ETV Bharat / bharat

'ಭಾರತದ ಹಸಿರು ಕ್ರಾಂತಿಯ ಪಿತಾಮಹ' ಸ್ವಾಮಿನಾಥನ್ ಬಗ್ಗೆ ನಿಮಗೆ ಗೊತ್ತಿರಬೇಕಾದ ಮಾಹಿತಿ - ಸ್ವಾಮಿನಾಥನ್

ಭಾರತದ ಹಸಿರು ಕ್ರಾಂತಿಯ ಪಿತಾಮಹ ಡಾ.ಎಂ.ಎಸ್​.ಸ್ವಾಮಿನಾಥನ್ ಅವರಿಗೆ ಕೇಂದ್ರ ಸರ್ಕಾರ 'ಭಾರತ ರತ್ನ' ಪ್ರಶಸ್ತಿ ನೀಡಿ ಗೌರವಿಸಿದೆ.

Dr MS Swaminathan to be Feted with Bharat Ratna, Know all about 'Father of Agricultural Revolution'

author img

By ETV Bharat Karnataka Team

Published : Feb 9, 2024, 3:22 PM IST

ನವದೆಹಲಿ: ಭಾರತದ ಕೃಷಿ ವಿಜ್ಞಾನಿ, ಹಸಿರು ಕ್ರಾಂತಿಯ ಪಿತಾಮಹ ಡಾ.ಎಂ.ಎಸ್.ಸ್ವಾಮಿನಾಥನ್ ಅವರಿಗೆ ಕೇಂದ್ರ ಸರ್ಕಾರವು 'ಭಾರತ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪ್ರಕಟಿಸಿದ್ದಾರೆ.

"ಕೃಷಿ ಮತ್ತು ರೈತರ ಕಲ್ಯಾಣಕ್ಕಾಗಿ ರಾಷ್ಟ್ರಕ್ಕೆ ನೀಡಿದ ಸ್ಮರಣೀಯ ಕೊಡುಗೆಗಳನ್ನು ಗುರುತಿಸಿ ಭಾರತ ಸರ್ಕಾರ ಡಾ.ಎಂ.ಎಸ್.ಸ್ವಾಮಿನಾಥನ್ ಜಿ ಅವರಿಗೆ ಭಾರತ ರತ್ನ ನೀಡುತ್ತಿರುವುದು ಅಪಾರ ಸಂತೋಷದ ವಿಷಯವಾಗಿದೆ. ಸವಾಲಿನ ಸಮಯದಲ್ಲಿ ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಲು ಭಾರತಕ್ಕೆ ಸಹಾಯ ಮಾಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಮತ್ತು ಭಾರತೀಯ ಕೃಷಿಯನ್ನು ಆಧುನೀಕರಿಸುವ ನಿಟ್ಟಿನಲ್ಲಿ ಅತ್ಯುತ್ತಮ ಪ್ರಯತ್ನಗಳನ್ನು ಮಾಡಿದ್ದಾರೆ" ಎಂದು ಪ್ರಧಾನಿ ಮೋದಿ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಎಕ್ಸ್‌​ನಲ್ಲಿ ಪೋಸ್ಟ್ ಮಾಡಿದ್ದಾರೆ.

"ಹೊಸತನದ ಹರಿಕಾರರಾಗಿ ಮತ್ತು ಮಾರ್ಗದರ್ಶಕರಾಗಿ ಹಲವಾರು ವಿದ್ಯಾರ್ಥಿಗಳಲ್ಲಿ ಕಲಿಕೆ ಮತ್ತು ಸಂಶೋಧನೆಯನ್ನು ಪ್ರೋತ್ಸಾಹಿಸಿದ ಅವರ ಅಮೂಲ್ಯ ಕೆಲಸವನ್ನು ನಾವು ಗುರುತಿಸುತ್ತೇವೆ. ಡಾ.ಸ್ವಾಮಿನಾಥನ್ ಅವರ ದೂರದೃಷ್ಟಿಯ ನಾಯಕತ್ವವು ಭಾರತೀಯ ಕೃಷಿ ವಲಯವನ್ನು ಪರಿವರ್ತಿಸಿದೆ ಮಾತ್ರವಲ್ಲದೆ ರಾಷ್ಟ್ರದ ಆಹಾರ ಭದ್ರತೆ ಮತ್ತು ಸಮೃದ್ಧಿಯನ್ನು ಖಾತ್ರಿಪಡಿಸಿದೆ. ನನಗೆ ತುಂಬಾ ನಿಕಟವಾಗಿ ತಿಳಿದಿರುವ ವ್ಯಕ್ತಿಯಾಗಿದ್ದ ಅವರ ಆಲೋಚನೆಗಳನ್ನು ನಾನು ಯಾವಾಗಲೂ ಗೌರವಿಸುತ್ತೇನೆ" ಎಂದು ಪ್ರಧಾನಿ ಹೇಳಿದರು.

