ETV Bharat / bharat

ಮೋಹನ್​ ಭಾಗವತ್​ ಭೇಟಿ ಮಾಡಲಿರುವ ಸಿಎಂ ಯೋಗಿ: ಕುತೂಹಲ ಕೆರಳಿಸಿದ ಭೇಟಿ - CM Yogi to meet RSS chief

ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಅವರು ಇಂದಿನಿಂದ ಎರಡು ದಿನ ಕಾಲ ಗೋರಖ್​ಪುರ ಪ್ರವಾಸ ಕೈಗೊಳ್ಳಲಿದ್ದಾರೆ.

ಮೋಹನ್​ ಭಾಗವತ್​, ಸಿಎಂ ಯೋಗಿ ಆದಿತ್ಯನಾಥ್​
ಮೋಹನ್​ ಭಾಗವತ್​, ಸಿಎಂ ಯೋಗಿ ಆದಿತ್ಯನಾಥ್​ (ETV Bharat)
author img

By ETV Bharat Karnataka Team

Published : Jun 15, 2024, 10:24 AM IST

ಗೋರಖಪುರ್​, ಉತ್ತರ ಪ್ರದೇಶ: ಲೋಕಸಭಾ ಚುನಾವಣೆಯ ಬಳಿಕ ಮೊದಲ ಬಾರಿಗೆ, ಸಿಎಂ ಯೋಗಿ ಆದಿತ್ಯನಾಥ್​ ಎರಡು ದಿನ ಕಾಲ ಗೋರಖ್‌ಪುರ ಪ್ರವಾಸ ಕೈಗೊಳ್ಳಲಿದ್ದಾರೆ. ಇಂದು ವಾರಾಣಸಿಯಿಂದ ಗೋರಖ್‌ಪುರಕ್ಕೆ ಹೊರಡಲಿದ್ದಾರೆ. ಸಂಜೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಲಿದ್ದು ಯುಪಿಯಲ್ಲಿ ಬಿಜೆಪಿಗೆ ಹಿನ್ನೆಡೆ ಆದ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಲೋಕಸಭಾ ಚುನಾವಣೆ ಬಳಿಕ ಆರ್​ಎಸ್ಎಸ್​ ನಾಯಕರು ಮೋದಿ ಸರ್ಕಾರ ಹಾಗೂ ಮೋದಿ ನಡೆ ಬಗ್ಗೆ ಪರೋಕ್ಷ ಹಾಗೂ ನೇರ ವಾಗ್ದಾಳಿ ನಡೆಸುತ್ತಿರುವ ಬೆನ್ನಲ್ಲೇ, ಮೋಹನ್​ ಭಾಗವತ್​ ಹಾಗೂ ಯೋಗಿ ಆದಿತ್ಯನಾಥ್ ಭೇಟಿಯಾಗುತ್ತಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ನಿನ್ನೆಯಷ್ಟೇ ಆರ್​ಎಸ್​ಎಸ್​ ನಾಯಕ ಇಂದ್ರೇಶ್ ಕುಮಾರ್​, ದುರಂಹಕಾರ ತೋರಿದವರನ್ನು ಶ್ರೀರಾಮ 240ಕ್ಕೆ ನಿರ್ಬಂಧಿಸಿದ್ದಾನೆ ಎಂದಿದ್ದರು. ಇದಕ್ಕೂ ಮೊದಲು ಮೋಹನ್​ ಭಾಗವತ್​ ಸಹ ಮೋದಿ ಹೆಸರು ಹೇಳದೇ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವಿಚಾರಗಳು ಈಗ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿವೆ.

