ETV Bharat / bharat

ಇಂದು ವಿಶ್ವಾಸಮತ ಪರೀಕ್ಷೆ: ಬಿಹಾರದತ್ತ ಕಾಂಗ್ರೆಸ್​ ಶಾಸಕರು, ಸಿಎಂ ನಿತೀಶ್​ಕುಮಾರ್​ ಸಭೆ - ಸಿಎಂ ನಿತೀಶ್​ಕುಮಾರ್​

ಇಂದು ವಿಶ್ವಾಸಮತ ಪರೀಕ್ಷೆ: ಬಿಹಾರದತ್ತ ಕಾಂಗ್ರೆಸ್​ ಶಾಸಕರು, ಸಿಎಂ ನಿತೀಶ್​ಕುಮಾರ್​ ಸಭೆ

ನಾಳೆ ವಿಶ್ವಾಸಮತ ಪರೀಕ್ಷೆ
ನಾಳೆ ವಿಶ್ವಾಸಮತ ಪರೀಕ್ಷೆ
author img

By ETV Bharat Karnataka Team

Published : Feb 11, 2024, 6:22 PM IST

Updated : Feb 12, 2024, 10:42 AM IST

ಪಾಟ್ನಾ (ಬಿಹಾರ) : ಬಿಹಾರ ರಾಜಕೀಯ ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಸಿಎಂ ನಿತೀಶ್​ಕುಮಾರ್​ ಇಂದು ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಬೇಕಿದ್ದು, ವಿಶ್ವಾಸಮತ ಪರೀಕ್ಷೆ ನಡೆಯಲಿದೆ. ಇತ್ತ ಪ್ರಬಲ ವಿಪಕ್ಷ ಆರ್​ಜೆಡಿ ಹೇಗಾದರೂ ಮಾಡಿ ಸರ್ಕಾರವನ್ನು ಕೆಡವಲು ತಂತ್ರ ರೂಪಿಸುತ್ತಿದ್ದು, ಆಂಧ್ರಪ್ರದೇಶದಲ್ಲಿ ಉಳಿದಿರುವ ಕಾಂಗ್ರೆಸ್​ ನಾಯಕರನ್ನು ತನ್ನತ್ತ ಸೆಳೆಯುತ್ತಿದೆ.

ಆಂಧ್ರಪ್ರದೇಶದ ಶ್ರೀಶೈಲಂನಲ್ಲಿ ಉಳಿದುಕೊಂಡಿರುವ ಕಾಂಗ್ರೆಸ್​ ನಾಯಕರು ಇಂದು ಬಿಹಾರಕ್ಕೆ ತೆರಳಿದ್ದಾರೆ. ನೇರವಾಗಿ ವಿಮಾನ ನಿಲ್ದಾಣದಿಂದ ಮಾಜಿ ಉಪ ಮುಖ್ಯಮಂತ್ರಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರ ನಿವಾಸಕ್ಕೆ ತೆರಳಲಿದ್ದಾರೆ. ಕಾಂಗ್ರೆಸ್ ಶಾಸಕರ ಜೊತೆಗೆ ಎಡಪಕ್ಷಗಳ ಶಾಸಕರು ಕೂಡ ಸೋಮವಾರದವರೆಗೆ ಇಲ್ಲಿಯೇ ತಂಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆರ್​​ಜೆಡಿ, ಕಾಂಗ್ರೆಸ್​ ಮತ್ತು ಎಡಪಕ್ಷಗಳ ಜೊತೆ ಮೈತ್ರಿ ಮುರಿದುಕೊಂಡ ನಿತೀಶ್​ಕುಮಾರ್​ ಬಿಜೆಪಿ ಜೊತೆ ಸೇರಿ ನೂತನ ಸರ್ಕಾರ ರಚನೆ ಮಾಡಿದ್ದಾರೆ. ಅದರಂತೆ ಫೆಬ್ರವರಿ 12 ರಂದು ಸರ್ಕಾರದ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ಸೂಚನೆ ನೀಡಿದ್ದಾರೆ. ವಿಶ್ವಾಸಮತ ಪರೀಕ್ಷೆಗೆ 24 ಗಂಟೆಗಳು ಮಾತ್ರ ಉಳಿದುಕೊಂಡಿದ್ದು, ರಾಜಕೀಯ ಬೆಳವಣಿಗೆಗಳು ರೋಚಕಘಟ್ಟದತ್ತ ಸಾಗಿವೆ.

