ETV Bharat / bharat

ಚುನಾವಣಾ ಪೂರ್ವ ಮತ್ತು ಮತದಾನೋತ್ತರ ಸಮೀಕ್ಷೆಗಳ ನಡುವಣ ವ್ಯತ್ಯಾಸಗಳೇನು?: ಇವುಗಳ ಮಾನದಂಡಗಳೇನು? - Exit Polls and Opinion Polls - EXIT POLLS AND OPINION POLLS

ಚುನಾವಣಾ ಸಮಯದಲ್ಲಿ ಮತದಾರರ ವರ್ತನೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಅಭಿಪ್ರಾಯ ಸಂಗ್ರಹಣೆಗಳು ಅಥವಾ ಚುನಾವಣಾ ಪೂರ್ವ ಸಮೀಕ್ಷೆಗಳು ಹಾಗೂ ಮತದಾನೋತ್ತರ ಸಮೀಕ್ಷೆಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಆದರೆ ಎಲ್ಲ ಸಮೀಕ್ಷೆಗಳು ನಿಖರವಾದ ಫಲಿತಾಂಶವನ್ನು ನೀಡುತ್ತವೆ ಎಂದು ಹೇಳಲು ಆಗುವುದಿಲ್ಲ.

Explained | Exit Polls and Opinion Polls: Differences Between Them
ಚುನಾವಣಾ ಪೂರ್ವ ಮತ್ತು ಮತದಾನೋತ್ತರ ಸಮೀಕ್ಷೆಗಳ ನಡುವಣ ವ್ಯತ್ಯಾಸವೇನು?: ಇವುಗಳ ಮಾನದಂಡಗಳೇನು? (ETV Bharat)
author img

By ETV Bharat Karnataka Team

Published : May 29, 2024, 10:43 PM IST

ಹೈದರಾಬಾದ್: ಎಕ್ಸಿಟ್ ಪೋಲ್‌.. ಇದು ಎಕ್ಸಾಕ್ಟ್​ ಪೋಲ್​ ಅಲ್ಲ. ಅಂತಿಮವಾಗಿ ಫಲಿತಾಂಶದ ದಿನವೇ ವಾಸ್ತವ ಅಂಕಿ- ಅಂಶಗಳು ಹೊರ ಬೀಳುತ್ತವೆ. ಆಗಲೇ ಅದಕ್ಕೆ ನಿಖರವಾದ ಉತ್ತರ ಸಿಗುತ್ತದೆ. ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳು ಅಭಿಪ್ರಾಯ ಸಂಗ್ರಹಗಳಾಗಿವೆಯಷ್ಟೇ. ಮತದಾರರ ನಡವಳಿಕೆಯನ್ನು ಅರ್ಥಮಾಡಿಕೊಳ್ಳುವ ಮತ್ತು ಚುನಾವಣಾ ಫಲಿತಾಂಶಗಳನ್ನು ಊಹಿಸುವ ನಿರ್ಣಾಯಕ ಭಾಗಗಳಾಗಿವೆ. ಅಭಿಪ್ರಾಯ ಸಂಗ್ರಹಗಳು ಮತ್ತು ಸಮೀಕ್ಷೆಗಳು ಮತದಾರರ ಆಯ್ಕೆಯ ಸೂಚಕಗಳಾಗಿದ್ದರೂ, ಅವು ಒಂದೇ ಆಗಿರುವುದಿಲ್ಲ ಎಂಬುದನ್ನು ನಾವು ನೀವೆಲ್ಲ ಅರ್ಥ ಮಾಡಿಕೊಳ್ಳಬೇಕು.

ವಿವಿಧ ಸುದ್ದಿ ಸಂಸ್ಥೆಗಳು ಮತ್ತು ಕಂಪನಿಗಳು ಮತದಾನೋತ್ತರ ಸಮೀಕ್ಷೆಗಳ ಮೂಲಕ ಮುನ್ನೋಟ ಇಡುವುದರಿಂದ ಎಕ್ಸಿಟ್ ಪೋಲ್‌ಗಳ ಬಗ್ಗೆ ಜನರು ತೀವ್ರ ಕುತೂಹಲ ಹೊಂದಿರುತ್ತಾರೆ. ಆದಾಗ್ಯೂ, ಗಮನಿಸಬೇಕಾದ ಅಂಶ ಎಂದರೆ ವಾಸ್ತವ ಹಾಗೂ ಅಂತಿಮ ಫಲಿತಾಂಶದೊಂದಿಗೆ ಮಾತ್ರವೇ ಯಾರು ಎಷ್ಟು ಸ್ಥಾನ ಗಳಿಸಿದರು ಎಂಬುದನ್ನು ಹೇಳಬಹುದಾಗಿದೆ.

