ಸರನ್ (ಬಿಹಾರ): ಬಿಹಾರದ ಸರನ್‌ನಲ್ಲಿ ವೈದ್ಯೆಯೊಬ್ಬರು ವಾರ್ಡ್ ಕೌನ್ಸಿಲರ್ ಆಗಿರುವ ತನ್ನ ಪ್ರಿಯಕರ ಮದುವೆಯಾಗುವುದಾಗಿ ವಂಚಿಸಿದ್ದಾರೆ ಎಂದು ಆರೋಪಿಸಿ ವಿಚಿತ್ರ ಶಿಕ್ಷೆಯನ್ನು ನೀಡಿದ್ದಾರೆ. ವೈದ್ಯೆಗೆ ಪ್ರಿಯಕರ ಬಹಳದಿನಗಳಿಂದಲೂ ಮದುವೆಯಾಗುವುದಾಗಿ ಭರವಸೆ ನೀಡುತ್ತಲೇ ಬಂದಿದ್ದರು. ಆದರೆ ಇಂದು ನಾನು ನಿನ್ನನ್ನು ಮದುವೆಯಾಗುವುದಿಲ್ಲ ಎಂದು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ವೈದ್ಯೆ ತನ್ನ ಪ್ರಿಯಕರನ ಖಾಸಗಿ ಅಂಗವನ್ನು ಕತ್ತರಿಸಿದ್ದಾರೆ.
ಆರೋಪಿಯ ಬಂಧನ: ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು. ನಾನು ನಿನಗಾಗಿ ನನ್ನ ಮನೆ ಸೇರಿದಂತೆ ಎಲ್ಲವನ್ನೂ ಬಿಟ್ಟೆ. ಆದ್ರೆ ನೀನು ಮಾತ್ರ ಸಿಗಲಿಲ್ಲ ಎಂದು ವೈದ್ಯೆ ಹೇಳಿದರು. ಆರೋಪಿ ವೈದ್ಯೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಮಧುರಾ ಪೊಲೀಸ್ ಠಾಣೆಯ ಪೊಲೀಸರು ಮಹಿಳಾ ವೈದ್ಯೆಯ ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆ ಆ ಪ್ರದೇಶದಲ್ಲಿ ಸಂಚಲನ ಮೂಡಿಸಿದೆ. ಪ್ರತಿ ಗಲ್ಲಿಗಲ್ಲಿಯಲ್ಲಿಯೂ ಈ ಬಗ್ಗೆ ಚರ್ಚೆಯಾಗುತ್ತಿದೆ.
ಪಿಎಂಸಿಹೆಚ್ ಶಿಫಾರಸು: ಸರನ್ ಜಿಲ್ಲೆಯ ಮಧುರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಾಹಿತಿ ಪಡೆದ ಮಧುರಾ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಗಾಯಗೊಂಡ ವಾರ್ಡ್ ಕೌನ್ಸಿಲರ್ ರಕ್ತದ ಮಡುವಿನಲ್ಲಿ ಹಾಸಿಗೆಯ ಮೇಲೆ ಮಲಗಿದ್ದರು. ಪೊಲೀಸರು ಗಾಯಗೊಂಡ ವಾರ್ಡ್ ಕೌನ್ಸಿಲರ್ ಅನ್ನು ಮರ್ಹೌರಾದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಅಲ್ಲಿಂದ ಚಾಪ್ರಾಕ್ಕೆ ಕಳುಹಿಸಿದರು. ಪರೀಕ್ಷೆಯ ನಂತರ, ಚಪ್ರಾದಲ್ಲಿನ ವೈದ್ಯರು ವಾರ್ಡ್ ಕೌನ್ಸಿಲರ್ ಅನ್ನು ಉತ್ತಮ ಚಿಕಿತ್ಸೆಗಾಗಿ PMCH ಗೆ ಶಿಫಾರಸು ಮಾಡಿದರು.
ಏನಿದು ವಿಷಯ: ವಾರ್ಡ್ ಕೌನ್ಸಿಲರ್ ಮಹಿಳಾ ವೈದ್ಯೆಯೊಂದಿಗೆ ಬಹಳ ದಿನಗಳಿಂದ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ವೈದ್ಯೆ ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದರೂ ಪಾಲಿಕೆ ಸದಸ್ಯ ಅದನ್ನು ಮುಂದೂಡುತ್ತಿದ್ದರು. ಪ್ರಿಯಕರನ ನಡೆ ವೈದ್ಯೆಗೆ ಕೋಪ ಬರುವಂತೆ ಮಾಡಿದೆ. ಜುಲೈ 1ರ ಸೋಮವಾರದಂದು ರಿಜಿಸ್ಟರ್ ಮ್ಯಾರೇಜ್ ನಡೆಯಬೇಕಾಗಿತ್ತು. ಇಬ್ಬರೂ ಮತ್ತೊಮ್ಮೆ ಭೇಟಿಯಾಗಿದ್ದರು. ಆದರೆ ಈ ಬಾರಿಯೂ ಕೌನ್ಸಿಲರ್ ಮದುವೆಯ ಪ್ರಸ್ತಾಪವನ್ನು ನಿರಾಕರಿಸಲು ಪ್ರಾರಂಭಿಸಿದರು. ಇದರಿಂದ ಸಿಟ್ಟಿಗೆದ್ದ ವೈದ್ಯೆ ತನ್ನ ಪ್ರಿಯಕರನ ಖಾಸಗಿ ಅಂಗವನ್ನೇ ಕತ್ತರಿಸಿದ್ದಾರೆ.
ಪೊಲೀಸರಿಗೆ ಮಾಹಿತಿ: ಘಟನೆ ಕುರಿತು ಸ್ಥಳೀಯರು ಮಧುರಾ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಸ್ಥಳೀಯರು ಮಾತನಾಡಿ, ಮಹಿಳಾ ವೈದ್ಯೆಯ ವಯಸ್ಸು ಸುಮಾರು 25 ವರ್ಷ ಇರಬಹುದು. ಆಕೆ ಹಾಜಿಪುರದ ನಿವಾಸಿ. ಬಹಳ ದಿನಗಳಿಂದ ಇಲ್ಲಿ ವೈದಕೀಯ ಅಭ್ಯಾಸ ಮಾಡುತ್ತಿದ್ದರು. ವಾರ್ಡ್ ಕೌನ್ಸಿಲರ್ ಕೂಡ ಅವಿವಾಹಿತರು. ಇಬ್ಬರ ನಡುವೆ ಬಹಳ ದಿನಗಳಿಂದ ಪ್ರೇಮ ಪ್ರಕರಣ ನಡೆಯುತ್ತಿತ್ತು ಎಂದು ಮಾಹಿತಿ ನೀಡಿದ್ದಾರೆ.
ಓದಿ: ಲೈಂಗಿಕ ದೌರ್ಜನ್ಯ ಪ್ರಕರಣ: ಸೂರಜ್ ರೇವಣ್ಣ ಕಸ್ಟಡಿ ಅವಧಿ ವಿಸ್ತರಣೆ - Suraj Revanna Case