243 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ, ಜೆಡಿಯು, ಇತರ ಪಕ್ಷಗಳ 128 ಶಾಸಕರ ಬಲ ನಿತೀಶ್​ಕುಮಾರ್​ಗೆ ಇದೆ. ಇತ್ತ ಆರ್​ಜೆಡಿ ತನ್ನ 79 ಶಾಸಕರು, ಕಾಂಗ್ರೆಸ್​ನ 19, ಎಡಪಕ್ಷಗಳು ಮತ್ತು ಇತರರ ಬೆಂಬಲವನ್ನು ತಪ್ಪಿಸಲು ತಂತ್ರ ರೂಪಿಸುತ್ತಿದೆ.

ಆಂಧ್ರದಲ್ಲಿ ಕಾಂಗ್ರೆಸ್​ ಶಾಸಕರು: ಕುದುರೆ ವ್ಯಾಪಾರ ತಪ್ಪಿಸಲು ಕಾಂಗ್ರೆಸ್​ ತನ್ನೆಲ್ಲಾ 19 ಶಾಸಕರನ್ನು ಆಂಧ್ರಪ್ರದೇಶಕ್ಕೆ ಕರೆದುಕೊಂಡು ಬಂದಿದೆ. ಇದಕ್ಕೂ ಮೊದಲು ತೆಲಂಗಾಣದ ರೆಸಾರ್ಟ್​ನಲ್ಲಿ ಇರಿಸಲಾಗಿತ್ತು. ಬಳಿಕ ಅವರನ್ನು ಆಂಧ್ರದ ಶ್ರೀಶೈಲಕ್ಕೆ ಸ್ಥಳಾಂತರ ಮಾಡಲಾಗಿತ್ತು. ಇದೀಗ ತೇಜಸ್ವಿ ಯಾದವ್ ಅವರ ಆಹ್ವಾನದ ಮೇರೆಗೆ ತನ್ನ ನಿವಾಸಕ್ಕೆ ತೆರಳಲಿದ್ದಾರೆ.

ಇತ್ತ ಸಿಎಂ ನಿತೀಶ್​ಕುಮಾರ್​ ನಾಳಿನ ಪರೀಕ್ಷೆಗೆ ಸಜ್ಜಾಗುತ್ತಿದ್ದು, ಆರ್​ಜೆಡಿ ಶಾಸಕರ ಜೊತೆ ಸಭೆ ನಡೆಸಿದ್ದಾರೆ. ಬಿಜೆಪಿ ಕೂಡ ತನ್ನೆಲ್ಲಾ ಶಾಸಕರಿಗೆ ಸರ್ಕಾರದ ಪರವಾಗಿ ಬೆಂಬಲ ನೀಡುವಂತೆ ಕೋರಿದೆ. ನಿತೀಶ್​ ನೇತೃತ್ವದ ಸರ್ಕಾರದಲ್ಲಿ ಎಲ್ಲ ಸರಿ ಇದೆ ಎಂದು ಹೇಳಲಾಗುತ್ತಿಲ್ಲ. ಇತ್ತೀಚೆಗೆ ನಡೆದ ಬಿಜೆಪಿ ಸಭೆಯಲ್ಲಿ 20ಕ್ಕೂ ಅಧಿಕ ಶಾಸಕರು ಗೈರಾಗಿದ್ದರು. ಕೆಲ ಜೆಡಿಯು ಶಾಸಕರು ಕೂಡ ಅಸಮಾಧಾನ ಹೊಂದಿದ್ದಾರೆ ಎಂದು ಹೇಳಲಾಗ್ತಿದೆ. ಇದೆಲ್ಲವೂ ಇಂದಿನ ವಿಶ್ವಾಸಮತ ಪರೀಕ್ಷೆಯಲ್ಲಿ ತಿಳಿದುಬರಲಿದೆ.

ಪಕ್ಷಗಳ ಬಲಾಬಲ ಹೀಗಿದೆ

ವಿಧಾನಸಭೆ ಒಟ್ಟು ಸ್ಥಾನ 243
ಆರ್​ಜೆಡಿ 79
ಜೆಡಿಯು 45
ಬಿಜೆಪಿ 78
ಕಾಂಗ್ರೆಸ್​ 19
ಎಡಪಕ್ಷಗಳು (ಸಿಪಿಐ-ಎಂಎಲ್​, ಸಿಪಿಐ,ಸಿಪಿಐಎಂ) 16
ಎಚ್​ಎಎಂ 4
ಇತರೆ 2
ಮ್ಯಾಜಿಕ್​ ನಂಬರ್​ 122

ಇದನ್ನೂ ಓದಿ: 9ನೇ ಬಾರಿಗೆ ಸಿಎಂ ಆಗಿ ನಿತೀಶ್​ಕುಮಾರ್ ಪ್ರಮಾಣ; ಬಿಜೆಪಿಯ ಇಬ್ಬರಿಗೆ ಡಿಸಿಎಂ ಸ್ಥಾನ

Last Updated : Feb 12, 2024, 10:42 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.