ಹೈದರಾಬಾದ್: ಒಂದು ವಾರ್ತಾಪತ್ರಿಕೆ ಕೇವಲ ಸುದ್ದಿ ಒದಗಿಸುವ ಪಾತ್ರಕ್ಕೆ ಸೀಮಿತವಾಗಬಾರದು. ಇದು ಚಳವಳಿಯಲ್ಲಿ ಸಕ್ರಿಯವಾಗಿ ಬಲ ತುಂಬಬೇಕು, ವಿಪತ್ತುಗಳು ಎದುರಾದಾಗ ಸಹಾಯಹಸ್ತ ಚಾಚಬೇಕು ಮತ್ತು ಅಗತ್ಯವಿದ್ದರೆ ನಾಯಕತ್ವವನ್ನು ತೆಗೆದುಕೊಳ್ಳಬೇಕು ಎನ್ನುವುದು 2024ಕ್ಕೆ 50 ವರ್ಷ ಪೂರೈಸುತ್ತಿರುವ ಈನಾಡು ಘೋಷವಾಕ್ಯವಾಗಿದೆ. ಈನಾಡು ಪತ್ರಿಕೆಯ ಮಾತುಗಳು ಸಾರ್ವಜನಿಕ ಚಳವಳಿಗಳಿಗೆ ಉಸಿರು ನೀಡಿದೆ. ದಿಕ್ಕು ತೋಚದಿದ್ದಾಗ ದಾರಿ ತೋರಿಸಿದೆ. ನಾಗರಿಕರು ನರಳುತ್ತಿದ್ದಾಗ ಮಾನವೀಯತೆ ತೋರಿದೆ. ಹಸಿವಿನಿಂದ ಬಳಲಿದವರಿಗೆ ಅನ್ನ ನೀಡಿದೆ. ಜಾತಿ, ಮತ, ಪಂಥಗಳನ್ನು ಮೀರಿ ಸಮಾಜಮುಖಿ ಕಾರ್ಯಗಳನ್ನು ಮುನ್ನಡೆಸಿಕೊಂಡು ಬರುತ್ತಿದೆ.
ಸಂತ್ರಸ್ತರ ಬದುಕಿಗೆ ಬೆಳಕು ನೀಡಿದ ಈನಾಡು: ಕೋಟ್ಯಂತರ ರೂಪಾಯಿಗಳ ಪರಿಹಾರ ನಿಧಿಯಿಂದ ಈನಾಡು ಸಂತ್ರಸ್ತರ ಬದುಕಿಗೆ ಬೆಳಕು ನೀಡಿದೆ. ಈನಾಡು ದೃಷ್ಟಿಯಲ್ಲಿ ಸಮಕಾಲೀನ ಸುದ್ದಿಗಳ ಪ್ರಕಟಣೆ ಮಾತ್ರವಲ್ಲ, ಸಾಮಾಜಿಕ ಹೊಣೆಗಾರಿಕೆಯೂ ಪತ್ರಿಕೆಗಳ ಕರ್ತವ್ಯ. ಐದು ದಶಕಗಳ ಅವಧಿಯಲ್ಲಿ ಈನಾಡು ಅಕ್ಷರದಲ್ಲಷ್ಟೇ ಅಲ್ಲ ಆಚರಣೆಯಲ್ಲೂ ಅದೇ ಪ್ರಾಮಾಣಿಕತೆಯನ್ನು ತೋರುತ್ತಿದೆ. ಅದು 1976ರಲ್ಲಿ ಈನಾಡು ಆರಂಭವಾಗಿ ಕೇವಲ ಎರಡು ವರ್ಷವಾಗಿದ್ದ ಸಮಯದಲ್ಲಿ ತೆಲುಗು ನಾಡನ್ನು ಸತತವಾಗಿ ಮೂರು ಚಂಡಮಾರುತಗಳು ಅಪ್ಪಳಿಸಿದ್ದವು.