ಇನ್ನು ಎರಡು ದಿನಗಳ ಗೋರಖಪುರ ಪ್ರವಾಸ ಕೈಗೊಳ್ಳುವ ಸಿಎಂ ಯೋಗಿ ಆದಿತ್ಯನಾಥ. ಅಶ್ಫಾಕ್ ಉಲ್ಲಾ ಖಾನ್ ಮೃಗಾಲಯಕ್ಕೆ ಭೇಟಿ ನೀಡಲಿದ್ದಾರೆ. ಇಟಾವಾ ಸಫಾರಿ ಪಾರ್ಕ್‌ನಿಂದ ತರಲಾಗಿದ್ದ ಎರಡು ಸಿಂಹಗಳನ್ನು ನೋಡಲಿದ್ದು ಅವುಗಳ ಆರೋಗ್ಯ ಆಹಾರದ ಬಗ್ಗೆ ಅಧಿಕಾರಿಗಳೊಂದಿಗೆ ವಿಚಾರಿಸಲಿದ್ದಾರೆ. ಮುಖ್ಯಮಂತ್ರಿಗಳ ವಿಶೇಷ ಆಶಯ ಮತ್ತು ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮತಿ ಮೇರೆಗೆ 2018ರಲ್ಲಿ ಭರತ್​ ಮತ್ತು ಗೌರಿ ಎಂಬ ಎರಡು ಸಿಂಹಗಳನ್ನು ಗೋರಖ್​ಪುರ ಮೃಗಾಲಯಕ್ಕೆ ತರಲಾಗಿತ್ತು.

ಮೃಗಾಲಯದಿಂದ ವಾಪಸಾದ ನಂತರ ಮುಖ್ಯಮಂತ್ರಿಗಳು ಅನೆಕ್ಸ್ ಕಟ್ಟಡದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನಾ ಸಭೆ ನಡೆಸಲಿದ್ದಾರೆ. ಇದಾದ ಬಳಿಕ ನೌಕಾನ್‌ನಿಂದ ಡಿಯೋರಿಯಾ ಬೈಪಾಸ್‌ವರೆಗೆ ನಿರ್ಮಿಸಲಾಗುತ್ತಿರುವ ಚತುಷ್ಪಥ ರಸ್ತೆ ಕಾಮಗಾರಿಯನ್ನು ಪರಿಶೀಲಿಸಲಿದ್ದಾರೆ. ಮಧ್ಯಾಹ್ನ ನಕಹಾ ರೈಲು ಮೇಲ್ಸೇತುವೆಯ ಪ್ರಗತಿ ಪರಿಶೀಲನೆಗೆ ತೆರಳಲಿದ್ದಾರೆ.

ಈ ಪ್ರವಾಸದ ಜೊತೆಗೆ, ಮುಖ್ಯಮಂತ್ರಿಗಳು ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಲು ಮಣಿರಾಮ್ ಪ್ರದೇಶದ ಸಾರ್ವಜನಿಕ ಸರಸ್ವತಿ ವಿದ್ಯಾ ಮಂದಿರಕ್ಕೆ ಹೋಗಲಿದ್ದಾರೆ. ಇಬ್ಬರ ಭೇಟಿಯ ವೇಳೆ ಯುಪಿಯಲ್ಲಿ ಬಿಜೆಪಿಗೆ ಆಗಿರುವ ಹಿನ್ನಡೆ ಮತ್ತು ಸಂಘ ವಿಸ್ತರಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆಯೂ ಚರ್ಚೆಯಾಗಬಹುದು ಎಂದು ಹೇಳಲಾಗುತ್ತಿದೆ.

ಮೋಹನ್ ಭಾಗವತ್ ಸಂಘದ ಕಾರ್ಯಕರ್ತರ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಜೂ.12 ರಂದು ಗೊರಖ್​ಪುರಕ್ಕೆ ಆಗಮಿಸಿದ್ದಾರೆ. 5 ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಜೂನ್ 17 ರಂದು ಹೊರಡಲಿದ್ದಾರೆ.

ಇದನ್ನೂ ಓದಿ: IGNOU Exam; ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿವಿ ಪರೀಕ್ಷೆಯಲ್ಲಿ ಮಾಸ್​ ಕಾಪಿ: ವಿಡಿಯೋ ವೈರಲ್​ - Mass copying by students in exam

ETV Bharat Logo

Copyright © 2024 Ushodaya Enterprises Pvt. Ltd., All Rights Reserved.