ETV Bharat / bharat

ವಿಗ್​ ಮೂಲಕ ಗುರುತು ಬದಲಾಯಿಸಿ ವಧುಗಳಿಗೆ ವಂಚನೆ; ಕಡೆಗೂ ನಕಲಿ ವರನ ಅಸಲಿಯತ್ತು ಪತ್ತೆ ಮಾಡಿದ ಪೊಲೀಸರು - FRAUDSTER WITH WIG DUPES

ಈತ ತನ್ನ ಕೃತ್ಯ ಹಾಗೂ ಗುರುತಿನ ಜೊತೆಗೆ ವಯಸ್ಸು ಕೂಡಾ ಅನುಮಾನ ಬಾರದಂತೆ ಕಾಪಾಡಲು ಹಲವಾರು ವಿಗ್​​ಗಳನ್ನು ಬಳಕೆ ಮಾಡುತ್ತಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

fraudster-with-wig-dupes-families-through-fake-marriages
ಸಾಂದರ್ಭಿಕ ಚಿತ್ರ (ಸಂಗ್ರಹ ಚಿತ್ರ)
author img

By ETV Bharat Karnataka Team

Published : 2 hours ago

ಹೈದರಾಬಾದ್​: ಮದುವೆ ಎಂಬ ಪವಿತ್ರ ಬಂಧವನ್ನು ಹಣಗಳಿಸುವ ಅಸ್ತ್ರವಾಗಿಸಿಕೊಂಡ ವ್ಯಕ್ತಿಯೊಬ್ಬ, ಹಲವಾರು ಹೆಣ್ಣು ಮಕ್ಕಳನ್ನು ವಂಚಿಸಿದ ಘಟನೆ ತೆಲಂಗಾಣದಿಂದ ವರದಿಯಾಗಿದೆ. ವಿಶೇಷ ಮತ್ತು ವಿಚಿತ್ರ ಎಂದರೆ, ಆತ ಈ ಕೃತ್ಯದ ಜಾಲ ಬಯಲಾಗಬಾರದು ಎಂಬುದಕ್ಕೆ ಹಲವು ವಿಗ್​ಗಳನ್ನು ಬಳಸಿಕೊಂಡು ತನ್ನ ನೋಟವನ್ನು ಮರೆಮಾಚುವ ಯತ್ನ ನಡೆಸಿದ್ದ. ಅಷ್ಟೇ ಅಲ್ಲ ತಾನು ಮದುವೆಗೆ ಅರ್ಹ ವರ ಎಂದು ಬಿಂಬಿಸಿಕೊಂಡು ಹೆಣ್ಣು ಮಕ್ಕಳಿದ್ದ ಕುಟುಂಬಗಳನ್ನು ಗುರಿಯಾಗಿಸಿಕೊಂಡು ವಂಚನೆ ಇಳಿಯುತ್ತಿದ್ದ.

ನಕಲಿ ಗಂಡಿನ ಅವತಾರ: ಕುಟುಂಬವೊಂದು ತಮ್ಮ ಒಬ್ಬಳೇ ಮಗಳಿಗೆ ಆನ್​ಲೈನ್​ ಮೂಲಕ ಗಂಡು ಪತ್ತೆ ಮಾಡುತ್ತಿದ್ದಾಹ ಈ ನಕಲಿ ಗಂಡಿನ ಮದುವೆ ವಂಚನೆ ಹಗರಣ ಬೆಳಕಿಗೆ ಬಂದಿದೆ. ಆನ್​ಲೈನ್​ ಮದುವೆ ತಾಣದಲ್ಲಿ ಈತನ ಪ್ರೊಫೈಲ್​ ಮೆಚ್ಚಿದ ಕುಟುಂಬ ಮದುವೆಗೆ ಸಿದ್ಧತೆ ಕೂಡಾ ನಡೆಸಿತ್ತು. ವಧುವಿನ ಕುಟುಂಬದ ನಂಬಿಕೆ ಗಳಿಸಿದ ವರ ಆಭರಣ ಮತ್ತು ಮದುವೆ ಖರ್ಚಿಗಾಗಿ 25 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದ. ಅಲ್ಲದೇ ವಾಟ್ಸ್​ಆ್ಯಪ್​ ​ ಮೂಲಕ ಆಭರಣದ ಚಿತ್ರವನ್ನು ಹಂಚಿಕೊಂಡು ಇವುಗಳನ್ನು ನೈಜ ಎಂಬಂತೆ ಬಿಂಬಿಸಿದ್ದ.

ದಿನಕಳೆದಂತೆ ವರನ ಕುರಿತು ಭಯಂಕರ ಸತ್ಯವೊಂದು ಹೊರ ಬಂದಿದ್ದು, ಕುಟುಂಬಸ್ಥರು ಆಘಾತಕ್ಕೆ ಒಳಗಾದರು. ವರ ಈಗಾಗಲೇ ಎರಡು ಮಕ್ಕಳ ತಂದೆಯಾಗಿದ್ದು, ಕ್ರಿಮಿನಲ್​ ಹಿನ್ನೆಲೆ ಕೂಡ ಹೊಂದಿದ್ದ. ಇದನ್ನು ತಿಳಿದು ವಧುವಿನ ಕುಟುಂಬ ಮದುವೆ ರದ್ದು ಮಾಡಿ, ಹಣ ಹಿಂದಿರುಗಿಸುವಂತೆ ಕೋರಿದೆ. ಆದರೆ ವರ ಚೆಕ್​ ನೀಡುವ ಮೂಲಕ ವಂಚನೆ ಮಾಡಿದ್ದಾನೆ.