ಅಭಿಪ್ರಾಯ ಸಂಗ್ರಹಣೆ ಮತ್ತು ಚುನಾವಣೋತ್ತರ ಸಮೀಕ್ಷೆಯ ನಡುವಿನ ಪ್ರಾಥಮಿಕ ವ್ಯತ್ಯಾಸವೆಂದರೆ, ಮತದಾರನು ತನ್ನ ಮತವನ್ನು ಚಲಾಯಿಸುವ ಮೊದಲು ಸಂಗ್ರಹಿಸುವ ಅಭಿಪ್ರಾಯಗಳನ್ನು ಚುನಾವಣಾ ಪೂರ್ವ ಸಮೀಕ್ಷೆ ಅಥವಾ ಜನಮತಗಣನೆ ಎನ್ನಲಾಗುತ್ತದೆ. ಇಲ್ಲಿ ಈ ಬಾರಿ ಯಾರಿಗೆ ಮತ ಹಾಕುತ್ತೀರಿ ಎಂಬುದು ಕಾಮನ್​ ಪ್ರಶ್ನೆಯಾಗಿರುತ್ತೆ. ಇನ್ನೊಂದು ಮತದಾರ ತನ್ನ ಮತ ಚಲಾಯಿಸಿದ ಬಳಿಕ ನೀಡುವ ಉತ್ತರ ಅಥವಾ ಆತನಿಂದ ಪಡೆಯುವ ಉತ್ತರವನ್ನೇ ಸಂಗ್ರಹಿಸುವ ದಾಖಲಿಸುವುದಕ್ಕೆ ಮತದಾನೋತ್ತರ ಸಮೀಕ್ಷೆ ಎನ್ನಲಾಗುತ್ತದೆ.

OPINION POLLS: ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಅಭಿಪ್ರಾಯ ಸಂಗ್ರಹ ಎಂದೂ ಕರೆಯಲಾಗುತ್ತದೆ. ಚುನಾವಣೆಯ ಹಿಂದಿನ ದಿನ, ವಾರಗಳು ಅಥವಾ ತಿಂಗಳುಗಳ ಮುಂಚೆ ಇದನ್ನು ಕೈಗೊಳ್ಳಲಾಗುತ್ತದೆ. ಈ ಸಮೀಕ್ಷೆಗಳು ಜನ ಸಾಮಾನ್ಯರು ಅಥವಾ ಕೆಲವು ಮತದಾರರಿಂದ ಅಭಿಪ್ರಾಯ ಸಂಗ್ರಹಿಸಿ, ಯಾರು ಅಥವಾ ಯಾವ ಪಕ್ಷ, ಯಾವ ವ್ಯಕ್ತಿ ಪರ ಜನರ ಒಲವು ಇದೆ ಎಂಬ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.

ಸಮಯ: ಚುನಾವಣೆಯ ಮುಂಚೆಯೇ, ಮತದಾರರು ತಮ್ಮ ಆಲೋಚನೆಗಳು ಮತ್ತು ಉದ್ದೇಶಗಳನ್ನು ಹೇಳಲು ಚುನಾವಣಾ ಪೂರ್ವದ ಸಮೀಕ್ಷೆಗಳಲ್ಲಿ ಅವಕಾಶ ನೀಡಲಾಗುತ್ತದೆ. ಇದು ರಾಜಕೀಯ ಪ್ರಚಾರದ ಬದಲಾವಣೆಯ ಡೈನಾಮಿಕ್ಸ್‌ನ ಒಳನೋಟಗಳನ್ನು ಒಳಗೊಂಡಿರುತ್ತದೆ.

