ETV Bharat / bharat

ರಾಮೋಜಿ ರಾವ್​ ನಂಬಿದ್ದ ಮೌಲ್ಯಗಳಿಗಾಗಿ ಹೋರಾಡುವುದೇ ಅವರಿಗೆ ನೀಡುವ ನಿಜವಾದ ಗೌರವ: ಎನ್​.ರಾಮ್ - Ramoji Rao Memorial Meet - RAMOJI RAO MEMORIAL MEET

ದಿವಂಗತ ರಾಮೋಜಿ ರಾವ್ ಅವರು ನಂಬಿದ್ದ ತತ್ವಗಳಿಗಾಗಿ ಹೋರಾಡುವುದೇ ನಾವು ಅವರಿಗೆ ನೀಡುವ ನಿಜವಾದ ಗೌರವ ಎಂದು ಹಿರಿಯ ಪತ್ರಕರ್ತ ಎನ್.ರಾಮ್ ಹೇಳಿದರು.

ಹಿರಿಯ ಪತ್ರಕರ್ತ ಮತ್ತು ದಿ ಹಿಂದೂ ಪಬ್ಲಿಷಿಂಗ್ ಗ್ರೂಪ್ ನಿರ್ದೇಶಕ ಎನ್ ರಾಮ್
ಹಿರಿಯ ಪತ್ರಕರ್ತ ಮತ್ತು ದಿ ಹಿಂದೂ ಪಬ್ಲಿಷಿಂಗ್ ಗ್ರೂಪ್ ನಿರ್ದೇಶಕ ಎನ್.ರಾಮ್ (ETV Bharat)
author img

By ETV Bharat Karnataka Team

Published : Jun 27, 2024, 8:05 PM IST

Updated : Jun 27, 2024, 8:19 PM IST

ವಿಜಯವಾಡ: ದಿವಂಗತ ರಾಮೋಜಿ ರಾವ್ ನಂಬಿದ್ದ ಮೌಲ್ಯಗಳಿಗಾಗಿ ದೃಢವಾಗಿ ಹೋರಾಡುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ, ಅತ್ಯುತ್ತಮ ಗೌರವ ಎಂದು ಹಿರಿಯ ಪತ್ರಕರ್ತ ಮತ್ತು ದಿ ಹಿಂದೂ ಪಬ್ಲಿಷಿಂಗ್ ಗ್ರೂಪ್ ನಿರ್ದೇಶಕ ಎನ್.ರಾಮ್ ಅಭಿಪ್ರಾಯಪಟ್ಟರು.

ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ದಿ.ರಾಮೋಜಿ ರಾವ್ ಅವರ ಸ್ಮರಣಾರ್ಥ ಆಂಧ್ರಪ್ರದೇಶ ಸರ್ಕಾರ ವಿಜಯವಾಡದಲ್ಲಿ ಇಂದು ಸಂಜೆ ಆಯೋಜಿಸಿದ್ದ ಸಂಸ್ಮರಣಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಮೋಜಿ ರಾವ್ ಮತ್ತು ಭಾರತದಲ್ಲಿ ಪತ್ರಿಕೋದ್ಯಮಕ್ಕೆ ಅವರು ನೀಡಿದ ಕೊಡುಗೆಯ ಬಗ್ಗೆ ಎನ್‌.ರಾಮ್‌ ಮಾತನಾಡಿದರು. ಮಾಧ್ಯಮ ದಿಗ್ಗಜ ರಾವ್ ಅವರು ತಾವು ನಂಬಿದ ತತ್ವಗಳಿಗಾಗಿ ಹೇಗೆ ಹೋರಾಡಿದರು ಎಂಬುದನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.

