ನವದೆಹಲಿ: ದೀಪಾವಳಿಗೆ ಮುನ್ನವೇ ರಾಷ್ಟ್ರ ರಾಜಧಾನಿಯ ಹವಾಮಾನ ಹದಗೆಟ್ಟಿದೆ. ಬುಧವಾರ ಬೆಳಗ್ಗೆ ನವದೆಹಲಿಯಲ್ಲಿ ದಟ್ಟ ಹೊಗೆಯ ಮಬ್ಬು ವಾತಾವರಣವನ್ನು ಸೃಷ್ಟಿ ಮಾಡಿದೆ. ಎಕ್ಯೂಐ 363 ಪಾಯಿಂಟ್ಸ್ ದಾಖಲಾಗಿದೆ ಇದು ವಾಯುಗುಣಮಟ್ಟ ತೀವ್ರ ಕಳಪೆ ವಲಯಕ್ಕೆ ಜಾರಿದೆ.
ಜಾಹಂಗೀರ್ಪುರ್ ನಿರ್ವಹಣಾ ಕೇಂದ್ರದಲ್ಲಿ ವಾಯುಗುಣಮಟ್ಟವೂ ತೀವ್ರ ಕಳವಳಕ್ಕೆ ಕಾರಣವಾಗಿದ್ದು, ಎಕ್ಯೂಐ 418 ದಾಖಲಾಗಿದೆ. ವಿವೇಕ್ ವಿಹಾರ್ನಲ್ಲಿ 407 ಮತ್ತು ಆನಂದ್ ವಿಹಾರ್ನಲ್ಲಿ 402 ದಾಖಲಾಗಿದೆ.
ಬೆಳಗ್ಗೆ 9 ಗಂಟೆಗೆ ಸೋನಿಯಾ ವಿಹಾರ್ನಲ್ಲಿ ಎಕ್ಯೂಐ ತೀವ್ರ ಕಳಪೆ ವರ್ಗದಲ್ಲಿದ್ದು, 398 ದಾಖಲಾಗಿದೆ. ವಾಜಿರ್ಪುರ್ಲ್ಲಿ 396 ದಾಖಲಾಗಿದೆ. ಒಟ್ಟಾರೆ ನಗರದ ಎಕ್ಯೂಐ ಬೆಳಗ್ಗೆ 9ಕ್ಕೆ 363 ಇದೆ.
ಎಚ್ಚರಿಕೆಯ ಸಂದೇಶ ರವಾನಿಸಿದ ವಾಯು ನಿಯಂತ್ರಣ ಮಂಡಳಿ: ಕಳಪೆ ವಾಯು ಗುಣಮಟ್ಟದಿಂದಾಗಿ ನಗರದಲ್ಲಿ ದಟ್ಟ ಹೊಗೆಯ ಪದರ ಕಂಡು ಬಂದಿದ್ದು, ಎಲ್ಲಾ ಹವಾಮಾನ ನಿರ್ವಹಣಾ ಕೇಂದ್ರವೂ ಕೆಂಪು ವಲಯಕ್ಕೆ ಜಾರಿದೆ. ಕೆಲವು ಪ್ರದೇಶಗಳು ಮರೂನ್ ವಲಯದಲ್ಲಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಬಣ್ಣ ಆಧಾರಿತ ಕೋಡ್ ಎಚ್ಚರಿಕೆ ನೀಡಿದೆ.
ಪರಿಸರ ಗುಣಮಟ್ಟ ಕಾಪಾಡಲು ಹರಸಾಹಸ: ಗ್ರೇಡೆಡ್ ರೆಸ್ಪಾನ್ಸ್ ಅಕ್ಷನ್ ಪ್ಲಾನ್ ಮಾಪನ ಅನುಸಾರ ಸದ್ಯ ನಗರವೂ ಎರಡು ಹಂತದ ಮಾಲಿನ್ಯ ವಿರೋಧಿಯಲ್ಲಿದೆ. ಇದರ ಅನ್ವಯ ಕೆಲವು ಪ್ರದೇಶದಲ್ಲಿ ಕಠಿಣ ಕ್ರಮ ಅನುಸರಿಸಲಾಗಿದೆ. ಅದರ ಅನುಸಾರ ಶಾಲೆಗಳನ್ನು ಬಂದ್ ಮಾಡುವುದು ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಈ ನಡುವೆ ಬುಧವಾರ ನಗರದ ತಾಪಮಾನ 20.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಆರ್ದ್ರತೆ ಮಟ್ಟವೂ ಬೆಳಗ್ಗೆ 8ಕ್ಕೆ ಶೇ 83ರಷ್ಟಿತ್ತು. ಈ ದಿನ ಶುಭ್ರ ಆಕಾಶ ಇರಲಿದ್ದು, ಅತಿ ಹೆಚ್ಚಿನ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ದಾಖಲಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿ ವರ್ಷ ಚಳಿಗಾಲಕ್ಕೂ ಮುನ್ನ ದೆಹಲಿಯಲ್ಲಿ ಇಂತಹದ್ದೇ ವಾತಾವರಣ: ಸಾಮಾನ್ಯವಾಗಿ ಪ್ರತಿವರ್ಷ ಚಳಿಗಾಲದ ಆರಂಭಕ್ಕೆ ಮುನ್ನವೇ ದೆಹಲಿ ವಾಯುಗುಣಮಟ್ಟ ಹದಗೆಡುತ್ತದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರಗಳು ಕ್ರಮಕ್ಕೆ ಮುಂದಾಗುತ್ತದೆ. ಈ ಹದಗೆಟ್ಟ ವಾಯುಗುಣಮಟ್ಟ ಅನೇಕ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ. (ಐಎಎನ್ಎಸ್)
ಇದನ್ನೂ ಓದಿ: 34 ವರ್ಷದ ಹಳೇ ಕೇಸಲ್ಲಿ 90ರ ವೃದ್ಧ ಅರೆಸ್ಟ್; ಆಂಬ್ಯುಲೆನ್ಸ್ನಲ್ಲಿ ಕರೆತಂದು ಕೋರ್ಟ್ಗೆ ಹಾಜರುಪಡಿಸಿದ ಪೊಲೀಸರು!