ಗಿರ್ ಸೋಮನಾಥ್, ಗುಜರಾತ್ : ಮಾದಕ ದ್ರವ್ಯ ಭೇದಿಸುವಲ್ಲಿ ಭದ್ರತಾ ಏಜೆನ್ಸಿಗಳಿಗೆ ಮತ್ತೊಂದು ದೊಡ್ಡ ಯಶಸ್ಸು ಸಿಕ್ಕಿದೆ. ವೆರಾವಲ್ ಬಂದರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ರಹಸ್ಯ ಮಾಹಿತಿಯ ಆಧಾರದ ಮೇಲೆ ಅರಬ್ಬಿ ಸಮುದ್ರದಲ್ಲಿ ಅಪಾರ ಪ್ರಮಾಣದ ಮಾದಕವಸ್ತುಗಳ ಮೇಲೆ ದಾಳಿ ನಡೆಸಲಾಯಿತು. ಸುಮಾರು 50 ಕೆಜಿ ಸೀಲ್ಡ್ ಹೆರಾಯಿನ್ ವಶಪಡಿಸಿಕೊಳ್ಳಲಾಗಿದ್ದು, ಅದರ ಪ್ಯಾಕೆಟ್ ಬೆಲೆ 350 ಕೋಟಿ ರೂಪಾಯಿ ಎಂಬುದು ಬಹಿರಂಗವಾಗಿದೆ.
9 ಆರೋಪಿಗಳ ಬಂಧನ: ಈ ಕಾರ್ಯಾಚರಣೆಯನ್ನು ಎಸ್‌ಒಜಿ ಮತ್ತು ಎನ್‌ಡಿಪಿಎಸ್ (ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್) ತಂಡವು ಜಂಟಿಯಾಗಿ ಮತ್ತು ಯಶಸ್ವಿಯಾಗಿ ನಡೆಸಿದೆ. ಈ ಕಾರ್ಯಾಚರಣೆಯಡಿ ಮೂವರು ಪ್ರಮುಖ ಆರೋಪಿಗಳು ಸೇರಿದಂತೆ 9 ಆರೋಪಿಗಳನ್ನು ಬಂಧಿಸಲಾಗಿದೆ. ಎಫ್‌ಎಸ್‌ಎಲ್ ವರದಿಯಲ್ಲಿ ಮಾದಕ ವಸ್ತು ಹೆರಾಯಿನ್ ಎಂದು ತಿಳಿದುಬಂದಿದೆ. ಎಫ್‌ಎಸ್‌ಎಲ್, ಗಿರ್ ಸೋಮನಾಥ್ ಎಸ್‌ಒಜಿ ಮತ್ತು ಎಲ್‌ಸಿಬಿ ಸೇರಿದಂತೆ ಶಾಖೆಗಳಿಂದ ತನಿಖೆ ನಡೆಯುತ್ತಿದೆ. ಗೃಹ ಖಾತೆ ರಾಜ್ಯ ಸಚಿವ ಹರ್ಷ್ ಸಾಂಘ್ವಿ ಈ ಸಂಪೂರ್ಣ ಕಾರ್ಯಾಚರಣೆಯ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಮೀನುಗಾರಿಕಾ ದೋಣಿಯಲ್ಲಿ ಇಷ್ಟೊಂದು ಪ್ರಮಾಣದ ಮಾದಕ ದ್ರವ್ಯವನ್ನು ಯಾರು ಕಳುಹಿಸಿದ್ದಾರೆ ಮತ್ತು ವೆರಾವಲ್ ತಲುಪಿದ ಮಾದಕವಸ್ತು ಯಾರು ವ್ಯಾಪಾರ ನಡೆಸುತ್ತಿದ್ದರು ಮತ್ತು ಇಷ್ಟು ದೊಡ್ಡ ಪ್ರಮಾಣದ ಮಾದಕ ದ್ರವ್ಯಗಳನ್ನು ಏಕೆ ಆರ್ಡರ್ ಮಾಡಲಾಗಿತ್ತು ಎಂಬುದರ ಬಗ್ಗೆ ಕೆಲವು ಆಘಾತಕಾರಿ ಸಂಗತಿಗಳು ಬಹಿರಂಗಗೊಳ್ಳಬೇಕಾಗಿದೆ. ವೆರಾವಲ್ ನೇರವಾಗಿ ಪಾಕಿಸ್ತಾನದ ಜಲಸಂಪರ್ಕ ಹೊಂದಿದ್ದು, ಈ ಮಾದಕ ದ್ರವ್ಯದ ಮಾದರಿ ಮತ್ತು ಅದು ಎಲ್ಲಿಂದ ಬಂತು ಎಂಬ ಬಗ್ಗೆ ಪೊಲೀಸರು ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸುವ ಸಾಧ್ಯತೆಯಿದೆ. ಸದ್ಯ ಪೊಲೀಸರು ದೋಣಿಯನ್ನು ವಶಪಡಿಸಿಕೊಂಡು ಮುಂದಿನ ಪ್ರಕ್ರಿಯೆ ಆರಂಭಿಸಿದ್ದಾರೆ.
ಓದಿ: ಪೊಲೀಸ್ ಮಾಹಿತಿದಾರರು ಎಂಬ ಶಂಕೆ: ಇಬ್ಬರನ್ನು ಅಪಹರಿಸಿ ಕತ್ತು ಕೊಯ್ದು ಹತ್ಯೆ ಮಾಡಿದ ನಕ್ಸಲರು