ಪರಿಣಾಮ ಜನರು ತೀವ್ರ ನೋವು ಅನುಭವಿಸಿದ್ದರು. ಲಕ್ಷಾಂತರ ಎಕರೆ ಬೆಳೆ ನಾಶವಾಗಿತ್ತು. ಸರ್ವಸ್ವವನ್ನೂ ಕಳೆದುಕೊಂಡ ಅಸಂಖ್ಯಾತ ಜನರ ಆರ್ತನಾದಕ್ಕೆ ಈನಾಡು ಭಾವುಕವಾಯಿತು. ಕೆಲವೇ ದಿನಗಳಲ್ಲಿ ಹತ್ತು ಸಾವಿರ ರೂಪಾಯಿಗಳೊಂದಿಗೆ ಚಂಡಮಾರುತ ಸಂತ್ರಸ್ತರಿಗೆ ಪರಿಹಾರ ನಿಧಿ ಆರಂಭಿಸಲಾಗಿತ್ತು. ಕೈಲಾದಷ್ಟು ಸಹಾಯ ಮಾಡಬೇಕು ಎಂಬುದನ್ನೂ ಜನರಿಗೆ ಅರ್ಥ ಮಾಡಿಸಿತ್ತು. ಈನಾಡು ಕರೆಯೊಂದಿಗೆ ತೆಲುಗು ಓದುಗರು ತಮ್ಮ ದೊಡ್ಡ ಹೃದಯ ವೈಶಾಲ್ಯತೆ ತೋರಿಸಿದ್ದರು. ಒಂದು ತಿಂಗಳೊಳಗೆ ಸುಮಾರು 64,756 ರೂಪಾಯಿ ದೇಣಿಗೆ ಸಂಗ್ರಹಿಸಲಾಗಿತ್ತು. ಆ ಮೊತ್ತವನ್ನು ಈನಾಡು ಸರ್ಕಾರಕ್ಕೆ ನೀಡಿತ್ತು.
ಈನಾಡು 1977ರಲ್ಲಿ ದಿವಿಸೀಮೆ ಪ್ರವಾಹದ ಸಂತ್ರಸ್ತರಿಗೆ ನೆರವು ನೀಡಿತ್ತು. ಆ ವಿಪತ್ತಿನಲ್ಲಿ ಸಾವಿರಾರು ಜನರು ಮನೆ ಕಳೆದುಕೊಂಡು ಉಣ್ಣಲು, ಉಡಲು ಬಟ್ಟೆ ಇಲ್ಲದೇ ರಸ್ತೆಯಲ್ಲೇ ಉಳಿದಿದ್ದರು. ಅವರಿಗೆ ಸಹಾಯ ಮಾಡಲು 25,000 ರೂ.ಗಳ ಪರಿಹಾರ ನಿಧಿಯನ್ನು ಪ್ರಾರಂಭಿಸಲಾಗಿತ್ತು. ಓದುಗರ ಔದಾರ್ಯದಿಂದ ಈನಾಡು ಬಳಗ ಒಟ್ಟು 3,73,927 ರೂ. ಈ ನೆರವಿನಿಂದ ಶಿಥಿಲಗೊಂಡಿದ್ದ ಪಾಲಕಾಯತಿಪ್ಪ ಗ್ರಾಮಕ್ಕೆ ಮರುಜೀವ ನೀಡಿತ್ತು. ರಾಮಕೃಷ್ಣ ಮಿಷನ್ ಸಹಯೋಗದಲ್ಲಿ ರಾಜ್ಯ ಸರ್ಕಾರ 112 ಮನೆಗಳನ್ನು ನಿರ್ಮಾಣ ಮಾಡಿತ್ತು. ಆ ಮೀನುಗಾರ ಗ್ರಾಮಕ್ಕೆ ಪರಮಹಂಸಪುರ ಎಂದು ಹೊಸ ಹೆಸರು ಕೂಡಾ ಬಂದಿತ್ತು.
