ETV Bharat / bharat

ರೈಲಿನಲ್ಲಿ ಜೈಪುರಕ್ಕೆ ತಲುಪಿದ ರಿಯಾಸಿ ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದ ನಾಲ್ವರ ಮೃತದೇಹಗಳು - Dead bodies reach jaipur

author img

By ETV Bharat Karnataka Team

Published : Jun 11, 2024, 1:59 PM IST

ಜಮ್ಮುವಿನಲ್ಲಿ ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದ್ದ ನಾಲ್ವರು ಮೃತದೇಹಗಳನ್ನು ಇಂದು ಅವರ ಊರಾದ ಜೈಪುರಕ್ಕೆ ತರಲಾಯಿತು.

DEAD BODIES OF FOUR WHO DIED IN REASI TERROR ATTACK REACHED JAIPUR
ಜೈಪುರಕ್ಕೆ ತಲುಪಿದ ರಿಯಾಸಿ ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದ ನಾಲ್ವರ ಮೃತದೇಹಗಳು (ETV Bharat)

ಜೈಪುರ: ಜಮ್ಮುವಿನ ರಿಯಾಸಿಯಲ್ಲಿ ಯಾತ್ರಿಕರ ಬಸ್ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಜೈಪುರ ಹಾಗೂ ಚೋಮುದ ನಾಲ್ವರ ಮೃತದೇಹಗಳನ್ನು ಇಂದು ರೈಲಿನಲ್ಲಿ ಜೈಪುರಕ್ಕೆ ತರಲಾಯಿತು. ಅಲ್ಲಿಂದ ಮೃತದೇಹಗಳನ್ನು ಹರ್ಮಾಡಾದ ಅಜ್ಮೀರ್‌ನ ಧನಿ ಹಾಗೂ ಚೋಮುದಲ್ಲಿನ ಅವರ ಮನೆಗಳಿಗೆ ಸಾಗಿಸಲಾಯಿತು. ಇಂದು ಮೃತದೇಹಗಳ ಅಂತಿಮ ಸಂಸ್ಕಾರ ನಡೆಯಲಿದೆ.

ಸೋಮವಾರ ಮರಣೋತ್ತರ ಪರೀಕ್ಷೆಯ ನಂತರ ನಾಲ್ಕು ಮೃತದೇಹಗಳನ್ನು ರೈಲಿನಲ್ಲಿ ಜೈಪುರಕ್ಕೆ ಕಳುಹಿಸಲಾಗಿತ್ತು. ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಜೈಪುರ ರೈಲು ನಿಲ್ದಾಣ ತಲುಪಿದೆ.

ಗಾಯಗೊಂಡ ಪವನ್‌ಗೆ ಮುಂದುವರಿದ ಚಿಕಿತ್ಸೆ: ಜೂನ್ 9ರ ಸಂಜೆ ಜಮ್ಮುವಿನ ರಿಯಾಸಿಯಲ್ಲಿ ಭಯೋತ್ಪಾದಕರು ಯಾತ್ರಿಕರ ಬಸ್ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಬಸ್ ನಾಲೆಗೆ ಬಿದ್ದಿದ್ದು, ಒಟ್ಟು 9 ಮಂದಿ ಸಾವನ್ನಪ್ಪಿದ್ದು, 42 ಮಂದಿ ಗಾಯಗೊಂಡಿದ್ದರು. ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಜೈಪುರದ ಹರ್ಮಾಡಾದ ಅಜ್ಮೆರಾನ್ ಕಿ ಧನಿ ನಿವಾಸಿ ಪೂಜಾ ಸೈನಿ ಮತ್ತು ಅವರ ಎರಡು ವರ್ಷದ ಮಗ ಲಿವಾನ್ಶ್, ಪೂಜಾ ಅವರ ಚಿಕ್ಕಪ್ಪ ಚೋಮು ನಿವಾಸಿ ರಾಜೇಂದ್ರ ಸೈನಿ ಮತ್ತು ಅವರ ಪತ್ನಿ ಮಮತಾ ಸೈನಿ ಸೇರಿದ್ದಾರೆ. ದಾಳಿಯಲ್ಲಿ ಪೂಜಾ ಸೈನಿ ಪತಿ ಪವನ್ ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ಮುಂದುವರಿದಿದೆ.

