ETV Bharat / bharat

ಜಮ್ಮು ಕಾಶ್ಮೀರದಲ್ಲಿ ಇಂಡಿಯಾ ಒಕ್ಕೂಟಕ್ಕೆ ಸರ್ಕಾರ ರಚಿಸುವ ವಿಶ್ವಾಸ - Cong Confident Of INDIA Bloc WIN

author img

By ETV Bharat Karnataka Team

Published : 2 hours ago

ಜಮ್ಮು ಕಾಶ್ಮೀರದ ವಿಧಾನಸಭೆ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ಅಧಿಕಾರ ಹಿಡಿಯಲಿದೆ ಎಂದು ಕಾಂಗ್ರೆಸ್ ವಿಶ್ವಾಸ ವ್ಯಕ್ತಪಡಿಸಿದೆ. ರಾಹುಲ್ ಗಾಂಧಿ ಅವರ ಸಕ್ರಿಯ ಪಾಲ್ಗೊಳ್ಳುವಿಕೆ, ಹಳೆ ಪಕ್ಷಗಳ ಒಗ್ಗೂಡುವಿಕೆ ಹಾಗೂ ಮೈತ್ರಿ ಪಕ್ಷಗಳ ಒಗ್ಗಟ್ಟಿನ ಹೋರಾಟ ಜಯ ತಂದು ಕೊಡಲಿದೆ ಎಂಬ ವಿಶ್ವಾಸ ಇಂಡಿಯಾ ಒಕ್ಕೂಟದ ನಾಯಕರದ್ದು.

congress-confident-of-india-bloc-forming-government-in-jammu-and-kashmir
ಜಮ್ಮು ಕಾಶ್ಮೀರದಲ್ಲಿ ಇಂಡಿಯಾ ಒಕ್ಕೂಟಕ್ಕೆ ಸರ್ಕಾರ ರಚಿಸುವ ವಿಶ್ವಾಸ (ANI)

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಡಿಯಾ ಒಕ್ಕೂಟ ಈ ಬಾರಿ ಸರ್ಕಾರ ರಚಿಸಲಿದೆ ಎಂದು ಕಾಂಗ್ರೆಸ್ ವಿಶ್ವಾಸ ವ್ಯಕ್ತಪಡಿಸಿದೆ. ಲೋಕಸಭಾ ಪ್ರತಿ ಪಕ್ಷ ನಾಯಕ ರಾಹುಲ್ ಗಾಂಧಿ ಅವರ ಉಪಸ್ಥಿತಿ, ಎರಡು ಹಳೆ ಪಕ್ಷಗಳ ಒಗ್ಗೂಡುವಿಕೆ ಹಾಗೂ ಒಗ್ಗಟ್ಟಿನ ಹೋರಾಟ ಈ ಜಯ ತಂದುಕೊಡಲಿದೆ ಎಂಬ ವಿಶ್ವಾಸವನ್ನು ಕಾಂಗ್ರೆಸ್​ ಹೊಂದಿದೆ.

ಜಮ್ಮು ಮತ್ತು ಕಾಶ್ಮೀರದ 90 ವಿಧಾನಸಭಾ ಸ್ಥಾನಗಳಿಗೆ ಸೆಪ್ಟೆಂಬರ್ 18, 25 ಮತ್ತು ಅಕ್ಟೋಬರ್ 1 ರಂದು ಮತದಾನ ನಡೆದಿದ್ದು, ಈ ಬಾರಿ 75 ವರ್ಷಗಳಲ್ಲೇ ಅತ್ಯಧಿಕ ಅಂದರೆ ಶೇ 63ಕ್ಕೂ ಹೆಚ್ಚು ಪ್ರಮಾಣದ ಮತದಾನ ನಡೆದಿದೆ. ಮೂರು ಹಂತದ ಮತದಾನ ಪ್ರಕ್ರಿಯೆ ಮುಗಿದಿದ್ದು, ಅಕ್ಟೋಬರ್ 8 ರಂದು ಫಲಿತಾಂಶ ಹೊರ ಬೀಳಲಿದೆ. ಸರ್ಕಾರ ರಚನೆಗೆ 46 ಸ್ಥಾನಗಳ ಅಗತ್ಯವಿದೆ.