ಆ ಗ್ರಾಮದ ಪುನರ್ ನಿರ್ಮಾಣಕ್ಕೆ ವ್ಯಯಿಸಿದ ಉಳಿದ ಹಣದಲ್ಲಿ ಕೋಡೂರಿನ ಕೃಷ್ಣಾಪುರದಲ್ಲಿ ಇನ್ನೂ 22 ಮನೆಗಳನ್ನು ನಿರ್ಮಿಸಲಾಗಿದೆ. ಅಂದಿನ ದುರಂತದಲ್ಲಿ ಹಸಿವಿನಿಂದ ಕಂಗೆಟ್ಟಿದ್ದ ಸಂತ್ರಸ್ತರಿಗೆ ಆಹಾರ ಮತ್ತು ಪಾನೀಯಗಳನ್ನು ಒದಗಿಸಲಾಗಿತ್ತು. 50 ಸಾವಿರ ಜನರಿಗೆ ಆಹಾರ ಪೊಟ್ಟಣ ನೀಡಲಾಗಿತ್ತು. ವಿಶಾಖಪಟ್ಟಣಂನ ಡಾಲ್ಫಿನ್ ಹೋಟೆಲ್ ಆವರಣದಲ್ಲಿ ಆಹಾರ ತಯಾರು ಮಾಡಲಾಗಿತ್ತು. ಉದ್ಯೋಗಿಗಳು ಅದನ್ನು ಸಂತ್ರಸ್ತರಿಗೆ ತಲುಪಿಸುವ ಕೆಲಸ ಮಾಡಿದ್ದರು . ಈನಾಡು ಮಾನವೀಯತೆಯ ಕಾರ್ಯಕ್ಕೆ ಅಂದು ಜನರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
1996ರ ಅಕ್ಟೋಬರ್‌ನಲ್ಲಿ ಪ್ರಕಾಶಂ, ನೆಲ್ಲೂರು, ಕಡಪ ಜಿಲ್ಲೆಗಳಲ್ಲಿ ಮತ್ತು ನವೆಂಬರ್‌ನಲ್ಲಿ ಗೋದಾವರಿ ಜಿಲ್ಲೆಗಳಲ್ಲಿ ಚಂಡಮಾರುತವು ದೊಡ್ಡ ಮಟ್ಟದ ಹಾನಿಯನ್ನುಂಟು ಮಾಡಿತ್ತು. ಆಗ ಈನಾಡು 25 ಲಕ್ಷ ರೂಪಾಯಿಗಳೊಂದಿಗೆ ಪರಿಹಾರ ನಿಧಿ ಪ್ರಾರಂಭಿಸಿತು. ಸಹೃದಯರ ಬೆಂಬಲದಿಂದ ಒಟ್ಟು 60 ಲಕ್ಷ ರೂಪಾಯಿ ಸಂಗ್ರಹಿಸಲಾಗಿತ್ತು. ಈ ಹಣವನ್ನು ಹೆಚ್ಚಿನ ಪ್ರವಾಹ ಸಂತ್ರಸ್ತರಿಗೆ ಬಳಸಬೇಕೆಂದು ಈನಾಡು ನಿರ್ಧರಿಸಿತ್ತು. ಚಂಡಮಾರುತದ ಸಮಯದಲ್ಲಿ ಪರಿಹಾರ ಆಶ್ರಯವಾಗಿ ಮತ್ತು ಸಾಮಾನ್ಯ ಸಮಯದಲ್ಲಿ ಶಾಲೆಗಳಾಗಿ ಬಳಸಬಹುದಾದ ಸೂರ್ಯ ಕಟ್ಟಡಗಳನ್ನು ನಿರ್ಮಿಸಲು ನಿರ್ಧರಿಸಿತ್ತು. ಇಂತಹ ಕಟ್ಟಡಗಳಿಗಾಗಿ ‘ಈನಾಡು’ ತಂಡಗಳು ನಿರ್ಗತಿಕ ಹಳ್ಳಿಗಳನ್ನು ಹುಡುಕಿದವು. ಎರಡು ತಿಂಗಳೊಳಗೆ 60 ಗ್ರಾಮಗಳಲ್ಲಿ ಈ ಕಟ್ಟಡಗಳ ನಿರ್ಮಾಣ ಪೂರ್ಣಗೊಂಡಿತ್ತು. ಈನಾಡು ಕರೆಗೆ ಸ್ಪಂದಿಸಿದ ದಾನಿಗಳು ಸಿಮೆಂಟ್, ಕಬ್ಬಿಣ, ಲೋಹ, ಮರಳು ನೀಡುವ ಮೂಲಕ ದಾನವನ್ನೂ ಮಾಡಿದ್ದರು.
