ETV Bharat / bharat

ಪ್ರತಿ ರೂಪಾಯಿಯಲ್ಲಿ 63 ಪೈಸೆ ತೆರಿಗೆಯಿಂದ ಸಂಗ್ರಹ: ಅದರಲ್ಲಿ ಯಾವೆಲ್ಲಾ ಕ್ಷೇತ್ರಕ್ಕೆ ಎಷ್ಟು ಖರ್ಚು? - REVENUE AND EXPENDITURE

author img

By PTI

Published : Jul 23, 2024, 5:27 PM IST

ಸರ್ಕಾರದ ಬೊಕ್ಕಸಕ್ಕೆ ಬರುವ ಪ್ರತಿ ರೂಪಾಯಿ ಎಲ್ಲಿಂದ ಬರುತ್ತದೆ. ಅದನ್ನು ಯಾವೆಲ್ಲಾ ಕ್ಷೇತ್ರಗಳಲ್ಲಿ ಖರ್ಚು ಮಾಡಲಾಗುತ್ತದೆ ಎಂಬುದನ್ನು ಬಜೆಟ್​ನಲ್ಲಿ ವಿವರಿಸಿರುವ ಮಾಹಿತಿ ಇಲ್ಲಿದೆ.

ಪ್ರತಿ ರೂಪಾಯಿಯಲ್ಲಿ 63 ಪೈಸೆ ತೆರಿಗೆಯಿಂದ ಸಂಗ್ರಹ
ಪ್ರತಿ ರೂಪಾಯಿಯಲ್ಲಿ 63 ಪೈಸೆ ತೆರಿಗೆಯಿಂದ ಸಂಗ್ರಹ (ETV Bharat)

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಮಂಡಿಸಿದ ಬಜೆಟ್​ ಗಾತ್ರವು 32.07 ಲಕ್ಷ ಕೋಟಿಯದ್ದಾಗಿದೆ. ಖರ್ಚು 48.21 ಲಕ್ಷ ಕೋಟಿ ಇದೆ. ಬೊಕ್ಕಸಕ್ಕೆ ಬರುವ ಪ್ರತಿ ರೂಪಾಯಿಯಲ್ಲಿ 63 ಪೈಸೆ ನೇರ ಮತ್ತು ಪರೋಕ್ಷ ತೆರಿಗೆಯಿಂದ ಕೂಡಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

2024-25ನೇ ಸಾಲಿನ ಕೇಂದ್ರ ಬಜೆಟ್​​ನ ದಾಖಲೆಗಳ ಪ್ರಕಾರ, ಸರ್ಕಾರದ ಬೊಕ್ಕಸದಲ್ಲಿರುವ ಪ್ರತಿ ರೂಪಾಯಿಗೆ 63 ಪೈಸೆಯು ನೇರ ಮತ್ತು ಪರೋಕ್ಷ ತೆರಿಗೆಗಳಿಂದ ಬರುತ್ತದೆ. ಉಳಿದ 27 ಪೈಸೆ ಸಾಲ ಮತ್ತು ಇತರ ಮೂಲಗಳಿಂದ ಬಂದರೆ, 9 ಪೈಸೆ ತೆರಿಗೆಯೇತರ ಆದಾಯ ಮತ್ತು 1 ಪೈಸೆ ಸಾಲದ ಹೊರತಾದ ಬಂಡವಾಳದಿಂದ ಬರಲಿದೆ ಎಂದು ವಿವರಿಸಲಾಗಿದೆ.

ಕಾರ್ಪೊರೇಟ್ ಮತ್ತು ವೈಯಕ್ತಿಕ ಆದಾಯ ತೆರಿಗೆ ಸೇರಿ ನೇರ ಟ್ಯಾಕ್ಸ್​​ನಿಂದ 36 ಪೈಸೆ ಸಂಗ್ರಹವಾಗುತ್ತದೆ. ಆದಾಯ ತೆರಿಗೆಯು 19 ಪೈಸೆಯನ್ನು ನಿಗದಿ ಮಾಡಿದ್ದರೆ, ಕಾರ್ಪೊರೇಟ್ ತೆರಿಗೆಯು 17 ಪೈಸೆಯಷ್ಟು ಉತ್ಪಾದನೆಯಾಗಲಿದೆ ಎಂದು ಹೇಳಿದೆ.

