ETV Bharat / bharat

ಬಂಗಾಳ ವೈದ್ಯೆ ಅತ್ಯಾಚಾರ, ಕೊಲೆ ಕೇಸ್​: ಕಾಂಗ್ರೆಸ್-ಟಿಎಂಸಿ ಮಧ್ಯೆ ವಾಗ್ಯುದ್ಧ - Doc Rape And Murder Case - DOC RAPE AND MURDER CASE

ಬಂಗಾಳ ವೈದ್ಯೆ ವಿದ್ಯಾರ್ಥಿಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಮತ್ತು ಟಿಎಂಸಿ ಪಕ್ಷಗಳು ಪರಸ್ಪರ ಬೈದಾಡಿಕೊಂಡಿವೆ. ಕಾಂಗ್ರೆಸ್​ ಸರ್ಕಾರದ ಆಡಳಿತದಲ್ಲಿ ಅಪಸವ್ಯಗಳ ಬಗ್ಗೆ ಟಿಎಂಸಿ ಟೀಕಿಸಿದೆ.

ದೋಸ್ತಿಗಳಾದ ಕಾಂಗ್ರೆಸ್​ -ಟಿಎಂಸಿ ಮಧ್ಯೆ ವಾಗ್ಯುದ್ಧ
ಕಾಂಗ್ರೆಸ್​ -ಟಿಎಂಸಿ ಮಧ್ಯೆ ವಾಗ್ಯುದ್ಧ (ETV Bharat)
author img

By ANI

Published : Aug 14, 2024, 9:36 PM IST

ನವದೆಹಲಿ: ಕೋಲ್ಕತ್ತಾದ ಆಸ್ಪತ್ರೆಯಲ್ಲಿ ವೈದ್ಯೆ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣ ಸಂಬಂಧ I.N.D.I.Aದ ದೋಸ್ತಿ ಪಕ್ಷಗಳಾದ ಕಾಂಗ್ರೆಸ್​ ಮತ್ತು ತೃಣಮೂಲ ಕಾಂಗ್ರೆಸ್​ ಮಧ್ಯೆ ವಾಗ್ಯುದ್ಧ ನಡೆದಿದೆ. ಸಂತ್ರಸ್ತೆಗೆ ನ್ಯಾಯ ದೊರಕಿಸುವ ಕೊಡುವ ಬದಲು ಆರೋಪಿಗಳನ್ನು ರಕ್ಷಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್​ ಆರೋಪಿಸಿದೆ. ಇದಕ್ಕೆ ಟಿಎಂಸಿ ಟಕ್ಕರ್​ ನೀಡಿದ್ದು, ತನ್ನ ಆಡಳಿತದಲ್ಲಿ ಕಾಂಗ್ರೆಸ್​ ಎಷ್ಟು ನ್ಯಾಯ ಒದಗಿಸಿದೆ ಎಂಬುದನ್ನು ನೆನಪು ಮಾಡಿಕೊಳ್ಳಲಿ ಎಂದಿದೆ.

ಬಂಗಾಳ ವೈದ್ಯೆಯ ಭೀಕರ ಸಾವಿನ ಬಗ್ಗೆ ಹೇಳಿಕೆ ಹಂಚಿಕೊಂಡಿರುವ ಪ್ರತಿಪಕ್ಷ ನಾಯಕ ರಾಹುಲ್​ ಗಾಂಧಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನೇತೃತ್ವದ ಸರ್ಕಾರದ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಡಳಿತ ಮತ್ತು ಸರ್ಕಾರಿ ಕಾಲೇಜು ಸಾವಿಗೆ ನ್ಯಾಯ ದೊರಕಿಸಿಕೊಡಬೇಕು. ಇದು ಬಿಟ್ಟು ಆರೋಪಿಗಳ ರಕ್ಷಣೆಗೆ ಇಳಿದಿದೆ ಎಂಬ ಅನುಮಾನ ಮೂಡುತ್ತಿದೆ ಎಂದಿದ್ದಾರೆ.

ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ಭೀಕರ ಘಟನೆಯಿಂದ ಇಡೀ ದೇಶವೇ ಬೆಚ್ಚಿಬಿದ್ದಿದೆ. ಆರೋಪಿಗಳಿಗೆ ಗಂಭೀರ ಶಿಕ್ಷೆಯಾಗುವಂತೆ ಸರ್ಕಾರ ನೋಡಿಕೊಳ್ಳಬೇಕು. ವಿದ್ಯಾರ್ಥಿನಿಯ ಮೇಲಾದ ಅಮಾನವೀಯ ಕೃತ್ಯವು ಬಹಿರಂಗವಾಗುತ್ತಿರುವ ರೀತಿ, ವೈದ್ಯ ಸಮುದಾಯ ಮತ್ತು ಮಹಿಳೆಯರಲ್ಲಿ ಅಭದ್ರತೆ ಸೃಷ್ಟಿಸುತ್ತಿದೆ. ಸಂತ್ರಸ್ತೆಯ ಮೇಲೆ ಎರಗಿದ ಆರೋಪಿಗಳನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆಯಾ ಎಂಬ ಗಂಭೀರ ಪ್ರಶ್ನೆ ಮೂಡುತ್ತಿದೆ ಎಂದು ಶಂಕಿಸಿದ್ದಾರೆ.

