ETV Bharat / bharat

ಪಾಕಿಸ್ತಾನದ ಪರ ಗೂಢಚರ್ಯೆ: ಬ್ರಹ್ಮೋಸ್​ ಸಂಸ್ಥೆಯ ಮಾಜಿ ಎಂಜಿನಿಯರ್‌ಗೆ ಜೀವಾವಧಿ ಶಿಕ್ಷೆ - Ex BrahMos Aerospace Engineer - EX BRAHMOS AEROSPACE ENGINEER

ಪಾಕಿಸ್ತಾನ ಪರವಾಗಿ ಗೂಢಚರ್ಯೆ ನಡೆಸಿದ ಬ್ರಹ್ಮೋಸ್​ ಸಂಸ್ಥೆಯ ಮಾಜಿ ಎಂಜಿನಿಯರ್​ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಬ್ರಹ್ಮೋಸ್​ ಸಂಸ್ಥೆಯ ಮಾಜಿ ಎಂಜಿನಿಯರ್‌ಗೆ ಜೀವಾವಧಿ ಶಿಕ್ಷೆ
ಬ್ರಹ್ಮೋಸ್​ ಸಂಸ್ಥೆಯ ಮಾಜಿ ಎಂಜಿನಿಯರ್‌ಗೆ ಜೀವಾವಧಿ ಶಿಕ್ಷೆ (ETV Bharat)
author img

By PTI

Published : Jun 3, 2024, 10:56 PM IST

ನಾಗ್ಪುರ(ಮಹಾರಾಷ್ಟ್ರ): ವಾಯುಪಡೆಯ ಅತೀ ಪ್ರಮುಖ ಅಸ್ತ್ರವಾದ ಬ್ರಹ್ಮೋಸ್​ ಕ್ಷಿಪಣಿ ತಯಾರಿಕೆಯ ಗುಪ್ತ ಮಾಹಿತಿಯನ್ನು ಪಾಕಿಸ್ತಾನದ ಜೊತೆ ಹಂಚಿಕೊಂಡ ಗಂಭೀರ ಆರೋಪದ ಸಾಬೀತಾದ ಹಿನ್ನೆಲೆಯಲ್ಲಿ ಬ್ರಹ್ಮೋಸ್​ ಏರೋಸ್ಪೇಸ್​ ಪ್ರೈವೇಟ್​ ಲಿಮಿಟೆಡ್​ ಸಂಸ್ಥೆಯ ಮಾಜಿ ಎಂಜಿನಿಯರ್​ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಮಾಜಿ ಎಂಜಿನಿಯರ್​ ಆಗಿರುವ ನಿಶಾಂತ್​ ಅಗರ್ವಾಲ್​ ಆರೋಪಿ. ಈತನಿಗೆ ನಾಗಪುರ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆಯ ಜೊತೆಗೆ 14 ವರ್ಷಗಳ ಕಠಿಣ ಜೈಲು ಮತ್ತು ಹೆಚ್ಚುವರಿಯಾಗಿ 3 ಸಾವಿರ ರೂಪಾಯಿ ದಂಡ ವಿಧಿಸಿ ಸೋಮವಾರ ಆದೇಶಿಸಿತು. ಆರೋಪಿ ಎಂಜಿನಿಯರ್​ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯಾದ ಐಎಸ್​ಐ ಪರ ಗೂಢಚಾರಿಕೆ ನಡೆಸಿದ್ದ.

ಬ್ರಹ್ಮೋಸ್​ ಏರೋಸ್ಪೇಸ್​ ಪ್ರೈವೇಟ್​ ಲಿಮಿಟೆಡ್​ ಸಂಸ್ಥೆಯ ತಾಂತ್ರಿಕ ಸಂಶೋಧನಾ ವಿಭಾಗದ ಎಂನಿಜಿಯರ್​ ಆಗಿದ್ದ ನಿಶಾಂತ್​ ಅಗರ್ವಾಲ್​​ರನ್ನು ನಾಗಪುರದಲ್ಲಿ ಇರುವ ಕ್ಷಿಪಣಿ ಕೇಂದ್ರದಲ್ಲಿ ನಿಯೋಜಿಸಲಾಗಿತ್ತು. ಈ ವೇಳೆ ಆತ ಪಾಕಿಸ್ತಾನದ ಐಎಸ್​​ಐ ಜೊತೆಗೆ ರಹಸ್ಯ ಮಾಹಿತಿಗಳನ್ನು ಹಂಚಿಕೊಂಡ ಆರೋಪವಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಿಶಾಂತ್​ ಅಗರ್ವಾಲ್​​ರನ್ನು 2018 ರಲ್ಲಿ ಉತ್ತರಪ್ರದೇಶ ಮತ್ತು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿತ್ತು.

ಸುಮಾರು 4 ವರ್ಷಗಳ ಕಾಲ ಬ್ರಹ್ಮೋಸ್​ ಸಂಸ್ಥೆಯಲ್ಲಿ ಕೆಲಸ ಮಾಡಿದ್ದ ಈತನ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆ ಕಲಂಗಳಡಿ ಪ್ರಕರಣ ದಾಖಲಿಸಲಾಗಿತ್ತು. ಈ ವೇಳೆಯೇ ಪಾಕಿಸ್ತಾನಕ್ಕೆ ಯೋಜನೆಯ ಗೌಪ್ಯ ಮಾಹಿತಿಯನ್ನು ಹಂಚಿಕೊಂಡಿದ್ದಾನೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದರು.

ಪ್ರಕರಣದಲ್ಲಿ ಈತನಿಗೆ ಬಾಂಬೆ ಹೈಕೋರ್ಟ್​ನ ನಾಗಪುರ ಪೀಠ ಕಳೆದ ಏಪ್ರಿಲ್​ನಲ್ಲಿ ಜಾಮೀನು ನೀಡಿತ್ತು. ಇದೀಗ ವಿಚಾರಣೆ ಮುಗಿದಿದ್ದು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗಿದೆ. ಬ್ರಹ್ಮೋಸ್​ ತಂತ್ರಜ್ಞಾನವು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಮತ್ತು ರಷ್ಯಾದ ಮಿಲಿಟರಿ ಇಂಡಸ್ಟ್ರಿಯಲ್ ಕನ್ಸೋರ್ಟಿಯಂ ನಡುವಿನ ಜಂಟಿ ಯೋಜನೆಯಾಗಿದೆ.

ಇದನ್ನೂ ಓದಿ: ವಿಕಸಿತ ಭಾರತಕ್ಕಾಗಿ ಈ 4 ಸೂತ್ರದಡಿ ಕೆಲಸ ಮಾಡಿ: ಪ್ರಧಾನಿ ಮೋದಿ ಕರೆ - PM Modi Letter To People

ETV Bharat Logo

Copyright © 2025 Ushodaya Enterprises Pvt. Ltd., All Rights Reserved.