ಸುಕ್ಮಾ (ಚತ್ತೀಸ್ಗಡ್): ಸುಕ್ಮಾ ಜಿಲ್ಲೆಯ ಕೊಂಟಾ ಬಳಿಯ ಎಟ್ಕಲ್ ಗ್ರಾಮದಲ್ಲಿ ಒಂದೇ ಕುಟುಂಬದ ಐದು ಜನರನ್ನು ಬರ್ಬರವಾಗಿ ಕೊಲೆ ಮಾಡಿರುವ ಪ್ರಕರಣ ನಡೆದಿದೆ. ಪೊಲೀಸರ ಪ್ರಕಾರ, ವಾಮಾಚಾರದ ಶಂಕೆಯಲ್ಲಿ ಒಂದೇ ಕುಟುಂಬದ ಐದು ಜನರ ಕೊಲೆಯಾಗಿದೆ. ಮೃತರಲ್ಲಿ ಮೂವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಸೇರಿದ್ದಾರೆ. ಹತ್ಯೆಯ ನಂತರ ಇಡೀ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಕೊಂಟಾದ ಎಟ್ಕಲ್ ನಲ್ಲಿ ಈ ಕೃತ್ಯ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಈ ಪ್ರಕರಣ ಭಾನುವಾರ (ಇಂದು) ಬೆಳಗ್ಗೆ ನಡೆದಿದೆ. ಕೊಂಟಾ ವ್ಯಾಪ್ತಿಯ ಎಟ್ಕಲ್ ಗ್ರಾಮದ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ವಾಮಾಚಾರದ ಶಂಕೆಯಲ್ಲಿ ಈ ಐವರನ್ನು ಆರೋಪಿಗಳು ದೊಣ್ಣೆಯಿಂದ ಹೊಡೆದು ಕೊಂದಿದ್ದಾರೆ.
''ಭಾನುವಾರ ಬೆಳಗ್ಗೆ ವಾಮಾಚಾರದ ಶಂಕೆಯಲ್ಲಿ ಐವರನ್ನು ದೊಣ್ಣೆಗಳಿಂದ ಹೊಡೆದು ಕೊಂದಿದ್ದಾರೆ. ಎಟ್ಕಲ್ ಗ್ರಾಮದಲ್ಲಿ ಈ ದುಷ್ಕೃತ್ಯ ನಡೆದಿದ್ದು, ಮಾಹಿತಿ ಪಡೆದ ಪೊಲೀಸ್ ತಂಡವು ಸ್ಥಳಕ್ಕೆ ತಲುಪಿ ಮೃತದೇಹಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದೆ. ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ'' ಎಂದು ಸುಕ್ಮಾ ಎಸ್ಪಿ ಕಿರಣ್ ಚವ್ಹಾಣ್ ಮಾಹಿತಿ ನೀಡಿದರು.
ಸುಕ್ಮಾದಿಂದ ಬಸ್ತಾರ್‌ವರೆಗೆ ಪೊಲೀಸ್ ಕಾರ್ಯಾಚರಣೆ: ಈ ಕೊಲೆ ಪ್ರಕರಣದ ನಂತರ ಪೊಲೀಸ್ ಇಲಾಖೆ ಸುಕ್ಮಾದಿಂದ ಬಸ್ತಾರ್‌ವರೆಗೆ ಕಾರ್ಯಾಚರಣೆಗೆ ಇಳಿದಿತ್ತು. ಕೊಂಟಾ ಪೊಲೀಸರು ಮತ್ತು ಸುಕ್ಮಾ ಎಸ್ಪಿ ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದ್ದಾರೆ. ಬಸ್ತಾರ್ ಐಜಿ ಸುಂದರರಾಜ್ ಪಿ ಕೂಡ ಸ್ಥಳೀಯ ಪೊಲೀಸರಿಂದ ಸಂಪೂರ್ಣ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಇದನ್ನೂ ಓದಿ: ಮೀರತ್ನಲ್ಲಿ ಕಟ್ಟಡ ಕುಸಿತ: ಒಂದೇ ಕುಟುಂಬದ 10 ಜನ ಸಾವು, ಐವರಿಗೆ ಗಾಯ - Meerut Building Collapse