ಮಾದರಿಗಳ ಆಯ್ಕೆ: ಮತದಾರರ ಆದ್ಯತೆಗಳ ಅರ್ಥವನ್ನು ಪಡೆಯಲು ಅಭಿಪ್ರಾಯ ಸಂಗ್ರಹಣೆಯಲ್ಲಿ ನೋಂದಾಯಿತ ಮತದಾರರ ಯಾದೃಚ್ಛಿಕ ಮಾದರಿಯನ್ನು ಆಗಾಗ್ಗೆ ಬಳಸಲಾಗುತ್ತದೆ.

ಪ್ರಶ್ನಿಸುವುದು: ಮತದಾನದ ಯೋಜನೆಗಳು, ಆದ್ಯತೆಯ ರಾಜಕೀಯ ಪಕ್ಷಗಳು ಮತ್ತು ಸಾಂದರ್ಭಿಕವಾಗಿ, ನೀತಿ ವಿಷಯಗಳ ವ್ಯಾಪ್ತಿಯ ಬಗ್ಗೆ ಜನರನ್ನು ಪ್ರಶ್ನಿಸಿ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತದೆ. ಈ ಸಮೀಕ್ಷೆಗಳು ಸಾರ್ವಜನಿಕ ಅಭಿಪ್ರಾಯ ಮತ್ತು ಚುನಾವಣಾ ಫಲಿತಾಂಶಗಳ ಮೇಲೆ ಅದರ ಸಂಭಾವ್ಯ ಪ್ರಭಾವ ಬೀರುತ್ತವೆ. ಮತ್ತು ಚುನಾವಣೆ ನಡೆಯುವ ದಿಕ್ಕಿನ ಬಗ್ಗೆ ನಿರ್ಣಯಿಸುತ್ತದೆ.

ದೋಷ : ಅಭಿಪ್ರಾಯ ಸಂಗ್ರಹಗಳು 100ಕ್ಕೆ 100 ಕರೆಕ್ಟ್​ ಇರುತ್ತವೆ ಎಂದು ಹೇಳಲು ಆಗುವುದಿಲ್ಲ. ಇದು ಸಂಗ್ರಹ ಮಾಡಿರುವ ದತ್ತಾಂಶಗಳನ್ನು ಆಧರಿಸಿ ಇರುತ್ತದೆ. ಹೀಗಾಗಿ ಸಂಗ್ರಹಿಸಿದ ಡೇಟಾಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತದೆ. ಆದರೂ ಇವು ಸಂಪೂರ್ಣ ದೋಷ ಮುಕ್ತ ಎಂದು ಹೇಳಲು ಆಗುವುದಿಲ್ಲ

ಮೌಲ್ಯಮಾಪನ: ಅಭಿಪ್ರಾಯ ಸಂಗ್ರಹಣೆ ಬಳಿಕ ಅದನ್ನು ಮೌಲ್ಯಮಾಪನಕ್ಕೆ ಒಳಪಡಿಸಲಾಗುತ್ತದೆ. ಇನ್ನು ಈ ಎಲ್ಲ ಅಭಿಪ್ರಾಯ ಸಂಗ್ರಹಗಳು ಚುನಾವಣಾ ಫಲಿತಾಂಶಗಳ ನಿಖರವಾದ ಸೂಚಕವಲ್ಲ. ಮತದಾರರ ಭಾಗವಹಿಸುವಿಕೆ ಮತ್ತು ಸಾರ್ವಜನಿಕ ಅಭಿಪ್ರಾಯದಲ್ಲಿನ ಕೊನೆಯ ಕ್ಷಣದ ಬದಲಾವಣೆಗಳು ಸೇರಿದಂತೆ ಅಸ್ಥಿರಗಳಿಂದ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು. ಒಮ್ಮೊಮ್ಮೆ ಸಂಗ್ರಹಿಸಿದ ಮಾಹಿತಿಗಳು ಎಡವಟ್ಟು ಹೊಡೆಸಬಹುದು.