ವೈದ್ಯಕೀಯ ಕಾಲೇಜಿನಂತಹ ಸ್ಥಳದಲ್ಲಿ ವೈದ್ಯರೇ ಸುರಕ್ಷಿತವಾಗಿಲ್ಲದಿದ್ದರೆ, ಪೋಷಕರು ತಮ್ಮ ಹೆಣ್ಣುಮಕ್ಕಳನ್ನು ಅಧ್ಯಯನಕ್ಕಾಗಿ ಕಳುಹಿಸುವುದು ಹೇಗೆ?. ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣದ ನಂತರ ರೂಪಿಸಿದ ಕಠಿಣ ಕಾನೂನುಗಳು ಸಹ ಇಂತಹ ಅಪರಾಧಗಳನ್ನು ತಡೆಯುವಲ್ಲಿ ವಿಫಲವಾಗಿರುವುದೇಕೆ ಎಂದು ರಾಹುಲ್​ ಗಾಂಧಿ ಪ್ರಶ್ನಿಸಿದ್ದಾರೆ.

ರಾಹುಲ್​ಗೆ ಟಿಎಂಸಿ ತಿರುಗೇಟು: ಸರ್ಕಾರದ ಮೇಲೆ ಅನುಮಾನ ವ್ಯಕ್ತಪಡಿಸಿದ ರಾಹುಲ್​ ಗಾಂಧಿಗೆ ತೃಣಮೂಲ ಕಾಂಗ್ರೆಸ್​ ತಿರುಗೇಟು ನೀಡಿದೆ. ಕಾಂಗ್ರೆಸ್ ಸರ್ಕಾರಗಳಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಏನೆಲ್ಲಾ ಕ್ರಮ ಕೈಗೊಂಡಿವೆ. ತನ್ನ ಹಿಂದಿನ ದಾಖಲೆಗಳನ್ನು ಒಮ್ಮೆ ಆ ಪಕ್ಷದ ನಾಯಕರು ಪರಿಶೀಲಿಸಲಿ ಎಂದು ಹೇಳಿದೆ.

ಟಿಎಂಸಿ ನಾಯಕ ಕುನಾಲ್ ಘೋಷ್ ಅವರು ರಾಹುಲ್​ ಗಾಂಧಿಯ ಆರೋಪಗಳನ್ನು ಆಧಾರರಹಿತ ಎಂದು ನಿರಾಕರಿಸಿದರು. ಕಾಂಗ್ರೆಸ್​ ತನ್ನ ಅಧಿಕಾರವಧಿಯಲ್ಲಿ ಮಹಿಳೆಯರ ಪ್ರಕರಣಗಳಲ್ಲಿ ಅತ್ಯಂತ ದುರ್ಬಲವಾದ ಕ್ರಮಗಳನ್ನು ಜರುಗಿಸಿದೆ. ಅದನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕು. ಇಂತಹ ಟೀಕೆಗಳನ್ನು ಮಾಡುವ ಮೊದಲು, ಅವರು ಸತ್ಯಾಸತ್ಯತೆಗಳನ್ನು ಪರಿಶೀಲಿಸಬೇಕು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಆಡಳಿತದಲ್ಲಿ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ಕ್ರಮಗಳು ಎಷ್ಟು ನೀರಸವಾಗಿದ್ದವು ಎಂಬುದು ಆ ಪಕ್ಷದ ನಾಯಕ ಮೊದಲು ತಿಳಿದುಕೊಳ್ಳಲಿ ಎಂದರು.

ಇದನ್ನೂ ಓದಿ: ವೈದ್ಯೆ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಕೇಸ್: ಬೇಡಿಕೆಗಳಿಗೆ ಕೇಂದ್ರ ಸಚಿವರ ಒಪ್ಪಿಗೆ, ಮುಷ್ಕರ ಹಿಂಪಡೆದ ಫೋರ್ಡಾ - Kolkata Doctor Rape Murder Case

ETV Bharat Logo

Copyright © 2025 Ushodaya Enterprises Pvt. Ltd., All Rights Reserved.