ಜೂ.6 ರಂದು ವೈಷ್ಣೋದೇವಿ ದರ್ಶನಕ್ಕೆ ತೆರಳಿದ್ದರು: "ಪವನ್ ಸೈನಿ ಅವರು ಪತ್ನಿ ಪೂಜಾ, ಪುತ್ರ ಲಿವಂಶ್ ಮತ್ತು ಸಂಬಂಧಿಕರಾದ ರಾಜೇಂದ್ರ ಸೈನಿ ಮತ್ತು ಮಮತಾ ಸೈನಿ ಅವರೊಂದಿಗೆ ಜೂ.6ರಂದು ವೈಷ್ಣೋದೇವಿ ದರ್ಶನಕ್ಕೆ ತೆರಳಿದ್ದರು. ವೈಷ್ಣೋದೇವಿ ದರ್ಶನದ ನಂತರ ಶಿವಖೋಡಿಗೆ ತೆರಳಿದ್ದರು. ರಿಯಾಸಿ ಬಳಿ ಮಾರ್ಗ ಮಧ್ಯೆ ಭಯೋತ್ಪಾದಕರು ಬಸ್‌ಗೆ ಹೊಂಚು ಹಾಕಿ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡು ತಗುಲಿ ಬಸ್ ಚಾಲಕ ಸಾವನ್ನಪ್ಪಿದ್ದು, ಬಸ್ ನಿಯಂತ್ರಣ ತಪ್ಪಿ ನಾಲೆಗೆ ಬಿದ್ದಿದೆ" ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ: ಈ ದಾಳಿ ಹಿಂದೂ ಧರ್ಮದ ಮೇಲಿನ ದಾಳಿ ಎಂದು ಮೃತರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದರ್ಶನಕ್ಕೆ ತೆರಳುವ ಭಕ್ತರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವ ಘಟನೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ನಿರಂತರವಾಗಿ ಬೆಳಕಿಗೆ ಬರುತ್ತಿವೆ. ಇಂತಹ ಘಟನೆಗಳನ್ನು ತಡೆಯಲು ಕೇಂದ್ರ ಸರ್ಕಾರ ಮತ್ತು ಜಮ್ಮು ಮತ್ತು ಕಾಶ್ಮೀರ ಆಡಳಿತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಹಾಗೂ ಅಮಾಯಕರು ಪ್ರಾಣ ಕಳೆದುಕೊಳ್ಳದಂತೆ ಸರ್ಕಾರ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ರಾಜೇಂದ್ರ ಗೆಹ್ಲೋಟ್ ಸಾಂತ್ವನ: ರಾಜ್ಯಸಭಾ ಸಂಸದ ರಾಜೇಂದ್ರ ಗೆಹ್ಲೋಟ್ ಕೂಡ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ಕುಟುಂಬ ಸದಸ್ಯರನ್ನು ಭೇಟಿ ಮಾಡಿ ತಮ್ಮ ಬೇಡಿಕೆಗಳನ್ನು ಸರಕಾರಕ್ಕೆ ತಿಳಿಸುವುದಾಗಿ ಭರವಸೆ ನೀಡಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಉಗ್ರರ ದಾಳಿಗೆ ಬಲಿಯಾದ ಚೋಮು ನಿವಾಸಿಗಳಾದ ರಾಜೇಂದ್ರ-ಮಮತಾ ಸೈನಿ ಅವರ ಮೂವರು ಮಕ್ಕಳನ್ನು ದತ್ತು ಪಡೆಯುತ್ತೇನೆ" ಎಂದು ತಿಳಿಸಿದರು. ಅವರ ಶಿಕ್ಷಣದ ವೆಚ್ಚವನ್ನು ತಾವೇ ಭರಿಸುವುದಾಗಿ ತಿಳಿಸಿದರು. ಸಂತ್ರಸ್ತ ಕುಟುಂಬಗಳಿಗೆ ಆರ್ಥಿಕ ನೆರವು ಮತ್ತು ಸರ್ಕಾರಿ ಉದ್ಯೋಗ ನೀಡಲು ಸರ್ಕಾರ ಮಾತುಕತೆ ನಡೆಸುತ್ತಿದೆ ಎಂದು ಅವರು ಹೇಳಿದರು.