ಸಮೀಕ್ಷೆಗಳು ತಲೆಕೆಳಗಾಗಿದ್ದೂ ಉಂಟು: ಈ ಹಿಂದೆ ಲೋಕಸಭೆ ಚುನಾವಣೆಯ ಸಮೀಕ್ಷೆಗಳ ಉಲ್ಟಾ ಆಗಿರುವ ಘಟನೆಗಳು ನಡೆದಿವೆ. 2004ರಲ್ಲಿ ನಡೆಸಿದ ಬಹುತೇಕ ಸಮೀಕ್ಷೆಗಳು ಸುಳ್ಳಾಗಿವೆ. CSDS ಹೇಳುವಂತೆ ’ಯಶಸ್ಸುಗಳು ಮತ್ತು ವೈಫಲ್ಯಗಳ ಮಿಶ್ರ ಚೀಲ" ವಾಗಿದೆ. ಇದು ನಿಖರವಾಗಿ ಹೇಳದಿದ್ದರೂ ದಿಕ್ಸೂಚಿಯನ್ನಂತೂ ನೀಡುತ್ತದೆ.

ವಿಶ್ಲೇಷಣೆಯ ಪ್ರಕಾರ, 1998 ರ ಲೋಕಸಭಾ ಚುನಾವಣಾ ಪೂರ್ವ ಸಮೀಕ್ಷೆಗಳು "ಬಹುತೇಕ ನಿಖರವಾಗಿವೆ" ಆದರೆ 1999 ರ ಚುನಾವಣಾ ಸಮೀಕ್ಷೆಯು ಭಾರತೀಯ ಜನತಾ ಪಕ್ಷ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಗೆಲ್ಲುತ್ತದೆ ಎಂದು ಒವರ್​ ಎಸ್ಟಿಮೇಟ್ ಮಾಡಲಾಗಿತ್ತು.

2004ರಲ್ಲಿ ನಡೆಸಿದ ಬಹುತೇಕ ಸಮೀಕ್ಷೆಗಳಿಗೆ "ಶಾಕ್" ಕಾದಿತ್ತು. ಸಮೀಕ್ಷೆಗಳು ಅಂದಾಜು ಮಾಡಿದಂತೆ ಎನ್​ಡಿಎ ಅಧಿಕಾರಕ್ಕೆ ಬರದೇ ಯುಪಿಎ ಅಧಿಕಾರಕ್ಕೆ ಬಂದಿತ್ತು, ಈ ವರ್ಷ ಮಾಡಿದ ಬಹುತೇಕ ಸಮೀಕ್ಷೆಗಳ ಅಂದಾಜುಗಳು ಉಲ್ಟಾ ಆಗಿದ್ದವು.

ಐದು ವರ್ಷಗಳ ನಂತರ, 2009 ರ ಲೋಕಸಭೆ ಚುನಾವಣೆಯಲ್ಲಿ, ಮತ್ತೊಮ್ಮೆ ಕಾಂಗ್ರೆಸ್ ನೇತೃತ್ವದ ಯುಪಿಎ ಗೆಲುವಿನ ಮುನ್ಸೂಚನೆ ನೀಡಲು ಸಮೀಕ್ಷೆಗಳು ವಿಫಲವಾಗಿದ್ದವು.

ಏತನ್ಮಧ್ಯೆ, 2014 ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ 257 ರಿಂದ 340 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ ಎನ್​ಡಿಎ ವಾಸ್ತವವಾಗಿ ಎನ್‌ಡಿಎ 336ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬಂದಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಸುಮಾರು 285 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆಗಳು ಅಂದಾಜಿಸಿದ್ದವು. ಆದರೆ, ಬಿಜೆಪಿ ನೇತೃತ್ವದ ಮೈತ್ರಿಕೂಟವು 353 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು. ಇನ್ನು ಬಿಜೆಪಿ ಏಕಾಂಗಿಯಾಗಿ 303 ಸ್ಥಾನಗಳನ್ನು ಪಡೆದುಕೊಂಡಿತ್ತು