ಪರೋಕ್ಷ ಟ್ಯಾಕ್ಸ್​​ಗಳಲ್ಲಿ, ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್‌ಟಿ) ಪ್ರತಿ ರೂಪಾಯಿಯಲ್ಲಿ ಗರಿಷ್ಠ 18 ಪೈಸೆಯಷ್ಟು ಬರಲಿದೆ. ಅಬಕಾರಿ ಸುಂಕದಿಂದ ಪ್ರತಿ ರೂಪಾಯಿಯಲ್ಲಿ 5 ಪೈಸೆ ಮತ್ತು ಕಸ್ಟಮ್ಸ್ ಲೆವಿಯಿಂದ 4 ಪೈಸೆ ಗಳಿಸುವ ಗುರಿ ಹಾಕಿಕೊಳ್ಳಲಾಗಿದೆ. ಸಾಲಗಳಿಗೆ ಬರುವ ಬಡ್ಡಿ, ಇತರ ಮೂಲಗಳಿಂದ ಪ್ರತಿ ರೂಪಾಯಿಗೆ 27 ಪೈಸೆ ಬರಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಸಂಸತ್ತಿನಲ್ಲಿ ಮಂಡಿಸಿದ ಕೇಂದ್ರ ಬಜೆಟ್​ನಲ್ಲಿ ತಿಳಿಸಿದ್ದಾರೆ.

ಎಲ್ಲೆಲ್ಲಿ ಎಷ್ಟೆಷ್ಟು ಖರ್ಚು?: ಪ್ರತಿ ರೂಪಾಯಿ ಖರ್ಚಿನಲ್ಲಿ ರಾಜ್ಯಗಳ ಪಾಲಿಗೆ 19 ಪೈಸೆ ನಿಗದಿ ಮಾಡಲಾಗಿದೆ. ಇದರಲ್ಲಿ 21 ಪೈಸೆಯಷ್ಟು ಆದಾಯ ನಿರೀಕ್ಷಿಸಲಾಗಿದೆ. ಇದು ನೇರ ಮತ್ತು ಪರೋಕ್ಷ ತೆರಿಗೆಯಿಂದ ಕೂಡಿದೆ. ರಕ್ಷಣಾ ಇಲಾಖೆಗೆ ನಿಗದಿ ಮಾಡಿದ ಹಣದಲ್ಲಿ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ, ಪ್ರತಿ ರೂಪಾಯಿಯಲ್ಲಿ 8 ಪೈಸೆ ನೀಡಲಾಗುತ್ತದೆ. ಕೇಂದ್ರ ವಲಯದ ಯೋಜನೆಗಳ ವೆಚ್ಚವು ಪ್ರತಿ ರೂಪಾಯಿಯಲ್ಲಿ 16 ಪೈಸೆಯಾಗಿರುತ್ತದೆ. ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ 8 ಪೈಸೆಗಳಷ್ಟು ಹಂಚಿಕೆಯಾಗಲಿದೆ.

ಇದರ ಜೊತೆಗೆ, ಹಣಕಾಸು ಸಮಿತಿ ಮತ್ತು ಇತರ ವರ್ಗಗಳಿಗೆ 9 ಪೈಸೆ, ವಿವಿಧ ಯೋಜನೆಗಳಿಗೆ ನೀಡುವ ಸಬ್ಸಿಡಿ 6 ಪೈಸೆ ಮತ್ತು ಪಿಂಚಣಿಗಳಿಗೆ 4 ಪೈಸೆಯನ್ನು ನಿಗದಿ ಮಾಡಲಾಗಿದೆ. ಇತರ ಕಾರ್ಯಕ್ರಮಗಳಿಗೆ ಸರ್ಕಾರ ಒಂದು ರೂಪಾಯಿಯಲ್ಲಿ 9 ಪೈಸೆಯನ್ನು ಖರ್ಚು ಮಾಡಲಿದೆ.

ಇದನ್ನೂ ಓದಿ: ಕೇಂದ್ರ ಬಜೆಟ್​ 2024: ಯಾವ ವಸ್ತು ಏರಿಕೆ, ಯಾವುದು ಇಳಿಕೆ- ತಿಳಿಯಿರಿ - Union Budget 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.