ವಾರಾಣಸಿ (ಉತ್ತರ ಪ್ರದೇಶ): ದೀಪಾವಳಿ ಹಬ್ಬದ ನಿಮಿತ್ತ ಇಂದು ಧನ್ತೆರೇಸ್ನಲ್ಲಿ ಲಕ್ಷ್ಮಿ ದೇವಿ ಮತ್ತು ಗಣೇಶನನ್ನು ಪೂಜಿಸಲಾಗುತ್ತದೆ. ಇದರೊಂದಿಗೆ ಭಗವಾನ್ ಧನ್ವಂತರಿಗೂ ಪೂಜೆ ಸಲ್ಲಿಸಲಾಗುತ್ತದೆ.
ಭಗವಾನ್ ಧನ್ವಂತರಿಯನ್ನು ದೈವಿಕ ವೈದ್ಯ ಹಾಗೂ ಆಯುರ್ವೇದದ ಪಿತಾಮಹ ಎಂದು ಕರೆಯಲಾಗುತ್ತದೆ. ಕಾಶಿಯ ಧನ್ವಂತರೇಶ್ವರ ಮಹಾದೇವ ದೇವಾಲಯದ ಆವರಣದಲ್ಲಿರುವ ವಿಶೇಷ ಬಾವಿಯಲ್ಲಿ ಧನ್ವಂತರಿ 8 ಆಯುರ್ವೇದ ಔಷಧೀಯ ಗಿಡಮೂಲಿಕೆಯ ಸತ್ವ ಪತ್ತೆಯಾಗಿದೆ. ಈ ಬಾವಿಗೆ ಧಾರ್ಮಿಕ ಮಹತ್ವವಿದೆ. ಈ ನೀರನ್ನು ಅಮೃತ ಎಂದು ಪರಿಗಣಿಸಲಾಗುತ್ತದೆ. ಈ ನೀರಿನ ಸೇವನೆಗಾಗಿ ದೂರದ ಊರಿನಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
ಸ್ಥಳ ಪುರಾಣ - ಅಷ್ಟಭುಜಾಕೃತಿ ಬಾವಿ : ಆಯುರ್ವೇದಾಚಾರ್ಯ ವೈದ್ಯ ಸುಭಾಷ್ ಶ್ರೀವಾಸ್ತವ ಅವರು ದೇವೋದಾಸ್ ಧನ್ವಂತರಿ ಕಾಶಿಯ ರಾಜನಾಗಿದ್ದಾಗ ಈ ಕಾಶಿಯನ್ನು ಪುನಃ ಸ್ಥಾಪಿಸಿದ್ದರು. ಅವರು ಸ್ಥಾಪಿಸಿದ ದೇವಾಲಯವೇ ಧನ್ವಂತರೇಶ್ವರನ ಈ ಮಹಾದೇವ ದೇವಾಲಯ.
ಶಿವಪುರಾಣದ ಪ್ರಕಾರ, ಒಮ್ಮೆ ಅವರು ಸ್ವರ್ಗಕ್ಕೆ ಹೋಗುವ ಮುನ್ನ ಆಯುರ್ವೇದದಲ್ಲಿ ಅಮೃತಕ್ಕೆ ಸಮನಾದ ತಮ್ಮ ಅಷ್ಟವದ್ ಔಷಧೀಯ ಗಿಡಮೂಲಿಕೆಗಳನ್ನು ಈ ಬಾವಿಯಲ್ಲಿ ಹಾಕಿದ್ದರು. ಹೀಗಾಗಿ, ಇಂದಿಗೂ ಈ ಬಾವಿ ಮಹತ್ವದ್ದಾಗಿದೆ.
ಈ ಬಾವಿ ಅಷ್ಟಭುಜಾಕೃತಿಯಲ್ಲಿರುವುದು ವಿಶೇಷವಾಗಿದೆ. ಅಂದರೆ ಈ ಬಾವಿಯು ಎಂಟು ಮೂಲೆಗಳನ್ನು ಹೊಂದಿದೆ. 8 ಮೂಲೆಗಳನ್ನ ಹೊಂದಿರುವ ಕಾರಣ, ಇದನ್ನು ಆಯುರ್ವೇದದ ಅಷ್ಟಧಾತುವಿನ ಸಂಕೇತವೆಂದು ಪರಿಗಣಿಸಲಾಗಿದೆ.
