ETV Bharat / bharat

ದೇಶಾದ್ಯಂತ 100 ದಿನಗಳ 'ಸಂವಿಧಾನ ರಕ್ಷಕ' ಅಭಿಯಾನಕ್ಕೆ ಕಾಂಗ್ರೆಸ್ ಚಾಲನೆ - Samvidhan Rakshak Campaign

ರಾಜ್ಯ ವಿಧಾನಸಭೆ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ವಿರುದ್ಧ ಸಮರ ಸಾರಿರುವ ಕಾಂಗ್ರೆಸ್​ 100 ದಿನಗಳ ಸಂವಿಧಾನ ರಕ್ಷಕ ಅಭಿಯಾನವನ್ನು ಶುಕ್ರವಾರದಿಂದ ಆರಂಭಿಸಿದೆ.

congress
ರಾಹುಲ್​ ಗಾಂಧಿ (ETV Bharat)
author img

By PTI

Published : Aug 17, 2024, 8:10 AM IST

ನವದೆಹಲಿ: ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸಂವಿಧಾನ ಬದಲಾವಣೆ ಮಾಡಲಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್​, 100 ದಿನಗಳ "ಸಂವಿಧಾನ ರಕ್ಷಕ ಅಭಿಯಾನ" ಆರಂಭಿಸಿದೆ. ಇದು ದೇಶಾದ್ಯಂತ ನಡೆಯಲಿದ್ದು, ಸಂವಿಧಾನ ಅಂಗೀಕರಿಸಿದ 75ನೇ ವರ್ಷಾಚರಣೆಯ ನವೆಂಬರ್​ 26ರಂದು ದೆಹಲಿಯಲ್ಲಿ ಅಭಿಯಾನ ಸಂಪನ್ನವಾಗಲಿದೆ.

ಕೆಲ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಗುರಿ ಇಟ್ಟುಕೊಂಡು ಎಐಸಿಸಿ ಖಜಾಂಚಿ ಅಜಯ್ ಮಾಕನ್, ದೆಹಲಿ ಕಾಂಗ್ರೆಸ್ ಅಧ್ಯಕ್ಷ ದೇವೆಂದರ್ ಯಾದವ್, ಎಐಸಿಸಿ ಎಸ್‌ಸಿ ಮೋರ್ಚಾ ಅಧ್ಯಕ್ಷ ರಾಜೇಶ್ ಲಿಲೋಥಿಯಾ ಅವರು ಶುಕ್ರವಾರ ಅಭಿಯಾನಕ್ಕೆ ಚಾಲನೆ ನೀಡಿದರು.

ಬಿಜೆಪಿಯಿಂದ ಸಂವಿಧಾನದ ಮೇಲೆ ದಾಳಿ: ಬಳಿಕ ಮಾತನಾಡಿದ ಅಜಯ್​ ಮಾಕನ್​, ಬಿಜೆಪಿ ಆಡಳಿತದ ಕೇಂದ್ರ ಸರ್ಕಾರದಿಂದ ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆ. ಚುನಾವಣೆಗೆ ಮುನ್ನ ಸಂವಿಧಾನ ಬದಲಾಯಿಸಲು ಬಯಸಿದ್ದ ಪಕ್ಷ ಅಧಿಕಾರದಲ್ಲಿರುವ ಕಾರಣ ಸಂವಿಧಾನಕ್ಕೆ ಹಲವು ಸವಾಲುಗಳು ಮತ್ತು ಬೆದರಿಕೆಗಳು ಇವೆ. ಹೀಗಾಗಿ, ಅದರ ವಿರುದ್ಧ ಅಭಿಯಾನ ನಡೆಸಲಾಗುತ್ತಿದೆ ಎಂದು ಹೇಳಿದರು.

ನೆರೆಯ ರಾಷ್ಟ್ರಗಳು ಅಸ್ಥಿರತೆಯನ್ನು ಎದುರಿಸುತ್ತಿವೆ. ಭಾರತವು ಬಲಿಷ್ಠ ಸಂವಿಧಾನವನ್ನು ಹೊಂದಿರುವ ಕಾರಣ, ಯಶಸ್ವಿ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಸಾಗುತ್ತಿದೆ. ಇಲ್ಲಿಯವರೆಗೆ ಮೂರು ಲಕ್ಷ ಸಂವಿಧಾನ ಸಂರಕ್ಷಣಾ ಸ್ವಯಂಸೇವಕರಾಗಿ ನೋಂದಾಯಿಸಿಕೊಂಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಕೂಡ ಸಂವಿಧಾನ ರಕ್ಷಣಾ ಸ್ವಯಂಸೇವಕರಾಗಿ ದಾಖಲಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಪ್ರತಿ ಹಳ್ಳಿಗೆ ಇಬ್ಬರು ರಕ್ಷಕರ ಆಯ್ಕೆ: ಈ ಅಭಿಯಾನವನ್ನು ದೇಶದ ಪ್ರತಿ ಹಳ್ಳಿಗೂ ವಿಸ್ತರಿಸಲಾಗುವುದು. ಪ್ರತಿ ಗ್ರಾಮದಲ್ಲಿ ಒಬ್ಬ ಪುರುಷ ಮತ್ತು ಒಬ್ಬ ಮಹಿಳೆಯನ್ನು ಸಂವಿಧಾನ ರಕ್ಷಣಾ ಸ್ವಯಂಸೇವಕರನ್ನಾಗಿ ಗುರುತಿಸಿ ತರಬೇತಿ ನೀಡಲಾಗುವುದು. ನವೆಂಬರ್ 26ರಂದು ನವದೆಹಲಿಯ ಟಾಲ್ಕಟೋರಾ ಸ್ಟೇಡಿಯಂನಲ್ಲಿ ಅಭಿಯಾನ ಮುಕ್ತಾಯವಾಗಲಿದೆ. ಅಂದು ಸಂವಿಧಾನ ಅಂಗೀಕರಿಸಿದ 75ನೇ ವರ್ಷಾಚರಣೆ ದಿನವಾಗಿರಲಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: 'ಸಂವಿಧಾನ ಹತ್ಯೆ ದಿನ' ಪ್ರಶ್ನಿಸಿದ್ದ ಪಿಐಎಲ್​ ವಜಾಗೊಳಿಸಿದ ದೆಹಲಿ ಹೈಕೋರ್ಟ್ - Samvidhan Hatya Diwas

ETV Bharat Logo

Copyright © 2024 Ushodaya Enterprises Pvt. Ltd., All Rights Reserved.