ಕೋಯಿಕ್ಕೋಡ್: ಸೈಬರ್ ಅಪರಾಧಗಳಲ್ಲಿ ಅಪರೂಪದ ಪ್ರಕರಣವೊಂದು ಕೇರಳದಲ್ಲಿ ವರದಿಯಾಗಿದೆ. ಕಳೆದ 35 ವರ್ಷದಿಂದ ಕೋಯಿಕ್ಕೋಡ್ನಲ್ಲಿ ನೆಲೆಸಿರುವ ಮಧ್ಯಪ್ರದೇಶದ ವೈದ್ಯರ ಮುಗ್ದತೆ ಬಂಡವಾಳವಾಗಿಸಿಕೊಂಡ ಆರೋಪಿ, ಕಳೆದ 8 ತಿಂಗಳಲ್ಲಿ ಅವರಿಂದ 4 ಕೋಟಿ ರೂ ದೋಚಿದ್ದಾರೆ. ಸದ್ಯ ಇದೀಗ ಸಂತ್ರಸ್ತರ ಮಗನಿಂದ ಪ್ರಕರಣ ಬಯಲಾಗಿದ್ದು, ಈ ಸಂಬಂಧ ಕೋಯಿಕ್ಕೋಡ್ ಸೈಬರ್ ಕ್ರೈಂಗೆ ದೂರು ದಾಖಲಾಗಿದೆ.
ರಾಜಸ್ಥಾನದ ದುಂಗರ್ಪುರ್ ಮೂಲದ ಅಮಿತ್ ವಂಚಿಸಿದ ಆರೋಪಿ. ವೈದ್ಯರ ಮುಗ್ಧತೆ ಮತ್ತು ಸಹಾನುಭೂತಿಯನ್ನೇ ಬಂಡಾವಳವಾಗಿಸಿಕೊಂಡ ಈತ ತಾನು ಆರ್ಥಿಕ ಸಂಕಷ್ಟದಲ್ಲಿದ್ದೇನೆ ಎಂದು ನಂಬಿಸಿದ್ದಾರೆ. ಅಷ್ಟೇ ಅಲ್ಲದೇ, ವೈದ್ಯಕೀಯ ತುರ್ತು ಪರಿಸ್ಥಿತಿ, ಬಿಲ್ ಪಾವತಿ ಸಾಧ್ಯವಾಗಿಲ್ಲ. ಕುಟುಂಬ ಸಮಸ್ಯೆ ಎಂಬ ಹಲವಾರು ಕಥೆ ಕಟ್ಟಿ ಅವರನ್ನು ನಂಬಿಸಿ, ಹಣ ಪಡೆದಿದ್ದಾರೆ. ಹಲವು ವಿಧದ ಕಥೆ ಕಟ್ಟಿದ ಆರೋಪಿ ವೈದ್ಯರಿಂದ 4,08,80,457 ಹಣ ದೋಚಿದ್ದಾನೆ.
ಸಹಾನೂಭೂತಿ ದುರಪಯೋಗ: ಪೊಲೀಸರ ಪ್ರಕಾರ, ಅಮಿತ್ ಆರಂಭದಲ್ಲಿ ಕೋವಿಡ್ 19 ಸಾಂಕ್ರಾಮಿಕದಿಂದ ಸಂಕಷ್ಟಕ್ಕೆ ಒಳಗಾಗಿದ್ದು, ಹೆಂಡತಿ ವೈದ್ಯಕೀಯ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ ಎಂದು ವೈದ್ಯರ ಬಳಿ ಅಲವತ್ತುಕೊಂಡಿದ್ದಾರೆ. ಈ ವೇಳೆ ಹಣ ಪಡೆದ ಆತ ಮುಂದೆ ಕೌಟುಂಬಿಕ ಸಮಸ್ಯೆ, ಸಾಲ ಮತ್ತಿತ್ತರ ಸಮಸ್ಯೆ ಎಂದು ವೈದ್ಯರ ಕನಿಕರ ಗಿಟ್ಟಿಸಲು ಹಲವು ಕಥೆಗಳನ್ನು ಹೇಳಿ ಮರಳು ಮಾಡಿ, ದೊಡ್ಡ ಮೊತ್ತದ ಹಣ ಪಡೆದಿದ್ದಾನೆ. ವೈದ್ಯರನ್ನು ಮತ್ತಷ್ಟು ವಂಚಿಸಲು ಸುಲಿಗೆ ಮಾಡಲು ಈತ ಟೌನ್ ಇನ್ಸ್ಪೆಕ್ಟರ್, ಕಂಟ್ರಾಕ್ಟರ್ ಮತ್ತು ಸಮುದಾಯದ ನಾಯಕ ಸೇರಿದಂತೆ ಅನೇಕರನ್ನು ಭಾಗಿಯಾಗಿಸಿದ್ದಾನೆ.
ವೈದ್ಯರಿಗೆ ಆಸ್ತಿ ಮಾರಾಟ, ಕಾನೂನು ವಿಷಯಗಳನ್ನು ಪರಿಹರ ಸೇರಿದಂತೆ ಹಲವು ಭರವಸೆ ನೀಡುವ ಮೂಲಕ ಹಣ ಪಡೆದಿದ್ದಾನೆ. ಅಲ್ಲದೇ, ನಕಲಿ ಅಪಹರಣದ ಕಥೆಯನ್ನು ಹೆಣೆದಿದ್ದಾರೆ. ವೈದ್ಯರ ಮುಗ್ಧತೆಯನ್ನು ಬಹಳ ಸೂಕ್ಷ್ಮವಾಗಿ ಭಾವನಾತ್ಮಕವಾಗಿ ನಿರ್ವಹಿಸಿ, ಅವರನ್ನು ಕಷ್ಟಕ್ಕೆ ಮರಗುವಂತೆ ಮಾಡಿದ್ದಾನೆ.
ಸುಳ್ಳು ಭರವಸೆ ನಂಬಿದ ವೈದ್ಯರು, ಅಮಿತ್ ಮತ್ತು ಆತನ ಕುಟುಂಬಕ್ಕೆ 8 ತಿಂಗಳಲ್ಲಿ ಭಾರೀ ಮೊತ್ತದ ಹಣ ಸಂದಾಯ ಮಾಡಿದ್ದಾರೆ. ಪ್ರಕರಣದಲ್ಲಿ ಸಂಪೂರ್ಣವಾಗಿ ಸುಳ್ಳು ಭರವಸೆ, ಭಾವನಾತ್ಮಕ ಮರುಳು ತಂತ್ರಗಳಿಗೆ ಬಲಿಯಾದ ವೈದ್ಯರು ಭಾರೀ ಮೊತ್ತದ ಹಣದ ಜೊತೆಗೆ ಭಾವನಾತ್ಮಕವಾಗಿಯು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಇದನ್ನೂ ಓದಿ: ಕೇಂದ್ರದ ಒತ್ತಡಕ್ಕೆ ಮಣಿದ ನೆಟ್ಫ್ಲಿಕ್ಸ್: IC814 ವೆಬ್ಸಿರೀಸ್ನಲ್ಲಿ ಅಪಹರಣಕಾರರ ನಿಜ ಹೆಸರು ಬಳಕೆ