ETV Bharat / bharat

ದೆಹಲಿ ಸಿಎಂ​ ಜಾಮೀನು ಆದೇಶಕ್ಕೆ ತಡೆ ನೀಡಿದ ಹೈಕೋರ್ಟ್​: ತಿಹಾರ್​ ಜೈಲಿನಲ್ಲಿ ಕೇಜ್ರಿವಾಲ್​ಗೆ ಸಿಬಿಐ ಗ್ರಿಲ್​ - Aravind Kejriwal - ARAVIND KEJRIWAL

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಕೇಜ್ರಿವಾಲ್​ ಅವರಿಗೆ ಹೈಕೋರ್ಟ್​ನಿಂದ ಮತ್ತೆ ಹಿನ್ನಡೆಯಾಗಿದೆ. ಕೆಳ ನ್ಯಾಯಾಲಯ ನೀಡಿದ್ದ ಜಾಮೀನಿಗೆ ತಡೆ ನೀಡಿ ಹೈಕೋರ್ಟ್​ ಏಕ ಸದಸ್ಯ ಪೀಠ ಆದೇಶ ಮಾಡಿದೆ.

ಅರವಿಂದ್​ ಕೇಜ್ರಿವಾಲ್
ಅರವಿಂದ್​ ಕೇಜ್ರಿವಾಲ್ (ANI)
author img

By ETV Bharat Karnataka Team

Published : Jun 26, 2024, 8:11 AM IST

Updated : Jun 26, 2024, 9:04 AM IST

ನವದೆಹಲಿ: ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ದೆಹಲಿ ಹೈಕೋರ್ಟ್‌ನಿಂದ ಮತ್ತೆ ಹಿನ್ನಡೆಯಾಗಿದೆ. ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನದಲ್ಲಿರುವ ಕೇಜ್ರಿವಾಲ್‌ಗೆ ಜಾಮೀನು ನೀಡಿದ್ದ ವಿಚಾರಣಾ ನ್ಯಾಯಾಲಯದ ತೀರ್ಪಿಗೆ ತಡೆ ನೀಡಿ ಹೈಕೋರ್ಟ್ ಆದೇಶಿಸಿದೆ. ನ್ಯಾಯಮೂರ್ತಿ ಸುಧೀರ್ ಕುಮಾರ್ ಜೈನ್ ಅವರಿದ್ದ ಪೀಠವು ರೋಸ್​​​ ಅವೆನ್ಯೂ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ನೀಡಿ ಆದೇಶ ಮಾಡಿದೆ.

ತೀರ್ಪು ಪ್ರಕಟಿಸುವ ಮುನ್ನ,"ಕೇಜ್ರಿವಾಲ್‌ಗೆ ಜಾಮೀನು ನೀಡುವಾಗ ಜಾರಿ ನಿರ್ದೇಶನಾಲಯ (ಇಡಿ) ನೀಡಿದ ಸಾಕ್ಷ್ಯಗಳ ಕುರಿತಂತೆ ವಿಚಾರಣಾ ನ್ಯಾಯಾಲಯ ತನ್ನ ವಿವೇಚನೆ ಬಳಸಲಿಲ್ಲ. ಹಾಗೆ ಪ್ರಕರಣ ಕುರಿತು ವಾದಿಸಲು ಇಡಿಗೆ ಸೂಕ್ತ ಅವಕಾಶವನ್ನು ನೀಡಿಲ್ಲ. ಅಲ್ಲದೇ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಮ್​ಎಲ್​ಎ)ಯ ಸೆಕ್ಷನ್ 45ರ ಅಡಿ ಜಾಮೀನಿಗೆ ಅವಳಿ ಷರತ್ತುಗಳ ಕುರಿತಾದ ವಾದಕ್ಕೂ ಸೂಕ್ತವಾಗಿ ಪ್ರತಿಕ್ರಿಯಿಸಿಲ್ಲ. ಹೀಗಾಗಿ ವಿಚಾರಣಾ ನ್ಯಾಯಾಲಯವು ದಾಖಲೆಯತ್ತ ಗಮನ ಹರಿಸಲಿಲ್ಲ ಎಂದು ತೋರಿಸುತ್ತದೆ. ನಾವು ಎರಡೂ ಕಡೆಯ ವಾದವನ್ನು ಆಲಿಸಿದ್ದೇವೆ" ಎಂದು ನ್ಯಾ.ಸುದೀರ್​ ಕುಮಾರ್​ ಜೈನ್​ ಅವರ ಪೀಠ ತಿಳಿಸಿ ಜಾಮೀನು ರದ್ದುಗೊಳಿಸಿ ಆದೇಶ ಮಾಡಿದೆ.

ಈ ಹಿಂದೆ ಜೂ.20ರಂದು ಕೆಳ ನ್ಯಾಯಾಲಯವು ಈ ಪ್ರಕರಣದಲ್ಲಿ ಕೇಜ್ರಿವಾಲ್‌ಗೆ ಜಾಮೀನು ನೀಡಿತ್ತು, ಇದನ್ನು ಪ್ರಶ್ನಿಸಿ ಇಡಿ ಹೈಕೋರ್ಟ್​ ಮೆಟ್ಟಿಲೇರಿತ್ತು. ಬಳಿಕ ಹೈಕೋರ್ಟ್​ ವಿಚಾರಣಾ ನ್ಯಾಯಾಲಯ ನೀಡಿದ್ದ ಜಾಮೀನಿಗೆ ತಡೆ ನೀಡಿ ಆದೇಶ ಮಾಡಿತ್ತು.

ಇಂದು ವಿಚಾರಣಾ ನ್ಯಾಯಾಲಯಕ್ಕೆ ಕೇಜ್ರಿ: ಮದ್ಯನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಸಿಬಿಐ ಅಧಿಕಾರಿಗಳು ಮಂಗಳವಾರ ತಿಹಾರ್​ ಜೈಲಿನಲ್ಲಿ ವಿಚಾರಣೆ ನಡೆಸಿದ್ದಾರೆ. ಇದಕ್ಕೂ ಮುನ್ನ ಸೋಮವಾರದಂದು ವಿಚಾರಣೆ ನಡೆಸಿದ್ದ ಅವರ ಹೇಳಿಕೆಯನ್ನು ದಾಖಲಿಸಿತ್ತು. ಬಳಿಕ ಬುಧವಾರ ವಿಚಾರಣಾ ನ್ಯಾಯಾಲಯದಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಹಾಜರುಪಡಿಸಲು ಸಿಬಿಐ ಅನುಮತಿ ಪಡೆದಿತ್ತು. ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು, ಅಲ್ಲಿಯ ತೀರ್ಪಿನ ಬಳಿಕ ಸಿಬಿಐ ಮುಂದಿನ ಕ್ರಮವನ್ನು ಕೈಗೊಳ್ಳಲಿದೆ.

ಇದನ್ನೂ ಓದಿ: ಜಾಮೀನಿಗೆ ತಡೆ ವಿಚಾರ: ಹೈಕೋರ್ಟ್​​ ಆದೇಶ ಪ್ರಶ್ನಿಸಿ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ - Adjournment of Kejriwal plea

Last Updated : Jun 26, 2024, 9:04 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.