ದ ಸ್ಪ್ಯಾನಿಷ್​ ಮಹಿಳಾ ಪ್ರವಾಸಿಯೊಬ್ಬರ ಮೇಲೆ ಶುಕ್ರವಾರ ತಡರಾತ್ರಿ ಸಾಮೂಹಿಕ ಅತ್ಯಾಚಾರ ನಡೆದಿದೆ. ತಡರಾತ್ರಿ ಘಟನಾ ಸ್ಥಳಕ್ಕೆ ಆಗಮಿಸಿದ ಎಸ್ಪಿ ಪಿತಾಂಬರ್​ ಸಿಂಗ್​ ಖೇರ್ವಾರ್​ ಮೂವರು ಆರೋಪಿಗಳನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.

ಪತಿಯೊಂದಿಗೆ​ ಪ್ರವಾಸ​ ಬಂದಿದ್ದ ಮಹಿಳೆ: ಸದ್ಯದ ಮಾಹಿತಿ ಪ್ರಕಾರ, ಸ್ಪೇನ್​ ಮಹಿಳೆ ತನ್ನ ಪತಿಯೊಂದಿಗೆ ಜಾರ್ಖಂಡ್​ಗೆ ಪ್ರವಾಸಕ್ಕೆಂದು ಬಂದಿದ್ದರು. ದುಮ್ಕಾ ಮೂಲಕ ಭಾಗಲ್ಪುರ ಕಡೆಗೆ ಬೈಕ್​ನಲ್ಲಿ​ ಪ್ರವಾಸ ಹೋಗುತ್ತಿದ್ದರು. ರಾತ್ರಿ 12 ಗಂಟೆ ಸುಮಾರಿಗೆ ಹಂಸದಿಹಾ ಮಾರುಕಟ್ಟೆಯ ಮುಂದೆ ನಿರ್ಜನ ಸ್ಥಳದಲ್ಲಿ ಟೆಂಟ್​ ಹಾಕಿಕೊಂಡು ಮಲಗಿದ್ದರು. ಅಷ್ಟರಲ್ಲಿ ಪಕ್ಕದಲ್ಲಿದ್ದ ಕೆಲ ಯುವಕರು ಅಲ್ಲಿಗೆ ಬಂದು ಸಾಮೂಹಿಕ ಅತ್ಯಾಚಾರ ನಡೆಸಿ, ಮಹಿಳೆಗೆ ಥಳಿಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ಬಳಿಕ ಮಹಿಳೆಯನ್ನು ಚಿಕಿತ್ಸೆಗಾಗಿ ಸರೈಯಾಹತ್​ ಸಿಎಚ್​ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿರುವ ಎಸ್ಪಿ ಪಿತಾಂಬರ್​, "ಸದ್ಯ ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ಬಂಧಿತರನ್ನು ವಿಚಾರಣೆ ನಡೆಸಲಾಗುತ್ತಿದೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಯುವತಿಯ ಅತ್ಯಾಚಾರ, ಕೊಲೆ; ಆಟೋ ಚಾಲಕನ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.