ಆಯುರ್ವೇದದಲ್ಲಿ ರಸ, ರಕ್ತ, ಮಾಂಸ, ಮೇದ, ಅಸ್ಥಿ, ಮಜ್ಜೆ ಮತ್ತು ಸುಖ ಇವುಗಳನ್ನು ಎಂಟು ಔಷಧಿಗಳೆಂದು ಪರಿಗಣಿಸಲಾಗಿದೆ. ಈ ಎಂಟು ಔಷಧಿಗಳು ಆಯುರ್ವೇದದ ಎಂಟು ಅಂಗಗಳಾಗಿವೆ. ಅದಕ್ಕಾಗಿಯೇ ಇದನ್ನು ಅಷ್ಟಾಂಗ ಆಯುರ್ವೇದ ಎಂದು ಕರೆಯಲಾಗುತ್ತದೆ.
ಬಾವಿಯಲ್ಲಿ 8 ವಿಧದ ಔಷಧೀಯ ಗಿಡಮೂಲಿಕೆಗಳು ಬಿದ್ದಿವೆ : ಆಯುರ್ವೇದವು ಸರ್ವವ್ಯಾಪಿ, ವಿಶ್ವವ್ಯಾಪಿ ಎಂದು ಆಯುರ್ವೇದಾಚಾರ್ಯರು ಹೇಳಿದ್ದಾರೆ. ಅದರ ಸತ್ಯಾಸತ್ಯತೆ ಇಂದಿಗೂ ವೈಜ್ಞಾನಿಕವಾಗಿ ಸಾಬೀತಾಗಿದೆ. ವೈದ್ಯಕೀಯ ವಿಜ್ಞಾನದಲ್ಲಿ ನೀರು ಅತ್ಯಂತ ಮಹತ್ವದ್ದಾಗಿದೆ ಮತ್ತು ಅಮೃತದ ರೂಪವೆಂದು ಪರಿಗಣಿಸಲಾಗಿದೆ.
ನೀರು, ಆಕಾಶ, ಗಾಳಿ ಮತ್ತು ಬೆಂಕಿಯ ಪಂಚಭೂತಗಳು, ಅದರಲ್ಲಿ ನೀರು ಕೂಡ ಒಂದು ಅಂಶವಾಗಿದೆ. ಈ ಐದು ಅಂಶಗಳಲ್ಲಿ ನೀರನ್ನ ಪ್ರಮುಖವೆಂದು ಪರಿಗಣಿಸಲಾಗಿದೆ ಮತ್ತು ಇದು ಆಯುರ್ವೇದಕ್ಕೆ ಬಹಳ ಮುಖ್ಯವಾಗಿದೆ. ಪಿತ್ತದಿಂದ ಉಂಟಾಗುವ ಎಲ್ಲಾ ರೋಗಗಳು ನೀರಿನಿಂದ ವಾಸಿಯಾಗುತ್ತವೆ ಎಂದು ನಂಬಲಾಗಿದೆ.
ನೀರಿನಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ : ಈ ಬಗ್ಗೆ ಭಕ್ತ ರಾಮೇಶ್ವರ ಕಪೂರಿಯಾ ಮಾತನಾಡಿ, ''ಈ ಬಾವಿಯಲ್ಲಿ ಈಗ ಸಿಗದಂತಹ ಔಷಧಗಳೂ ಲಭ್ಯ ಇವೆ. ಆದ್ದರಿಂದ, ಇಂದಿಗೂ ಇದನ್ನು ಆಯುರ್ವೇದ ಬಾವಿ ಎಂದು ಕರೆಯಬಹುದು. ಈ ಬಾವಿಯ ನೀರು ಹೊಟ್ಟೆಯ ರೋಗಗಳ ವಿರುದ್ಧ ಹೋರಾಡುವ ಶಕ್ತಿ ನೀಡುತ್ತದೆ. ಹೀಗಾಗಿ, ಈ ಬಾವಿ ಇಂದಿಗೂ ಮುಖ್ಯವಾಗಿದೆ. ಈ ಬಾವಿಯ ನೀರು ಕುಡಿಯಲು ಬರುವ ಜನರು ಸಹ ಇದರಿಂದ ಪ್ರಯೋಜನವಾಗುತ್ತದೆ ಎಂದು ನಂಬುತ್ತಾರೆ. ಬನಾರಸ್‌ನಲ್ಲಿ ಔಷಧಿಯ ಸತ್ವ ಇರುವ ಏಕೈಕ ಬಾವಿ ಇದಾಗಿದೆ. ಈ ನೀರನ್ನು ಕುಡಿಯುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ದೇಹವೂ ಆರೋಗ್ಯಕರವಾಗಿರುತ್ತದೆ'' ಎಂದಿದ್ದಾರೆ.
ಇದನ್ನೂ ಓದಿ : ಇಂದು 8ನೇ 'ಆಯುರ್ವೇದ ದಿನಾಚರಣೆ': ಆಯುರ್ವೇದ ಕೊಡುಗೆ ಏನು?..