ETV Bharat / bharat

ಕಲಾಪದ ಅಕ್ರಮ ರೆಕಾರ್ಡಿಂಗ್ ಆರೋಪ: ಸಿಎಂ ಕೇಜ್ರಿವಾಲ್ ಪತ್ನಿಯ ವಿರುದ್ಧ ಹೈಕೋರ್ಟ್​ಗೆ ದೂರು - Plea against Sunita Kejriwal

ನ್ಯಾಯಾಲಯ ಕಲಾಪಗಳನ್ನು ಅಕ್ರಮವಾಗಿ ರೆಕಾರ್ಡಿಂಗ್ ಮಾಡಿಕೊಂಡು ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ ಎಂದು ಆರೋಪಿಸಿ ದೆಹಲಿ ಸಿಎಂ ಪತ್ನಿಯ ವಿರುದ್ಧ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗಿದೆ.

ಸುನೀತಾ ಕೇಜ್ರಿವಾಲ್
ಸುನೀತಾ ಕೇಜ್ರಿವಾಲ್ (IANS image)
author img

By ANI

Published : May 29, 2024, 3:13 PM IST

ನವದೆಹಲಿ: ನ್ಯಾಯಾಲಯದ ವಿಡಿಯೋ ಕಾನ್ಫರೆನ್ಸಿಂಗ್ ನಿಯಮಗಳನ್ನು ಉಲ್ಲಂಘಿಸಿ ಕಲಾಪವನ್ನು ಚಿತ್ರೀಕರಿಸಿದ ಆರೋಪದ ಮೇಲೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಮತ್ತು ಇತರರ ವಿರುದ್ಧ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಮಾರ್ಚ್ 28, 2024 ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಸಂದರ್ಭದಲ್ಲಿ ಸುನೀತಾ ಕೇಜ್ರಿವಾಲ್ ಮತ್ತು ಇತರರು ವಿಚಾರಣಾ ನ್ಯಾಯಾಲಯದ ಕಲಾಪಗಳನ್ನು ಕಾನೂನು ಬಾಹಿರವಾಗಿ ಚಿತ್ರೀಕರಣ ಮಾಡಿಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ವಕೀಲರಾದ ವೈಭವ್ ಸಿಂಗ್ ಎಂಬವರು ಸಲ್ಲಿಸಿದ ಅರ್ಜಿಯಲ್ಲಿ, ಸುನೀತಾ ಮತ್ತು ಇತರರು ನ್ಯಾಯಾಲಯದ ಕಲಾಪವನ್ನು ಅನಧಿಕೃತವಾಗಿ ರೆಕಾರ್ಡ್ ಮಾಡಿಕೊಂಡಿರುವುದು ಮಾತ್ರವಲ್ಲದೇ ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿಯೂ ಶೇರ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕಲಾಪದ ಆಡಿಯೋ, ವೀಡಿಯೊ ರೆಕಾರ್ಡಿಂಗ್​ ಅನ್ನು #MoneyTrailExposedByKejriwal ಹ್ಯಾಶ್ ಟ್ಯಾಗ್​​ನೊಂದಿಗೆ ಎಕ್ಸ್​​ನಲ್ಲಿ ಪೋಸ್ಟ್​ ಮಾಡಲಾಗಿದೆ.