"ಭಾರತೀಯ ಪತ್ರಿಕಾ ಇತಿಹಾಸದಲ್ಲಿ ಅತ್ಯುತ್ತಮ ಮತ್ತು ಐತಿಹಾಸಿಕ ವ್ಯಕ್ತಿಯಾದ ರಾಮೋಜಿ ರಾವ್ ನಂಬಿದ್ದ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯದ ಮೌಲ್ಯಗಳಿಗಾಗಿ ಹೋರಾಡದಿದ್ದರೆ ನಾವು ಅವರ ಪರಂಪರೆಯನ್ನು ನಾವು ಗೌರವಿಸಿದಂತಾಗುವುದಿಲ್ಲ. ಹಿರಿಯ ರಾಜಕೀಯ ನಾಯಕ, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೂ ಸಹ ರಾಮೋಜಿಯವರ ಮೌಲ್ಯಗಳನ್ನು ಬೆಂಬಲಿಸಲಿದ್ದಾರೆ ಎಂಬುದು ನನ್ನ ಆಶಯ. ಪತ್ರಕರ್ತರ ಮೇಲೆ ದಬ್ಬಾಳಿಕೆ ನಡೆದಾಗಲೆಲ್ಲ ರಾಮೋಜಿಯವರು ಪತ್ರಿಕಾ ಸ್ವಾತಂತ್ರ್ಯದ ಪರವಾಗಿ ಹೋರಾಡಿದ್ದಾರೆ. ಉದಾಹರಣೆಗೆ, ಭಯೋತ್ಪಾದನಾ ವಿರೋಧಿ ಕಾನೂನುಗಳು ಅಥವಾ ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸುವುದಾಗಿ ಹೇಳಿಕೊಳ್ಳುವ ಕಾನೂನುಗಳಿಂದ ಪತ್ರಕರ್ತರ ಮೇಲೆ ದಬ್ಬಾಳಿಕೆ ನಡೆದಾಗ ಅವರು ಅದನ್ನು ವಿರೋಧಿಸಿದ್ದಾರೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಹ ಈ ಮೌಲ್ಯಗಳನ್ನು ಬೆಂಬಲಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಇದು ರಾಮೋಜಿ ರಾವ್ ಅವರಿಗೆ ನಮ್ಮ ಅತ್ಯುತ್ತಮ ಗೌರವ" ಎಂದು ರಾಜಕಾರಣಿಗಳು, ಚಲನಚಿತ್ರ ತಾರೆಯರು ಮತ್ತು ಪ್ರಮುಖ ಸಾಮಾಜಿಕ ವ್ಯಕ್ತಿಗಳು ಉಪಸ್ಥಿತರಿದ್ದ ಸಭೆ ಉದ್ದೇಶಿಸಿ ಮಾತನಾಡಿದ ಎನ್.ರಾಮ್ ಹೇಳಿದರು.

ರಾಮೋಜಿ ರಾವ್ ಅವರ ಸ್ನೇಹಿತನಾಗಿರುವುದಕ್ಕೆ ಮತ್ತು ಹಲವಾರು ದಶಕಗಳಿಂದ ಅವರನ್ನು ತಿಳಿದಿರುವ ವ್ಯಕ್ತಿಯಾಗಿರುವುದಕ್ಕೆ ಹೆಮ್ಮೆಪಡುತ್ತೇನೆ. 1980ರ ದಶಕದ ಉತ್ತರಾರ್ಧದಲ್ಲಿ ರಾಮೋಜಿ ರಾವ್ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಅಧ್ಯಕ್ಷರಾಗಿದ್ದಾಗ ಮೊದಲ ಬಾರಿಗೆ ಅವರ ಪರಿಚಯವಾಯಿತು ಎಂದು ರಾಮ್ ನೆನಪಿಸಿಕೊಂಡರು.

"ಅದು ಭಾರತೀಯ ರಾಜಕೀಯದಲ್ಲಿ ಚಂಚಲತೆ ಮತ್ತು ಉತ್ಸಾಹದ ಸಮಯವಾಗಿತ್ತು. ತನಿಖಾ ಪತ್ರಿಕೋದ್ಯಮದಿಂದ ಮುಖ್ಯವಾಗಿ ಆಡಳಿತದ ಉನ್ನತ ಮಟ್ಟದಲ್ಲಿನ ಭ್ರಷ್ಟಾಚಾರ ಮತ್ತು ಅಧಿಕಾರದ ದುರುಪಯೋಗದ ವಿಚಾರಗಳು ಬಹಿರಂಗವಾಗಿದ್ದವು. ವರದಿಗಾರಿಕೆಯಲ್ಲಿ ನಾನೂ ಸಹ ಪಾತ್ರವಹಿಸಿದ್ದ, ಮಾಧ್ಯಮಗಳು ಆಕ್ರಮಣಕಾರಿಯಾಗಿ ತನಿಖೆ ನಡೆಸುತ್ತಿದ್ದ ಬೋಫೋರ್ಸ್ ತನಿಖೆ ಭಾರತೀಯ ರಾಜಕೀಯದ ಕೇಂದ್ರಬಿಂದುವಾಗಿತ್ತು. ಜುಲೈ 1988ರಲ್ಲಿ, ರಾಜೀವ್ ಗಾಂಧಿ ಸರ್ಕಾರವು ಮಾನಹಾನಿ ಮಸೂದೆಯನ್ನು 1988 ಅನ್ನು ಪರಿಚಯಿಸಿತು. ಇದು ಅಸ್ತಿತ್ವದಲ್ಲಿರುವ ಕ್ರಿಮಿನಲ್ ಮಾನಹಾನಿ ಕಾನೂನಿಗೆ ಪ್ರಸ್ತಾಪಿಸಲಾದ ತಿದ್ದುಪಡಿಯಾಗಿತ್ತು ಮತ್ತು ಹೆಚ್ಚು ಕಠಿಣ ನಿಬಂಧನೆಗಳನ್ನು ಹೊಂದಿತ್ತು. ಈ ನಿಬಂಧನೆಗಳು ನಿರ್ದಿಷ್ಟವಾಗಿ ತನಿಖಾ ಪತ್ರಕರ್ತರು ಮತ್ತು ಅವರು ಕೆಲಸ ಮಾಡಿದ ಮಾಧ್ಯಮ ಸಂಸ್ಥೆಗಳನ್ನು ಹತ್ತಿಕ್ಕುವ ಉದ್ದೇಶ ಹೊಂದಿದ್ದವು."