2009ರ ಅಕ್ಟೋಬರ್‌ನಲ್ಲಿ ಕೃಷ್ಣಾ, ತುಂಗಭದ್ರಾ, ಕುಂಡೂನ್ ನದಿಗಳಿಂದ ಕರ್ನೂಲ್ ಮತ್ತು ಮಹಬೂಬ್‌ನಗರ ಜಿಲ್ಲೆಗಳ ಪ್ರವಾಹ ಬಂದಿತ್ತು. ತಕ್ಷಣವೇ ನೆರವಾಗಿ ಸುಮಾರು 1.20 ಲಕ್ಷ ಆಹಾರ ಪೊಟ್ಟಣಗಳನ್ನು ವಿತರಿಸಲಾಗಿತ್ತು. ಸಂತ್ರಸ್ತರ ಹಸಿವು ನೀಗಿಸಿತ್ತು. ಪರಿಹಾರ ನಿಧಿಗೆ ದಾನಿಗಳಿಂದ 6.05 ಕೋಟಿ ರೂ. ದೇಣಿಗೆ ಸಂಗ್ರಹಿಸಲಾಗಿತ್ತು. ಆ ಹಣದಲ್ಲಿ ಮಹೆಬೂಬ್‌ನಗರ ಜಿಲ್ಲೆಯ 1,110 ಕೈಮಗ್ಗ ಕುಟುಂಬಗಳಿಗೆ ಮಗ್ಗಗಳನ್ನು ನೀಡಲಾಯಿತು. ಕರ್ನೂಲು ಜಿಲ್ಲೆಯಲ್ಲಿ ‘ಉಶೋದಯ ಶಾಲಾ ಕಟ್ಟಡ’ಗಳನ್ನು ನಿರ್ಮಿಸಿ ಸರಕಾರಕ್ಕೆ ಹಸ್ತಾಂತರಿಸಲಾಗಿತ್ತು. ಜನರು ಮುಂದೆ ಬಂದು ಇನ್ನೂ 3.16 ಕೋಟಿ ರೂ. ಒಟ್ಟು 6.16 ಕೋಟಿ ರೂ.ಗಳ ಸಹಾಯಧನದಲ್ಲಿ ವಿಶಾಖಪಟ್ಟಣಂ ಜಿಲ್ಲೆಯ ತಾಂತಾಡಿ-ವಡಪಾಲೆಂ ಗ್ರಾಮದಲ್ಲಿ 80 ಮನೆಗಳು, ಶ್ರೀಕಾಕುಳಂ ಜಿಲ್ಲೆಯ ಹಳೆ ಮೇಘವರಂನಲ್ಲಿ 36 ಮನೆಗಳು ಮತ್ತು ಉಮ್ಮಿಲಾದದಲ್ಲಿ 28 ಮನೆಗಳನ್ನು ನಿರ್ಮಾಣ ಮಾಡಿ ಹಸ್ತಾಂತರಿಸಲಾಗಿತ್ತು.