ಮೂರು-ಹಂತದ ಮತದಾನದ ನಂತರ, ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಡಿಯಾ ಒಕ್ಕೂಟ ಸರ್ಕಾರ ರಚನೆಗೆ ಸಿದ್ದವಾಗಿದೆ. ನಾನು ಈ ಹಂತದಲ್ಲಿ ಸಂಖ್ಯೆಗಳ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ. ಆದರೆ, ಮೈತ್ರಿಕೂಟವು ಸುಲಭವಾಗಿ ಬಹುಮತ ಪಡೆಯುತ್ತದೆ ಎಂದು ಎಐಸಿಸಿ ಜಮ್ಮು ಮತ್ತು ಕಾಶ್ಮೀರದ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಯಾದವ್ ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.

ಮೊದಲ ಮತ್ತು ಅಂತಿಮ ಹಂತದಲ್ಲಿ ನಾವು ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸಿದ್ದೇವೆ. ಮತದಾರರು ತೋರಿದ ಉತ್ಸಾಹದಿಂದ ನಾವು ಸಂತಸಗೊಂಡಿದ್ದೇವೆ. ಮೈತ್ರಿಯು ಸ್ಥಳೀಯ ಸಮಸ್ಯೆಗಳ ಮೇಲೆ ಈ ಬಾರಿ ಹೆಚ್ಚಿನ ಗಮನ ಹರಿಸಿದೆ. ಈ ಚುನಾವಣೆಯಲ್ಲಿ ಇಲ್ಲಿನ ಜನ ನಮ್ಮ ಕೈ ಹಿಡಿಯಲಿದ್ದಾರೆ ಎಂದು ಮನೋಜ್​ ಯಾದವ್ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಮುಖವಾಗಿ ರಾಹುಲ್ ಗಾಂಧಿ ಅವರು ಕಣಿವೆ ರಾಜ್ಯದಲ್ಲಿ ಈ ಬಾರಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಇಲ್ಲಿನ ಜನರ ದನಿಯಾಗಿ ಅವರು ಮಾತನಾಡಿದ್ದಾರೆ. ಜನರ ಹಕ್ಕುಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅವರ ಉತ್ಸಾಹ ಚುನಾವಣೆಯ ಸಮಯದಲ್ಲಿ ಸಕಾರಾತ್ಮಕ ಫಲಿತಾಂಶ ನೀಡಲಿದೆ ಎಂದು ಯಾದವ್ ಹೇಳಿದರು. ಇನ್ನು ಯಾವುದೇ ಪರಿಸ್ಥಿತಿ ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಯಾದವ್ ಹೇಳಿದ್ದಾರೆ.

ಮಿತ್ರ ಪಕ್ಷಗಳ ಸಹಕಾರ, ಅದರಲ್ಲೂ ಚುನಾವಣೆಯಲ್ಲಿ ಪಿಡಿಪಿಯ ಪಾತ್ರವನ್ನು ಅವರು ಶ್ಲಾಘಿಸಿದ್ದಾರೆ. ಇದೇ ವೇಳೆ, ಗುಲಾಂ ನಬಿ ಆಜಾದ್​ ಅವರನ್ನು ಯಾದವ್ ಟೀಕಿಸಿದ್ದಾರೆ. ಅವರ ಪಕ್ಷ ಗುರಿ ಮುಟ್ಟುವುದಿಲ್ಲ ಎಂದೂ ಹೇಳಿದ್ದಾರೆ.

ಇದನ್ನು ಓದಿ: ನಾಗಚೈತನ್ಯ, ಸಮಂತಾ ವಿಚ್ಛೇದನಕ್ಕೆ ಮಾಜಿ ಸಿಎಂ ಪುತ್ರ ಕೆಟಿಆರ್​​ ಕಾರಣ: ತೆಲಂಗಾಣ ಸಚಿವೆ ವಿವಾದಿತ ಹೇಳಿಕೆ - surekha controversial statement

ETV Bharat Logo

Copyright © 2024 Ushodaya Enterprises Pvt. Ltd., All Rights Reserved.