ETV Bharat / bharat

ವಂಚನೆಗೆ ಹೊಸ ದಾರಿ ಹಿಡಿದ ಸೈಬರ್ ಕಳ್ಳರು: ಹಳೆ ಫೋನ್​ ಬದಲಿಗೆ ಅಡುಗೆ ಸಾಮಗ್ರಿ ನೀಡಿ ಮೋಸ! - New Cyber Scam Uncovered - NEW CYBER SCAM UNCOVERED

New Cyber Scam Uncovered: ಅಮಾಯಕರನ್ನು ಬಲಿಪಶು ಮಾಡಲು ಸೈಬರ್​ ಅಪರಾಧಿಗಳು ಹೊಸ ದಾರಿ ಕಂಡುಕೊಂಡಿದ್ದಾರೆ. ಹಳೆ ಫೋನ್​ ಬದಲಿಗೆ ಅಡುಗೆ ಸಾಮಗ್ರಿ ನೀಡುವುದಾಗಿ ಹೇಳಿ ವಂಚನೆ ಮಾಡುತ್ತಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

CYBERCRIMINALS TRADE STEEL  KITCHENWARE FOR OLD PHONES  NEW SCAM UNCOVERED
ಮೋಸಕ್ಕೆ ಹೊಸ ದಾರಿ ಕಂಡುಕೊಂಡ ಸೈಬರ್​ ಕಳ್ಳರು (ETV Bharat)
author img

By ETV Bharat Tech Team

Published : Sep 13, 2024, 1:38 PM IST

Cyber Scam: ಇತ್ತೀಚಿಗೆ ಕೆಲವರು ಹಳೆ ಸೆಲ್ ಫೋನ್ ಕೊಂಡು ಸ್ಟೀಲ್​ ಅಡುಗೆ ಸಾಮಗ್ರಿ ನೀಡುತ್ತೇವೆ ಎಂದು ಆಟೋ ರಿಕ್ಷಾಗಳಲ್ಲಿ ಓಡಾಡುತ್ತಿದ್ದಾರೆ. ಅನೇಕರು ಇವರ ಮಾತು ನಂಬಿ ಮನೆಯಲ್ಲಿದ್ದ ಹಳೆಯ ಫೋನ್​ಗಳನ್ನು ಕೊಟ್ಟು ಅಡುಗೆ ಪಾತ್ರೆಗಳನ್ನು ಖರೀದಿಸುತ್ತಿದ್ದಾರೆ. ಆದರೆ ಈ ರೀತಿ ಹಳೆ ಫೋನ್​ಗಳನ್ನು ಕೊಟ್ಟು ಅಡುಗೆ ಸಾಮಗ್ರಿ ಖರೀದಿಸುವ ಮುನ್ನ ಒಮ್ಮೆ ಯೋಚಿಸಬೇಕು ಎನ್ನುತ್ತಾರೆ ಪೊಲೀಸರು. ಏಕೆಂದರೆ, ಈ ಸೆಲ್ ಫೋನ್‌ಗಳನ್ನು ಸೈಬರ್ ವಂಚಕರಿಗೆ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಬಿಹಾರದ ಕೆಲವರು ರಾಜ್ಯದ ಆಯ್ದ ಜಿಲ್ಲೆಗಳಲ್ಲಿ ಹಳೆಯ ಸೆಲ್ ಫೋನ್​ಗಳನ್ನು ಖರೀದಿಸುತ್ತಿದ್ದಾರೆ. ಇತ್ತೀಚೆಗೆ, ಸೈಬರ್ ಅಪರಾಧಿಗಳು ಜಾರ್ಖಂಡ್ ರಾಜ್ಯದ ದೇವಗಢದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸೈಬರ್ ಕ್ರೈಂ ಇಲಾಖೆ ಗುರುತಿಸಿದೆ. ಪೊಲೀಸರು ರಾಮಗುಂಡಂನಲ್ಲಿ ನಾಲ್ವರು ಬಿಹಾರಿಗಳನ್ನು ಬಂಧಿಸಿ 4,000 ಹಳೆಯ ಫೋನ್​ಗಳನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಿದಾಗ ವಿವರಗಳು ಹೊರಬಿದ್ದಿವೆ.

