ETV Bharat / bharat

ಕನಸಿನ ಮದುವೆಗೆ ತಯಾರಿ ನಡೆಸಿದ್ದೀರಾ; ಈ ಐಷಾರಾಮಿ ರೈಲಿನಲ್ಲಿ ಆಗಿ ಅದ್ಧೂರಿ ಕಲ್ಯಾಣಕ್ಕೆ ಸಜ್ಜಾಗಿ - PALACE ON WHEELS WEDDINGS

ಮದುವೆ ಅಂದಾಕ್ಷಣ ಮೊದಲು ನೆನಪಾಗೋದೇ ಕಲ್ಯಾಣ ಮಂಟಪ, ಚೌಟ್ರಿ, ವಿವಿಧ ಅರಮನೆಯಂತಹ ಸ್ಥಳಗಳು. ಆದ್ರೆ ರಾಜಸ್ಥಾನದ ಪ್ರಮುಖ ಪ್ರವಾಸಿ ಸ್ಥಳಗಳಿಗೆ ಚಲಿಸುವ ಐಷಾರಾಮಿ ರೈಲಿನಲ್ಲೂ ಜೋಡಿಗಳು ಶಾಸ್ತ್ರೋಕ್ತವಾಗಿ ವಿವಾಹ ಬಂಧನಕ್ಕೆ ಒಳಗಾಗಬಹುದು. ಅದರ ಕುರಿತ ಮಾಹಿತಿ ಇಲ್ಲಿದೆ.

author img

By ETV Bharat Karnataka Team

Published : Jul 1, 2024, 5:43 PM IST

for-the-first-time-in-the-country-wedding-ceremony-will-be-held-on-royal-train-palace-on-wheels
ಪ್ಯಾಲೇಸ್​ ಆನ್​ ವ್ಹೀಲ್ಸ್ ರೈಲು (ಈಟಿವಿ ಭಾರತ್​​)

ಜೈಪುರ (ರಾಜಸ್ಥಾನ): ಜೈಪುರದ ಅರಮನೆಗಳಲ್ಲಿ ಸಿನಿಮೀಯ ರೀತಿಯಾಗಿ ಮದುವೆಯಾಗಬೇಕು ಎಂಬ ಕನಸು ಕಾಣುತ್ತಿರುವವರಿಗೆ ರೈಲ್ವೆ ಇಲಾಖೆ ಬಂಪರ್​ ಆಫರ್​ ನೀಡಿದೆ. ಅದರ ಅನುಸಾರ, ಇದೀಗ ರಾಜಸ್ಥಾನದ ಪ್ರಮುಖ ಪ್ರವಾಸಿ ಕೇಂದ್ರಗಳ ನಡುವೆ ಚಲಿಸುವ ಐಷಾರಾಮಿ ರೈಲಿನಲ್ಲಿ ಜೋಡಿಗಳು ಶಾಸ್ತ್ರೋಕ್ತವಾಗಿ ವಿವಾಹ ಬಂಧನಕ್ಕೆ ಒಳಗಾಗಬಹುದು. ಇದರ ಜೊತೆಗೆ ರಾಜಸ್ಥಾನದ ಅರಮನೆಯ ನಗರಿಗಳ ಸೊಬಗನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಇದಕ್ಕಾಗಿ 'ಪ್ಯಾಲೇಸ್​ ಆನ್​ ವ್ಹೀಲ್ಸ್'​​ ಕಾರ್ಯ ನಿರ್ವಹಿಸಲಿದೆ.

40 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಐಷಾರಾಮಿ ಟ್ರೈನ್​ನಲ್ಲಿ ಮಂಗಳವಾದ್ಯ ಮೊಳಗಲು ಸಜ್ಜಾಗಿದೆ. ಇದಕ್ಕಾಗಿ 150 ಕ್ಯಾಬಿನ್​ನಗಳನ್ನು ನಿಗದಿಸಲಾಗಿದೆ. ಮದುವೆ ಸೀಸನ್​ ಆರಂಭವಾಗುತ್ತಿರುವ ಹಿನ್ನೆಲೆ ಆರ್​ಅಂಡ್​ಡಿ ಮತ್ತು ಒಅಂಡ್​ಎಂ ಸಂಸ್ಥೆಗಳು ಈ ರೀತಿಯ ವಿಶಿಷ್ಟ ಮದುವೆ ನಡೆಸಲು ಮುಂದಾಗಿದೆ. ಪ್ರಮುಖ ಟ್ರಾವೆಲ್​ ಕಂಪನಿಗಳ ಜೊತೆಯಲ್ಲಿ ಪ್ಯಾಲೇಸ್​ ಆನ್​ ವ್ಹೀಲ್ಸ್​ನಲ್ಲಿ ಮದುವೆ ನಡೆಸಲು ಒಪ್ಪಂದಗಳಿಗೆ ಸಹಿ ಹಾಕಲು ಸಜ್ಜಾಗಿದೆ. ಅದರ ಅನುಸಾರ ಚಲಿಸುವ ರೈಲಿನಲ್ಲಿ ಮದುವೆಯ ಎಲ್ಲಾ ಸಂಪ್ರದಾಯಗಳನ್ನು ನೆರವೇರಿಸಬಹುದಾಗಿದೆ. ಈ ವರ್ಷಾಂತ್ಯದಲ್ಲಿ ಕನಿಷ್ಠ ಐದು ಮದುವೆಗಳು ನಡೆಯಲಿವೆ ಎಂಬ ನಿರೀಕ್ಷೆಯನ್ನು ರೈಲ್ವೆ ಇಲಾಖೆ ಹೊಂದಿದೆ.

