ETV Bharat / bharat

ಕಾಕತೀಯ ರಾಜರ "ದೂದ್​ಬಾವಿ": ಹಾಲಿನಂತೆ ಬೆಳ್ಳಗಿರುವ ಈ ಬಾವಿ ನೀರು ಸೇವಿಸಿದರೆ ರೋಗಗಳೇ ಮಾಯ! - DOODH WELL IN MOLANGUR

ಹೈದರಾಬಾದ್​ನ ಕರೀಂನಗರ ಜಿಲ್ಲೆಯ ಮೊಳಂಗೂರುವೆಂಬ ಗ್ರಾಮದಲ್ಲಿ ಇಂದಿಗೂ ರಾಜರು ಕಟ್ಟಿಸಿರುವ ಬಾವಿ ತನ್ನ ಕ್ಷೀರದಂತಿರುವ ನೀರಿನಿಂದ ಪ್ರಸಿದ್ಧಿ ಪಡೆಯುತ್ತಿದೆ. ಇದರ ಇತಿಹಾಸ, ವಿಶೇಷತೆ ನೋಡೋಣ ಬನ್ನಿ.

DOODH WELL IN MOLANGUR
"ದೂದ್​ಬಾವಿ"ಯ ನೀರು ಸೇವಿಸಿದರೆ ರೋಗಗಳೇ ಮಾಯ! (ETV Bharat)
author img

By ETV Bharat Karnataka Team

Published : Aug 8, 2024, 7:23 AM IST

ಕರೀಂನಗರ, ತೆಲಂಗಾಣ: ರಾಜ್ಯದ ಕರೀಂನಗರದಲ್ಲಿವ ಈ ಬಾವಿ ದೂಧ್ ಬಾವಿ ಎಂದೇ ಪ್ರಸಿದ್ಧ. ಕಾಕತೀಯ ರಾಜ ಪ್ರತಾಪರು ಮೊಳಂಗೂರು ಕೋಟೆಯನ್ನು ನಿರ್ಮಿಸುವಾಗ ಕೋಟೆಯ ಪ್ರವೇಶದ್ವಾರದ ಮುಂಭಾಗದಲ್ಲಿ ಸಂಪೂರ್ಣ ಕಲ್ಲಿನ ಗೋಡೆಯಿಂದ ಈ ಬಾವಿಯನ್ನು ಕಟ್ಟುತ್ತಾರೆ. ಇಂದಿಗೂ ಈ ಬಾವಿಯಲ್ಲಿ ಹಾಲಿನಂತೆ ಶುದ್ಧ ಬಿಳಿ ಬಣ್ಣದಲ್ಲಿ ನೀರು ತುಂಬಿ ತುಳುಕುತ್ತಿದೆ. ಈಗಲೂ ಜನರಿಗೆ ಮತ್ತು ಇತಿಹಾಸಕಾರರಿಗೆ ಬಾವಿಯಲ್ಲಿನ ನೀರು ಏಕೆ ಕ್ಷೀರದಂತೆ ಬಿಳಿಯಾಗಿರುತ್ತದೆ ಎಂದು ಆಶ್ಚರ್ಯ ಪಡುತ್ತಾರೆ. ಅಷ್ಟು ಅಚ್ಚರಿಯನ್ನು ಒಳಗೊಂಡ ಈ ಮೊಳಂಗೂರು ಗ್ರಾಮದ ದೂದ್​ಬಾವಿಯ ನೀರಿನ ಬಗ್ಗೆ ಎಷ್ಟು ವಿವರಿಸಿದರೂ ಕಡಿಮೆಯೇ.

ತಳದಿಂದ ಮೇಲಿನವರೆಗೆ ಬಾವಿಯನ್ನು ಕಲ್ಲಿನಿಂದ ನಿರ್ಮಿಸಲಾಗಿದೆ. ಬಾವಿ ನೀರೊಳಗೆ ನೀವು ನಾಣ್ಯ ಹಾಕಿದರೆ ಮೇಲಿನಿಂದ ಸ್ಪಷ್ಟವಾಗಿ ನಾಣ್ಯ ಕಾಣುತ್ತದೆ. ಇದು ನೀರಿನ ಪಾರದರ್ಶಕತೆಗೆ ಸಾಕ್ಷಿಯಾಗಿದೆ. ನೋಡಲು ಹಾಲಿನಂತೆ ಗೋಚರಿಸುವ 'ದೂದ್​ಬಾವಿ ನೀರು ಕುಡಿದರೆ ಯಾವುದೇ ಕಾಯಿಲೆ ಬರುವುದಿಲ್ಲ' ಎಂಬುದು ಸುತ್ತಮುತ್ತಲಿನ ಗ್ರಾಮಗಳ ಜನರ ನಂಬಿಕೆ. ಹೀಗಾಗಿ ಈ ಬಾವಿಯನ್ನು ನೋಡಲೆಂದೇ ಅನೇಕ ಕಡೆಯಿಂದ ಜನ ಬರುತ್ತಾರೆ. ಇನ್ನು ಇತಿಹಾಸದಲ್ಲಿ ' ನವಾಬನು ತನ್ನ ಅಗತ್ಯಗಳಿಗಾಗಿ ಇದೇ ಬಾವಿಯ ನೀರನ್ನು ಕುದುರೆಗಳ ಮೂಲಕ ಕೊಂಡೊಯ್ಯುತ್ತಿದ್ದನು' ಎಂದು ಸ್ಥಳೀಯರು ಹೇಳುತ್ತಾರೆ.