"ಈ ಕಾನೂನಿನ ವಿರುದ್ಧ ಪ್ರತಿಭಟನಾ ಚಳುವಳಿಯನ್ನು ಮುನ್ನಡೆಸುವ ಜವಾಬ್ದಾರಿ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಮೇಲಿತ್ತು. ಈ ಸ್ಪೂರ್ತಿದಾಯಕ ಚಳವಳಿಯ ಸಮಯದಲ್ಲಿ ನಾನು ರಾಮೋಜಿ ರಾವ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದೇನೆ. ರಾವ್‌ ಅವರ ನಾಯಕತ್ವದ ಗುಣಗಳು, ಅಪಾಯದಲ್ಲಿರುವ ತತ್ವಗಳ ಬಗ್ಗೆ ದೃಢತೆ ಮತ್ತು ಸಾಧಿಸಬೇಕಾದ ಗುರಿಯ ಬಗ್ಗೆ ನಾನು ಸ್ಪಷ್ಟತೆಯನ್ನು ನೋಡಿದ್ದೇನೆ. ಮಾನನಷ್ಟ ಮಸೂದೆಯನ್ನು ಬೇಷರತ್ತಾಗಿ ಹಿಂತೆಗೆದುಕೊಳ್ಳುವುದು ಆ ಚಳವಳಿಯ ಗುರಿಯಾಗಿತ್ತು. ಅಲ್ಲದೆ, ಸರ್ಕಾರ ತನ್ನ ಮುಖ ಉಳಿಸಿಕೊಂಡು ಮಸೂದೆಯನ್ನು ಹಿಂತೆಗೆದುಕೊಳ್ಳುವಂತೆ ಮಾಡುವುದು ಅಂದಿನ ಬುದ್ಧಿವಂತ ರಾಜತಾಂತ್ರಿಕತೆಯಾಗಿತ್ತು" ಎಂದು ರಾಮ್ ನುಡಿದರು.

ಈನಾಡು ಸಂಸ್ಥೆಯ ಸ್ಥಾಪನೆಯನ್ನು ಪರಿವರ್ತನೆಯ ಕ್ಷಣ ಎಂದು ಅವರು ಇದೇ ಸಂದರ್ಭದಲ್ಲಿ ಬಣ್ಣಿಸಿದರು. "ಆಸ್ಟ್ರೇಲಿಯಾದ ರಾಜಕೀಯ ವಿಜ್ಞಾನಿ ರಾಬಿನ್ ಜೆಫ್ರಿ ತಮ್ಮ 'ಇಂಡಿಯಾಸ್ ನ್ಯೂಸ್ ಪೇಪರ್ ರೆವಲ್ಯೂಷನ್' ಪುಸ್ತಕದಲ್ಲಿ ರಾಮೋಜಿ ರಾವ್ ಮತ್ತು ಈನಾಡು ಸಂಸ್ಥೆಯ ಪ್ರವರ್ತಕ ಗುಣಗಳು, ಮಾರ್ಕೆಟಿಂಗ್ ವಿಧಾನಗಳು, ಜಿಲ್ಲಾ ಆವೃತ್ತಿಗಳನ್ನು ಪ್ರಕಟಿಸುವುದು, ಸ್ಥಳೀಯ ಸುದ್ದಿ ಮತ್ತು ಜನರಿಗೆ ಹತ್ತಿರವಾದ ಸಮಸ್ಯೆಗಳನ್ನು ವರದಿ ಮಾಡುವುದು, ವಿಶ್ವಾಸಾರ್ಹತೆಯ ಅನ್ವೇಷಣೆ ಮತ್ತು ಆಸಕ್ತಿದಾಯಕ ಮತ್ತು ಪ್ರಮುಖ ಕಥೆಗಳನ್ನು ಪೂರೈಸುವ ಬಗ್ಗೆ ಸಾಕಷ್ಟು ಬರೆದಿದ್ದಾರೆ" ಎಂದು ರಾಮ್ ಉಲ್ಲೇಖಿಸಿದರು.

ಇದನ್ನೂ ಓದಿ: 'ಅಕ್ಷರ ಯೋಧ'ನಿಗೆ ಗೌರವ ನಮನ; ಆಂಧ್ರ ಸರ್ಕಾರದಿಂದ ರಾಮೋಜಿ ರಾವ್ ಪುಣ್ಯಸ್ಮರಣೆ - LIVE - Ramoji Rao memorial service

Last Updated : Jun 27, 2024, 8:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.