ETV Bharat / bharat

ಫಡ್ನವೀಸ್​ರಿಗೆ ಶಿವಾಜಿ ಮಹಾರಾಜರ ಇತಿಹಾಸ ಗೊತ್ತಿಲ್ಲ: ಬೇಕಾದರೆ ಗೈಡ್​​ ಒಬ್ಬರನ್ನು ಕಳುಹಿಸುವೆ, ರಾವತ್ ವ್ಯಂಗ್ಯ - MahaYuti and MVA war of words - MAHAYUTI AND MVA WAR OF WORDS

ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸ ಗೊತ್ತಿಲ್ಲ ಎಂದು ಸಂಸದ ಸಂಜಯ್ ರಾವತ್ ವಾಗ್ದಾಳಿ ನಡೆಸಿದ್ದಾರೆ.

ದೇವೇಂದ್ರ ಫಡ್ನವೀಸ್, ಸಂಜಯ್ ರಾವತ್
ದೇವೇಂದ್ರ ಫಡ್ನವೀಸ್, ಸಂಜಯ್ ರಾವತ್ (IANS)
author img

By ETV Bharat Karnataka Team

Published : Sep 2, 2024, 5:01 PM IST

ಮುಂಬೈ: ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಛತ್ರಪತಿ ಶಿವಾಜಿ ಮಹಾರಾಜರು ಸೂರತ್​ ಮೇಲೆ ನಡೆಸಿದ್ದ ದಾಳಿಯ ಇತಿಹಾಸ ಗೊತ್ತಿಲ್ಲ ಎಂದು ವ್ಯಂಗ್ಯವಾಡಿರುವ ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್, ಬೇಕಾದರೆ ಅವರಿಗೆ ಇತಿಹಾಸ ಕಲಿಸಲು ಟೀಚರ್​ ಒಬ್ಬರನ್ನು ಕಳುಹಿಸುವುದಾಗಿ ಹೇಳಿದ್ದಾರೆ.

ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ತಮ್ಮ 'ಡಿಸ್ಕವರಿ ಆಫ್ ಇಂಡಿಯಾ' (1946) ಕೃತಿಯಲ್ಲಿ ಛತ್ರಪತಿ ಶಿವಾಜಿಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಕ್ಕಾಗಿ ಅವರು ಭಾನುವಾರ ದೇವೇಂದ್ರ ಫಡ್ನವೀಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಅಹ್ಮದ್ ನಗರ ಕೋಟೆಯ (1942-1945) ಜೈಲಿನಲ್ಲಿದ್ದಾಗ ಬರೆದ ತಮ್ಮ ಪ್ರಬಂಧದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅವರ ಉಲ್ಲೇಖಕ್ಕಾಗಿ ನೆಹರು ಆವಾಗಲೇ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ರಾವತ್ ತಿಳಿಸಿದರು.

"ಕೃತಿಯನ್ನು ಬರೆದ ಸಂದರ್ಭದಲ್ಲಿ ನೆಹರೂರವರು ಜೈಲಿನಲ್ಲಿ ಬಂದಿಯಾಗಿದ್ದರು. ತಮ್ಮ ಬಳಿ ಸಾಕಷ್ಟು ಮಾಹಿತಿಗಳು ಲಭ್ಯವಿಲ್ಲದ ಕಾರಣದಿಂದ ಛತ್ರಪತಿಯ ಬಗ್ಗೆ ಹಾಗೆ ಬರೆದಿದ್ದೆ ಎಂಬುದನ್ನು ಅವರು ಒಪ್ಪಿಕೊಂಡಿದ್ದರು. ಅಲ್ಲದೇ ಆ ಬಗ್ಗೆ ಕ್ಷಮೆಯಾಚಿಸಿದ ಅವರು ಕೃತಿಯ ಮುಂದಿನ ಆವೃತ್ತಿಯಲ್ಲಿ ಅದನ್ನು ಸರಿಪಡಿಸಿದ್ದರು. ಆದರೆ, ಇದು 70 ವರ್ಷಗಳ ಹಿಂದಿನ ವಿಷಯ. ಅಪ್ರಸ್ತುತ ವಿಷಯಗಳ ಬಗ್ಗೆ ಮಾತನಾಡಲು ಬಿಜೆಪಿ ಇತಿಹಾಸವನ್ನು ಕೆದಕುತ್ತಿದೆ. ಪದೇ ಪದೆ ಇತಿಹಾಸದ ಪುಸ್ತಕಗಳನ್ನು ಕೆದಕುವ ಬದಲು ಸ್ವತಃ ಬಿಜೆಪಿ ಛತ್ರಪತಿ ಶಿವಾಜಿ ಮಹಾರಾಜರಿಗೆ ಅದೆಷ್ಟು ಬಾರಿ ಅವಮಾನ ಮಾಡಿದೆ ಎಂಬುದರ ಬಗ್ಗೆ ಮಾತನಾಡಲಿ" ಎಂದು ರಾವತ್ ಸವಾಲು ಹಾಕಿದರು.