ಭವ್ಯ ಇತಿಹಾಸ ಹೊಂದಿರುವ ಈ ದೂದ್​ಬಾವಿ ನೀರಿನ ಗುಣಮಟ್ಟವನ್ನು ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳೊಂದಿಗೆ ಅಧಿಕಾರಿಗಳು ಪರೀಕ್ಷಿಸಿದ್ದಾರೆ. ಮಾರುಕಟ್ಟೆಯಲ್ಲಿ ಕಂಪನಿಗಳು ಬಾಟಲಿ, ಪ್ಯಾಕೆಟ್​ಗಳ ರೂಪದಲ್ಲಿ ಸಿಗುವ ನೀರಿಗಿಂತ ನೈಸರ್ಗಿಕವಾಗಿ ದೊರಕುವ ಬಾವಿ ನೀರೇ ಮೇಲು ಎಂಬುದು ಇತ್ತೀಚೆಗೆ ಭೂಗತ ಜಲ ಇಲಾಖೆಯ ಅಧಿಕಾರಿಗಳು ನಡೆಸಿದ ಪರೀಕ್ಷೆಯಲ್ಲಿ ಸ್ಪಷ್ಟವಾಗಿದೆ.

ಬೇಸರದ ಸಂಗತಿಯೆಂದರೆ ಇಲ್ಲಿನ ಜಿಲ್ಲೆಗಳ ವಿಭಜನೆಯ ನಂತರ ಮೊಳಂಗೂರು ಕೋಟೆ ಮತ್ತು ದೂದ್​ಬಾವಿ ಸುತ್ತಮುತ್ತಲಿನ ಪ್ರದೇಶಗಳನ್ನು ಪ್ರವಾಸೋದ್ಯಮವಾಗಿ ಗುರುತಿಸಲು ಪ್ರಯತ್ನಿಸಲಾಗುತ್ತಿದೆ. ಇದನ್ನು ವಿರೋಧಿಸುತ್ತಿರುವ ಮೊಳಂಗೂರು ಗ್ರಾಮಸ್ಥರು ಬಾವಿಯ ರಕ್ಷಣೆಗೆ ಮುಂದಾಗಿದ್ದಾರೆ.

"ಈ ಬಾವಿಯಲ್ಲಿನ ನೀರು ಎಳೆನೀರಿನಂತೆ ಸಿಹಿಯಾಗಿರುತ್ತದೆ, ನೀರನ್ನು ಕುಡಿದರೆ ಯಾವುದೇ ರೋಗಗಳು ಬರುವುದಿಲ್ಲ. ಅದಕ್ಕಾಗಿಯೇ ನಾವು ಇಲ್ಲಿನ ನೀರನ್ನು ಕುಡಿಯುತ್ತೇವೆ. ಈ ಬಾವಿಯನ್ನು ಕಾಕತೀಯ ರಾಜರು ತೋಡಿದ್ದರು. ಸುತ್ತಮುತ್ತಲಿನ ಹಳ್ಳಿಗಳ ಜನರು ಈ ನೀರನ್ನು ಬಳಸುತ್ತಾರೆ. ಕರೋನಾ ಸಮಯದಲ್ಲಿಯೂ ಈ ನೀರನ್ನು ಔಷಧಿಯಾಗಿ ಬಳಸಲಾಗುತ್ತಿತ್ತು" ಎಂದು ಇದೇ ಹಳ್ಳಿ ಜನರು ತಿಳಿಸಿದ್ದಾರೆ.

ಇದನ್ನೂ ಓದಿ: ಸುಳ್ಯದ ಅರಣ್ಯದೊಳಗಿದೆ ಒಂದು ವಿಸ್ಮಯಕಾರಿ ಬಾವಿ: ಏನಿದರ ವಿಶೇಷತೆ? - An amazing well in Sulya

ETV Bharat Logo

Copyright © 2024 Ushodaya Enterprises Pvt. Ltd., All Rights Reserved.