ಐತಿಹಾಸಿಕ ನಗರಗಳಿಗೆ ಭೇಟಿ: ಈ ಐಷಾರಾಮಿ ರೈಲು​ ಜೈಪುರ, ಸವೈ ಮದೊಪುರ್​, ಚಿತ್ತೋರ್​ಗಢ್​​​, ಜೈಸಲ್ಮೇರ್​​, ಜೋಧ್​ಪುರ್​, ಭರತ್​ಪುರ್​ ಮತ್ತು ಅಗ್ರಾಗೆ ಭೇಟಿ ನೀಡಲಿದ್ದು, ಅಂತಿಮವಾಗಿ ದೆಹಲಿಯಲ್ಲಿ ನಿಲ್ಲಲಿದೆ. ಭಾರತದಲ್ಲಿರುವ ಅತಿ ದುಬಾರಿ ಟ್ರೈನ್​ಗಳ ಪ್ರಯಾಣದಲ್ಲಿ ರಾಜಸ್ಥಾನದ ಪ್ರಮುಖ ಪ್ರೇಕ್ಷಣಿಯ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಐಷಾರಾಮಿ​ ರೈಲಿನ ಪ್ರಯಾಣವೂ ಒಂದಾಗಿದೆ. ವಿಶೇಷ ಸಂಗತಿ ಎಂದರೆ, ಭಾರತದಲ್ಲಿ ರೈಲ್ವೆ ಆರಂಭಿಸಿದ ಐಷಾರಾಮಿ ಪ್ರಯಾಣದ ರೈಲು ಇದಾಗಿದೆ.

ಶೀಘ್ರದಲ್ಲೇ ದರ ನಿಗದಿ: ಐಷರಾಮಿ ರೈಲಿನಲ್ಲಿ ನಡೆಯಲಿರುವ ಮದುವೆಗೆ ಎಷ್ಟು ಖರ್ಚಾಗಲಿದೆ ಎಂಬ ಕುರಿತು ಶೀಘ್ರದಲ್ಲೇ ನಿರ್ಧರಿಸಲಾಗುವುದು. ಪ್ಯಾಲೇಸ್​ ಆನ್​ ವ್ಹೀಲ್ಸ್​ನ ನಿರ್ದೇಶಕರಾಗಿರುವ ಪ್ರದೀಪ್​ ಬೋಗ್ರಾ ಮಾತನಾಡಿ, ಕೋಚ್​ ಮತ್ತು ದೂರದ ಅನುಸಾರವಾಗಿ ಇದರ ವೆಚ್ಚ ನಿರ್ಧರಿಸಲಾಗುವುದು. ಈ ಸಮಯದಲ್ಲಿ ರೈಲಿನಲ್ಲಿಯೇ ಹಳದಿಶಾಸ್ತ್ರ, ಮೆಹಂದಿ, ಮಹಿಳೆಯರ ಸಂಗೀತ ಕಾರ್ಯಕ್ರಮದಂತಹ ವಿವಾಹದ ಆಚರಣೆಗಳನ್ನು ನಡೆಸಬಹುದಾಗಿದೆ. ಮದುವೆ ವೆಚ್ಚ ಒಪ್ಪಂದದಲ್ಲಿ ಆದಾಯ ಹಂಚಿಕೆ ಸೇರಿದಂತೆ ಇತರೆ ವಿಷಯಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ಆದಾಯ ವೃದ್ಧಿ: ಪ್ರಸ್ತುತ ಅರಮನೆ ನಗರಿಯಲ್ಲಿ ಸಂಚರಿಸುತ್ತಿರುವ ಈ ಐಷಾರಾಮಿ ರೈಲು ನಷ್ಟ ಅನುಭವಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಷ್ಟ ಸರಿದೂಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಅದರಲ್ಲಿ ಈ ವೆಚ್ಚದಾಯಕ ರೈಲಿನ ಪ್ರಮುಖ ಆದಾಯ ವಿದೇಶಿಗರಿಂದ ಬರುತ್ತಿದೆ. ಇಲ್ಲಿಗೆ ಶೇ 90ರಷ್ಟು ವಿದೇಶಿ ಪ್ರವಾಸಿಗರು ಆಗಮಿಸುತ್ತಾರೆ. ಇದೇ ಕಾರಣಕ್ಕೆ ದೇಶಿಯ ಪ್ರವಾಸಿಗರನ್ನು ಸಂಪರ್ಕಿಸಲು ಈ ಹೊಸ ಉಪಕ್ರಮ ನಡೆಸಲಾಗಿದೆ. ಇದರಿಂದ ರೈಲು ನಷ್ಟ ಸರಿದೂಗಿಸಲು ನಿರ್ಧರಿಸಲಾಗಿದೆ. ಇನ್ನು ಐಷಾರಾಮಿ ರೈಲಿನಲ್ಲಿ ಪ್ರಯಾಣಕ್ಕೆ ವ್ಯಕ್ತಿಯೊಬ್ಬನಿಗೆ 1 ಲಕ್ಷ ರೂ. ಖರ್ಚಾಗಲಿದೆ.

ಇದನ್ನೂ ಓದಿ: ಅನಂತ್-ರಾಧಿಕಾ ಮದುವೆ ಸಂಭ್ರಮ: ಸಾಮೂಹಿಕ ವಿವಾಹ ಆಯೋಜಿಸಿದ ಅಂಬಾನಿ ಕುಟುಂಬ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.