ಅನೇಕ ವಿಗ್​ಗಳ ಮೂಲಕ ಗುರುತು ಮೆರೆಮಾಚುತ್ತಿದ್ದ ವರ: ಈ ವರ ತನ್ನ ಈ ಕೃತ್ಯ ಹಾಗೂ ಗುರುತಿನ ಜೊತೆಗೆ ವಯಸ್ಸನ್ನು ಕೂಡಾ ಮರೆ ಮಾಚುತ್ತಿದ್ದ. ಯಾರಿಗೂ ಅನುಮಾನ ಬಾರದಂತೆ ಕಾಪಾಡಲು ಹಲವಾರು ವಿಗ್​​ಗಳನ್ನು ಬಳಕೆ ಮಾಡುತ್ತಿದ್ದ ಎಂಬ ಅಂಶವನ್ನು ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ. ಈತ ನಾನಾ ಹೆಸರಿನಲ್ಲಿ ತನ್ನ ಪ್ರೊಫೈಲ್​ ನಿರ್ವಹಣೆ ಮಾಡುತ್ತಿದ್ದು, ಅನೇಕ ಸೆಲೆಬ್ರಿಟಿ, ರಾಜಕೀಯ ಮತ್ತು ಉದ್ಯಮಿಗಳ ಸಂಪರ್ಕಗಳು ಇರುವಂತೆ ಫೋಟೋದಲ್ಲಿ ಬಿಂಬಿಸಿಕೊಂಡಿದ್ದ, ಇದು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿದು ಬಂದಿದೆ.

ವಿಲಾಸಿ ಜೀವನಕ್ಕೆ ಅನೇಕ ಸಂತ್ರಸ್ತರು ಬಲಿ: ಮಿಯಾಪುರ್​, ಗಚಿಬೌಲಿ ಮತ್ತು ಬಂಜಾರ ಹಿಲ್​ಗಳಲ್ಲಿ ವಿಲಾಸಿ ಜೀವನ ನಡೆಸುತ್ತಿರುವಂತೆ ಈತ ಅನೇಕ ಕುಟುಂಬಗಳನ್ನು ವಂಚಿಸಿದ್ದಾನೆ. ಪ್ರಕರಣವೊಂದರಲ್ಲಿ ಯುವ ವೈದ್ಯಕೀಯ ಕುಟುಂಬಕ್ಕೆ ಈತ 20 ಲಕ್ಷ ವಂಚಿಸಿರುವುದು ಬೆಳಕಿಗೆ ಬಂದಿದೆ. ಮತ್ತೊಂದು ಪ್ರಕರಣದಲ್ಲಿ ಸಿಕಿಂದ್ರಾಬಾದ್​​ನಲ್ಲಿ ತನ್ನನ್ನು ಐಟಿ ಮ್ಯಾನೇಜರ್​ ಎಂಬಂತೆ ಬಿಂಬಿಸಿಕೊಂಡಿದ್ದಾನೆ.

ಸೈಬರಬಾದ್ ಪೊಲೀಸರಿಂದ ವಂಚನೆ ಬಯಲು: ಈತನ ವಿರುದ್ದ ದಾಖಲಾದ ಅನೇಕ ಪ್ರಕರಣಗಳ ಹಿನ್ನೆಲೆಯಲ್ಲಿ ಅಖಾಡಕ್ಕೆ ಇಳಿದ ಸೈಬರಬಾದ್​ ಪೊಲೀಸರು, ಈತನ ಚಲನವಲನದ ಮೇಲೆ ಕಣ್ಣಿಟ್ಟು ತನಿಖೆ ನಡೆಸಿದ್ದಾರೆ. ಅಲ್ಲದೇ, ಅಧಿಕಾರಿಗಳು ಈತನ ಕ್ರಿಮಿನಲ್​ ನೆಟ್​ವರ್ಕ್​ ಪತ್ತೆ ಮಾಡಲು ಕಾರ್ಯ ನಿರ್ವಹಿಸಿ, ಈತನ ವಂಚನೆಗಳಿಗೆ ತೆರೆ ಎಳೆದಿದ್ದಾರೆ.

ಈತನ ವಂಚನೆ ಬಯಲಾದ ಬಳಿಕ ವರನ ಹುಟುಕಾಟ ನಡೆಸುವ ಕುಟುಂಬಸ್ಥರಿಗೆ ಮನವಿ ಮಾಡಿರುವ ಪೊಲೀಸರು, ವಧು - ವರರ ತಾಣದಲ್ಲಿ ನಡೆಯುವ ಇಂತಹ ವಂಚನೆಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಆನೆಗಳ ಮೆರವಣಿಗೆಗೆ ಕಟ್ಟಳೆ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕೇರಳ ದೇವಾಲಯ ಟ್ರಸ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.