2020ರಲ್ಲಿ ಭಾರೀ ಮಳೆಯಿಂದಾಗಿ, ತೆಲಂಗಾಣ ಪ್ರದೇಶದಲ್ಲಿ ತೀವ್ರ ಹಾನಿಯಾದಾಗ, ಈನಾಡು ಗ್ರೂಪ್ 5 ಕೋಟಿ ರೂಪಾಯಿಗಳನ್ನು ಸಿಎಂ ಪರಿಹಾರ ನಿಧಿಗೆ ನೀಡಿತ್ತು. 2020ರಲ್ಲಿ ಕೋವಿಡ್ ಸಮಯದಲ್ಲಿ, ಸಿಎಂ ಪರಿಹಾರ ನಿಧಿಯ ಮೂಲಕ, ತೆಲುಗು ರಾಜ್ಯಗಳಿಗೆ ಪ್ರತ್ಯೇಕವಾಗಿ ತಲಾ 10 ಕೋಟಿ ರೂಪಾಯಿಯಂತೆ ಒಟ್ಟು 20 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಲಾಗಿತ್ತು. ರಾಮೋಜಿ ಫೌಂಡೇಶನ್ ಮೂಲಕ ಕೃಷ್ಣಾ ಜಿಲ್ಲೆಯ ಪೆದಪರುಪುಡಿ ಮತ್ತು ರಂಗಾರೆಡ್ಡಿ ಜಿಲ್ಲೆಯ ನಾಗನಪಲ್ಲಿಯನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸಲಾಗಿತ್ತು.
ರಾಮೋಜಿ ಗ್ರೂಪ್ ಅಧ್ಯಕ್ಷ ರಾಮೋಜಿ ರಾವ್ ಅವರು 5 ಕೋಟಿ ರೂಪಾಯಿ ವೆಚ್ಚದಲ್ಲಿ ವೃದ್ಧಾಶ್ರಮಗಳನ್ನು ನಿರ್ಮಿಸಿ ರೈತರಿಗೆ ಆಶ್ರಯ ನೀಡಿ, ಸಹಾಯಹಸ್ತ ಕೂಡಾ ನೀಡಿದ್ದಾರೆ. 10 ಲಕ್ಷ ರೂಪಾಯಿ ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದ್ದರು . ಓದುಗರು ಮತ್ತು ದಾನಿಗಳ ಬೆಂಬಲದಿಂದ 45,83,148 ರೂ.ಗಳನ್ನು ಸಂಗ್ರಹಿಸಲಾಗಿದೆ. ಆ ಹಣದಲ್ಲಿ ರಾಮಕೃಷ್ಣ ಮಿಷನ್ ಮೂಲಕ ಜಗತ್‌ಸಿಂಗ್‌ಪುರ ಜಿಲ್ಲೆಯ ಕೊನಗುಳ್ಳಿ ಗ್ರಾಮದಲ್ಲಿ 60 ಮನೆಗಳನ್ನು ನಿರ್ಮಿಸಲಾಯಿತು. 2001ರಲ್ಲಿ ಭೂಕಂಪ ಸಂಭವಿಸಿದ ಗುಜರಾತ್‌ಗೆ ಈನಾಡು ವತಿಯಿಂದ 25 ಲಕ್ಷ ರೂಪಾಯಿಗಳ ಪರಿಹಾರ ನಿಧಿ ಆರಂಭಿಸಲಾಯಿತು. ಮಾನವತಾವಾದಿಗಳ ದೇಣಿಗೆಯಿಂದ 2.12 ಕೋಟಿ ರೂ. ಸಂಗ್ರಹವಾಯಿತು. ಸ್ವಾಮಿ ನಾರಾಯಣ ಟ್ರಸ್ಟ್ ಮೂಲಕ 104 ಮನೆಗಳನ್ನು ನಿರ್ಮಿಸಿ ವಸತಿ ರಹಿತರಿಗೆ ಸೂರು ನೀಡಲಾಗಿತ್ತು.
2004ರಲ್ಲಿ ಸುನಾಮಿ ದುರಂತಕ್ಕೆ ತುತ್ತಾದ ತಮಿಳುನಾಡಿನ ಜನರ ಪರವಾಗಿ ಈನಾಡು ನಿಂತಿತ್ತು. 25 ಲಕ್ಷ ರೂಪಾಯಿಗಳಿಂದ ಪರಿಹಾರ ನಿಧಿ ಆರಂಭಿಸಲಾಯಿತು. ದಾನಿಗಳ ಪ್ರತಿಕ್ರಿಯೆಯಿಂದ ಈ ನಿಧಿ ಎರಡೂವರೆ ಕೋಟಿ ರೂ. ಸಂಗ್ರಹವಾಯಿತು. ರಾಮಕೃಷ್ಣ ಮಠದ ಸಹಕಾರದೊಂದಿಗೆ ಕಡಲೂರು ಜಿಲ್ಲೆಯ ವಡುಕ್ಕು ಮುದುಸಲ್ ಒಡೆಯ ಗ್ರಾಮದಲ್ಲಿ 104 ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ. ನಾಗಪಟ್ಟಣಂ ಜಿಲ್ಲೆಯ ನಂಬಿಯಾರ್ ನಗರದಲ್ಲಿ 60 ಕುಟುಂಬಗಳಿಗೆ ವಸತಿ ಕಲ್ಪಿಸಲಾಗಿದೆ.