ಹಳೆಯ ಸೆಲ್ ಫೋನ್‌ಗಳನ್ನು ಮಾರಾಟ ಮಾಡುವಾಗ ನೀವು ಯಾರಿಗೆ ಮಾರಾಟ ಮಾಡುತ್ತಿದ್ದೀರಿ ಎಂದು ತಿಳಿದಿರಬೇಕು. ನಿಮ್ಮ ಹಳೆಯ ಫೋನ್​ಗಳು ಬೇರೆಯವರ ಕೈಗೆ ಬಿದ್ದರೆ ಅಪಾಯ ತಪ್ಪಿದ್ದಲ್ಲ. ಏಕೆಂದರೆ ಇತರರನ್ನು ಮೋಸಗೊಳಿಸಲು ಇವುಗಳನ್ನು ಬಳಸುತ್ತಾರೆ ಎಂಬುದನ್ನು ಗಮನಿಸಬೇಕು. ನಿಜಾಮಾಬಾದ್​ ಜಿಲ್ಲಾ ಕೇಂದ್ರದ ಗಂಗಾಸ್ಥಾನ, ಮಾರುತಿನಗರ, ವಿನಾಯಕನಗರ ಮತ್ತಿತರ ಪ್ರದೇಶಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಓಡಾಡುತ್ತಿರುವ ಬಗ್ಗೆ ವರದಿಯಾಗಿದೆ. ಅವರು ಬೇರೆ ರಾಜ್ಯದವರೇ ಅಥವಾ ನಮ್ಮ ಜಿಲ್ಲೆಯವರೇ ಎಂಬುದನ್ನು ಗುರುತಿಸಬೇಕು. ಅನುಮಾನವಿದ್ದಲ್ಲಿ ನಮಗೆ ಮಾಹಿತಿ ನೀಡಿ ಎಂದು ಪೊಲೀಸ್​ ಹಿರಿಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಸೈಬರ್​ ಅಪರಾಧಿಗಳಿಗೆ ಹಳೆಯ ಫೋನ್​ನಿಂದ ಹಲವು ಉಪಯೋಗ: ಹಳೆಯ ಫೋನ್‌ನಲ್ಲಿನ ಡೇಟಾ, UPI ಐಡಿಗಳು, ಸಂಖ್ಯೆಗಳು ಮತ್ತು ಫೋಟೋಗಳನ್ನು ಕಳವು ಮಾಡಬಹುದಾಗಿದೆ. ಇಲ್ಲದಿದ್ದರೆ ನಿಮ್ಮ ಹಳೆಯ ಫೋನ್ ರಿಪೇರಿ ಮಾಡಿ ತಮ್ಮ ಸಿಮ್ ಕಾರ್ಡ್ ಹಾಕಿ ವಂಚನೆ ಮಾಡುತ್ತಾರೆ. ಮೊಬೈಲ್​ ಐಎಂಇಐ ನಂಬರ್ ಮೂಲಕ ಪೊಲೀಸರ ತನಿಖೆ ವೇಳೆ ಫೋನ್​ ಮಾಲಿಕರ ವಿವರ ಹೊರಬೀಳಲಿದೆ. ಇದರಿಂದ ಅಪರಾಧಿ ಪರಾರಿಯಾಗಲಿದ್ದು, ಸೆಲ್ ಫೋನ್ ಮಾಲೀಕ ಪೊಲೀಸರ ಕೈಗೆ ಸಿಕ್ಕಿಬೀಳುತ್ತಾನೆ. ಇದರಿಂದಾಗಿ ನೀವು ಹಳೆಯ ಫೋನ್​ ಅನ್ನು ಮಾರಾಟ ಮಾಡುವಾಗ ಎಚ್ಚೆತ್ತುಕೊಳ್ಳಬೇಕು.

ಇದನ್ನೂ ಓದಿ: ಮಾನವ ಮೆದುಳಿನೊಂದಿಗೆ ಸ್ಪರ್ಧಿಸಲು ವ್ಯೋಮ​ಮಿತ್ರ ತಲೆಬುರುಡೆ ಅಭಿವೃದ್ಧಿಪಡಿಸಿದ ಇಸ್ರೋ! ಏನಿದರ ಕೆಲಸ? - Humanoid Skull For Gaganyaan

ETV Bharat Logo

Copyright © 2024 Ushodaya Enterprises Pvt. Ltd., All Rights Reserved.