ಭಯೋತ್ಪಾದನೆಗೆ ತಕ್ಕ ಪ್ರತ್ಯುತ್ತರ ನೀಡುತ್ತೇನೆ- ರಾಮಲಾಲ್ ಶರ್ಮಾ: ಮಾಜಿ ಚೋಮು ಶಾಸಕ ರಾಮಲಾಲ್ ಶರ್ಮಾ ಜೈಪುರ ರೈಲು ನಿಲ್ದಾಣಕ್ಕೆ ಆಗಮಿಸಿದ್ದು, ಮಾಧ್ಯಮಗಳ ಜೊತೆಗೆ ಮಾತನಾಡಿದರು. "ಭಯೋತ್ಪಾದನೆಗೆ ಭಾರತ ಸರ್ಕಾರ ತಕ್ಕ ಪ್ರತ್ಯುತ್ತರ ನೀಡಲಿದೆ. ಅಪರಾಧ ಮಾಡಿದವರಿಗೆ ಶಿಕ್ಷೆಯಾಗುತ್ತದೆ. ಸಂತ್ರಸ್ತ ಕುಟುಂಬದೊಂದಿಗೆ ಸರ್ಕಾರ ನಿಂತಿದೆ. ಸಂತ್ರಸ್ತ ಕುಟುಂಬದವರ ಬೇಡಿಕೆ ಏನೇ ಇರಲಿ, ಸರಕಾರ ಸೂಕ್ಷ್ಮವಾಗಿ ಪರಿಗಣಿಸಲಿದೆ" ಎಂದು ಹೇಳಿದ್ದಾರೆ.

ರೈಲ್ವೆ ನಿಲ್ದಾಣ ತಲುಪಿದ ಜಿಲ್ಲಾಧಿಕಾರಿ: ಮೃತದೇಹಗಳು ಜೈಪುರ ರೈಲು ನಿಲ್ದಾಣಕ್ಕೆ ತಲುಪಿವ ವೇಳೆ ಮೃತರ ಸಂಬಂಧಿಕರು ಹಾಗೂ ಸಮಾಜದ ಜನರು ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇದೇ ವೇಳೆ, ರೈಲ್ವೆ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಜೈಪುರ ಜಿಲ್ಲಾಧಿಕಾರಿ ಪ್ರಕಾಶ್ ರಾಜಪುರೋಹಿತ್ ಕೂಡ ರೈಲು ನಿಲ್ದಾಣಕ್ಕೆ ಆಗಮಿಸಿ ಮೃತದೇಹಗಳನ್ನು ಮನೆಗಳಿಗೆ ಕೊಂಡೊಯ್ಯುವ ವ್ಯವಸ್ಥೆಯನ್ನು ಪರಿಶೀಲಿಸಿದರು. ಮೃತರ ಕುಟುಂಬದವರೊಂದಿಗೆ ಮಾತನಾಡಿ, ತಮ್ಮ ಬೇಡಿಕೆಗಳನ್ನು ಸರ್ಕಾರಕ್ಕೆ ತಿಳಿಸುವುದಾಗಿ ಹೇಳಿ, ಸಂತ್ರಸ್ತ ಕುಟುಂಬಗಳಿಗೆ ನಿಯಮಾನುಸಾರ ನೆರವು ನೀಡುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ: ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಮಗನನ್ನ ಹತ್ಯೆ ಮಾಡಿದ ತಂದೆಯ ಬಂಧನ - Father Killing Son

15 ದಿನದ ಮಗು ಮಾರಾಟ ಪ್ರಕರಣ: ಬಿಹಾರದ ಇಬ್ಬರು ಮಹಿಳೆಯರು ಅರೆಸ್ಟ್ - Child selling case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.