ಭಾರತದ ಕೃಷಿ ಕ್ರಾಂತಿಯ ಪಿತಾಮಹ ಎಂದೂ ಕರೆಯಲ್ಪಡುವ ಡಾ.ಎಂ.ಎಸ್.ಸ್ವಾಮಿನಾಥನ್ ಅವರು ಹೆಸರಾಂತ ಕೃಷಿ ವಿಜ್ಞಾನಿಯಾಗಿದ್ದರು. ದೇಶದಲ್ಲಿ ಆಹಾರದ ಕೊರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಅವರು ಕೃಷಿಯ ಬಗ್ಗೆ ಅಧ್ಯಯನ ನಡೆಸಿದರು.

ಶಸ್ತ್ರಚಿಕಿತ್ಸಾ ತಜ್ಞನೊಬ್ಬನ ಪುತ್ರರಾದ ಸ್ವಾಮಿನಾಥನ್ ಭಾರತದಲ್ಲಿ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ತಳಿಶಾಸ್ತ್ರದಲ್ಲಿ (geneticist) ಶಿಕ್ಷಣ ಪಡೆದರು. ಅವರು ಮೆಕ್ಸಿಕನ್ ಅರೆ ಕುಬ್ಜ ಗೋಧಿ ಸಸ್ಯಗಳನ್ನು ಭಾರತದ ಭೂಮಿಯಲ್ಲಿ ಬಿತ್ತಿ ಅತ್ಯಧಿಕ ಇಳುವರಿ ತೆಗೆಯಲು ಶ್ರಮಿಸಿದರು ಮತ್ತು ಆಧುನಿಕ ಕೃಷಿ ವಿಧಾನಗಳನ್ನು ಹೆಚ್ಚಾಗಿ ಅಳವಡಿಸಿಕೊಳ್ಳುವಲ್ಲಿ ಕೆಲಸ ಮಾಡಿದರು.

1972 ರಿಂದ 1979 ರವರೆಗೆ ಸ್ವಾಮಿನಾಥನ್ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಅವರು 1979 ರಿಂದ 1980 ರವರೆಗೆ ಭಾರತೀಯ ಕೃಷಿ ಮತ್ತು ನೀರಾವರಿ ಸಚಿವಾಲಯದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅವರು ಅಂತರರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆಯ ಮಹಾನಿರ್ದೇಶಕರಾಗಿ (1982–88) ಮತ್ತು ಪ್ರಕೃತಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯ ಅಂತರರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷರಾಗಿಯೂ (1984–90) ಸೇವೆ ಸಲ್ಲಿಸಿದರು.

ಎಂ.ಎಸ್.ಸ್ವಾಮಿನಾಥನ್ ಅವರನ್ನು ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂದು ಪರಿಗಣಿಸಲಾಗಿದೆ. ಭಾರತದಲ್ಲಿ ಗೋಧಿ ಉತ್ಪಾದನೆಯಲ್ಲಿ ಭಾರಿ ಹೆಚ್ಚಳಕ್ಕೆ ಕಾರಣವಾದ ಉತ್ಕೃಷ್ಟ ತಳಿಯ ಗೋಧಿಯನ್ನು ಗುರುತಿಸಿದ ಮೊದಲ ವ್ಯಕ್ತಿ ಅವರಾಗಿದ್ದಾರೆ. ಸ್ವಾಮಿನಾಥನ್ ಅವರಿಗೆ ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಅವುಗಳಲ್ಲಿ ಪದ್ಮಶ್ರೀ (1967), ಪದ್ಮಭೂಷಣ (1972), ಪದ್ಮವಿಭೂಷಣ (1989), ಮ್ಯಾಗ್ಸೆಸೆ ಪ್ರಶಸ್ತಿ (1971) ಮತ್ತು ವಿಶ್ವ ಆಹಾರ ಪ್ರಶಸ್ತಿ (1987) ಮುಖ್ಯವಾಗಿವೆ. ಸ್ವಾಮಿನಾಥನ್ ಅವರು ಸೆಪ್ಟೆಂಬರ್ 28, 2023 ರಂದು ತಮ್ಮ 98 ನೇ ವಯಸ್ಸಿನಲ್ಲಿ ಚೆನ್ನೈನ ಮನೆಯಲ್ಲಿ ನಿಧನರಾದರು.

ಇದನ್ನೂ ಓದಿ: ಸ್ವಾಮಿನಾಥನ್​, ಮಾಜಿ ಪ್ರಧಾನಿಗಳಾದ ನರಸಿಂಹರಾವ್, ಚರಣ್​​​​ ಸಿಂಗ್​ಗೆ ಭಾರತ ರತ್ನದ ಗರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.