ಕರಾವಳಿ ಸಿಂಧುದುರ್ಗದ ರಾಜ್ ಕೋಟ್ ಕೋಟೆಯಲ್ಲಿ ನಿರ್ಮಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ 28 ಅಡಿ ಎತ್ತರದ ಪ್ರತಿಮೆ ಕುಸಿದ ಘಟನೆ ಒಂದು ವಾರದ ಹಿಂದೆ ಜರುಗಿದೆ. ಈ ಹಿನ್ನೆಲೆಯಲ್ಲಿ ಆಡಳಿತಾರೂಢ ಮಹಾಯುತಿ ಮತ್ತು ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ (ಎಂವಿಎ) ನಡುವೆ ಈ ವಿಷಯದಲ್ಲಿ ವಾಕ್ಸಮರ ಜೋರಾಗಿದೆ.

ವಿಧಾನಸಭಾ ಚುನಾವಣೆಗೂ ಮುನ್ನ ಮಹಾಯುತಿ ಸರ್ಕಾರದ ಡ್ಯಾಮೇಜ್ ಕಂಟ್ರೋಲ್ ಮಾಡುವ ನಿಟ್ಟಿನಲ್ಲಿ, ಪ್ರತಿಮೆ ಉರುಳಿ ಬಿದ್ದ ಎರಡು ದಿನಗಳ ನಂತರ ಪ್ರಧಾನಿ ನರೇಂದ್ರ ಮೋದಿ ಘಟನೆಯ ಬಗ್ಗೆ ಕ್ಷಮೆ ಯಾಚಿಸಿದ್ದಾರೆ. ಏತನ್ಮಧ್ಯೆ ಪ್ರತಿಮೆ ಉರುಳಿ ಬಿದ್ದ ಘಟನೆಯನ್ನು ಖಂಡಿಸಿ ಮಹಾ ವಿಕಾಸ್ ಅಘಾಡಿ ಸೆಪ್ಟೆಂಬರ್ 1 ರಿಂದ ರಾಜ್ಯಾದ್ಯಂತ ಪ್ರತಿಭಟನೆಯನ್ನು ಆರಂಭಿಸಿದೆ.

ಫಡ್ನವೀಸ್ ಅವರನ್ನು 'ಔರಂಗಜೇಬ್ ಅಭಿಮಾನಿ ಸಂಘದ ಅಧ್ಯಕ್ಷ' ಎಂದು ಬಣ್ಣಿಸಿದ ರಾವತ್, ಹಿಂದೂ-ಮುಸ್ಲಿಂ, ಭಾರತ-ಪಾಕಿಸ್ತಾನ ವಿಚಾರಗಳನ್ನು ನಿರಂತರವಾಗಿ ಪ್ರಸ್ತಾಪಿಸುವ ಮೂಲಕ ಮೂಲಕ ಗಲಭೆಗಳನ್ನು ಪ್ರಚೋದಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಈಗಾಗಲೇ ಮಾನಸಿಕವಾಗಿ ಚುನಾವಣೆಯಲ್ಲಿ ಸೋತಿರುವ ಬಿಜೆಪಿ ಇಂಥ ವಿಷಯಗಳಿಲ್ಲದೆ ಚುನಾವಣೆಯನ್ನು ಎದುರಿಸಲು ಸಾಧ್ಯವಿಲ್ಲ ಎಂದು ಆರೋಪಿಸಿದರು.

ಇದನ್ನೂ ಓದಿ : 6,900 ಸಿಬಿಐ ಪ್ರಕರಣಗಳು ವಿಚಾರಣೆಗೆ ಬಾಕಿ: 361 ಕೇಸ್ 20 ವರ್ಷ ಹಳೆಯವು! - CBI Cases Pending Trial

ETV Bharat Logo

Copyright © 2024 Ushodaya Enterprises Pvt. Ltd., All Rights Reserved.