ಆಡಿಯೊ ಮತ್ತು ವಿಡಿಯೋ ರೆಕಾರ್ಡಿಂಗ್​ಗಳನ್ನು ವೈರಲ್ ಮಾಡಲಾದ ಸಮಯ ಸಂದರ್ಭಗಳನ್ನು ನೋಡಿದರೆ, ನ್ಯಾಯಾಂಗದ ವರ್ಚಸ್ಸನ್ನು ಹಾಳುಮಾಡಲು, ರಾಷ್ಟ್ರದ ಸಾಮಾನ್ಯ ಜನರನ್ನು ದಾರಿತಪ್ಪಿಸಲು ಮತ್ತು ನ್ಯಾಯಾಂಗವು ಸರ್ಕಾರದ ಆಜ್ಞೆಯ ಮೇರೆಗೆ ಮತ್ತು ಕೇಂದ್ರ ಸರ್ಕಾರದ ಒತ್ತಡದ ಮೇರೆಗೆ ಕಾರ್ಯನಿರ್ವಹಿಸುತ್ತಿದೆ ಎಂದು ಜನರ ಮುಂದೆ ಬಿಂಬಿಸಲು ರಾಜಕೀಯ ಪಕ್ಷವೊಂದು ನಡೆಸಿದ ಆಳವಾದ ಪಿತೂರಿ ಇದಾಗಿದೆ." ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಅರವಿಂದ್ ಕೇಜ್ರಿವಾಲ್ ಅವರು ತಮ್ಮ ವಾದವನ್ನು ವಿಶೇಷ ನ್ಯಾಯಾಧೀಶರಿಗೆ ವಾಸ್ತವಾಂಶಗಳೊಂದಿಗೆ ವಿವರಿಸಿರುವುದು ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್​ಫಾರ್ಮ್​​ಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ರೆಕಾರ್ಡಿಂಗ್​ ವಿಡಿಯೋದಲ್ಲಿ ಕಾಣಿಸುತ್ತದೆ.

"ಇತರ ವಿರೋಧ ಪಕ್ಷಗಳ ಸದಸ್ಯರು ಸೇರಿದಂತೆ ಆಮ್ ಆದ್ಮಿ ಪಕ್ಷದ ಹಲವಾರು ಸದಸ್ಯರು ಉದ್ದೇಶಪೂರ್ವಕವಾಗಿ ನ್ಯಾಯಾಲಯದ ಕಲಾಪಗಳ ಆಡಿಯೋ ಮತ್ತು ವಿಡಿಯೋ ರೆಕಾರ್ಡಿಂಗ್ ಮಾಡಿದ್ದಾರೆ ಮತ್ತು ನ್ಯಾಯಾಲಯದ ಕಲಾಪಗಳಿಗೆ ಕೆಟ್ಟ ಹೆಸರು ತರಲು ಅವುಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಸಾರ ಮಾಡಿದ್ದಾರೆ" ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ನ್ಯಾಯಾಲಯದ ವಿಚಾರಣೆಯ ಆಡಿಯೋ ಮತ್ತು ವೀಡಿಯೊ ರೆಕಾರ್ಡಿಂಗ್​​ ಮಾಡಿದ ಮತ್ತು ಅವುಗಳನ್ನು ಶೇರ್ ಮಾಡಿದ ವ್ಯಕ್ತಿಗಳನ್ನು ಗುರುತಿಸಲು ಸಮಗ್ರ ತನಿಖೆ ನಡೆಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಇದಲ್ಲದೇ ಅಂಥ ಅನಧಿಕೃತ ರೆಕಾರ್ಡಿಂಗ್​ಗಳು ಮತ್ತು ನಂತರ ಅವುಗಳ ಪ್ರಸಾರವನ್ನು ತಡೆಗಟ್ಟಲು ಸಾಮಾಜಿಕ ಮಾಧ್ಯಮ ಪ್ಲಾಟ್​ಫಾರ್ಮ್​ಗಳಿಗೆ ನಿರ್ದೇಶನ ನೀಡುವಂತೆ ಕೋರಲಾಗಿದೆ.

ಇದನ್ನೂ ಓದಿ : ದೇಶದ್ರೋಹ ಪ್ರಕರಣದಲ್ಲಿ ಶರ್ಜೀಲ್ ಇಮಾಮ್​ಗೆ ಜಾಮೀನು - Sharjeel Imam granted bail

ETV Bharat Logo

Copyright © 2024 Ushodaya Enterprises Pvt. Ltd., All Rights Reserved.