ETV Bharat / bharat

ದೆಹಲಿ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್​ ಇಮೇಲ್; 13 ವರ್ಷದ ಬಾಲಕ ವಶಕ್ಕೆ! - Delhi Airport Bomb Scare - DELHI AIRPORT BOMB SCARE

ಮೋಜಿಗಾಗಿ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಇಮೇಲ್​ ಕಳುಹಿಸಿರುವುದಾಗಿ ಬಾಲಕ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

delhi-airport-bomb-scare-13-year-old-boy-apprehended-sent-email-just-for-fun
ದೆಹಲಿ ವಿಮಾನ ನಿಲ್ದಾಣ (ETV Bharat)
author img

By PTI

Published : Jun 11, 2024, 4:52 PM IST

ನವದೆಹಲಿ: ದೆಹಲಿ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್​ ಇಮೇಲ್ ಕಳುಹಿಸಿದ್ದ ಆರೋಪದಡಿ 13 ವರ್ಷದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಟೊರೊಂಟೊಗೆ ತೆರಳುತ್ತಿದ್ದ ಏರ್​ ಕೆನಡಾ ವಿಮಾನದಲ್ಲಿ ಬಾಂಬ್‌ ಇರುವುದಾಗಿ ಉದ್ದೇಶಪೂರ್ವಕವಾಗಿ ಇಮೇಲ್ ಮೂಲಕ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೋಜಿನ ಉದ್ದೇಶಕ್ಕೆ ಹಾಗು ಈ ರೀತಿ ಇಮೇಲ್ ಕಳುಹಿಸಿದಾಗ ನನ್ನನ್ನು ಪೊಲೀಸರು ಹೇಗೆ ಪತ್ತೆ ಮಾಡುತ್ತಾರೆ ಎಂಬುದನ್ನು ತಿಳಿಯುವ ಕುತೂಹಲದಿಂದ ಈ ಕೃತ್ಯ ಎಸಗಿರುವುದಾಗಿ ಬಾಲಕ ಪೊಲೀಸರಿಗೆ ತಿಳಿಸಿದ್ದಾನೆ. ಬಾಲಕನನ್ನು ವಶಕ್ಕೆ ಪಡೆದಿರುವ ಪೊಲೀಸರು ಬಾಲಾಪರಾಧಿ ನ್ಯಾಯ ಮಂಡಳಿಗೆ ಹಾಜರುಪಡಿಸುವುದಾಗಿ ಹೇಳಿದ್ದಾರೆ.

ಜೂನ್​ 4ರಂದು ರಾತ್ರಿ 11.25ಕ್ಕೆ ದೆಹಲಿಯಿಂದ ಟೊರೊಂಟೊಗೆ ಹೊರಡಬೇಕಿದ್ದ ಎಸಿ 043 ವಿಮಾನಕ್ಕೆ ಇಮೇಲ್​ ಮೂಲಕ ಬಾಂಬ್​​ ಬೆದರಿಕೆ ಬಂದಿತ್ತು ಎಂದು ದೆಹಲಿ ಐಜಿಐ ಏರ್​ಪೋರ್ಟ್​​ ಅಧಿಕಾರಿ ಉಷಾ ರಂಗನಾನಿ ತಿಳಿಸಿದ್ದಾರೆ. ಈ ಮಾಹಿತಿ ಅನುಸಾರ ವಿಮಾನ ನಿಲ್ದಾಣದ ಆವರಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು

ಇದನ್ನೂ ಓದಿ: ದೆಹಲಿ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.