ಮತದಾನೋತ್ತರ ಸಮೀಕ್ಷೆಗಳು: ಮತದಾನದ ಸ್ಥಳಗಳ ಹೊರಗೆ ನಡೆಸಲಾಗುವ ಸಮೀಕ್ಷೆಗಳನ್ನು ಮತದಾನೋತ್ತರ ಅಥವಾ ಎಕ್ಸಿಟ್ ಪೋಲ್​ ಎಂದು ಕರೆಯಲಾಗುತ್ತದೆ. ಈ ಸಮೀಕ್ಷೆಗಳಲ್ಲಿ ಮತದಾರರನ್ನು ಯಾರಿಗೆ ಮತ ಹಾಕಿದ್ದೀರಿ ಮತ್ತು ಏಕೆ ಎಂದು ಪ್ರಶ್ನಿಸಲಾಗುತ್ತದೆ. ಈ ವೇಳೆ ಮತದಾರರು ಸತ್ಯ ಹೇಳುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಇದು ಚುನಾವಣಾ ಪೂರ್ವದ ಸಮೀಕ್ಷೆಗಳಿಗಿಂತ ಹೆಚ್ಚು ನಿಖರ ಎಂದು ಹೇಳಲಾಗುತ್ತದೆ. ಖಾಸಗಿ ಕಂಪನಿಗಳು ಅಥವಾ ಮಾಧ್ಯಮಗಳು ಚುನಾವಣೋತ್ತರ ಸಮೀಕ್ಷೆಗಳನ್ನು ನಡೆಸುತ್ತವೆ. ಇಲ್ಲೂ ಸಹ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಬಳಸುವ ವಿಧಾನಗಳನ್ನೇ ಅನುಸರಿಸಲಾಗುತ್ತದೆ.

ನಿಬಂಧನೆಗಳು: ಸಮೀಕ್ಷೆ ವೇಳೆ ನಿಷ್ಪಕ್ಷಪಾತ ನಡವಳಿಕೆಯನ್ನು ಖಾತರಿಪಡಿಸಲು 1951 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 126A ಮೂಲಕ ಚುನಾವಣೋತ್ತರ ಸಮೀಕ್ಷೆಗಳನ್ನು ನಿಯಂತ್ರಿಸಲಾಗುತ್ತದೆ. ಮತದಾನದ ಪ್ರಾರಂಭ ಮತ್ತು ಅಂತಿಮ ಮತದಾನ ಮುಕ್ತಾಯದ ನಂತರದ ಮೂವತ್ತು ನಿಮಿಷಗಳ ನಡುವೆ ಯಾವುದೇ ರಾಜ್ಯದಲ್ಲಿ ಎಕ್ಸಿಟ್ ಪೋಲ್‌ಗಳನ್ನು ನಡೆಸುವುದನ್ನು ಮತ್ತು ಪ್ರಸಾರ ಮಾಡುವುದನ್ನು ನಿಷೇಧಿಸುತ್ತದೆ. ಮತದಾರರ ನಡವಳಿಕೆಯ ಮೇಲೆ ಆರಂಭಿಕ ಪ್ರಭಾವ ಬೀರುವುದನ್ನು ತಪ್ಪಿಸಲು ಭಾರತೀಯ ಚುನಾವಣಾ ಆಯೋಗ ಈ ಬಗ್ಗೆ ಮೇಲ್ವಿಚಾರಣೆ ಮಾಡುತ್ತದೆ.

ಇತಿಹಾಸ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಒಪಿನಿಯನ್ 1957 ರಲ್ಲಿ ಎರಡನೇ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ದೇಶದ ಮೊದಲ ಎಕ್ಸಿಟ್ ಪೋಲ್ ನಡೆಸಿತ್ತು. ಅಭಿವೃದ್ಧಿಶೀಲ ಸಮಾಜಗಳ ಅಧ್ಯಯನ ಕೇಂದ್ರದ ನಿರ್ದೇಶಕ, ಸಂಜಯ್ ಕುಮಾರ್, ಮತ ಹಂಚಿಕೆಗಳ ನಿಖರವಾದ ಅಂದಾಜುಗಳಿಗಾಗಿ ರಚನಾತ್ಮಕ ಸಮೀಕ್ಷೆಗಳ ಅಗತ್ಯವನ್ನು ಪ್ರತಿಪಾದಿಸಿದ್ದಾರೆ.

ಇದನ್ನು ಓದಿ:' ಮತ್ತೊಮ್ಮೆ ಮೋದಿ ಗೆಲ್ಲುತ್ತಾರಾ'? ತಲೈವಾ ರಜನಿಕಾಂತ್​ ಪ್ರತಿಕ್ರಿಯೆ ಹೀಗಿತ್ತು! - Rajinikanth On Modi

ETV Bharat Logo

Copyright © 2024 Ushodaya Enterprises Pvt. Ltd., All Rights Reserved.