2018 ರಲ್ಲಿ ಕೇರಳದ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲು 3 ಕೋಟಿ ರೂಪಾಯಿಗಳೊಂದಿಗೆ ಪರಿಹಾರ ನಿಧಿಯನ್ನು ಪ್ರಾರಂಭಿಸಲಾಯಿತು. ಮಾನವೀಯತೆ ಮೆರೆದಿದ್ದು, 7 ಕೋಟಿ 77 ಲಕ್ಷ ಸಂಗ್ರಹವಾಗಿತ್ತು. ಆ ಹಣದಲ್ಲಿ ಈನಾಡು ಗಟ್ಟಿ ಮನೆಗಳನ್ನು ನಿರ್ಮಿಸಿ ಪ್ರವಾಹ ಸಂತ್ರಸ್ತರ ನೆರವಿಗೆ ನಿಂತಿತ್ತು. ಪ್ರಾದೇಶಿಕ ಪತ್ರಿಕೆಯಾಗಿ ಹುಟ್ಟಿದ ಈನಾಡು ಸೇವಾ ಧ್ಯೇಯದೊಂದಿಗೆ ಮಾನವೀಯತೆಯ ಸುಗಂಧವನ್ನು ನಾಡಿನೆಲ್ಲೆಡೆ ಪಸರಿಸಿದೆ.
ಈನಾಡು ಜಲಸಂರಕ್ಷಣಾ ಕಾರ್ಯ: 1995ರಲ್ಲಿ ಈನಾಡು ಅಡಿಯಲ್ಲಿ ಯಾರಾದರೂ ಬಂದು ಏನಾದರೂ ಮಾಡುತ್ತಾರೆ ಎಂದು ಕಾಯದೇ, ಜನರೇ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂಬ ಚಿಂತನೆಯೊಂದಿಗೆ ಶ್ರಮದಾನವನ್ನು ಆಯೋಜಿಸಲಾಗಿತ್ತು. ಈನಾಡು ಕರೆ, ತೆಲುಗು ಜನರ ಮನ ತಣಿಸಿತ್ತು. ಅದರ ಫಲವಾಗಿ ಹದಗೆಟ್ಟ ಗ್ರಾಮಗಳ ರಸ್ತೆಗಳು, ಸೇತುವೆಗಳಿಗೆ ಜೀವಕ್ಕೆ ಬಂದಿತು. ಕಾಲುವೆಗಳಿಗೆ ಹೊಸ ರೂಪ ಸಿಕ್ಕಿತು. ಈನಾಡು ಕೈಗೊಂಡ ಜಲಸಂರಕ್ಷಣಾ ಕಾರ್ಯಗಳಿಂದ ಹಲವು ಕೆರೆಗಳಿಗೆ ಜೀವ ತುಂಬಿದೆ. ಜೊತೆಗೆ ಅರಣ್ಯ ಬೆಳೆಸುವುದರಲ್ಲೂ ಪ್ರಮುಖ ಪಾತ್ರ ವಹಿಸಿತು. 2016ರಲ್ಲಿ ‘ಈನಾಡು’ ಮಳೆನೀರನ್ನು ಉಳಿಸಿ ಅಂತರ್ಜಲ ಹೆಚ್ಚಿಸುವಂತೆ ಕರೆ ನೀಡಿತ್ತು. ಈನಾಡು- ಈಟಿವಿ ಸುಜಲಂ-ಸುಫಲಂ ಕಾರ್ಯಕ್ರಮದ ಮೂಲಕ ಜನಸಾಮಾನ್ಯರನ್ನು ಸಮಾಜ ಸೇವೆಯಲ್ಲಿ ತೊಡಗಿಸಿತು.
