ನವದೆಹಲಿ: ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ದೆಹಲಿಯಿಂದ ಕಳ್ಳತನವಾಗಿದ್ದ ಎಸ್ಯುವಿ ಕಾರು ಬನಾರಸ್‌ನಲ್ಲಿ ಪತ್ತೆಯಾಗಿದೆ. ಮಾರ್ಚ್ 19 ರಂದು ದೆಹಲಿಯ ಗೋವಿಂದಪುರಿ ಪ್ರದೇಶದಲ್ಲಿ ಅವರ ಈ ಕಾರನ್ನು ಕಳುವಾಗಿತ್ತು. ಚಾಲಕನ ದೂರಿನ ಮೇರೆಗೆ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಕದ್ದ ಕಾರು ಜೆಪಿ ನಡ್ಡಾ ಅವರ ಪತ್ನಿಯದ್ದು ಎಂದು ಪೊಲೀಸರು ತಿಳಿಸಿದ್ದಾರೆ.
ಗೋವಿಂದಪುರಿ ಪ್ರದೇಶದ ಅರೋರಾ ಪ್ರಾಪರ್ಟಿ ಎದುರು ಇರುವ ರವಿದಾಸ್ ಮಾರ್ಗದಿಂದ ಕಾರನ್ನು ಕಳವು ಮಾಡಲಾಗಿತ್ತು. ಚಾಲಕ ಜೋಗಿಂದರ್ ಸಿಂಗ್ ಕಾರನ್ನು ತನ್ನ ಮನೆಗೆ ತೆಗೆದುಕೊಂಡು ಹೋಗಿದ್ದ. ಕಾರ್ನ ಮೇಲೆ ಎಂಪಿ ಎಂದು ಬರೆದಿರುವ ಸ್ಟಿಕ್ಕರ್ ಕೂಡ ಇತ್ತು. ದೆಹಲಿ ಪೊಲೀಸರಿಗೆ ಕಾರ್ನ್ನು ಹುಡುಕಲು 15 ದಿನಗಳು ಬೇಕಾಯಿತು.
ಸರ್ವಿಸ್ ಸೆಂಟರ್ನಿಂದ ಕಾರು ಕಳ್ಳತನ: ಚಾಲಕ ಕಾರ್ನ್ನು ಸರ್ವೀಸ್‌ಗಾಗಿ ತಂದು ತನ್ನ ಮನೆಯಲ್ಲಿ ರಾತ್ರಿ ಊಟಕ್ಕೆ ನಿಲ್ಲಿಸಿದ್ದಾಗ ಆರೋಪಿಗಳು ಕಾರ್ನ್ನು ಕದ್ದೊಯ್ದಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಪತ್ನಿ ಹೆಸರಿನಲ್ಲಿ ಈ ಕಾರು ನೋಂದಣಿಯಾಗಿದ್ದು, ಹಿಮಾಚಲ ಪ್ರದೇಶದ ಸಂಖ್ಯೆ ಇತ್ತು. ಜೆಪಿ ನಡ್ಡಾ ಅವರ ತವರು ರಾಜ್ಯ ಹಿಮಾಚಲ. ಸಿಸಿಟಿವಿಯಲ್ಲಿ ಕಾರು ಗುರುಗ್ರಾಮ್ ಕಡೆಗೆ ಹೋಗುತ್ತಿರುವುದನ್ನು ಪೊಲೀಸರು ಗಮನಿಸಿದ್ದರು.
ನಾಗಾಲ್ಯಾಂಡ್‌ಗೆ ತೆಗೆದುಕೊಂಡು ಹೋಗಲು ಪ್ಲಾನ್: 15 ದಿನಗಳಲ್ಲಿ 9 ನಗರಗಳಿಗೆ ಕಾರ್ನ್ನು ಕೊಂಡೊಯ್ಯಲಾಗಿದೆ ಎಂದು ಹೇಳಲಾಗುತ್ತಿದೆ. ನಾಗಾಲ್ಯಾಂಡ್‌ಗೆ ಕೊಂಡೊಯ್ಯಲು ಸಿದ್ಧತೆ ನಡೆದಿತ್ತು. ಆದ್ರೆ, ಪ್ರಕರಣವನ್ನು ಭೇದಿಸಿದ ಪೊಲೀಸರು, ಬದ್ಕಲ್ ಮೂಲದ ಶಾಹಿದ್ ಮತ್ತು ಶಿವಾಂಗ್ ತ್ರಿಪಾಠಿ ಎಂಬುವರನ್ನು ಬಂಧಿಸಿದ್ದಾರೆ. ಆರೋಪಿಗಳು ವಾಹನದ ಪ್ಲೇಟ್ ನಂಬರ್ ಕೂಡ ಬದಲಾಯಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.