ಸ್ವಚ್ಛ ಭಾರತ್ ಕಾರ್ಯಕ್ರಮ: ಮನ್ ಕಿ ಬಾತ್ ರೇಡಿಯೋ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಲಕ್ಷಗಟ್ಟಲೇ ಬಾವಿಗಳನ್ನು ಕೊರೆದು ಜಲಸಂರಕ್ಷಣಾ ಕಾರ್ಯ ಕೈಗೊಂಡಿದ್ದಕ್ಕಾಗಿ ಈನಾಡು ಅನ್ನು ಶ್ಲಾಘಿಸಿದರು. ಈನಾಡು ವತಿಯಿಂದ ಸ್ವಚ್ಛ ಭಾರತ್ ಕಾರ್ಯಕ್ರಮವನ್ನು ಜನರ ಬಳಿಗೆ ಕೊಂಡೊಯ್ಯಲಾಯಿತು. ರಾಮೋಜಿ ರಾವ್ ಅವರ ಕಾರ್ಯವನ್ನು ಶ್ಲಾಘಿಸಿದ ಪ್ರಧಾನಿ ಮೋದಿ ಅವರನ್ನು ಸ್ವಚ್ಛ ಭಾರತದ ರಾಯಭಾರಿಯಾಗಿ ನೇಮಿಸಿದರು.
ಒಂದೇ ಒಂದು ಸುದ್ದಿಯು ಸಮಸ್ಯೆಗಳನ್ನು ಪರಿಹರಿಸುತ್ತದೆ ಮತ್ತು ಜೀವನವನ್ನು ರೂಪಿಸುತ್ತದೆ. ‘ಈನಾಡು’ ಸಮಾಜಮುಖಿ ಕಾರ್ಯಗಳಿಂದ ಅನೇಕರ ಬದುಕಿನಲ್ಲಿ ಹೊಸ ಬೆಳಕು ಮೂಡಿದೆ. ಈನಾಡು ಉಪಕ್ರಮದಿಂದ ಅಸಾಧ್ಯ ಎನಿಸಿದ್ದ ಹಲವು ಕೆಲಸಗಳು ಸಾಧ್ಯವಾಗಿವೆ. ಈನಾಡು ಘೋಷವಾಕ್ಯಗಳು ಸಾವಿರಾರು ಕುಟುಂಬಗಳಿಗೆ ಬೆಳಕು ತಂದಿವೆ. ಅನೇಕ ಸ್ಪೂರ್ತಿದಾಯಕ ಕಥೆಗಳು ಭವಿಷ್ಯದ ಪೀಳಿಗೆಗೆ ಹೊಸ ಮಾರ್ಗವನ್ನು ತೋರಿಸಿವೆ. ಅವರಲ್ಲಿ ಹೊಸ ಕಲ್ಪನೆಯನ್ನು ಹುಟ್ಟುಹಾಕುತ್ತವೆ. ಸಂತ್ರಸ್ತರಿಗೆ ನೆರವಾಗುವ ಸುದ್ದಿಗೆ ಆದ್ಯತೆ ನೀಡಬೇಕು ಎಂಬುದು ರಾಮೋಜಿ ರಾವ್ ಸೂಚನೆ. ಈನಾಡಿನ ಕಾರ್ಯಗಳು, ನಾಗರಿಕ ಸೇವೆಗಳು ವಿಜೇತರಿಗೆ ಸ್ಫೂರ್ತಿ ನೀಡಿತು. ಈನಾಡು ಪತ್ರಿಕೆಯ ಪದಗಳು ಬೆಳಕಿನ ಕಿರಣಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಶಾಶ್ವತವಾಗಿ ಹೊರಹೊಮ್ಮುತ್ತಿರುತ್ತವೆ.